ವೈರಲ್ ಸುದ್ದಿ: ಕೆರೆ ಕ್ಲೀನ್ ಮಾಡುತ್ತಿದ್ದಾಗ ಸೂಟ್‌ಕೇಸ್ ಕಾಣಿಸಿತು, ತೆರೆದು ನೋಡಿದಾಗ…
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಓಕ್ಲ್ಯಾಂಡ್ ಪೊಲೀಸ್ ಕ್ಯಾಪ್ಟನ್ ಅಲನ್ ಯು ತಿಳಿಸಿದ್ದಾರೆ. ಕೊಲೆ ಮಾಡಿದ್ದು ಯಾರು? ಶವವನ್ನು ಎಲ್ಲಿಂದ ತಂದಿದ್ದಾರೆ? ಈ ಎಲ್ಲ ವಿಷಯಗಳನ್ನು ಪರಿಗಣಿಸಿ ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ.

ಹ್ಯಾಲೋವೀನ್ ಆಚರಣೆ ಅಮೆರಿಕದಲ್ಲಿ ಒಂದು ಸಾಮಾನ್ಯ ವಿದ್ಯಮಾನವಾಗಿದೆ. ಅನೇಕ ಸ್ವಯಂಸೇವಕರು ಹ್ಯಾಲೋವೀನ್ ದಿನದಂದು ಶ್ರಮದಾನ ಮಾಡುತ್ತಾರೆ. ಹೀಗಿರುವಾಗ ಆ ಒಮದು ಸ್ವಯಂಸೇವಕ (Halloween Volunteers) ತಂಡವೂ ಸಹ ಕೆರೆ ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು ಕೈಗೆತ್ತಿಕೊಂಡರು. ಆದರೆ ಕ್ಲೀನ್ ಮಾಡುವಾಗ ಸೂಟ್ ಕೇಸ್ ಕಾಣಿಸಿತು. ಹತ್ತಿರಕ್ಕೆ ಹೋಗಿ ಜೆಸಿಬಿಯಿಂದ ಕೆದಕಿ ನೋಡಿದಾಗ ಅದರಿಂದ ಕೆಟ್ಟ ವಾಸನೆ ಬರುತ್ತಿತ್ತು. ಅದನ್ನು ತೆರೆದಾಗ ಇನ್ನೂ ಕಮಟು ವಾಸನೆ ಮೂಗಿಗೆ ಬಡಿಯುತ್ತಿತ್ತು. ತೆರೆದು ಪರಿಶೀಲಿಸಿದಾಗ ಮೃತದೇಹ ಪತ್ತೆಯಾಗಿದೆ. ಯಾರೋ ವ್ಯಕ್ತಿಯನ್ನು ಸಾಯಿಸಿ, ಆ ಸೂಟ್‌ಕೇಸ್‌ನಲ್ಲಿ ತುಂಬಿ ಕೆರೆಯಲ್ಲಿ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಈ ಘಟನೆ ನಡೆದಿದೆ. ಹ್ಯಾಲೋವೀನ್‌ನಲ್ಲಿ ಕ್ಯಾಲಿಫೋರ್ನಿಯಾದ ಓಕ್‌ಲ್ಯಾಂಡ್‌ನಲ್ಲಿ ಸರೋವರವನ್ನು ಸ್ವಚ್ಛಗೊಳಿಸುತ್ತಿದ್ದಾಗ ಸೂಟ್‌ಕೇಸ್‌ನಲ್ಲಿ ಕೊಲೆಯಾದ ವ್ಯಕ್ತಿಯ ಶವ ಪತ್ತೆಯಾಗಿದೆ ಎಂದು ಕ್ಯಾಲಿಫೋರ್ನಿಯಾ ಪೊಲೀಸರು ತಿಳಿಸಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಸ್ವಯಂಸೇವಕರು ಮೊನ್ನೆ ಲೇಕ್ ಮೆರಿಟ್ ಅನ್ನು ಸ್ವಚ್ಛಗೊಳಿಸುತ್ತಿದ್ದಾಗ, ಅವರು ಅದರ ದಡದಲ್ಲಿ ತೇಲುತ್ತಿರುವ ಸೂಟ್ಕೇಸ್ ಅನ್ನು ಗಮನಿಸಿದರು. ನಂತರ, ಅವುಗಳನ್ನು ಹೊರತೆಗೆಯಲಾಗಿದೆ. ಕೊನೆಗೆ ಸೂಟ್‌ಕೇಸ್‌ನಲ್ಲಿದ್ದ ಮೃತದೇಹ ನೋಡಿ ಬೆಚ್ಚಿಬಿದ್ದಿದ್ದಾರೆ.
ಇದನ್ನೂ ಓದಿ: ಸಂಸತ್ ಭವನದ ಮೇಲೆ ಉಗ್ರರ ದಾಳಿ ನಡೆದು 21 ವರ್ಷ; ಭಾರತ-ಪಾಕ್ ಸಂಬಂಧ ಈಗ ಹೇಗಿದೆ?
ಮೃತ ವ್ಯಕ್ತಿಗೆ 30 ವರ್ಷ ವಯಸ್ಸಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಸೂಟ್‌ಕೇಸ್ ತೆರೆದ ತಕ್ಷಣ ದುರ್ವಾಸನೆ ಬರುತ್ತಿದೆ ಎಂದು ಸ್ವಯಂಸೇವಕರು ಹೇಳಿದ್ದಾರೆ. ಸೂಟ್‌ಕೇಸ್‌ನಲ್ಲಿರುವ ಲೇಕ್ ಮೆರಿಟ್ ಇನ್‌ಸ್ಟಿಟ್ಯೂಟ್‌ನ ಸ್ವಯಂಸೇವಕರಲ್ಲಿ ಒಬ್ಬರಾದ ಕೆವಿನ್ ಶೋಮೊ ಅವರು ಸೂಟ್‌ಕೇಸ್‌ನಲ್ಲಿ ಶವವನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ. ಇಂತಹ ಘಟನೆಗಳು ಆತಂಕಕ್ಕೆ ಕಾರಣವಾಗಿವೆ. ಮೊದಲು ಬಲೆಯನ್ನು ಬಳಸಿ ಸೂಟ್‌ಕೇಸ್ ಅನ್ನು ನಮ್ಮ ಕಡೆಗೆ ಎಳೆದು ಹಿಡಿದೆವು. ಅದನ್ನು ಎತ್ತಿ ಹಿಡಿದಾಗ ತುಂಬಾ ಭಾರವಾಗಿದೆಯೆಂದು ಅರಿತುಕೊಂಡೆವು. ಮುಂದೆ ಅದನ್ನು ತೆರೆದು ನೋಡಿದಾಗ ದೇಹವು ಹೊರ ಬಿದ್ದಿದೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಓಕ್ಲ್ಯಾಂಡ್ ಪೊಲೀಸ್ ಕ್ಯಾಪ್ಟನ್ ಅಲನ್ ಯು ತಿಳಿಸಿದ್ದಾರೆ. ಕೊಲೆ ಮಾಡಿದ್ದು ಯಾರು? ಶವವನ್ನು ಎಲ್ಲಿಂದ ತಂದಿದ್ದಾರೆ? ಈ ಎಲ್ಲ ವಿಷಯಗಳನ್ನು ಪರಿಗಣಿಸಿ ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ