AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾವಾಗ ನೋಡಿದ್ರೂ ಪಿಜ್ಜಾ, ಬರ್ಗರ್ ತಿಂತಾನೇ ಇರ್ತೀರಾ? ಎಚ್ಚರ: ಇಲ್ಲೊಬ್ಬಳು ಬಾಲಕಿಗೆ ಏನಾಗಿದೆ ನೋಡಿ!

ಅಮ್ರೋಹಾದಲ್ಲಿ ಫಾಸ್ಟ್ ಫುಡ್ ಅತಿಯಾದ ಸೇವನೆಯಿಂದ 11ನೇ ತರಗತಿಯ ವಿದ್ಯಾರ್ಥಿನಿ ಅಹಾನಾ ಸಾವನ್ನಪ್ಪಿದ್ದಾಳೆ. ಕರುಳು ಹಾನಿಯಾಗಿ, ಜೀರ್ಣಾಂಗ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ. ಫಾಸ್ಟ್ ಫುಡ್ ಮಕ್ಕಳ ಆರೋಗ್ಯಕ್ಕೆ ಮಾರಕವಾಗಿದ್ದು, ಹೃದಯರೋಗ, ಕ್ಯಾನ್ಸರ್ ಮತ್ತು ಜೀರ್ಣಾಂಗ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಪೋಷಕರು ಮಕ್ಕಳ ಆಹಾರ ಪದ್ಧತಿಯ ಬಗ್ಗೆ ಎಚ್ಚರ ವಹಿಸಬೇಕು.

ಯಾವಾಗ ನೋಡಿದ್ರೂ ಪಿಜ್ಜಾ, ಬರ್ಗರ್ ತಿಂತಾನೇ ಇರ್ತೀರಾ? ಎಚ್ಚರ: ಇಲ್ಲೊಬ್ಬಳು ಬಾಲಕಿಗೆ ಏನಾಗಿದೆ ನೋಡಿ!
ವೈರಲ್​​ ವಿಡಿಯೋ
ಅಕ್ಷಯ್​ ಪಲ್ಲಮಜಲು​​
|

Updated on:Dec 24, 2025 | 11:43 AM

Share

ಹೊರಗಿನ ಆಹಾರಗಳನ್ನು ತಿನ್ನುವ ಮುನ್ನ ಸಾವಿರ ಬಾರಿ ಯೋಚನೆ ಮಾಡಬೇಕು. ಏಕೆಂದರೆ ಅದು ನಮ್ಮ ದೇಹದ ಮೇಲೆ ದೊಡ್ಡ ಪರಿಣಾಮವನ್ನು ಉಂಟು ಮಾಡಬಹುದು. ಇದೀಗ ಇದಕ್ಕೆ ಸಂಬಂಧಿಸಿದಂತೆ ಸುದ್ದಿ ಭಾರೀ ವೈರಲ್​​ ಆಗಿದೆ. ಫಾಸ್ಟ್ ಫುಡ್(Fast Food )ತಿಂದು ಇದೀಗ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ. 11ನೇ ತರಗತಿಯ ವಿದ್ಯಾರ್ಥಿನಿ ಫಾಸ್ಟ್ ಫುಡ್ ಸೇವಿಸಿ, ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾಳೆ. ಅಹಾನಾ ಎಂಬ ಬಾಲಕಿ ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿದೆ.

ಸುಮಾರು ದಿನಗಳಿಂದ ಅಹಾನಾ ಹೊರಗಿನ ಆಹಾರಗಳನ್ನು ಹೆಚ್ಚು ಸೇವನೆ ಮಾಡಿದ ಕಾರಣ ಆಕೆಯ ಸ್ಥಿತಿ ಹದಗೆಟ್ಟಿದೆ ಎಂದು ಏಮ್ಸ್ ವೈದ್ಯರು ತಿಳಿಸಿದ್ದಾರೆ. ವೈದ್ಯಕೀಯ ತಂಡದ ಪ್ರಕಾರ, ಆಕೆಯ ಕರುಳುಗಳು ಒಟ್ಟಿಗೆ ಅಂಟಿಕೊಂಡಿವೆ ಮತ್ತು ಅವರ ಜೀರ್ಣಾಂಗ ವ್ಯವಸ್ಥೆಯು ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಇದಕ್ಕೆ ಚಿಕಿತ್ಸೆ ನೀಡಿದ್ರೂ ಆಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.

ಅಹಾನಾಗೆ ಚೌಮಿನ್, ಪಿಜ್ಜಾ ಮತ್ತು ಬರ್ಗರ್‌ ತುಂಬಾ ಇಷ್ಟ:

ಅಹಾನಾಗೆ ಚಿಕ್ಕ ವಯಸ್ಸಿನಿಂದಲ್ಲೂ ಚೌಮಿನ್, ಪಿಜ್ಜಾ ಮತ್ತು ಬರ್ಗರ್‌ಗಳಂತಹ ಫಾಸ್ಟ್ ಫುಡ್‌ಗಳನ್ನು ಇಷ್ಟಪಡುತ್ತಿದ್ದಳು. ಮನೆಯಲ್ಲಿ ಮಾಡುವ ಆಹಾರಗಳನ್ನು ಅಷ್ಟೊಂದು ಇಷ್ಟ ಪಡುತ್ತಿರಲಿಲ್ಲ. ಈ ಅಭ್ಯಾಸವೇ ಆಕೆಯ ಈ ಸ್ಥಿತಿಗೆ ಕಾರಣ, ಕೊನೆಗೂ ನಮ್ಮ ಮಗಳನ್ನು ಉಳಿಸಿಕೊಳ್ಳಲು ಆಗಿಲ್ಲ ಎಂದು ಆಕೆಯ ಕುಟುಂಬದವರು ಹೇಳಿದ್ದಾರೆ. ಈ ಘಟನೆ ಅಮ್ರೋಹಾದ ಅಫ್ಘಾನ್ ಮೊಹಲ್ಲಾದಲ್ಲಿ ನಡೆದಿದ್ದು, ಇದು ಕುಟುಂಬ ಮತ್ತು ಸ್ಥಳೀಯ ನಿವಾಸಿಗಳಲ್ಲಿ ಆಂತಕ ಸೃಷ್ಟಿಸಿದೆ.

ವೈದ್ಯರು ಹೇಳಿರುವ ಪ್ರಕಾರ, ಅತಿಯಾಗಿ ಫಾಸ್ಟ್ ಫುಡ್ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಗೆ, ವಿಶೇಷವಾಗಿ ಮಕ್ಕಳು ಮತ್ತು ಯುವಜನರಿಗೆ ಗಂಭೀರ ಹಾನಿಯಾಗುತ್ತದೆ. ಇಂದು ನಡೆದಿರುವ ಈ ಘಟನೆಗೂ ಕೂಡ ಅದೇ ಕಾರಣ, ಅನಾರೋಗ್ಯಕರ ಆಹಾರ ಪದ್ಧತಿಗಳು ಚಿಕ್ಕ ವಯಸ್ಸಿನಲ್ಲಿಯೇ ಮಾರಕ ಪರಿಣಾಮಗಳನ್ನು ಬೀರುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಹಾನಾ ರೈತ ಮನ್ಸೂರ್ ಅಲಿ ಖಾನ್ ಅವರ ಪುತ್ರಿ, ಅವರ ಪತ್ನಿ ಸಾರಾ ಖಾನ್, ಅಹಾನಾ ಸೇರಿ ಒಟ್ಟು ಮೂರು ಮಕ್ಕಳು. ಅದರಲ್ಲಿ ಹಿರಿಯ ಮಗಳು ಮಾರಿಯಾ (23), ಮಗ ಅವನ್, ಕೊನೆಯ ಮಗಳು ಅಹಾನಾ .

ಘಟನೆ ಬಗ್ಗೆ ತಂದೆ ಹೇಳಿದ್ದೇನು?

ನವೆಂಬರ್ 28 ರಂದು ಅಹಾನಾ ಆರೋಗ್ಯದಲ್ಲಿ ಏರುಪೇರು ಕಂಡು ಬಂತು. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ತಕ್ಷಣ ಅಮ್ರೋಹಾದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಆಕೆಯ ಪರಿಸ್ಥಿತಿ ಇನ್ನು ಕೆಟ್ಟಾಗಿತ್ತು. ಅಲ್ಲಿಂದ ಮೊರಾದಾಬಾದ್‌ಗೆ ಕರೆದೊಯ್ಯಲಾಯಿತು. ಮೊರಾದಾಬಾದ್‌ನಲ್ಲಿ ನಡೆದ ವೈದ್ಯಕೀಯ ಪರೀಕ್ಷೆಗಳಲ್ಲಿ ಆಕೆಯ ಕರುಳಿಗೆ ಹಾನಿಯಾಗಿದ್ದು, ಹೊಟ್ಟೆಯಲ್ಲಿ ದ್ರವ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ. ಡಾ. ರಿಯಾಜ್ ಶಸ್ತ್ರಚಿಕಿತ್ಸೆ ನಡೆಸಿ, ಆಕೆಯ ಹೊಟ್ಟೆಯಿಂದ ಸುಮಾರು ಏಳು ಲೀಟರ್ ದ್ರವವನ್ನು ತೆಗೆದುಹಾಕಲಾಯಿತು. ಅಹಾನಾ ಇದರಿಂದ ಸ್ವಲ್ಪ ಸುಧಾರಿಸಿಕೊಂಡಿದ್ದಳು, ನಂತರ ಅಲ್ಲಿಂದ ಆಕೆಯ ಚಿಕ್ಕಪ್ಪ ಸಾಜಿದ್ ಖಾನ್ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಗೆ ಕರೆದೊಯ್ದರು.

ಅಲ್ಲಿ ವೈದ್ಯರು ಆಕೆಯ ಕರುಳುಗಳು ಒಟ್ಟಿಗೆ ಅಂಟಿಕೊಂಡಿದೆ ಎಂದು ಹೇಳಿದರು. ಚಿಕಿತ್ಸೆ ನೀಡುತ್ತಿದ್ದಂತೆ ಆಕೆಯ ಸ್ಥಿತಿ ಹದಗೆಡುತ್ತಲೇ ಇತ್ತು. ಡಿಸೆಂಬರ್ 21 ರಂದು ತಡರಾತ್ರಿ, ಆಕೆ ಆರೋಗ್ಯ ತೀವ್ರವಾಗಿ ಹದಗೆಟ್ಟಿತು. ವೈದ್ಯರ ಪ್ರಯತ್ನಗಳ ಹೊರತಾಗಿಯೂ, ಅಹಾನಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ.

ಫಾಸ್ಟ್ ಫುಡ್ ಆಹಾರ ಸೇವಿಸಬೇಡಿ: ವೈದ್ಯರು

ದೀರ್ಘಕಾಲದ ಫಾಸ್ಟ್ ಫುಡ್ ಸೇವನೆಯಿಂದಾಗಿ ಆಕೆಯ ಕರುಳು ತೀವ್ರವಾಗಿ ಹಾನಿಗೊಳಗಾಗಿದ್ದು, ಇದರಿಂದಾಗಿ ಆಕೆಯ ದೇಹವು ತುಂಬಾ ದುರ್ಬಲವಾಗಿದೆ ಎಂದು ವೈದ್ಯರು ಕುಟುಂಬಕ್ಕೆ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಅಹಾನಾಳ ಚಿಕ್ಕಪ್ಪ ಗುಲ್ಜಾರ್ ಖಾನ್ ಅಲಿಯಾಸ್ ಗುಡ್ಡು ಹೇಳಿದ್ದಾರೆ.ಅಮ್ರೋಹಾದ ಮುಖ್ಯ ವೈದ್ಯಾಧಿಕಾರಿ ಡಾ. ಎಸ್.ಪಿ. ಸಿಂಗ್, ಮಕ್ಕಳಿಗೆ ನಿಯಮಿತವಾಗಿ ಫಾಸ್ಟ್ ಫುಡ್ ಸೇವಿಸಲು ಅವಕಾಶ ನೀಡುವುದರ ವಿರುದ್ಧ ಪೋಷಕರಿಗೆ ಎಚ್ಚರಿಕೆ ನೀಡಿದರು. ಅಂತಹ ಆಹಾರದಲ್ಲಿ ಅತಿಯಾದ ಮಸಾಲೆಗಳು, ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‌ಗಳಿವೆ. ತಂಪು ಪಾನೀಯಗಳು, ಚಿಪ್ಸ್ ಮತ್ತು ಫ್ರೆಂಚ್ ಫ್ರೈಗಳು ನೈಸರ್ಗಿಕ ಹಸಿವನ್ನು ನಿಗ್ರಹಿಸುತ್ತವೆ ಮತ್ತು ಮಕ್ಕಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಡೆಲಿವರಿ ಏಜೆಂಟ್​ಗಳಿಗಾಗಿಯೇ ಮನೆ ಮುಂದೆ ನೀರಿನ ಬಾಟಲಿಗಳನ್ನಿಟ್ಟು ಜನರ ಹೃದಯ ಗೆದ್ದ ವ್ಯಕ್ತಿ

ಇದು ನಮ್ಮ ನಿರ್ಲಕ್ಷ್ಯದಿಂದ ಆಗಿರುವುದು:

ಅಹಾನಾಗೆ ಬಾಲ್ಯದಿಂದಲೂ ಫಾಸ್ಟ್ ಫುಡ್ ತುಂಬಾ ಇಷ್ಟವಾಗಿತ್ತು ಎಂದು ಚಿಕ್ಕಪ್ಪ ಸಾಜಿದ್ ಖಾನ್ ಹೇಳಿದ್ದಾರೆ. “ಅವಳು ಮನೆಯಲ್ಲಿ ತಯಾರಿಸಿದ ಆಹಾರಕ್ಕಿಂತ ಚೌಮಿನ್, ಮ್ಯಾಗಿ, ಪಿಜ್ಜಾ ಮತ್ತು ಬರ್ಗರ್‌ಗಳನ್ನು ಹೆಚ್ಚು ಇಷ್ಟಪಡುತ್ತಿದ್ದಳು. ಪ್ಯಾಕ್ ಮಾಡಿದ ವಸ್ತುಗಳನ್ನು ಸಹ ಅವಳು ರಹಸ್ಯವಾಗಿ ತಿನ್ನುತ್ತಿದ್ದಳು. ನಾವು ಸಾಕಷ್ಟು ಗಮನ ಹರಿಸದಿರುವುದು ನಮ್ಮ ತಪ್ಪು” ಎಂದು ಅವರು ಹೇಳಿದರು.

ಇದು ಜಾಗತಿಕ ಆರೋಗ್ಯಕ್ಕೆ ಅಪಾಯಕಾರಿ:

ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ರಿಪೋರ್ಟ್ ಪ್ರಕಾರ, ಫಾಸ್ಟ್ ಫುಡ್ ಸೇವನೆ ಸೇರಿದಂತೆ ಅನಾರೋಗ್ಯಕರ ಆಹಾರಕ್ರಮಗಳು ಪ್ರತಿ ವರ್ಷ ವಿಶ್ವಾದ್ಯಂತ ಸುಮಾರು 11 ಮಿಲಿಯನ್ ಸಾವುಗಳಿಗೆ ಕಾರಣವಾಗುತ್ತವೆ. JAMA ನೆಟ್‌ವರ್ಕ್ ಮತ್ತು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಂತಹ ಜರ್ನಲ್‌ಗಳಲ್ಲಿ ಪ್ರಕಟವಾದ ವೈದ್ಯಕೀಯ ಅಧ್ಯಯನಗಳು ಫಾಸ್ಟ್ ಫುಡ್ ಹೃದ್ರೋಗ, ಕ್ಯಾನ್ಸರ್, ಜೀರ್ಣಕಾರಿ ಅಸ್ವಸ್ಥತೆಗಳು ಮತ್ತು ಕರುಳಿನ ಆರೋಗ್ಯಕ್ಕೆ ದೀರ್ಘಕಾಲೀನ ಹಾನಿಯನ್ನುಂಟುಮಾಡುತ್ತವೆ ಎಂದು ಹೇಳಿದೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:17 am, Wed, 24 December 25