ಕೇರಳ: ಕುಡಿದ ಮತ್ತಿನಲ್ಲಿ ರೈಲ್ವೆ ಟ್ರ್ಯಾಕ್ ಮೇಲೆ ಆಟೋ ನಿಲ್ಲಿಸಿ ಹೋದ ಚಾಲಕ, ವಂದೇ ಭಾರತ್ ರೈಲು ಡಿಕ್ಕಿ
ಕೇರಳದ ತಿರುವನಂತಪುರಂನಲ್ಲಿ ಕುಡಿದ ಮತ್ತಿನಲ್ಲಿದ್ದ ಆಟೋ ಚಾಲಕನೊಬ್ಬ ರೈಲ್ವೆ ಹಳಿ ಮೇಲೆ ವಾಹನ ನಿಲ್ಲಿಸಿದ್ದ. ಕಾಸರಗೋಡಿನಿಂದ ಬರುತ್ತಿದ್ದ ವಂದೇ ಭಾರತ್ ರೈಲು ಆ ಆಟೋಗೆ ಡಿಕ್ಕಿ ಹೊಡೆದಿದೆ. ರೈಲಿನ ಲೋಕೋ ಪೈಲಟ್‌ನ ಸಮಯೋಚಿತ ಕ್ರಮದಿಂದ ದೊಡ್ಡ ದುರಂತ ತಪ್ಪಿದೆ. ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ಈ ಘಟನೆಯು ಕೇರಳದ ಮದ್ಯ ನೀತಿಯ ಬಗ್ಗೆ ಮತ್ತೆ ಚರ್ಚೆಗೆ ಕಾರಣವಾಗಿದೆ.

ತಿರುವನಂತಪುರ, ಡಿಸೆಂಬರ್ 24: ಕುಡಿದ ಮತ್ತಿನಲ್ಲಿ ಚಾಲಕನೊಬ್ಬ ಆಟೋವನ್ನು ರೈಲ್ವೆ ಹಳಿ ಮೇಲೆ ನಿಲ್ಲಿಸಿದ್ದ ಪರಿಣಾಮ ವಂದೇ ಭಾರತ್(Vande Bharat) ರೈಲು ಡಿಕ್ಕಿ ಹೊಡೆದಿರುವ ಘಟನೆ ಕೇರಳದಲ್ಲಿ ನಡೆದಿದೆ. ಮಂಗಳವಾರ ರಾತ್ರಿ ಕೇರಳದ ತಿರುವನಂತಪುರಂ ಜಿಲ್ಲೆಯ ಅಕತುಮುರಿ ನಿಲ್ದಾಣದ ಬಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಲೋಕೊ ಪೈಲಟ್ ರೈಲ್ವೆ ಹಳಿ ಮೇಲೆ ಆಟೋ ನಿಂತಿರುವುದನ್ನು ಕಂಡು ಬ್ರೇಕ್ ಹಾಕಿದ್ದಾರೆ. ಆದರೂ ರೈಲಿನ ಮುಂಭಾಗ ಆಟೋಗೆ ತಾಗಿದೆ.
ಕಾಸರಗೋಡಿನಿಂದ ತಿರುವನಂತಪುರಕ್ಕೆ ಚಲಿಸುತ್ತಿದ್ದ ರೈಲು ರಾತ್ರಿ 10.10 ರ ಸುಮಾರಿಗೆ ವರ್ಕಲಾ-ಕಡಕ್ಕಾವೂರು ವಿಭಾಗದ ಅಕತುಮುರಿಗೆ ಸಮೀಪಿಸುತ್ತಿದ್ದಾಗ, ಲೋಕೋ ಪೈಲಟ್ ವಾಹನವೊಂದು ರೈಲು ಹಳಿ ಮೇಲೆ ಇರುವುದನ್ನು ಕಂಡಿದ್ದಾರೆ. ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ, ಎಂಜಿನಿಯರಿಂಗ್ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ನೋಡಿದಾಗ ಆಟೋದೊಳಗೆ ಯಾರೂ ಇರಲಿಲ್ಲ.
ಚಾಲಕನ ನಿಯಂತ್ರಣ ತಪ್ಪಿ ಎರಡನೇ ಪ್ಲಾಟ್‌ಫಾರ್ಮ್‌ಗೆ ಡಿಕ್ಕಿ ಹೊಡೆದ ನಂತರ ಆಟೋರಿಕ್ಷಾ ಹಳಿಗೆ ಉರುಳಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಆರ್‌ಪಿಎಫ್ ಪೊಲೀಸರು ಆಟೋರಿಕ್ಷಾ ಚಾಲಕ ಸುಧಿಯನ್ನು ವಶಕ್ಕೆ ಪಡೆದರು. ಆ ಸಮಯದಲ್ಲಿ ಆತ ಮದ್ಯದ ಅಮಲಿನಲ್ಲಿದ್ದನೆಂದು ಶಂಕಿಸಲಾಗಿದ್ದು, ಸ್ಥಳದಿಂದ ಪರಾರಿಯಾಗಿದ್ದಾನೆ.
ಮತ್ತಷ್ಟು ಓದಿ:Vande Bharat Pilot: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪೈಲಟ್ ಸಂಬಳ ಎಷ್ಟು? ಆಯ್ಕೆ ಪ್ರಕ್ರಿಯೆ ಮತ್ತು ಜವಾಬ್ದಾರಿ ತಿಳಿಯಿರಿ
ಹಳಿ ಸುರಕ್ಷತೆಯನ್ನು ಖಚಿತಪಡಿಸಿಕೊಂಡ ನಂತರ, ವಂದೇ ಭಾರತ್ ಎಕ್ಸ್‌ಪ್ರೆಸ್ ರಾತ್ರಿ 11.15 ಕ್ಕೆ ತನ್ನ ಪ್ರಯಾಣವನ್ನು ಪುನರಾರಂಭಿಸಿತು. ವಿಳಂಬದ ಹೊರತಾಗಿಯೂ, ರೈಲು ರಾತ್ರಿ 11.50 ಕ್ಕೆ ತಿರುವನಂತಪುರಂ ಸೆಂಟ್ರಲ್ ತಲುಪಿತು. ಪ್ರಯಾಣಿಕರು, ರೈಲ್ವೆ ಸಿಬ್ಬಂದಿ ಅಥವಾ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ಆ ವಿಭಾಗದಲ್ಲಿ ರೈಲು ಕಾರ್ಯಾಚರಣೆಯನ್ನು ಶೀಘ್ರದಲ್ಲೇ ಸಾಮಾನ್ಯಗೊಳಿಸಲಾಯಿತು. ಲೋಕೋ ಪೈಲಟ್‌ನ ಸಕಾಲಿಕ ಕ್ರಮವು ದೊಡ್ಡ ಅಪಘಾತವನ್ನು ತಪ್ಪಿಸಲು ಸಹಾಯ ಮಾಡಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳದಲ್ಲಿ ಸಂಪೂರ್ಣ ಮದ್ಯ ನಿಷೇಧ ಮಾಡಲಾಗಿಲ್ಲ, ಆದರೆ ಹಿಂದಿನ ಸರ್ಕಾರವು ಮದ್ಯಪಾನವನ್ನು ನಿಯಂತ್ರಿಸಲು ಕಟ್ಟುನಿಟ್ಟಾದ ನೀತಿಯನ್ನು ಜಾರಿಗೆ ತಂದಿತ್ತು, ಇದರಲ್ಲಿ ಬಾರ್‌ಗಳನ್ನು ಮುಚ್ಚುವುದು ಮತ್ತು 5-ಸ್ಟಾರ್ ಹೋಟೆಲ್‌ಗಳಿಗೆ ಮಾತ್ರ ಮಾರಾಟವನ್ನು ಸೀಮಿತಗೊಳಿಸುವುದು ಸೇರಿತ್ತು.2014ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವು ರಾಜ್ಯವನ್ನು ದಶಕದಲ್ಲಿ ಮದ್ಯ-ಮುಕ್ತ ಮಾಡಲು ಯೋಜಿಸಿತ್ತು.
700ಕ್ಕೂ ಹೆಚ್ಚು ಬಾರ್‌ಗಳನ್ನು ಮುಚ್ಚಲಾಯಿತು ಮತ್ತು 5-ಸ್ಟಾರ್ ಹೋಟೆಲ್‌ಗಳಿಗೆ ಮಾತ್ರ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಯಿತು. ಇದರಿಂದಾಗಿ ಪ್ರವಾಸೋದ್ಯಮ ಮತ್ತು ಆದಾಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಿತು ಮತ್ತು ಸುಪ್ರೀಂ ಕೋರ್ಟ್ ಸಹ ಈ ನಿರ್ಧಾರದ ಬಗ್ಗೆ ಪ್ರಶ್ನಿಸಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




