ಸತತ 10 ವರ್ಷಗಳಿಂದ ಬಿರಿಯಾನಿಗೆ ಅಗ್ರಸ್ಥಾನ: ಸ್ವಿಗ್ಗಿಯಲ್ಲಿ 93 ಮಿಲಿಯನ್ ಬಿರಿಯಾನಿ ಆರ್ಡರ್
ಸ್ವಿಗ್ಗಿ 2025ರ ವರದಿಯ ಪ್ರಕಾರ, ಬಿರಿಯಾನಿ ಭಾರತದಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿದ ಆಹಾರವಾಗಿ ಸತತ 10ನೇ ವರ್ಷವೂ ಅಗ್ರಸ್ಥಾನದಲ್ಲಿದೆ. 2025ರಲ್ಲಿ 93 ಮಿಲಿಯನ್ ಬಿರಿಯಾನಿ ಆರ್ಡರ್‌ಗಳಾಗಿದ್ದು, ಇದರಲ್ಲಿ ಚಿಕನ್ ಬಿರಿಯಾನಿ 57.7 ಮಿಲಿಯನ್ ಆರ್ಡರ್‌ಗಳೊಂದಿಗೆ ಹೆಚ್ಚು ಜನಪ್ರಿಯವಾಗಿದೆ. ಬರ್ಗರ್, ಪಿಜ್ಜಾ ಮತ್ತು ದೋಸೆ ಕೂಡಾ ಜನಪ್ರಿಯತೆಯಲ್ಲಿ ಏರಿಕೆ ಕಂಡಿವೆ.

2025 ಮುಗಿಯುತ್ತ ಬಂತು. 2026ನ್ನು ಸ್ವಾಗತಿಸಲು ಇನ್ನು 7 ದಿನ ಮಾತ್ರ ಬಾಕಿ ಇದೆ. ಇದಕ್ಕೂ ಮುನ್ನ ಭಾರತದಲ್ಲಿ 2025ರಲ್ಲಿ ಅತೀ ಹೆಚ್ಚು ಜನರು ಕೆಲವೊಂದು ವಿಷಯಗಳನ್ನು ಮೆಚ್ಚಿಕೊಂಡಿದ್ದಾರೆ. ಇನ್ನು ಕೆಲವೊಂದನ್ನು ತಿರಸ್ಕರಿಸಿದ್ದಾರೆ. 2025ರಲ್ಲಿ ಆಹಾರದ ವಿಷಯಕ್ಕೆ ಬಂದರೆ ಅತೀ ಹೆಚ್ಚು ಆರ್ಡರ್ ಮಾಡಿದ ಆಹಾರ ಯಾವುದು ಗೊತ್ತಾ? ಈ ಬಗ್ಗೆ ಸ್ವಿಗ್ಗಿ (Swiggy 2025 Report) ಒಂದು ವರದಿಯನ್ನು ನೀಡಿದೆ. ಈ ವರ್ಷ ಭಾರತೀಯರು ಸ್ವಿಗ್ಗಿ ಮೂಲಕ 93 ಮಿಲಿಯನ್ ಬಿರಿಯಾನಿಗಳನ್ನು ಆರ್ಡರ್ ಮಾಡಿದ್ದಾರೆ. ಹಾಗಾಗಿ ಆಹಾರ ವಿತರಣಾ ವೇದಿಕೆಯಲ್ಲಿ ಬಿರಿಯಾನಿ ಅತಿ ಹೆಚ್ಚು ಆರ್ಡರ್ ಮಾಡಲಾದ ವಸ್ತು ಎಂದು ಹೇಳಲಾಗಿದೆ. ಸ್ವಿಗ್ಗಿಯಲ್ಲಿ ಅತಿ ಹೆಚ್ಚು ಆರ್ಡರ್ ಮಾಡಲಾದ ಭಕ್ಷ್ಯಗಳ ಪಟ್ಟಿಯಲ್ಲಿ ಸತತ 10ನೇ ವರ್ಷ ಬಿರಿಯಾನಿ ಅಗ್ರಸ್ಥಾನದಲ್ಲಿದೆ.
ಸ್ವಿಗ್ಗಿಯ ವರ್ಷಾಂತ್ಯದ ವರದಿಯ ಪ್ರಕಾರ, “ಬಿರಿಯಾನಿ ಆಹಾರಗಳ ರಾಜ” ಎಂದು ಹೇಳಿದೆ. ಈ ಪರಿಮಳಯುಕ್ತ ಖಾದ್ಯವು ಇಂದಿಗೂ ತನ್ನ ರುಚಿ, ವಿಭಿನ್ನತೆಯಲ್ಲಿ ಹಿಡಿತವನ್ನು ಸಾಧಿಸಿಕೊಂಡಿದೆ ಎಂದು ಹೇಳಿದ್ದಾರೆ. ಭಾರತೀಯರು ಸ್ವಿಗ್ಗಿಯಲ್ಲಿ ಪ್ರತಿ 3.25 ಸೆಕೆಂಡ್‌ಗೆ ಒಂದು ಬಿರಿಯಾನಿ ಆರ್ಡರ್ ಮಾಡುತ್ತಿದ್ದರು . ಅಂದರೆ ಪ್ರತಿ ನಿಮಿಷಕ್ಕೆ 194 ಬಿರಿಯಾನಿಗಳು. ಇನ್ನು ಈ ಡೇಟಾವನ್ನು ಜೊಮಾಟೊದಂತಹ ಇತರ ಅಪ್ಲಿಕೇಶನ್ ಮತ್ತು ನೇರವಾಗಿ ರೆಸ್ಟೋರೆಂಟ್‌ಗಳಿಂದ ಮಾಡಿದ ಆರ್ಡರ್‌ಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಸ್ವಿಗ್ಗಿ ವರದಿಯ ಪ್ರಕಾರ, 2025 ರಲ್ಲಿ 93 ಮಿಲಿಯನ್ ಬಿರಿಯಾನಿಗಳನ್ನು ಆರ್ಡರ್ ಮಾಡಲಾಗಿದೆ. ಚಿಕನ್ ಬಿರಿಯಾನಿ 57.7 ಮಿಲಿಯನ್ ಆರ್ಡರ್ ಮಾಡಲಾಗಿದ್ದು, ಇದನ್ನು ಅತ್ಯಂತ ಜನಪ್ರಿಯ ಬಿರಿಯಾನಿ ಎಂದು ಹೇಳಲಾಗಿದೆ. ಸ್ವಿಗ್ಗಿಯಲ್ಲಿ ಬಿರಿಯಾನಿ ಅತ್ಯಂತ ಜನಪ್ರಿಯ ಖಾದ್ಯವಾಗಿ ಒಂದು ದಶಕವನ್ನು ಪೂರ್ಣಗೊಳಿಸಿದೆ.
ಇದನ್ನೂ ಓದಿ: ಯಾವಾಗ ನೋಡಿದ್ರೂ ಪಿಜ್ಜಾ, ಬರ್ಗರ್ ತಿಂತಾನೇ ಇರ್ತೀರಾ? ಎಚ್ಚರ: ಇಲ್ಲೊಬ್ಬಳು ಬಾಲಕಿಗೆ ಏನಾಗಿದೆ ನೋಡಿ!
ಇನ್ನು ಬಿರಿಯಾನಿ ಜತೆಗೆ ಇತರ ಭಕ್ಷ್ಯಗಳು ಸಹ ಜನಪ್ರಿಯತೆಯಲ್ಲಿ ಏರಿಕೆ ಕಂಡಿದೆ. ಬರ್ಗರ್ 44.2 ಮಿಲಿಯನ್ ಆರ್ಡರ್ ಮಾಡುವ ಮೂಲಕ ಎರಡನೇ ಅತ್ಯಂತ ಜನಪ್ರಿಯ ಆಹಾರ ಎಂದು ಹೇಳಲಾಗಿದೆ. 2025 ರಲ್ಲಿ ಸ್ವಿಗ್ಗಿಯಲ್ಲಿ ಅತಿ ಹೆಚ್ಚು ಆರ್ಡರ್ ಮಾಡಲಾದ ಮೂರನೇ ಖಾದ್ಯ ಪಿಜ್ಜಾ ಆಗಿದ್ದು, 40.1 ಮಿಲಿಯನ್ ಆರ್ಡರ್‌ಗಳನ್ನು ಪಡೆದಿದೆ. ಸಸ್ಯಾಹಾರಿಯಲ್ಲಿ ದೋಸೆ 26.2 ಮಿಲಿಯನ್ ಆರ್ಡರ್‌ಗಳೊಂದಿಗೆ ಮತ್ತೊಂದು ನೆಚ್ಚಿನ ಖಾದ್ಯವಾಗಿದೆ. ಜನ ನಮ್ಮ ಕಂಪನಿಯನ್ನು ಮೆಚ್ಚಿಕೊಂಡಿದ್ದಾರೆ. ಜತೆಗೆ 2025ರಲ್ಲಿ ಇಷ್ಟೊಂದು ಆರ್ಡರ್ ಪಡೆಯುವ ಮೂಲಕ ಸ್ವಿಗ್ಗಿ ಆಹಾರ ವಿತರಣಾ ವೇದಿಕೆಯಲ್ಲಿ ದೊಡ್ಡ ಮಟ್ಟದ ಸಾಧನೆಯನ್ನು ಮಾಡಿದೆ ಎಂದು ಸ್ವಿಗ್ಗಿ ಮಾರ್ಕೆಟ್‌ಪ್ಲೇಸ್‌ನ ಸಿಇಒ ರೋಹಿತ್ ಕಪೂರ್ ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:11 pm, Wed, 24 December 25




