AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್-ಭಾರತ ನಡುವಿನ ಯುದ್ಧ ಕೊನೆಗೊಳಿಸಿದ್ದು ನಾವೇ, ಟ್ರಂಪ್ ಬಳಿಕ ಚೀನಾದ ಅಚ್ಚರಿಯ ಹೇಳಿಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಂತರ, ಚೀನಾ ಕೂಡ ಈಗ ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಉದ್ವಿಗ್ನತೆಯನ್ನು ಕಡಿಮೆ ಮಾಡುವಲ್ಲಿ ಪಾತ್ರ ವಹಿಸಿದೆ ಎಂದು ಹೇಳಿಕೊಂಡಿದೆ. ಈ ವರ್ಷ ಎರಡೂ ದೇಶಗಳ ನಡುವಿನ ಪರಿಸ್ಥಿತಿ ಹದಗೆಟ್ಟಾಗ, ಮಧ್ಯಸ್ಥಿಕೆ ವಹಿಸಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿದೆ ಎಂದು ಚೀನಾ ಹೇಳುತ್ತದೆ.

ಪಾಕ್-ಭಾರತ ನಡುವಿನ ಯುದ್ಧ ಕೊನೆಗೊಳಿಸಿದ್ದು ನಾವೇ, ಟ್ರಂಪ್ ಬಳಿಕ ಚೀನಾದ ಅಚ್ಚರಿಯ ಹೇಳಿಕೆ
ವಾಂಗ್
ನಯನಾ ರಾಜೀವ್
|

Updated on: Dec 31, 2025 | 12:54 PM

Share

ಚೀನಾ, ಡಿಸೆಂಬರ್ 31: ಅಮೆರಿಕವಾಗಿರಲಿ, ಚೀನಾ(China)ವಾಗಿರಲಿ ಮಾಡದ ಕೆಲಸಕ್ಕೆ ಕ್ರೆಡಿಟ್ ಪಡೆಯಲು ಹಾತೊರೆಯುತ್ತಿವೆ. ಭಾರತ-ಪಾಕಿಸ್ತಾನ ಕದನ ವಿರಾಮ ಒಪ್ಪಂದದಲ್ಲಿ ಚೀನಾವು ಕೂಡ ಅಮೆರಿಕದಂತೆಯೇ ಕ್ರೆಡಿಟ್ ಪಡೆಯಲು ಮುಂದಾಗಿದೆ. ಕ್ರೆಡಿಟ್ ಪಡೆಯುವ ಪ್ರಯತ್ನದಲ್ಲಿ, ಚೀನಾ ಕೂಡ ಡೊನಾಲ್ಡ್ ಟ್ರಂಪ್ ಮಾಡಿದ ತಪ್ಪನ್ನೇ ಮಾಡಿದೆ. ಭಾರತ-ಪಾಕ್ ಯುದ್ಧವನ್ನು ತಡೆದಿದ್ದು ನಾವೇ ಎಂದು ಹೇಳಿಕೊಂಡಿದೆ.

ಮಂಗಳವಾರ ಬೀಜಿಂಗ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮವೊಂದರಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, ವಿಶ್ವದ ಅನೇಕ ಸಂಘರ್ಷಗಳನ್ನು ಪರಿಹರಿಸಲು ಚೀನಾ ಸಹಾಯ ಮಾಡುತ್ತಿದೆ ಎಂದು ಹೇಳಿದರು. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ಸಮಯದಲ್ಲಿ ಚೀನಾ ಮಧ್ಯಸ್ಥಿಕೆ ವಹಿಸಿತು ಎಂದು ಹೇಳಿಕೊಂಡಿದೆ.

ಈಗ ಅದು ಭಾರತದಿಂದ ಛೀಮಾರಿ ಎದುರಿಸಬೇಕಾಗಿದೆ. ಹೌದು, ಡೊನಾಲ್ಡ್ ಟ್ರಂಪ್‌ನಂತೆಯೇ, ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ಕೊನೆಗೊಳಿಸುವ ತನ್ನ ಹೇಳಿಕೆಗೆ ಚೀನಾಕ್ಕೆ ಭಾರತ ಸೂಕ್ತ ಉತ್ತರ ನೀಡಿದೆ.

ಮತ್ತಷ್ಟು ಓದಿ: ಬೆಂಗಳೂರಲ್ಲಿ ಚೀನಾ ಮಾದರಿ ರೈಲ್ವೆ ಟರ್ಮಿನಲ್!: ನಿರ್ಮಾಣ ಆಗೋದೆಲ್ಲಿ ಗೊತ್ತಾ?

ಈ ವರ್ಷದ ಆರಂಭದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಮುಖಾಮುಖಿಯ ಸಮಯದಲ್ಲಿ ತಾವು ಮಧ್ಯಸ್ಥಿಕೆ ವಹಿಸಿದ್ದೆವು ಎಂಬ ಚೀನಾದ ಹೇಳಿಕೆಯನ್ನು ಭಾರತ ಸಂಪೂರ್ಣವಾಗಿ ತಿರಸ್ಕರಿಸಿದೆ. ಆಪರೇಷನ್ ಸಿಂಧೂರ್ ನಂತರ ಸಹಿ ಹಾಕಲಾದ ಭಾರತ-ಪಾಕಿಸ್ತಾನ ಕದನ ವಿರಾಮ ಒಪ್ಪಂದದಲ್ಲಿ ಯಾವುದೇ ಮೂರನೇ ವ್ಯಕ್ತಿ ಭಾಗಿಯಾಗಿಲ್ಲ ಎಂದು ಭಾರತ ಹೇಳಿದೆ.

ಯುದ್ಧವನ್ನು ಕೊನೆಗೊಳಿಸುವಲ್ಲಿ ಯಾವುದೇ ವಿದೇಶಿ ದೇಶಗಳು ಯಾವುದೇ ಪಾತ್ರವನ್ನು ವಹಿಸಿಲ್ಲ ಎಂದು ಭಾರತ ಹೇಳಿದೆ. ಪಾಕಿಸ್ತಾನವು ಕದನ ವಿರಾಮವನ್ನು ಕೋರಿದೆ ಎಂದು ಭಾರತ ಈ ಹಿಂದೆ ಹೇಳಿತ್ತು, ನಂತರ ಭಾರತ ಹೋರಾಟವನ್ನು ನಿಲ್ಲಿಸಲು ನಿರ್ಧರಿಸಿತ್ತು. ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ಬೀಜಿಂಗ್ ಮಧ್ಯಸ್ಥಿಕೆ ವಹಿಸಿದೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿಕೆ ನೀಡಿದ್ದರು.

ಭಾರತವು ಪಾಕಿಸ್ತಾನದಲ್ಲಿನ ಹಲವಾರು ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿಕೊಂಡಿತು, ಇದರ ಪರಿಣಾಮವಾಗಿ ಒಟ್ಟು 11 ವಾಯುನೆಲೆಗಳಿಗೆ ಹಾನಿಯಾಯಿತು. ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಈ ದಾಳಿ ನಡೆಸಿತು, ಇದರಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದರು.

ವಾಸ್ತವವೆಂದರೆ ಭಾರತ ಸರ್ಕಾರವು ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸುವಲ್ಲಿ ಬೇರೆ ಯಾವುದೇ ದೇಶಗಳು ಯಾವುದೇ ಪಾತ್ರವನ್ನು ವಹಿಸಿಲ್ಲ ಎಂದು ಪದೇ ಪದೇ ಹೇಳುತ್ತಲೇ ಬಂದಿದೆ. ಸರ್ಕಾರವು ಇದಕ್ಕೆ ಸಂಸತ್ತಿನಲ್ಲಿಯೂ ಪ್ರತಿಕ್ರಿಯಿಸಿದೆ. ಡೊನಾಲ್ಡ್ ಟ್ರಂಪ್ ಇದಕ್ಕೆ ಕ್ರೆಡಿಟ್ ತೆಗೆದುಕೊಳ್ಳಲು ಪ್ರಯತ್ನಿಸಿದಾಗಲೂ, ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವು ಬೇರೆ ಯಾವುದೇ ದೇಶದ ಹಸ್ತಕ್ಷೇಪದಿಂದಾಗಿ ನಿಲ್ಲಲಿಲ್ಲ ಎಂದು ಭಾರತ ಸರ್ಕಾರ ಸಮರ್ಥಿಸಿಕೊಂಡಿದೆ.

ಆಪರೇಷನ್ ಸಿಂಧೂರ್ ನಂತರ ಯಾವುದೇ ಮಧ್ಯಸ್ಥಿಕೆ ಇರಲಿಲ್ಲ ಮತ್ತು ಭಾರತೀಯ ಮಿಲಿಟರಿ ಕ್ರಮದ ನಂತರ ಪಾಕಿಸ್ತಾನವು ಸ್ವತಃ ಕದನ ವಿರಾಮವನ್ನು ಒತ್ತಾಯಿಸಿದೆ ಎಂದು ಭಾರತ ಸರ್ಕಾರ ಪದೇ ಪದೇ ಪುನರುಚ್ಚರಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಹೊಸ ವರ್ಷಾಚರಣೆ ವೇಳೆ ಎಣ್ಣೆ ಮತ್ತಲ್ಲಿರೋರನ್ನು ಪೊಲೀಸರೇ ಮನೆಗೆ ಬಿಡ್ತಾರಾ?
ಹೊಸ ವರ್ಷಾಚರಣೆ ವೇಳೆ ಎಣ್ಣೆ ಮತ್ತಲ್ಲಿರೋರನ್ನು ಪೊಲೀಸರೇ ಮನೆಗೆ ಬಿಡ್ತಾರಾ?
ಮಹಿಳಾ ಸುರಕ್ಷತೆಗಾಗಿ ಬೆಂಗಳೂರು ಪೊಲೀಸರಿಂದ 50 ಕಡೆ ಮಹಿಳಾ ಸಹಾಯ ಕೇಂದ್ರ
ಮಹಿಳಾ ಸುರಕ್ಷತೆಗಾಗಿ ಬೆಂಗಳೂರು ಪೊಲೀಸರಿಂದ 50 ಕಡೆ ಮಹಿಳಾ ಸಹಾಯ ಕೇಂದ್ರ
ಸುದೀಪ್ ಬಳಿಕ ಪೈರಸಿ ವಿರುದ್ಧ ಧ್ವನಿ ಎತ್ತಿದ ಜಗ್ಗೇಶ್; ಕಾರಣ ಏನು?
ಸುದೀಪ್ ಬಳಿಕ ಪೈರಸಿ ವಿರುದ್ಧ ಧ್ವನಿ ಎತ್ತಿದ ಜಗ್ಗೇಶ್; ಕಾರಣ ಏನು?
ಇಂಟರ್​ನ್ಯಾಷನಲ್​ ಟಿ20 ಲೀಗ್​ನಲ್ಲಿ ಹೊಸ ಇತಿಹಾಸ ಬರೆದ ಆಂಡ್ರೀಸ್ ಗೌಸ್
ಇಂಟರ್​ನ್ಯಾಷನಲ್​ ಟಿ20 ಲೀಗ್​ನಲ್ಲಿ ಹೊಸ ಇತಿಹಾಸ ಬರೆದ ಆಂಡ್ರೀಸ್ ಗೌಸ್
ಆನೇಕಲ್: ಸ್ಲೀಪರ್ ಕೋಚ್ ಬಸ್​ಗಳ ನಡುವೆ ಭೀಕರ ಅಪಘಾತ
ಆನೇಕಲ್: ಸ್ಲೀಪರ್ ಕೋಚ್ ಬಸ್​ಗಳ ನಡುವೆ ಭೀಕರ ಅಪಘಾತ
‘ಕ್ಷಣ ಕ್ಷಣಕ್ಕೂ ಕೊಡ್ತೀವಿ, ತಗೋತಾ ಇರ್ಬೇಕು’; ಗಿಲ್ಲಿಗೆ ಅಶ್ವಿನಿ ಚಾಲೆಂಜ್
‘ಕ್ಷಣ ಕ್ಷಣಕ್ಕೂ ಕೊಡ್ತೀವಿ, ತಗೋತಾ ಇರ್ಬೇಕು’; ಗಿಲ್ಲಿಗೆ ಅಶ್ವಿನಿ ಚಾಲೆಂಜ್
ಕಾರ್ಮಿಕರ ಹೊತ್ತೊಯ್ಯುತ್ತಿದ್ದ 2 ಲೋಕೊ ರೈಲುಗಳು ಡಿಕ್ಕಿ, 60 ಜನರಿಗೆ ಗಾಯ
ಕಾರ್ಮಿಕರ ಹೊತ್ತೊಯ್ಯುತ್ತಿದ್ದ 2 ಲೋಕೊ ರೈಲುಗಳು ಡಿಕ್ಕಿ, 60 ಜನರಿಗೆ ಗಾಯ
ಮೊಬೈಲ್ ಅಂಗಡಿ ಮಾಲೀಕನ ಗಮನ ಬೇರೆಡೆ ಸೆಳೆದು ಹಣ ಕದ್ದ ಮಹಿಳೆ
ಮೊಬೈಲ್ ಅಂಗಡಿ ಮಾಲೀಕನ ಗಮನ ಬೇರೆಡೆ ಸೆಳೆದು ಹಣ ಕದ್ದ ಮಹಿಳೆ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಭಾರಿ ಬಂದೋಬಸ್ತ್, ಎಲ್ಲೆಡೆ ಖಾಕಿ ಕಣ್ಣು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಭಾರಿ ಬಂದೋಬಸ್ತ್, ಎಲ್ಲೆಡೆ ಖಾಕಿ ಕಣ್ಣು
ಇಂದು ಮುಕ್ಕೋಟಿ ದ್ವಾದಶಿ, ಒಂದು ಪುಣ್ಯಕ್ಕೆ 3 ಕೋಟಿ ಫಲ!
ಇಂದು ಮುಕ್ಕೋಟಿ ದ್ವಾದಶಿ, ಒಂದು ಪುಣ್ಯಕ್ಕೆ 3 ಕೋಟಿ ಫಲ!