UNESCO World Heritage Tag: ಯುನೆಸ್ಕೋ ವಿಶ್ವ ಪರಂಪರೆಯ ರೇಸ್​ನಲ್ಲಿರುವ ತ್ರಿಪುರಾದ ಉನಕೋಟಿ ಬಗ್ಗೆ ನಿಮಗೆಷ್ಟು ಗೊತ್ತು?

ಉನಕೋಟಿಯಲ್ಲಿರುವ ಹೆಚ್ಚಿನ ವಿಗ್ರಹಗಳು ಹಿಂದೂ ದೇವತೆಗಳದ್ದು. ಈ ವಿಗ್ರಹಗಳು ಸುಮಾರು 8 ಅಥವಾ 9ನೇ ಶತಮಾನದಲ್ಲಿ ಮಾಡಲ್ಪಟ್ಟಿವೆ. ಆದರೆ ಅವುಗಳನ್ನು ಯಾರು ನಿರ್ಮಿಸಿದ್ದಾರೆ ಎಂಬುದರ ಕುರಿತು ಖಚಿತವಾದ ಮಾಹಿತಿಯಿಲ್ಲ.

UNESCO World Heritage Tag: ಯುನೆಸ್ಕೋ ವಿಶ್ವ ಪರಂಪರೆಯ ರೇಸ್​ನಲ್ಲಿರುವ ತ್ರಿಪುರಾದ ಉನಕೋಟಿ ಬಗ್ಗೆ ನಿಮಗೆಷ್ಟು ಗೊತ್ತು?
ಉನಕೋಟಿ ಶಿಲ್ಪಗಳು Image Credit source: Zee News
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Dec 13, 2022 | 12:31 PM

ನವದೆಹಲಿ: ಈಶಾನ್ಯದಲ್ಲಿ ಉನಕೋಟಿ (Unakoti) ಶಿಲ್ಪಗಳು ಬಹಳ ಪ್ರಸಿದ್ಧವಾಗಿವೆ. ಈ ಶಿಲ್ಪಗಳನ್ನು ತ್ರಿಪುರಾದ (Tripura) ರಘುನಂದನ್ ಬೆಟ್ಟಗಳ ಪರ್ವತದ ಬಂಡೆಗಳನ್ನು ಕತ್ತರಿಸಿ ಮಾಡಲಾಗಿದೆ. ಖ್ಯಾತ ಇತಿಹಾಸಕಾರ ಪನ್ನಾಲಾಲ್ ರಾಯ್ ಅವರು ಇಲ್ಲಿ ಒಂದಲ್ಲ, ಎರಡಲ್ಲ, ಸುಮಾರು 99 ಲಕ್ಷದ 99 ಸಾವಿರದ 999 ವಿಗ್ರಹಗಳು ಇವೆ ಎಂದಿದ್ದಾರೆ. ಪನ್ನಾಲಾಲ್ ರಾಯ್ ಬಹಳ ಸಮಯದಿಂದ ಇವುಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಬಂಗಾಳಿ ಭಾಷೆಯಲ್ಲಿ ಉನಕೋಟಿ ಎಂದರೆ ಒಂದು ಕೋಟಿಗಿಂತ ಕಡಿಮೆ ಎಂದರ್ಥ. ತ್ರಿಪುರಾದ ಈ ಉನಕೋಟಿ ಸರ್ಕಾರ ಮತ್ತು ಎಎಸ್​ಐ ಎರಡರೊಂದಿಗೂ ಯುನೆಸ್ಕೋ (UNESCO) ವಿಶ್ವ ಪರಂಪರೆಯ ಟ್ಯಾಗ್‌ಗಾಗಿ ಸ್ಪರ್ಧಿಸುತ್ತಿದೆ.

ಇಲ್ಲಿಂದ ಸುಮಾರು 180 ಕಿಮೀ ದೂರದಲ್ಲಿರುವ ರಘುನಂದನ್ ಬೆಟ್ಟಗಳಲ್ಲಿ ನೆಲೆಸಿರುವ ಉನಕೋಟಿಯು 8ರಿಂದ 9ನೇ ಶತಮಾನದಲ್ಲಿ ಬೃಹತ್ ಬೆಟ್ಟದಲ್ಲಿ ಕೆತ್ತಿದ ದೈತ್ಯ ಶಿಲ್ಪಗಳಿಗೆ ನೆಲೆಯಾಗಿದೆ. “ರಾಕ್-ಕಟ್ ಶಿಲ್ಪಗಳ ರಚನೆಗಳು ದೈತ್ಯಾಕಾರದ ಮತ್ತು ವಿಭಿನ್ನವಾದ ಮಂಗೋಲಾಯ್ಡ್ ಲಕ್ಷಣಗಳನ್ನು ಹೊಂದಿವೆ. ಕಾಂಬೋಡಿಯಾದ ಅಂಕೋರ್ ವಾಟ್ ದೇವಾಲಯದಲ್ಲಿನ ಶಿಲ್ಪದಂತೆಯೇ ಇರುವುದರಿಂದ ಇದನ್ನು ಈಶಾನ್ಯದ ಅಂಕೋರ್ ವಾಟ್ ಎಂದು ಕರೆಯಲಾಗುತ್ತದೆ” ಎಂದು ಹಲವು ವರ್ಷಗಳಿಂದ ಶಿಲ್ಪಕಲೆಯ ಅಧ್ಯಯನ ನಡೆಸುತ್ತಿರುವ ರಾಜ್ಯದ ಖ್ಯಾತ ಐತಿಹಾಸಿಕ ಲೇಖಕ ಪನ್ನಾ ಲಾಲ್ ರಾಯ್ ಹೇಳಿದ್ದಾರೆ.

ಇದನ್ನೂ ಓದಿ: ಯುನೆಸ್ಕೋ ವೆಬ್​ಸೈಟ್​ನಲ್ಲಿ ಹಿಂದಿ ಭಾಷೆಗೆ ಮನ್ನಣೆ; ಭಾರತೀಯರಿಗೆ ಹೆಮ್ಮೆಯ ಸಂಗತಿ ಎಂದ ಕೇಂದ್ರ ಸಚಿವ ಕಿಶನ್ ರೆಡ್ಡಿ

ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್‌ಐ) ಇದನ್ನು ಪಾರಂಪರಿಕ ತಾಣವಾಗಿ ದತ್ತು ಪಡೆದ ನಂತರ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ಆದರೂ ಗಣನೀಯ ಉತ್ಖನನ ಸೇರಿದಂತೆ ಸಾಕಷ್ಟು ಕೆಲಸಗಳನ್ನು ಕೈಗೊಳ್ಳಬೇಕಾಗಿದೆ ಕೇಂದ್ರ ಸರ್ಕಾರವು ಇದನ್ನು ವಿಶ್ವ ಪರಂಪರೆಯ ತಾಣವೆಂದು ಘೋಷಿಸಲು ಈಗಾಗಲೇ ಯುನೆಸ್ಕೋವನ್ನು ಸಂಪರ್ಕಿಸಿದೆ.

ಸಂಶೋಧಕರ ಪ್ರಕಾರ, ಈ ವಿಗ್ರಹಗಳು ಸುಮಾರು 8 ಅಥವಾ 9ನೇ ಶತಮಾನದಲ್ಲಿ ಮಾಡಲ್ಪಟ್ಟಿವೆ. ಆದರೆ ಅವುಗಳನ್ನು ಯಾರು ನಿರ್ಮಿಸಿದ್ದಾರೆ ಎಂಬುದರ ಕುರಿತು ಖಚಿತವಾದ ಮಾಹಿತಿಯಿಲ್ಲ. ಉನಕೋಟಿಯಲ್ಲಿರುವ ಹೆಚ್ಚಿನ ವಿಗ್ರಹಗಳು ಹಿಂದೂ ದೇವತೆಗಳದ್ದು. ಇವುಗಳಲ್ಲಿ ಗಣೇಶ, ಶಿವ ಮತ್ತು ಇತರ ದೇವತೆಗಳ ವಿಗ್ರಹಗಳಿವೆ. ಇಲ್ಲಿರುವ ಅನೇಕ ವಿಗ್ರಹಗಳು ಎಷ್ಟು ದೊಡ್ಡದಾಗಿದೆ ಎಂದರೆ ಅವುಗಳ ಮೇಲಿನಿಂದ ಜಲಪಾತಗಳು ಹರಿಯುತ್ತವೆ. ದೇಶದ ಹಲವು ಭಾಗಗಳಿಂದಲೂ ಜನರು ಇಲ್ಲಿಗೆ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಬರುತ್ತಾರೆ.

ಇದನ್ನೂ ಓದಿ: International Mother Language Day: ಯುನೆಸ್ಕೋ ವಿಶ್ವ ಮಾತೃಭಾಷೆ ದಿನ- ಕನ್ನಡಕ್ಕಾಗಿ ಗೂಗಲ್​​ ನಿಂದ ವಿಶೇಷ ಪ್ರಯತ್ನ

ಈ ಸ್ಥಳವು ಅತ್ಯದ್ಭುತವಾಗಿ ರಮಣೀಯವಾಗಿರುವುದು ಮಾತ್ರವಲ್ಲದೆ ಪೌರಾಣಿಕ ಮಹತ್ವವನ್ನು ಕೂಡ ಹೊಂದಿದೆ. ಹಿಂದಿ ಪುರಾಣಗಳ ಪ್ರಕಾರ, ಭಗವಾನ್ ಶಿವನು ಒಂದು ಕೋಟಿ ದೇವತೆಗಳ ಜೊತೆಗೆ ಕಾಶಿಗೆ ಹೋಗುತ್ತಿದ್ದಾಗ ಈ ಸ್ಥಳದಲ್ಲಿ ರಾತ್ರಿ ವಿಶ್ರಾಂತಿ ಪಡೆದನು. ಸೂರ್ಯೋದಯಕ್ಕೆ ಮುನ್ನವೇ ಎಚ್ಚರಗೊಂಡು ಕಾಶಿಗೆ ತೆರಳುವಂತೆ ತನ್ನ ಎಲ್ಲಾ ದೇವ-ದೇವತೆಗಳನ್ನು ಕೇಳಿಕೊಂಡನು. ಆದರೆ, ಮರುದಿನ ಬೆಳಿಗ್ಗೆ ಶಿವನನ್ನು ಹೊರತುಪಡಿಸಿ, ಅವರಲ್ಲಿ ಬೇರೆ ಯಾರೂ ಏಳಲಿಲ್ಲ ಎಂದು ನಂಬಲಾಗಿದೆ. ಆದ್ದರಿಂದ ಶಿವನು ಕಾಶಿಗೆ ಏಕಾಂಗಿಯಾಗಿ ಹೊರಟನು. ಇಲ್ಲಿಂದ ಹೊರಡುವಾಗ ಶಿವನು ಇತರರನ್ನು ಕಲ್ಲಿನ  ಶಿಲ್ಪಗಳಾಗುವಂತೆ ಶಪಿಸುತ್ತಾನೆ. ಆ ಶಾಪದ ಪರಿಣಾಮವಾಗಿ 99 ಲಕ್ಷದ 99 ಸಾವಿರದ 999 ಕಲ್ಲಿನ ಚಿತ್ರಗಳು ಮತ್ತು ಕೆತ್ತನೆಗಳು ಉನಕೋಟಿಯಲ್ಲಿ ಅಸ್ತಿತ್ವದಲ್ಲಿವೆ ಎಂಬ ನಂಬಿಕೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ