AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ಚೀನಾ ಮಾದರಿ ರೈಲ್ವೆ ಟರ್ಮಿನಲ್!: ನಿರ್ಮಾಣ ಆಗೋದೆಲ್ಲಿ ಗೊತ್ತಾ?

ಬೆಂಗಳೂರಿನಲ್ಲಿ ದೇಶದ ಮೊದಲ ಚೀನಾ ಮಾದರಿ ಮಲ್ಟಿ ಲೆವೆಲ್ ರೈಲ್ವೆ ಟರ್ಮಿನಲ್ ನಿರ್ಮಾಣವಾಗಲಿದೆ. 20 ಎಕರೆ ಜಾಗದಲ್ಲಿ 6,000 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾದರಿಯ ಈ ಯೋಜನೆ 5 ಅಂತಸ್ತುಗಳಲ್ಲಿ 16 ಪ್ಲಾಟ್‌ಫಾರಂಗಳನ್ನು ಒಳಗೊಂಡಿರುತ್ತದೆ. ಇದು ಸಂಪೂರ್ಣ ಎತ್ತರಿಸಿದ ರೈಲ್ವೆ ನಿಲ್ದಾಣವಾಗಲಿದ್ದು, ಕೊಗಿಲು ಕ್ರಾಸ್ ಮೆಟ್ರೋಗೂ ಸಂಪರ್ಕ ಕಲ್ಪಿಸುತ್ತದೆ ಎನ್ನಲಾಗಿದೆ.

ಬೆಂಗಳೂರಲ್ಲಿ ಚೀನಾ ಮಾದರಿ ರೈಲ್ವೆ ಟರ್ಮಿನಲ್!: ನಿರ್ಮಾಣ ಆಗೋದೆಲ್ಲಿ ಗೊತ್ತಾ?
ಸಾಂದರ್ಭಿಕ ಚಿತ್ರ
ಕಿರಣ್​ ಸೂರ್ಯ
| Edited By: |

Updated on: Dec 24, 2025 | 9:41 PM

Share

ಬೆಂಗಳೂರು, ಡಿಸೆಂಬರ್​​ 24: ದೇಶದಲ್ಲಿ ಇದೇ ಮೊದಲ ಬಾರಿಗೆ ಚೈನಾದ ಹ್ಯಾಂಗ್ಜೋ ಮಾದರಿಯಲ್ಲಿ ಬೆಂಗಳೂರಿನ ಯಲಹಂಕದಲ್ಲಿ ರೈಲ್ವೆ ಟರ್ಮಿನಲ್ ನಿರ್ಮಾಣಕ್ಕೆ ಇಲಾಖೆ ಸಿದ್ದತೆ ನಡೆಸಿದೆ. ಒಟ್ಟು 20 ಎಕರೆ ವಿಸ್ತೀರ್ಣದ ಜಾಗದಲ್ಲಿ, 6 ಸಾವಿರ ಕೋಟಿ ರೂಪಾಯಿ ವೆಚ್ಚದೊಂದಿಗೆ ಮಲ್ಟಿ ಲೆವಲ್ ರೈಲ್ವೆ ಸ್ಟೇಷನ್ ನಿರ್ಮಾಣ ಮಾಡಲು ಪ್ಲ್ಯಾನ್ ನಡೆಯುತ್ತಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರೀತಿಯಲ್ಲಿ ಇದು ಇರಲಿದೆ ಎನ್ನಲಾಗಿದೆ.

ರೈಲ್ ವೀಲ್ ಫ್ಯಾಕ್ಟರಿ ಬಳಿ ಟರ್ಮಿನಲ್ ಸ್ಟೇಷನ್​​ ನಿರ್ಮಾಣ

ಮೊದಲಿಗೆ ದೇವನಹಳ್ಳಿಯಲ್ಲಿ ಈ ಟರ್ಮಿನಲ್ ಸ್ಟೇಷನ್ ನಿರ್ಮಾಣ ಮಾಡಲು ಇಲಾಖೆ ಚಿಂತನೆ ನಡೆಸಿತ್ತು. ಆದರೆ ಅಲ್ಲಿ ಜಾಗದ ಸಮಸ್ಯೆ ಹಿನ್ನೆಲೆ ಯಲಹಂಕದ ರೈಲ್ ವೀಲ್ ಫ್ಯಾಕ್ಟರಿ ಬಳಿ ಟರ್ಮಿನಲ್ ಸ್ಟೇಷನ್ ಮಾಡಲು ಸೌತ್ ವೆಸ್ಟರ್ನ್ ರೈಲ್ವೆ ಒಲವು ತೋರಿಸಿದೆ ಎನ್ನಲಾಗಿದ್ದು, ಈ ಬಗ್ಗೆ ಯಲಹಂಕ ನಿವಾಸಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ರೈಲ್ವೆ ಪ್ರಯಾಣಿಕರೇ ಗಮನಿಸಿ, ಇನ್ಮುಂದೆ ಟಿಕೆಟ್​ ಅನ್ನು ಮೊಬೈಲ್​ನಲ್ಲಿ ತೋರಿಸಿದ್ರೆ ಸಾಲ್ದು

ಒಟ್ಟು ಐದು ಫ್ಲೋರ್​​ಗಳಲ್ಲಿ ರೈಲುಗಳು ಸಂಚಾರ!

ಇನ್ನು ಈ ರೈಲ್ವೆ ಟರ್ಮಿನಲ್​​ನಲ್ಲಿ 16 ಫ್ಲಾಟ್ ಫಾರಂ ಇರಲಿದೆ. ಅಂಡರ್ ಗ್ರೌಂಡ್, ಫಸ್ಟ್ ಫ್ಲೋರ್ ಸೇರಿದಂತೆ ಒಟ್ಟು ಐದು ಫ್ಲೋರ್​​ಗಳಲ್ಲಿ ರೈಲುಗಳು ಸಂಚಾರ ಮಾಡಲಿವೆಯಂತೆ. ಆ ಮೂಲಕ ಇದು ದೇಶದ ಮೊದಲ ಸಂಪೂರ್ಣ ಎತ್ತರಿಸಿದ ರೈಲ್ವೆ ಸ್ಟೇಷನ್ ಆಗಲಿದೆ. ಜೊತೆಗೆ ಈ ಟರ್ಮಿನಲ್ ಬ್ಲ್ಯೂ ಲೈನ್​​ನಲ್ಲಿರುವ ಕೋಗಿಲು ಕ್ರಾಸ್ ಮೆಟ್ರೋ ನಿಲ್ದಾಣಕ್ಕೂ ಸಂಪರ್ಕ ಕಲ್ಪಿಸಲಿದೆ. ಯಲಹಂಕ-ದೊಡ್ಡಬಳ್ಳಾಪುರ ಹೆದ್ದಾರಿ ಕಡೆಯಿಂದ ಟರ್ಮಿನಲ್​​ನ​​ ಮುಖ್ಯದ್ವಾರ ಇರಲಿದೆ ಎನ್ನಲಾಗಿದೆ. ಈ ಬಗ್ಗೆ ರೈಲ್ವೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದು, ಈ ರೈಲ್ವೆ ಟರ್ಮಿನಲ್​​ ನಿರ್ಮಾಣವಾದರೆ ಅಂತಾರಾಷ್ಟ್ರೀಯ ಏರ್​​ಪೋರ್ಟ್​​ಗೆ ಸಂಚಾರವೂ ಸುಲಭವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಆಗಲ್ಲ ಅಂದ್ರೆ ಹೋಗ್ರಾ ಇರು; ಅಮುಕು ಡುಮುಕುಗೆ ಗೆಟೌಟ್ ಎಂದ ವಿನಯ್ ಗೌಡ
ಆಗಲ್ಲ ಅಂದ್ರೆ ಹೋಗ್ರಾ ಇರು; ಅಮುಕು ಡುಮುಕುಗೆ ಗೆಟೌಟ್ ಎಂದ ವಿನಯ್ ಗೌಡ
ಪ್ರತಿಯೊಬ್ಬ ವಿದ್ಯಾರ್ಥಿಯ ಆಕಾಂಕ್ಷೆ ಆಲಿಸಲು ಅಧಿಕಾರಿಗಳಿಗೆ ಜೋಶಿ ಸೂಚನೆ
ಪ್ರತಿಯೊಬ್ಬ ವಿದ್ಯಾರ್ಥಿಯ ಆಕಾಂಕ್ಷೆ ಆಲಿಸಲು ಅಧಿಕಾರಿಗಳಿಗೆ ಜೋಶಿ ಸೂಚನೆ
ಶಾಸಕರ ಅಸಮಾಧಾನದ ನಡುವೆ ದೆಹಲಿಗೆ ಹಾರಿದ ಸಿಎಂ ಡಿ.ಕೆ ಶಿವಕುಮಾರ್
ಶಾಸಕರ ಅಸಮಾಧಾನದ ನಡುವೆ ದೆಹಲಿಗೆ ಹಾರಿದ ಸಿಎಂ ಡಿ.ಕೆ ಶಿವಕುಮಾರ್
ಚಲಿಸುತ್ತಿದ್ದಾಗಲೇ ಟೈರ್ ಬ್ಲಾಸ್ಟ್: ಗದ್ದೆಗೆ ನುಗ್ಗಿದ KSRTC ಬಸ್​​
ಚಲಿಸುತ್ತಿದ್ದಾಗಲೇ ಟೈರ್ ಬ್ಲಾಸ್ಟ್: ಗದ್ದೆಗೆ ನುಗ್ಗಿದ KSRTC ಬಸ್​​
ಸಚಿವರ ಪಟ್ಟಿ ಬದಲಾಗಿದ್ದು ಕಾಂಗ್ರೆಸ್ ಇತಿಹಾಸದಲ್ಲಿ ಇದೇ ಮೊದಲು: ರಾಜಣ್ಣ
ಸಚಿವರ ಪಟ್ಟಿ ಬದಲಾಗಿದ್ದು ಕಾಂಗ್ರೆಸ್ ಇತಿಹಾಸದಲ್ಲಿ ಇದೇ ಮೊದಲು: ರಾಜಣ್ಣ
ಯತೀಂದ್ರಗೆ ಮತ್ತೊಂದು ಜಾಕ್​​ ಪಾಟ್, ಸಿದ್ದರಾಮಯ್ಯ ಮುನಿಸು ತಣಿಸುವ ಪ್ರಯತ್ನ
ಯತೀಂದ್ರಗೆ ಮತ್ತೊಂದು ಜಾಕ್​​ ಪಾಟ್, ಸಿದ್ದರಾಮಯ್ಯ ಮುನಿಸು ತಣಿಸುವ ಪ್ರಯತ್ನ
‘ಖಾಕಿ’ ಧರಿಸಿದರೆ ಜೋಶ್ ಬರುತ್ತೆ: ಪೊಲೀಸರ ಬಗ್ಗೆ ಡಾಲಿ ಧನಂಜಯ್ ಮಾತು
‘ಖಾಕಿ’ ಧರಿಸಿದರೆ ಜೋಶ್ ಬರುತ್ತೆ: ಪೊಲೀಸರ ಬಗ್ಗೆ ಡಾಲಿ ಧನಂಜಯ್ ಮಾತು
GBDA ಯೋಜನೆ ಕುರಿತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂದೇಶ
GBDA ಯೋಜನೆ ಕುರಿತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂದೇಶ
‘ನನ್ನ ಕನಸನ್ನು ಹೆಗಲ ಮೇಲೆ ಹೊತ್ತುಕೊಂಡ ಯಶ್: ಗೀತು ಮೋಹನ್​​ದಾಸ್ ಭಾವುಕ
‘ನನ್ನ ಕನಸನ್ನು ಹೆಗಲ ಮೇಲೆ ಹೊತ್ತುಕೊಂಡ ಯಶ್: ಗೀತು ಮೋಹನ್​​ದಾಸ್ ಭಾವುಕ
ಟೆಕ್ಕಿ ಅದ್ವೈತ್ ಶಿವಗಂಗೆ ಬೆಟ್ಟ ಏರುತ್ತಿರುವ ಸಿಸಿಟಿವಿ ದೃಶ್ಯಾವಳಿ ಪತ್ತೆ!
ಟೆಕ್ಕಿ ಅದ್ವೈತ್ ಶಿವಗಂಗೆ ಬೆಟ್ಟ ಏರುತ್ತಿರುವ ಸಿಸಿಟಿವಿ ದೃಶ್ಯಾವಳಿ ಪತ್ತೆ!