ಸಂಸತ್​​ನಲ್ಲಿ ವಿಪಕ್ಷಗಳ ಗದ್ದಲ; ಪ್ರತಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿ ನೆಹರೂ ನಿರ್ಧಾರವನ್ನು ನೆನಪಿಸಿದ ಅಮಿತ್ ಶಾ

Parliament Winter Session ಗಾಲ್ವಾನ್ ನಲ್ಲಿ ಯೋಧರು ಸಾಯುತ್ತಿದ್ದರೆ ಚೀನಾದ ಪ್ರತಿನಿಧಿಗಳಿಗೆ ಡಿನ್ನರ್ ಕೊಟ್ಟಿದ್ದು ಯಾರು? 2006ರಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಚೀನಾ, ಅರುಣಾಚಲ ಪ್ರದೇಶದ ಮೇಲೆ ಹಕ್ಕು ಸಾಧಿಸಿತ್ತು ಎಂದು ಶಾ ಹೇಳಿದ್ದಾರೆ

ಸಂಸತ್​​ನಲ್ಲಿ ವಿಪಕ್ಷಗಳ ಗದ್ದಲ; ಪ್ರತಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿ ನೆಹರೂ ನಿರ್ಧಾರವನ್ನು ನೆನಪಿಸಿದ ಅಮಿತ್ ಶಾ
ಅಮಿತ್ ಶಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Dec 13, 2022 | 5:48 PM

ಮಂಗಳವಾರ ಸಂಸತ್​​ನಲ್ಲಿ ಚಳಿಗಾಲದ ಅಧಿವೇಶನ (Parliament Winter Session)ಗದ್ದಲದಿಂದಲೇ ಆರಂಭವಾಗಿದ್ದು ಅರುಣಾಚಲ ಪ್ರದೇಶದ (Arunachal Pradesh) ತವಾಂಗ್ ನಲ್ಲಿ ಡಿಸೆಂಬರ್ 9ರಂದು ನೈಜ ನಿಯಂತ್ರಣ ರೇಖೆ (LAC) ಯಲ್ಲಿ ನಡೆದ ಸಂಘರ್ಷದ ಬಗ್ಗೆ ವಿಪಕ್ಷಗಳು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಸೋಮವಾರ ಈ ಬಗ್ಗೆ ಹೇಳಿಕೆ ನೀಡಿದ ಭಾರತೀಯ ಸೇನೆ ಈ ಸಂಘರ್ಷದಲ್ಲಿ ಎರಡೂ ಕಡೆಯ ಸೈನಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಹೇಳಿದೆ. ಲಡಾಖ್ ವಲಯದಲ್ಲಿ ಜೂನ್ 2020ರಲ್ಲಿ ಗಾಲ್ವಾನ್ ಕಣಿವೆ ಸಂಘರ್ಷ ನಡೆದ ನಂತರ ಇದೇ ಮೊದಲ ಬಾರಿ ಭಾರತ ಮತ್ತು ಚೀನಾ ನಡುವೆ ಗಡಿಯಲ್ಲಿ ಸಂಘರ್ಷವುಂಟಾಗಿದೆ. ವಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಹೆಸರನ್ನು ಇಲ್ಲಿ ಎಳೆದು ತಂದಿದ್ದಾರೆ. ನೆಹರೂ ನೇತೃತ್ವದ ಸರ್ಕಾರ ಯುನ್ಎಸ್ ಸಿ (UNSC ಯುನೈಟೆಡ್ ನೇಷನ್ಸ್ ಸೆಕ್ಯುರಿಟಿ ಕೌನ್ಸಿಲ್) ನ ಶಾಶ್ವತ ಸದಸ್ಯತ್ವವನ್ನು ಬಿಟ್ಟುಕೊಟ್ಟಿದೆ ಎಂದು ಶಾ ಆರೋಪಿಸಿದ್ದಾರೆ. ಗಾಲ್ವಾನ್ ನಲ್ಲಿ ಯೋಧರು ಸಾಯುತ್ತಿದ್ದರೆ ಚೀನಾದ ಪ್ರತಿನಿಧಿಗಳಿಗೆ ಡಿನ್ನರ್ ಕೊಟ್ಟಿದ್ದು ಯಾರು? 2006ರಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಚೀನಾ, ಅರುಣಾಚಲ ಪ್ರದೇಶದ ಮೇಲೆ ಹಕ್ಕು ಸಾಧಿಸಿತ್ತು ಎಂದು ಶಾ ಹೇಳಿದ್ದಾರೆ. 2010ರಲ್ಲಿ ಕಾಂಗ್ರೆಸ್ ಅಧಿಕಾರವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರ ನಿವಾಸಿಗಳಿಗೆ ಚೀನಾ ಪೇಪರ್ ವೀಸಾ ನೀಡಿತ್ತು. ದೆಮ್ಚೋಕ್ ನಲ್ಲಿ ರಸ್ತೆ ಮತ್ತು ಮೂಲಸೌಕರ್ಯ ನಿರ್ಮಾಣಕ್ಕೆ ತಡೆಯೊಡ್ಡಿದ್ದೇ ಕಾಂಗ್ರೆಸ್. ಈ ನೆಲದಲ್ಲಿ ಯಾವುದೇ ಅತಿಕ್ರಮವನ್ನು ಬಿಜೆಪಿ ಸಹಿಸುವುದಿಲ್ಲ. ಯೋಧರು ತೋರಿದ ಧೀರತೆ ಪ್ರಶಂಸನೀಯ, ಅವರು ನಮ್ಮ ನೆಲವನ್ನು ಕಾಪಾಡಿದ್ದಾರೆ ಎಂದು ಗೃಹ ಸಚಿವರು ಹೇಳಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸದನದಲ್ಲಿ ಮಾತನಾಡುವುದಕ್ಕಿಂತ ಮುನ್ನ ಎರಡೂ ಸದನಗಳಲ್ಲಿ ವಿಪಕ್ಷ ಗದ್ದಲವುಂಟು ಮಾಡಿದ್ದು, ಸ್ಪೀಕರ್ ಕಲಾಪವನ್ನು ಮುಂದೂಡಿದ್ದಾರೆ. ಲೋಕಸಭಾ ಮತ್ತು ರಾಜ್ಯಸಭಾ ಕಲಾಪಗಳನ್ನು ಇಂದು ಮಧ್ಯಾಹ್ನ 12ರವರೆಗೆ ಮುಂದೂಡಲಾಗಿತ್ತು. ಪರಿಸ್ಥಿತಿ ಮತ್ತು ವಿಪಕ್ಷಗಳು ಮಾಡಿದ ಮನವಿಯನ್ನು ಪರಿಗಣಿಸಿ, ರಕ್ಷಣಾ ಸಚಿವರು 2 ಗಂಟೆಗೆ ಮಾಡಲಿದ್ದ ಭಾಷಣವನ್ನು 12.30ಕ್ಕೆ ಮಾಡಬೇಕು ಎಂದು ಕೇಂದ್ರ ಸಚಿವ ಪೀಯುಷ್ ಗೋಯಲ್ ಸ್ಪೀಕರ್ ಮತ್ತು ಉಪ ರಾಷ್ಟ್ರಪತಿ ಜಗದೀಪ್ ದನ್ಖರ್ ಅವರಿಗೆ ರಾಜ್ಯಸಭೆಯಲ್ಲಿ ಮನವಿ ಮಾಡಿದ್ದಾರೆ. ಹಾಗಾಗಿ ರಾಜನಾಥ್ ಸಿಂಗ್ ರಾಜ್ಯಸಭೆಯಲ್ಲ್ಲಿ 2 ಗಂಟೆಗೆ ಮಾಡಬೇಕಿದ್ದ ಭಾಷಣವನ್ನು 12.30ಕ್ಕೆ ನಿಗದಿ ಮಾಡಲಾಯಿತು.

ಇದನ್ನೂ ಓದಿ: India China Border Clash: ಭಾರತ-ಚೀನಾ ಗಡಿ ಸಂಘರ್ಷದಲ್ಲಿ ನಮ್ಮ ಸೈನಿಕರಾರೂ ಸತ್ತಿಲ್ಲ; ಲೋಕಸಭೆಯಲ್ಲಿ ರಾಜನಾಥ್ ಸಿಂಗ್ ಸ್ಪಷ್ಟನೆ

ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ನಿಯಮ 267ರ ಅಡಿಯಲ್ಲಿ ಕಲಾಪವನ್ನು ಮುಂದೂಡಿ ಪ್ರಕರಣವನ್ನು ಕೈಗೆತ್ತಿಕೊಳ್ಳುವಂತೆ ಈ ಹಿಂದೆ ನೋಟಿಸ್ ನೀಡಿದ್ದರು. ಚೀನಾ ನಮ್ಮ ಭೂಮಿಯನ್ನು ಅತಿಕ್ರಮಿಸಿದೆ. ಲಡಾಖ್ ಮತ್ತು ಉತ್ತರಾಖಂಡದಿಂದ ಅವರು ಅರುಣಾಚಲವನ್ನು ತಲುಪಿದ್ದಾರೆ. ಚೀನಾದ ಪಿತೂರಿಯನ್ನು ನಿಭಾಯಿಸಲು ಸರ್ಕಾರದ ಸಿದ್ಧತೆಯನ್ನು ತಿಳಿದುಕೊಳ್ಳುವ ಹಕ್ಕು ನಮಗಿದೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.

ನಾನು ಪ್ರಶ್ನೋತ್ತರ ವೇಳೆಯ ಪಟ್ಟಿ ನೋಡಿದೆ. ಪ್ರಶ್ನೆ ಸಂಖ್ಯೆ 5 ಅನ್ನು ನೋಡಿದ ನಂತರ ನನಗೆ (ಕಾಂಗ್ರೆಸ್‌ನ) ಆತಂಕ ಅರ್ಥವಾಯಿತು. ರಾಜೀವ್ ಗಾಂಧಿ ಪ್ರತಿಷ್ಠಾನದ (ಆರ್‌ಜಿಎಫ್‌) ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಪರವಾನಗಿ ರದ್ದುಪಡಿಸುವ ಕುರಿತು ಇರುವ ಪ್ರಶ್ನೆ ಅದಾಗಿತ್ತು.  ಸಂಸತ್ ಹೊರಗೆ ಸುದ್ದಿಗಾರರರೊಂದಿಗೆ ಮಾತನಾಡಿದ ಶಾ, ರಾಜೀವ್ ಗಾಂಧಿ ಫೌಂಡೇಶನ್ ಚೀನಾ ರಾಯಭಾರ ಕಚೇರಿಯಿಂದ 1.35 ಕೋಟಿ ರೂ. ಪಡೆದಿದೆ. ಹಾಗಾಗಿ ಎಫ್‌ಸಿಆರ್‌ಎ ನಿಯಮಗಳ ಪ್ರಕಾರ ಇದರ ನೋಂದಣಿ ರದ್ದು ಮಾಡಲಾಗಿದೆ ಎಂದಿದ್ದಾರೆ.

2005-07ರ ಅವಧಿಯಲ್ಲಿ ಚೀನಾ ರಾಯಭಾರ ಕಚೇರಿಯಿಂದ ಪಡೆದ 1.35 ಕೋಟಿ ರೂಪಾಯಿಯನ್ನು ರಾಜೀವ್ ಗಾಂಧಿ ಫೌಂಡೇಶನ್ ಏನು ಮಾಡಿದೆ ಎಂದು ಕಾಂಗ್ರೆಸ್ ಉತ್ತರಿಸಬೇಕು? 2011ರ ಜುಲೈನಲ್ಲಿ ಎಫ್‌ಸಿಆರ್‌ಎ ಖಾತೆಯಲ್ಲಿ ರಾಜೀವ್ ಗಾಂಧಿ ಚಾರಿಟಬಲ್ ಟ್ರಸ್ಟ್ ಜಾಕಿರ್ ನಾಯ್ಕ್ ಅವರ ಸಂಸ್ಥೆಯಿಂದ 50 ಲಕ್ಷ ರೂ.ಗಳನ್ನು ಅನುಮತಿಯಿಲ್ಲದೆ ಏಕೆ ತೆಗೆದುಕೊಂಡಿದೆ ಎಂದು ಕಾಂಗ್ರೆಸ್ ದೇಶಕ್ಕೆ ತಿಳಿಸಬೇಕು, ”ಎಂದು ಅಮಿತ್ ಶಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಂದು ದೇಶದಲ್ಲಿ ಬಿಜೆಪಿ ಸರಕಾರವಿದೆ. ನಮ್ಮ ಸರ್ಕಾರ ಇರುವವರೆಗೆ ಯಾರೂ ಒಂದು ಇಂಚು ಭೂಮಿಯನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ಡಿಸೆಂಬರ್ 8-9 ರ ಮಧ್ಯರಾತ್ರಿಯಲ್ಲಿ (ಅರುಣಾಚಲ ಪ್ರದೇಶದಲ್ಲಿ) ನಮ್ಮ ಭಾರತೀಯ ಸೇನಾ ಪಡೆಗಳು ತೋರಿದ ಶೌರ್ಯಕ್ಕೆ ನಾನು ವಂದಿಸುತ್ತೇನೆ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ. ಇದನ್ನೂ ಓದಿ: Parliament Winter Session: ಸಂಸತ್ತಿನಲ್ಲಿ ಹೊಸ ಸಂಸದರಿಗೆ ಹೆಚ್ಚಿನ ಅವಕಾಶ ನೀಡುವಂತೆ ಎಲ್ಲಾ ಪಕ್ಷಗಳ ನಾಯಕರಲ್ಲಿ ಪ್ರಧಾನಿ ಮೋದಿ ಮನವಿ

Published On - 2:44 pm, Tue, 13 December 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್