ಸಂಸತ್ ಭವನದ ಮೇಲೆ ಉಗ್ರರ ದಾಳಿ ನಡೆದು 21 ವರ್ಷ; ಭಾರತ-ಪಾಕ್ ಸಂಬಂಧ ಈಗ ಹೇಗಿದೆ?

ಐವರು ದಾಳಿಕೋರರನ್ನು ಪಾರ್ಲಿಮೆಂಟ್ ಕಟ್ಟಡದ ಹೊರಗೆ ಗುಂಡಿಕ್ಕಿ ಕೊಲ್ಲಲಾಯಿತು. ಎಫ್‌ಐಆರ್ ದಾಖಲಾಗಿದ್ದು, ಪ್ರಕರಣವನ್ನು ದೆಹಲಿ ಪೊಲೀಸರ ವಿಶೇಷ ಸೆಲ್‌ಗೆ ವರ್ಗಾಯಿಸಲಾಗಿತ್ತು. ಕೆಲವೇ ದಿನಗಳಲ್ಲಿ ನಾಲ್ವರನ್ನು ಬಂಧಿಸಿ ದಾಳಿಯ ಮಾಸ್ಟರ್ ಮೈಂಡ್ ಎಂದು ಆರೋಪಿಸಲಾಯಿತು

ಸಂಸತ್ ಭವನದ ಮೇಲೆ ಉಗ್ರರ ದಾಳಿ ನಡೆದು 21 ವರ್ಷ; ಭಾರತ-ಪಾಕ್ ಸಂಬಂಧ ಈಗ ಹೇಗಿದೆ?
ಸಂಸತ್ ಭವನ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 13, 2022 | 5:16 PM

2001 ಡಿಸೆಂಬರ್ 13ರಂದು ಅಂದರೆ 21ವರ್ಷಗಳ ಹಿಂದೆ ಇದೇ ದಿನ ಶಸ್ತ್ರಾಸ್ತ್ರ ಹೊಂದಿದ ಐವರು ಉಗ್ರರು ಸಂಸತ್ ನಲ್ಲಿ ಚಳಿಗಾಲದ ಅಧಿವೇಶನ (Winter Session) ನಡೆಯುತ್ತಿದ್ದಾಗ ಸಂಸತ್ ಭವನದ ಆವರಣಕ್ಕೆ ನುಗ್ಗಿದ್ದು (Parliament Attack)  ಇಲ್ಲಿ ಸುಮಾರು 30 ನಿಮಿಷಗಳ ಕಾಲ ಗುಂಡಿನ ದಾಳಿ ನಡೆದಿತ್ತು. ಇದರಲ್ಲಿ 9 ಮಂದಿ ಸಾವಿಗೀಡಾಗಿದ್ದು ಹಲವರಿಗೆ ಗಾಯಗಳಾಗಿತ್ತು. 21 ವರ್ಷಗಳ ನಂತರವೂ ಈ ದಾಳಿಯ ನೆನಪು ಇನ್ನೂ ದೇಶದ ಜನರ ಮನಸ್ಸಿನಲ್ಲಿ ಹಸಿಯಾಗಿಯೇ ಉಳಿದಿದೆ. ದಾಳಿ ನಡೆದ ಅದೇ ದಿನ ಸಂಸತ್ ನಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿತ್ತು. ಕಲಾಪ ಮುಂದೂಡಿದ್ದರೂ ಹಲವಾರು ಸಂಸದರು ಮತ್ತು ಸಿಬ್ಬಂದಿಗಳು ಕಟ್ಟಡದ ಒಳಗೆಯೇ ಇದ್ದರು. ದೆಹಲಿ ಪೊಲೀಸರ ವಿಶೇಷ ಸಿಬ್ಬಂದಿ, ಸಿಆರ್ ಪಿಎಫ್ ನ ಮಹಿಳಾ ಸಿಬ್ಬಂದಿ, ಪಾರ್ಲಿಮೆಂಟ್ ವಾಚ್ ಆಂಡ್ ವಾರ್ಡ್ ಸೆಕ್ಷನ್ ನ ಇಬ್ಬರು ಭದ್ರತಾ ಸಹಾಯಕರು, ಹೂದೋಟದ ಕೆಲಸಗಾರ, ಒಬ್ಬ ಫೋಟೊ ಜರ್ನಲಿಸ್ಟ್ ಈ ಉಗ್ರ ದಾಳಿಯಲ್ಲಿ ಹತರಾಗಿದ್ದಾರೆ.

ಭೀಕರ ದಾಳಿ ಬಗ್ಗೆ ನೆನಪಿಸಿಕೊಂಡಾಗ…

ಅಂದು ಬೆಳಗ್ಗೆ ಸರಿ ಸುಮಾರು 11.40ಕ್ಕೆ ಲಷ್ಕರ್ ಎ ತೊಯ್ಬಾ ಮತ್ತು ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಐವರ ಉಗ್ರರು ಸಂಸತ್ ಆವರಣದೊಳಗೆ ಕೆಂಪುಗೂಟವಿರುವ, ಗೃಹ ಸಚಿವಾಲಯದ ಫೇಕ್ ಸ್ಟಿಕ್ಕರ್ ಹೊಂದಿರುವ ಅಂಬಾಸಿಡರ್ ಕಾರಿನಲ್ಲಿ ನುಗ್ಗಿದ್ದರು. ಈ ಉಗ್ರರು AK47 ರೈಫಲ್ಸ್, ಗ್ರೆನೇಡ್ ಲಾಂಚರ್ಸ್, ಪಿಸ್ತೂಲ್ ಮತ್ತು ಗ್ರೆನೇಡ್ ಹೊಂದಿದ್ದು ಭದ್ರತಾವಲಯ ಬೇಧಿಸುವಲ್ಲಿ ಯಶಸ್ವಿಯಾಗಿದ್ದರು. ಆದಾಗ್ಯೂ, ಅವರ ಕಾರು ಬಿಲ್ಡಿಂಗ್ ಗೇಟ್ ನಂ 12ರತ್ತ ಹೊರಟಾಗ ಭದ್ರತಾ ಸಿಬ್ಬಂದಿಗಳಿಗೆ ಅನುಮಾನವುಂಟಾಗಿದೆ. ಆಗ ಕಾರು ಹಿಂದಕ್ಕೆ ಬಲವಾಗಿ ಬಂದು, ಆಗ ಉಪರಾಷ್ಟ್ರಪತಿ ಆಗಿದ್ದ ಕೃಷನ್ ಕಾಂತ್ ಅವರ ವಾಹನಕ್ಕೆ ಗುದ್ದಿದೆ. ಈ ಕಾರನ್ನು ಗಮನಿಸಿದ ಮಹಿಳಾ ಕಾನ್ ಸ್ಟೇಬಲ್ ಕಮಲೇಶ್ ಕುಮಾರಿ ಯಾದವ್ ತಾವು ಕರ್ತವ್ಯದಲ್ಲಿದ್ದ ಗೇಟ್ ನಂ.1ನತ್ತ ದೌಡಾಯಿಸಿದ್ದಾರೆ. ಆಗ ಉಗ್ರರು 11 ಬಾರಿ ಆಕೆಗೆ ಗುಂಡು ಹಾರಿಸಿದ್ದಾರೆ. ಆಕೆ ಸ್ಥಳದಲ್ಲೇ ಮೃತಪಟ್ಟರೂ ಉಗ್ರರಲ್ಲಿ ಆತ್ಮಾಹುತಿ ಬಾಂಬರ್ ನ್ನು ಮಟ್ಟ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಆಗ ಗನ್ ಮ್ಯಾನ್ ಕೆಳಗಿಳಿದು ಬಂದು ಗುಂಡು ಹಾರಿಸಿದ್ದಾರೆ. ಸುಮಾರು 30 ನಿಮಿಷ ನಡೆದ ಗುಂಡಿನ ಕಾಳಗದಲ್ಲಿ ಸಂಸತ್ ಕಟ್ಟಡದ ಆವರಣದ ಹೊರಗೆ ಎಲ್ಲ ದಾಳಿಕೋರರನ್ನು ಹತ್ಯೆ ಮಾಡಲಾಗಿದೆ .

ಈ ಹೊತ್ತಲ್ಲಿ ಸಂಸತ್ ಒಳಗಿದ್ದ ನೂರಕ್ಕಿಂತಲೂ ಹೆಚ್ಚು ಸಚಿವರಿಗೆ ಯಾವುದೇ ಗಾಯಗಳಾಗಿಲ್ಲ. ಒಂಭತ್ತು ಮಂದಿ ಈ ದಾಳಿಯಲ್ಲಿ ಸಾವಿಗೀಡಾಗಿದ್ದು, 15 ಮಂದಿಗೆ ಗಾಯಗಳಾಗಿವೆ.

ಇದನ್ನೂ ಓದಿ: India-China Border Clash: ಅರುಣಾಚಲ ಪ್ರದೇಶದಲ್ಲಿ ಯುದ್ಧ ವಿಮಾನ ಗಸ್ತು ನಡೆಸುತ್ತಿರುವ ಭಾರತೀಯ ವಾಯುಪಡೆ

ಉಗ್ರರು ಏನಾದರು?

ಐವರು ದಾಳಿಕೋರರನ್ನು ಪಾರ್ಲಿಮೆಂಟ್ ಕಟ್ಟಡದ ಹೊರಗೆ ಗುಂಡಿಕ್ಕಿ ಕೊಲ್ಲಲಾಯಿತು. ಎಫ್‌ಐಆರ್ ದಾಖಲಾಗಿದ್ದು, ಪ್ರಕರಣವನ್ನು ದೆಹಲಿ ಪೊಲೀಸರ ವಿಶೇಷ ಸೆಲ್‌ಗೆ ವರ್ಗಾಯಿಸಲಾಗಿತ್ತು. ಕೆಲವೇ ದಿನಗಳಲ್ಲಿ ನಾಲ್ವರನ್ನು ಬಂಧಿಸಿ ದಾಳಿಯ ಮಾಸ್ಟರ್ ಮೈಂಡ್ ಎಂದು ಆರೋಪಿಸಲಾಯಿತು. ಉಗ್ರರು ಬಳಸಿದ ಕಾರಿಗೆ ಸಂಬಂಧಿಸಿದ ಮಾಹಿತಿ ಮತ್ತು ಸೆಲ್‌ಫೋನ್ ದಾಖಲೆಗಳ ಸಹಾಯದಿಂದ ಅವರನ್ನು ಪತ್ತೆಹಚ್ಚಲಾಯಿತು. ನಾಲ್ವರು ಆರೋಪಿಗಳೆಂದರೆ ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ಮಾಜಿ ಉಗ್ರಗಾಮಿ ಮೊಹಮ್ಮದ್ ಅಫ್ಜಲ್ ಗುರು, ಅವರ ಸೋದರ ಸಂಬಂಧಿ ಶೌಕತ್ ಹುಸೇನ್ ಗುರು, ಶೌಕತ್ ಅವರ ಪತ್ನಿ ಅಫ್ಸಾನ್ ಗುರು ಮತ್ತು ದೆಹಲಿ ವಿಶ್ವವಿದ್ಯಾಲಯದ ಅರೇಬಿಕ್ ಉಪನ್ಯಾಸಕ ಎಸ್‌ಎಆರ್ ಗಿಲಾನಿ.ಇವರ ವಿರುದ್ಧದ ಪ್ರಕರಣವು ಸುಮಾರು ಒಂದು ದಶಕದ ಕಾಲ ನಡೆಯಿತು. ದೆಹಲಿ ನ್ಯಾಯಾಲಯ ಮತ್ತು ಸುಪ್ರೀಂಕೋರ್ಟ್ ಅಂತಿಮವಾಗಿ ಅಫ್ಸಾನ್ ಮತ್ತು ಗಿಲಾನಿಯನ್ನು ಖುಲಾಸೆಗೊಳಿಸಿತು. ಅಫ್ಜಲ್ ಗುರುವಿಗೆ ಮರಣದಂಡನೆ ಶಿಕ್ಷೆಯನ್ನು ಎತ್ತಿಹಿಡಿಯಿತು. 2003 ರಲ್ಲಿ ದೆಹಲಿ ಹೈಕೋರ್ಟ್‌ನಿಂದ ಸಾಕ್ಷಾಧಾರಗಳ ಅಗತ್ಯತೆಗಾಗಿ ಗಿಲಾನಿಯನ್ನು ಖುಲಾಸೆಗೊಳಿಸಲಾಯಿತು. 2005 ರಲ್ಲಿ ಸುಪ್ರೀಂಕೋರ್ಟ್‌ ಈ ನಿರ್ಣಯವನ್ನು ಎತ್ತಿಹಿಡಿಯಿತು. ಶೌಕತ್‌ಗೆ 10 ವರ್ಷಗಳ ಜೈಲು ಶಿಕ್ಷೆಯನ್ನು ನೀಡಲಾಯಿತು. 2013 ರಲ್ಲಿ, ಅಫ್ಜಲ್ ಗುರುವನ್ನು ಗಲ್ಲಿಗೇರಿಸಲಾಯಿತು ಆತನ ದೇಹವನ್ನು ತಿಹಾರ್ ಜೈಲಿನಲ್ಲಿ ಹೂಳಲಾಯಿತು.

ನಾನು ಯಾರೋ ಪಟಾಕಿ ಹೊಡಿದಿದ್ದು ಅಂದುಕೊಂಡೆ

ದಾಳಿ ನಡೆದಾಗ ಪ್ರಮುಖ ರಾಜಕಾರಣಿಗಳು ಸೇರಿದಂತೆ 100ಕ್ಕಿಂತಲೂ ಹೆಚ್ಚು ರಾಜಕಾರಣಿಗಳು ಸಂಸತ್ ಭವನದೊಳಗಿದ್ದರು. ಸರ್ಕಾರಿ ಅಧಿಕಾರಿಗಳು, ಸಂಸದರು ಮತ್ತು ಸಚಿವರು, ಗೃಹ ಸಚಿವರಾಗಿದ್ದ ಎಲ್ .ಕೆ ಅಡ್ವಾಣಿ ಮತ್ತು ರಕ್ಷಣಾ ಸಚಿವಾಲಯದ ರಾಜ್ಯ ಸಚಿವ ಹರೀನ್ ಪಾಠಕ್ ಕೂಡಾ ಸಂಸತ್ ಭವನದೊಳಗೆ ಇದ್ದರು ಎನ್ನಲಾಗುತ್ತದೆ. ಈ ಘಟನೆಯನ್ನು ನೆನಪಿಸಿಕೊಂಡ ಬಿಜು ಜನತಾ ದಳದ, 6 ಬಾರಿ ಲೋಕಸಭಾ ಸಂಸದರಾಗಿ ಆಯ್ಕೆಯಾಗಿದ್ದ ಭತ್ರುಹರಿ ಮಹ್ತಾಬ್, ನಾನು ಹೊರಗೆ ಯಾರೋ ಪಟಾಕಿ ಹೊಡೆದಿದ್ದು ಅಂದುಕೊಂಡೆ ಎಂದು 2019ರಲ್ಲಿ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿತ್ತು. 2001 ಡಿಸೆಂಬರ್ 13ರಂದು ನಾನು ಸಂಸತ್ ನ ಸೆಂಟ್ರಲ್ ಹಾಲ್ ನಲ್ಲಿ ಕುಳಿತು ಇತರ ಸಂಸದರೊಂದಿಗೆ ಹರಟುತ್ತಿದ್ದೆ. ಪಟಾಕಿ ಸಿಡಿದಂತೆ ದನಿಯೊಂದು ಕೇಳಿಸಿತು. ಆನಂತರ ಸ್ಫೋಟದ ಸದ್ದು ಕೇಳಿಸಿತು ಎಂದು ಅವರು ಹೇಳಿದ್ದಾರೆ.

ರಾಜಕಾರಣಿಗಳೆಲ್ಲರೂ ಸೆಂಟ್ರಲ್ ಹಾಲ್ ಗೆ ಓಡಿ ಹೋಗಿದ್ದು, ಅಲ್ಲಿ ಭದ್ರತೆ ಒದಗಿಸಲಾಗಿತ್ತು. ಈ ಎಲ್ಲ ಉದ್ವಿಗ್ನ ಕ್ಷಣ ಮತ್ತು ಭಯದ ಹೊತ್ತಲ್ಲಿ ಅಲ್ಲೊಂದು ವದಂತಿ ಹಬ್ಬಿತ್ತು. ಅದೇನೆಂದರೆ ಭಯೋತ್ಪಾದಕರು ಕಟ್ಟಡದ ಮೇಲ್ಭಾಗವನ್ನು ತಲುಪಿದ್ದಾರೆ. ಉಗ್ರರು ಕಟ್ಟಡವನ್ನು ಸ್ಫೋಟಿಸಲು ಬಯಸಿದ್ದರು ಎಂದು ಒಬ್ಬರು ಹೇಳಿದರು. ಇದು ಭಯಾನಕವಾಗಿತ್ತು. ಅದೃಷ್ಟವಶಾತ್, ಇದು ಸುಳ್ಳು ಎಂದು ಸಾಬೀತಾಯಿತು ಎಂದು ಅವರು ಹೇಳಿದ್ದಾರೆ. ಆಗ ಗೃಹ ಸಚಿವರಾಗಿದ್ದ ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಈ ದಾಳಿಯನ್ನು “ಅತ್ಯಂತ ದಿಟ್ಟ ಮತ್ತು ಅತ್ಯಂತ ಆತಂಕಕಾರಿ ಭಯೋತ್ಪಾದಕ ಕೃತ್ಯ” ಎಂದು ಕರೆದರು.

ಈ ದಾಳಿಯನ್ನು ಪಾಕಿಸ್ತಾನ ಮೂಲದ ಮತ್ತು ಬೆಂಬಲಿತ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ಜಂಟಿಯಾಗಿ ನಡೆಸಿವೆ ಎಂದು ಅವರು ಹೇಳಿದರು. ಈ ಎರಡು ಸಂಘಟನೆಗಳು ಪಾಕ್ ಐಎಸ್‌ಐನಿಂದ ತಮ್ಮ ಬೆಂಬಲ ಮತ್ತು ಪ್ರೋತ್ಸಾಹವನ್ನು ಪಡೆದಿವೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: India China Border Clash: ಭಾರತ-ಚೀನಾ ಗಡಿ ಸಂಘರ್ಷದಲ್ಲಿ ನಮ್ಮ ಸೈನಿಕರಾರೂ ಸತ್ತಿಲ್ಲ; ಲೋಕಸಭೆಯಲ್ಲಿ ರಾಜನಾಥ್ ಸಿಂಗ್ ಸ್ಪಷ್ಟನೆ

ಭಾರತ-ಪಾಕ್ ಬಾಂಧವ್ಯ

ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಈ ದಾಳಿಯ ನಂತರ ಹಳಿಸಿತ್ತು ಎಂದು 2013ರಲ್ಲಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು. ಈ ದಾಳಿ ಎರಡೂ ದೇಶಗಳನ್ನು ಯುದ್ಧದ ಅಂಚಿಗೆ ಕರೆತಂದಿತ್ತು ಎಂದು ವರದಿ ಹೇಳಿದೆ. ಯುದ್ಧಕ್ಕೆ ಸಜ್ಜುಗೊಳಿಸುವಿಕೆಯಾದ ಆಪರೇಷನ್ ಪರಾಕ್ರಮ್ ನಲ್ಲಿ ಅಂದಾಜು ಪ್ರಕಾರ 500,000 ಕ್ಕೂ ಹೆಚ್ಚು ಭಾರತೀಯ ಸೈನಿಕರು ಗಡಿಯಲ್ಲಿ ಸಜ್ಜುಗೊಂಡರು. ಈ ಕಾರ್ಯಾಚರಣೆಯು ಸ್ವಲ್ಪಮಟ್ಟಿನ ಸಾಧನೆ ಮಾತ್ರ ಸಾಧಿಸಿದ್ದಕ್ಕಾಗಿ ನಂತರ ಟೀಕಿಸಲ್ಪಟ್ಟಾಗ, ಬಿಜೆಪಿ ಮತ್ತು ಎನ್‌ಡಿಎ ಸರ್ಕಾರವು 2004 ರ ಐತಿಹಾಸಿಕ ಇಸ್ಲಾಮಾಬಾದ್ ಹೇಳಿಕೆಗೆ ಮನ್ನಣೆ ನೀಡಿತು, ಇದರಲ್ಲಿ ಪಾಕಿಸ್ತಾನವು ಭಾರತದ ವಿರುದ್ಧ ಭಯೋತ್ಪಾದನೆಗೆ ತನ್ನ ನೆಲವನ್ನು ಬಳಸುವುದಿಲ್ಲ ಎಂದು ಭರವಸೆ ನೀಡಿತು.

2008 ರಲ್ಲಿ ಮುಂಬೈನಲ್ಲಿ ನಡೆದ 26/11 ರ ಭೀಕರ ದಾಳಿ, ಉರಿ ಮತ್ತು ಪುಲ್ವಾಮಾ ಸೇರಿದಂತೆ ಭಾರತದಲ್ಲಿನ ನಂತರದ ಭಯೋತ್ಪಾದಕ ದಾಳಿಗಳು ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದವು. ಉರಿ ಮತ್ತು ಪುಲ್ವಾಮಾಕ್ಕೆ ಭಾರತ ಪ್ರತೀಕಾರ ತೀರಿಸಿಕೊಂಡ ನಂತರ ಸಂಬಂಧಗಳು ಮತ್ತಷ್ಟು ಹದಗೆಟ್ಟಿತು ಎಂದು 2020 ರ ಟೈಮ್ಸ್ ಆಫ್ ಇಂಡಿಯಾ ವರದಿ ಹೇಳುತ್ತದೆ. ಭಾರತ-ಪಾಕಿಸ್ತಾನ ಸಂಬಂಧಗಳು ಈಗ ಕನಿಷ್ಠ ಎಂಬಲ್ಲಿಗೆ ಬಂದು ನಿಂತಿದೆ ಎಂದು ಡಿಯು ಪ್ರೊಫೆಸರ್ ಹ್ಯಾಪಿಮನ್ ಜಾಕೋಬ್ ಕಳೆದ ತಿಂಗಳು ದಿ ಹಿಂದೂ ಪತ್ರಿಕೆಯಲ್ಲಿ ಬರೆದಿದ್ದಾರೆ. ಗಡಿ ನಿಯಂತ್ರಣ ರೇಖೆಯಲ್ಲಿ, ಕಾಶ್ಮೀರದ ಒಳಗೆ ಮತ್ತು ಎರಡು ಕಡೆಯ ನಡುವಿನ ಮಾತಿನ ವಿನಿಮಯದಲ್ಲಿಸಾಂಪ್ರದಾಯಿಕ ಪ್ರತಿಸ್ಪರ್ಧಿಗಳ ನಡುವೆ ಒಂದು ನಿರ್ದಿಷ್ಟ ‘ಶೀತ ಶಾಂತಿ’ ಇದೆ ಎಂದು ಅವರು ಹೇಳಿದ್ದಾರೆ.

ಹೆಚ್ಚಿನ ಭದ್ರತೆ, ಹೆಚ್ಚಿದ ಗಸ್ತು

ದಾಳಿ ನಂತರ ರಾಷ್ಟ್ರ ರಾಜಧಾನಿಯಲ್ಲಿ ಭದ್ರತಾ ವ್ಯವಸ್ಥೆ ಹೆಚ್ಚಿಸಲಾಗಿದೆ. ಐಎಎನ್‌ಎಸ್ ಪ್ರಕಾರ ಈ ವರ್ಷ ಎಲ್ಲಾ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ನಿಗಾ ಇಡಲು ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳನ್ನು ತಪ್ಪಿಸಲು ತಮ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಗಸ್ತು ನಡೆಸುವಂತೆ ದೆಹಲಿ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಸಂಸತ್ತಿನ ಸುತ್ತಲೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆಯಾದರೂ, ಬೇರೆಡೆ ಇದೇ ರೀತಿಯ ಭಯೋತ್ಪಾದಕ ದಾಳಿಗಳನ್ನು ವಿಫಲಗೊಳಿಸಲು ನಾವು ಉತ್ತಮವಾಗಿ ಸಿದ್ಧರಾಗಿದ್ದೇವೆಯೇ ಎಂಬುದಕ್ಕೆ ಸ್ಪಷ್ಟ ಉತ್ತರವಿಲ್ಲ.

2021 ರಲ್ಲಿ ನಿವೃತ್ತ ಏರ್ ವೈಸ್ ಮಾರ್ಷಲ್ ಮನಮೋಹನ್ ಬಹದ್ದೂರ್ ಅವರು ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಈ ಸಮಸ್ಯೆಯ ಬಗ್ಗೆ ಬರೆದಿದ್ದಾರೆ. “ಬುದ್ಧಿವಂತಿಕೆಯು ಶೇಕಡಾ 100 ರಷ್ಟು ಯಶಸ್ವಿಯಾಗಲು ಸಾಧ್ಯವಿಲ್ಲ (ಆದರೂ ಇದು ಪುನರಾವರ್ತಿತ ವೈಫಲ್ಯಗಳಿಗೆ ಕ್ಷಮೆಯಾಗುವುದಿಲ್ಲ), ಆದರೆ ಘಟನೆಯ ಅನುಸರಣೆಯನ್ನು ಪರಿಹರಿಸುವ ಸಾಮರ್ಥ್ಯವು ಅಪೇಕ್ಷಣೀಯವಾಗಿದೆ” ಎಂದಿದ್ದಾರೆ. ಭಯೋತ್ಪಾದನೆಯ ಬೆದರಿಕೆಯನ್ನು ಎದುರಿಸಲು ಶಾಂತ ಮತ್ತು ನಿರ್ಣಯದ ದ್ವಿಪಕ್ಷೀಯ ವಿಧಾನವೇ ಸಂಸತ್ತಿನ ದಾಳಿಯಲ್ಲಿ ಮಡಿದವರಿಗೆ ಅತ್ಯಂತ ದೊಡ್ಡ ಶ್ರದ್ಧಾಂಜಲಿ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸಂಸತ್​​ನಲ್ಲಿ ವಿಪಕ್ಷಗಳ ಗದ್ದಲ; ಪ್ರತಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿ ನೆಹರೂ ನಿರ್ಧಾರವನ್ನು ನೆನಪಿಸಿದ ಅಮಿತ್ ಶಾ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ