India China Border Clash: ಭಾರತ-ಚೀನಾ ಗಡಿ ಸಂಘರ್ಷದಲ್ಲಿ ನಮ್ಮ ಸೈನಿಕರಾರೂ ಸತ್ತಿಲ್ಲ; ಲೋಕಸಭೆಯಲ್ಲಿ ರಾಜನಾಥ್ ಸಿಂಗ್ ಸ್ಪಷ್ಟನೆ
Parliament Winter Session: ಭಾರತೀಯ ಸೈನಿಕರು ಅರುಣಾಚಲ ಪ್ರದೇಶದಲ್ಲಿ ನಮ್ಮ ದೇಶದ ಗಡಿಯೊಳಗೆ ಚೀನಾದ ಸೈನಿಕರು ಒಳನುಸುಳುವ ಪ್ರಯತ್ನವನ್ನು ತಡೆದಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ನವದೆಹಲಿ: ಅರುಣಾಚಲ ಪ್ರದೇಶದ (Arunachal Pradesh) ಗಡಿಯ ತವಾಂಗ್ನಲ್ಲಿ (Tawang Clash) ಭಾರತ ಮತ್ತು ಚೀನಾ (India- China Border) ಸೈನಿಕರ ನಡುವೆ ನಡೆದ ಘರ್ಷಣೆಯ ಕುರಿತು ಲೋಕಸಭೆಯಲ್ಲಿ ಮಾಹಿತಿ ನೀಡಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh), ಚೀನಾ ಪಡೆಗಳ ಪ್ರಯತ್ನವನ್ನು ಭಾರತೀಯ ಸೈನಿಕರು ಹಿಮ್ಮೆಟ್ಟಿಸಿದ್ದಾರೆ. ನಮ್ಮ ದೇಶದ ಸೈನಿಕರಿಗೆ ಈ ಸಂಘರ್ಷದಲ್ಲಿ ಯಾವುದೇ ಗಂಭೀರ ಗಾಯಗಳಾಗಿಲ್ಲ. ಯಾವೊಬ್ಬ ಸೈನಿಕರೂ ಪ್ರಾಣ ಕಳೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಉಭಯ ಸದನಗಳಲ್ಲಿ ಇಂದು ಹೇಳಿಕೆ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತೀಯ ಸೈನಿಕರು ಅರುಣಾಚಲ ಪ್ರದೇಶದಲ್ಲಿ ಚೀನೀಯರು ಭೂಕಬಳಿಕೆ ಮಾಡುವುದನ್ನು ತಡೆದಿದ್ದಾರೆ. ನಮ್ಮ ದೇಶದ ಗಡಿಯೊಳಗೆ ಚೀನಾದ ಸೈನಿಕರು ಒಳನುಸುಳುವ ಪ್ರಯತ್ನವನ್ನು ಭಾರತೀಯ ಸಶಸ್ತ್ರ ಪಡೆಗಳು ಹತ್ತಿಕ್ಕಿವೆ. ಡಿಸೆಂಬರ್ 9ರಂದು ಭಾರತ ಮತ್ತು ಚೀನಾ ಸೈನಿಕರ ನಡುವಿನ ಘರ್ಷಣೆಯಲ್ಲಿ ಯಾವುದೇ ಯೋಧ ಸಾವನ್ನಪ್ಪಿಲ್ಲ ಅಥವಾ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: India-China Border Clash: ಅರುಣಾಚಲ ಪ್ರದೇಶದಲ್ಲಿ ಯುದ್ಧ ವಿಮಾನ ಗಸ್ತು ನಡೆಸುತ್ತಿರುವ ಭಾರತೀಯ ವಾಯುಪಡೆ
ಗಡಿ ಘರ್ಷಣೆಯ ನಂತರ ಸರ್ಕಾರವು ರಾಜತಾಂತ್ರಿಕ ಮಾರ್ಗಗಳ ಮೂಲಕ ಚೀನಾದೊಂದಿಗೆ ಮಾತನಾಡಿದೆ. ಭಾರತ- ಚೀನಾ ಗಡಿಯಲ್ಲಿ ಯಾವುದೇ ಸವಾಲನ್ನು ಎದುರಿಸಲು ನಮ್ಮ ಪಡೆಗಳು ಸಿದ್ಧವಾಗಿವೆ. ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ ಎರಡೂ ಕಡೆಯ ಸೈನಿಕರಿಗೆ ಗಾಯಗಳಾಗಿವೆ. ಆದರೆ, ನಮ್ಮ ದೇಶದ ಸೈನಿಕರಿಗೆ ಯಾವುದೇ ಗಂಭೀರವಾದ ಗಾಯಗಳಾಗಿಲ್ಲ. ನಮ್ಮ ಸೇನೆ ಗಡಿಯಲ್ಲಿ ಕಾಪಾಡಲು ಬದ್ಧವಾಗಿವೆ ಎಂದು ಅವರು ಒತ್ತಿ ಹೇಳಿದ್ದಾರೆ.
This matter has also been taken up with China through diplomatic channels. I want to assure the House that our forces are committed to guard our borders and ready to thwart any attempt that will be made to challenge it: Defence Minister Rajnath Singh in Lok Sabha pic.twitter.com/mhlHiX9gXN
— ANI (@ANI) December 13, 2022
ಆದರೂ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಯು ವಿರೋಧ ಪಕ್ಷಗಳಿಗೆ ತೃಪ್ತಿ ನೀಡಲಿಲ್ಲ. ಹೀಗಾಗಿ, ಪ್ರತಿಭಟನೆ ನಡೆಸಿದ ಅವರು ಹೊರನಡೆದರು. ಪ್ರತಿಪಕ್ಷಗಳು ಕೇವಲ ಹೇಳಿಕೆಯಿಂದ ತೃಪ್ತರಾಗುವುದಿಲ್ಲ. ನಿರ್ಣಾಯಕವಾದ ಗಡಿ ಸಮಸ್ಯೆಯ ಬಗ್ಗೆ ಚರ್ಚೆಯನ್ನು ನಾವು ಬಯಸುತ್ತೇವೆ ಎಂದು ವಿಪಕ್ಷಗಳ ನಾಯಕರು ಹೇಳಿದ್ದಾರೆ.
ಇದನ್ನೂ ಓದಿ: ಭಾರತ-ಚೀನಾ ಗಡಿಯಲ್ಲಿ ಮತ್ತೆ ಘರ್ಷಣೆ: 30ಕ್ಕೂ ಹೆಚ್ಚು ಸೇನಾ ಯೋಧರಿಗೆ ಗಾಯ
ರಾಜೀವ್ ಗಾಂಧಿ ಪ್ರತಿಷ್ಠಾನದ ಕುರಿತ ಪ್ರಶ್ನೆಯನ್ನು ಇಂದು ಪಟ್ಟಿ ಮಾಡಲಾಗಿದ್ದು, ಕಾಂಗ್ರೆಸ್ ಕಲಾಪಕ್ಕೆ ಅಡ್ಡಿಪಡಿಸುತ್ತಿದೆ ಎಂದು ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ. ಈ ಸಭೆಗೂ ಮುನ್ನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೇನೆ ಮತ್ತು ರಾಜತಾಂತ್ರಿಕ ನಾಯಕರನ್ನು ಭೇಟಿ ಮಾಡಿದರು. ಸಂಸತ್ತಿನಲ್ಲಿ ಕೇಂದ್ರದ ಪ್ರತಿಕ್ರಿಯೆಯನ್ನು ಚರ್ಚಿಸಲು ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಹಿರಿಯ ಸಚಿವರನ್ನು ಭೇಟಿ ಮಾಡಿದರು.
Everybody must listen to Defence minister Shri @rajnathsingh ji & feel proud of our brave soldiers. pic.twitter.com/382D6xvVY8
— Vishnu Vardhan Reddy (@SVishnuReddy) December 13, 2022
ಅರುಣಾಚಲ ಪ್ರದೇಶದ ತವಾಂಗ್ ವಲಯದಲ್ಲಿ ಡಿಸೆಂಬರ್ 9ರಂದು ಭಾರತ-ಚೀನಾ ಸೈನಿಕರ ಮಧ್ಯೆ ಏರ್ಪಟ್ಟ ಮುಖಾಮುಖಿ ಸಂಘರ್ಷದಲ್ಲಿ ಎರಡೂ ಕಡೆಯ ಹಲವು ಯೋಧರಿಗೆ ಗಾಯವಾಗಿತ್ತು. ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಪ್ರತಿಪಕ್ಷ ಕಾಂಗ್ರೆಸ್ ಸಂಸತ್ತು ಕಲಾಪದಲ್ಲಿ ಒತ್ತಾಯಿಸಿತ್ತು. ಕಾಂಗ್ರೆಸ್ ನಾಯಕರು ಉಭಯ ಸದನಗಳಲ್ಲಿ ನಿಲುವಳಿ ಸೂಚನೆ ಮಂಡಿಸಿದ್ದರು. ಈ ಬೆಳವಣಿಗೆಗಳ ಕುರಿತು ಇಂದು ಸಂಸತ್ತು ಕಲಾಪದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ಮುಂದೆ ಏನು ಕ್ರಮ ಕೈಗೊಳ್ಳಬೇಕೆಂದು ಚರ್ಚಿಸಲು ಭಾರತೀಯ ಸೇನೆಯ ಮೂರೂ ಪಡೆಗಳ ಮುಖ್ಯಸ್ಥರ ಜೊತೆ ಇಂದು ರಕ್ಷಣಾ ಸಚಿವರು ತಮ್ಮ ನಿವಾಸದಲ್ಲಿ ಇಂದು ತುರ್ತು ಸಭೆ ಕರೆದಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:42 pm, Tue, 13 December 22