ದಶಕಗಳ ಸಂಪರ್ಕದ ಕನಸು ಸಾಕಾರ: ಅಸ್ಸಾಂ ರೈಲ್ವೆಗೆ ಪೂರ್ಣ ವಿದ್ಯುತ್ ಸ್ಪರ್ಶ, ಜ್ಯೋತಿರಾದಿತ್ಯ ಸಿಂಧಿಯಾ ಮೆಚ್ಚುಗೆ
ಅಸ್ಸಾಂ ರಾಜ್ಯದ ಸಮಗ್ರ ಬ್ರಾಡ್‌ಗೇಜ್ ರೈಲು ಜಾಲವು ಶೇಕಡಾ100 ರಷ್ಟು ಸಂಪೂರ್ಣ ವಿದ್ಯುದ್ದೀಕರಣಗೊಂಡಿರುವುದನ್ನು ಕೇಂದ್ರ ಈಶಾನ್ಯ ಪ್ರದೇಶ ಅಭಿವೃದ್ಧಿ ಹಾಗೂ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಅಸ್ಸಾಂ ರೈಲ್ವೆ ಜಾಲದ ಶೇ.100 ರಷ್ಟು ವಿದ್ಯುದ್ದೀಕರಣವು ‘ರೈಸಿಂಗ್ ನಾರ್ತ್‌ಈಸ್ಟ್’ ಅಭಿವೃದ್ಧಿ ಪರ್ವದ ಮಹತ್ವದ ಮೈಲಿಗಲ್ಲು
ಗುವಾಹಟಿ, ಸೆಪ್ಟೆಂಬರ್ 15: ಅಸ್ಸಾಂ ರಾಜ್ಯದ ಸಮಗ್ರ ಬ್ರಾಡ್‌ಗೇಜ್ ರೈಲು ಜಾಲವು ಶೇ.100 ರಷ್ಟು ಸಂಪೂರ್ಣ ವಿದ್ಯುದ್ದೀಕರಣಗೊಂಡಿರುವುದನ್ನು ಕೇಂದ್ರ ಈಶಾನ್ಯ ಪ್ರದೇಶ ಅಭಿವೃದ್ಧಿ ಹಾಗೂ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಅಸ್ಸಾಂ ರೈಲ್ವೆ ಜಾಲದ ಶೇ.100 ರಷ್ಟು ವಿದ್ಯುದ್ದೀಕರಣವು ‘ರೈಸಿಂಗ್ ನಾರ್ತ್‌ಈಸ್ಟ್’ ಅಭಿವೃದ್ಧಿ ಪರ್ವದ ಮಹತ್ವದ ಮೈಲಿಗಲ್ಲು. ಒಂದು ಕಾಲದಲ್ಲಿ ಕಠಿಣ ಭೂಪ್ರದೇಶದ ಕಾರಣಕ್ಕೆ ರೈಲು ಸಂಪರ್ಕವೇ ಮರೀಚಿಕೆಯಾಗಿದ್ದ ಈ ಭಾಗದಲ್ಲಿ, ಪರಿಸರಸ್ನೇಹಿ ಮತ್ತು ಸುಸ್ಥಿರ ಸಂಪರ್ಕ ಸಾಧಿಸುವ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಈಗ ಸ್ಥಿರವಾಗಿ ಸಾಕಾರಗೊಳ್ಳುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಯೋಜನೆಯಿಂದಾಗಿ ಡೀಸೆಲ್ ಎಂಜಿನ್‌ಗಳ ಬದಲಿಗೆ ಪರಿಸರಸ್ನೇಹಿ ವಿದ್ಯುತ್ ರೈಲುಗಳು ಸಂಚರಿಸಲಿದ್ದು, ಇಂಗಾಲದ ಹೊರಸೂಸುವಿಕೆ ಗಣನೀಯವಾಗಿ ತಗ್ಗಲಿದೆ. ಅಲ್ಲದೆ ಸರಕು ಸಾಗಣೆ ಹಾಗೂ ಪ್ರಯಾಣಿಕರ ರೈಲುಗಳ ವೇಗ ಹೆಚ್ಚಾಗಲಿದ್ದು, ಅಸ್ಸಾಂ ಜೊತೆಗೆ ಈಶಾನ್ಯ ಭಾರತದ ಇತರೆ ರಾಜ್ಯಗಳ ವ್ಯಾಪಾರ-ವಹಿವಾಟು ಹಾಗೂ ಪ್ರವಾಸೋದ್ಯಮಕ್ಕೆ ಭಾರಿ ಉತ್ತೇಜನ ಸಿಗಲಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

