ಟಿ ನರಸೀಪುರದಲ್ಲಿ 5 ಸಾವಿರ ಹಿಂದೂಗಳ ಸೇರಿಸಿ ಗಣೇಶ ಮೆರವಣಿಗೆ, ಇನ್ಸ್‌ಪೆಕ್ಟರ್ ಕಣ್ತುಂಬಿಕೊಳ್ಳಲಿ: ಹಿಂದೂ ಜಾಗರಣ ವೇದಿಕೆ ಸವಾಲು
ಟಿ. ನರಸೀಪುರದಲ್ಲಿ ಇನ್ಸ್‌ಪೆಕ್ಟರ್ ಧನಂಜಯ ಅವರ ಹೇಳಿಕೆ ಗಣೇಶ ಮೆರವಣಿಗೆ ವಿವಾದಕ್ಕೆ ಹೊಸ ತಿರುವು ನೀಡಿದೆ. ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಿರುವ ಹಿಂದೂ ಜಾಗರಣ ವೇದಿಕೆ, 18ರಂದು 5,000 ಹಿಂದೂ ಕಾರ್ಯಕರ್ತರೊಂದಿಗೆ ಭವ್ಯ ಮೆರವಣಿಗೆ ನಡೆಸುವುದಾಗಿ ಘೋಷಿಸಿದೆ. ಈ ಘಟನೆಯು ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ರಾಜ್ಯದ ವಿವಿಧ ಭಾಗಗಳಿಂದ ಕಾರ್ಯಕರ್ತರನ್ನು ಸೇರಿಸಲು ಸಿದ್ಧತೆ ನಡೆದಿದೆ.
ಮೈಸೂರು, ಸೆಪ್ಟೆಂಬರ್ 15: ಮೈಸೂರಿನ ಟಿ ನರಸೀಪುರದಲ್ಲಿ ನಡೆಯಲಿರುವ ಗಣೇಶ ಮೆರವಣಿಗೆಯ ಕುರಿತು ಇನ್ಸ್‌ಪೆಕ್ಟರ್ ಧನಂಜಯ ಅವರು ನೀಡಿದ ಹೇಳಿಕೆ ಪ್ರಸ್ತುತ ರಾಜಕೀಯ ಮತ್ತು ಧಾರ್ಮಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಹೇಳಿಕೆಯನ್ನು ಬಿಜೆಪಿ ಅಸ್ತ್ರವಾಗಿ ಬಳಸಿಕೊಂಡಿದ್ದರೆ, ಹಿಂದೂ ಜಾಗರಣ ವೇದಿಕೆ ಇದಕ್ಕೆ ಸವಾಲೊಡ್ಡಿದೆ. ಟಿ. ನರಸೀಪುರದಲ್ಲಿ ಮೊದಲ ಬಾರಿಗೆ ಹಿಂದೂ ಮಹಾಗಣಪತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಇದು ಪೊಲೀಸ್ ಠಾಣೆಯಿಂದ ಕೇವಲ 200 ಮೀಟರ್ ದೂರದಲ್ಲಿದೆ. ಹಿಂದೂ ಜಾಗರಣ ವೇದಿಕೆ ಈ ಪ್ರತಿಷ್ಠಾಪನೆಯನ್ನು ಆಯೋಜಿಸಿದ್ದು, ಧಾರ್ಮಿಕ ಗುರುಗಳು, ಬಿಜೆಪಿ ನಾಯಕರು ಮತ್ತು ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದಾರೆ.
ಸೆಪ್ಟೆಂಬರ್ 18ರಂದು ಭವ್ಯ ಮೆರವಣಿಗೆ ನಡೆಸುವುದಾಗಿ ಹಿಂದೂ ಜಾಗರಣ ವೇದಿಕೆ ಘೋಷಿಸಿದೆ. ಮೆರವಣಿಗೆಯಲ್ಲಿ 5,000 ಹಿಂದೂ ಕಾರ್ಯಕರ್ತರನ್ನು ಸೇರಿಸುತ್ತೇವೆ. ಇನ್ಸ್‌ಪೆಕ್ಟರ್ ಧನಂಜಯ ಅವರು ಮೆರವಣಿಗೆ ದೃಶ್ಯಗಳನ್ನು ಕಣ್ತುಂಬಿಕೊಳ್ಳಲಿ ಎಂದು ಹಿಂದೂ ಜಾಗರಣ ವೇದಿಕೆಯ ಮಹೇಶ್ ಸವಾಲು ಹಾಕಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

