ಬಾಲಿವುಡ್ನಲ್ಲಿ ಗಣೇಶ ಚತುರ್ಥಿ ಆಚರಣೆ ಹೇಗಿತ್ತು ನೋಡಿ
ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಡಗರ ಮನೆಮಾಡಿದೆ. ಬಾಲಿವುಡ್ ತಾರೆಯರು, ಉದ್ಯಮಿಗಳು ಹಾಗೂ ಕ್ರೀಡಾ ದಿಗ್ಗಜರು ತಮ್ಮ ತಮ್ಮ ಮನೆಗಳಲ್ಲಿ ವಿಘ್ನನಿವಾರಕನನ್ನು ಆರಾಧಿಸಿದ್ದಾರೆ. ಮುಂಬೈನ ಮುಖೇಶ್ ಅಂಬಾನಿ ನಿವಾಸದಲ್ಲಿ ಗಣ್ಯರೊಂದಿಗೆ ವೈಭವದ ಪೂಜೆ ನಡೆದರೆ, ಲಾಲ್ ಬಾಗ್ ಚಾ ರಾಜ ಗಣೇಶ ವಿಶೇಷ ಅಲಂಕಾರಗಳಿಂದ ಭಕ್ತರನ್ನು ಸೆಳೆದಿದ್ದಾನೆ.
ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಬಾಲಿವುಡ್ ಸ್ಟಾರ್ ನಟರು, ಉದ್ಯಮಿಗಳು ಹಾಗೂ ಕ್ರಿಕೆಟ್ ದಿಗ್ಗಜರು ತಮ್ಮ ಮನೆಯಲ್ಲಿ ವಿಘ್ನನಿವಾರಕ ಏಕದಂತನನ್ನು ಶ್ರದ್ಧಾಭಕ್ತಿಯಿಂದ ಆರಾಧಿಸಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮನೆಯಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆದರೆ, ಮುಂಬೈನ ಉದ್ಯಮಿ ಮುಖೇಶ್ ಅಂಬಾನಿ ನಿವಾಸದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ವೈಭವದಿಂದ ಗಣೇಶ ಚತುರ್ಥಿ ಆಚರಿಸಲಾಗಿದೆ.
ಅಂಬಾನಿ ನಿವಾಸಕ್ಕೆ ಸಲ್ಮಾನ್ ಖಾನ್, ಸೈಫ್ ಅಲಿ ಖಾನ್ ದಂಪತಿ, ಸಚಿನ್ ತೆಂಡೂಲ್ಕರ್, ರಣಬೀರ್ ಸಿಂಗ್, ಕತ್ರಿನಾ ಮತ್ತು ವಿಕ್ಕಿ ಕೌಶಲ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ಬಾಲಿವುಡ್ ನಟರಾದ ಸುನಿಲ್ ಶೆಟ್ಟಿ, ಸೋನು ಸೂದ್, ನಾನಾ ಪಾಟೇಕರ್, ರಿತೇಶ್ ದೇಶ್ಮುಖ್ ಮತ್ತು ಗೋವಿಂದ ಅವರ ನಿವಾಸಗಳಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿತ್ತು. ನಟಿ ರಶ್ಮಿಕಾ ಮಂದಣ್ಣ ಮಣ್ಣಿನ ಗಣಪನ ಜೊತೆ ಕುಳಿತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ, ಮುಂಬೈನ ಪ್ರಸಿದ್ಧ ಲಾಲ್ ಬಾಗ್ ಚಾ ರಾಜ ಗಣೇಶ 64 ಕೆಜಿ ಚಿನ್ನಾಭರಣ ಮತ್ತು 335 ಕೆಜಿ ಬೆಳ್ಳಿ ಆಭರಣಗಳಿಂದ ಅಲಂಕರಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

