ಯುನೆಸ್ಕೋ ವೆಬ್‌ಸೈಟ್‌ನಲ್ಲಿ ಹಿಂದಿ ಭಾಷೆಗೆ ಮನ್ನಣೆ; ಭಾರತೀಯರಿಗೆ ಹೆಮ್ಮೆಯ ಸಂಗತಿ ಎಂದ ಕೇಂದ್ರ ಸಚಿವ ಕಿಶನ್ ರೆಡ್ಡಿ
ವಿಶ್ವ ಹಿಂದಿ ದಿನದಂದು ಭಾರತದ ವಿಶ್ವ ಪರಂಪರೆಯ ತಾಣಗಳ ಹಿಂದಿ ವಿವರಣೆಯನ್ನು ವಿಶ್ವ ಪರಂಪರೆ ಕೇಂದ್ರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ಯುನೆಸ್ಕೋ ನಿರ್ಧರಿಸಿರುವುದು ಪ್ರತಿಯೊಬ್ಬ ಭಾರತೀಯ ಮತ್ತು ಹಿಂದಿ ಪ್ರೇಮಿಗಳಿಗೆ ಹೆಮ್ಮೆಯ ವಿಷಯವಾಗಿದೆ
ನವದೆಹಲಿ: ವಿಶ್ವ ಹಿಂದಿ ದಿನದಂದು ಭಾರತದ ವಿಶ್ವ ಪರಂಪರೆಯ ತಾಣಗಳ (UNESCO) ಹಿಂದಿ ವಿವರಣೆಯನ್ನು ತನ್ನ WHC ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಯುನೆಸ್ಕೋ ನಿರ್ಧಾರವು ಪ್ರತಿಯೊಬ್ಬ ಭಾರತೀಯ ಮತ್ತು ಹಿಂದಿ ಪ್ರೇಮಿಗಳಿಗೆ ಹೆಮ್ಮೆಯ ವಿಚಾರವಾಗಿದೆ ಎಂದು ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಟ್ವೀಟ್ ಮಾಡಿದ್ದಾರೆ. ಇದು ಭಾರತದ ಹಿಂದಿ ಭಾಷಿಗರು ಹಾಗೂ ಹಿಂದಿ ಪ್ರೇಮಿಗಳಿಗೆ ಹೆಮ್ಮೆಯ ವಿಷಯವಾಗಿದೆ. ಈ ಐತಿಹಾಸಿಕ ನಿರ್ಧಾರವು ಹಿಂದಿ ಭಾಷೆಗೆ ಜಾಗತಿಕ ಮನ್ನಣೆಯನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕೂಡ ಟ್ವೀಟ್ ಮಾಡುವ ಮೂಲಕ ಈ ಐತಿಹಾಸಿಕ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ವಿಶ್ವ ಹಿಂದಿ ದಿನದಂದು ಭಾರತದ ವಿಶ್ವ ಪರಂಪರೆಯ ತಾಣಗಳ ಹಿಂದಿ ವಿವರಣೆಯನ್ನು ವಿಶ್ವ ಪರಂಪರೆ ಕೇಂದ್ರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ಯುನೆಸ್ಕೋ ನಿರ್ಧರಿಸಿರುವುದು ಪ್ರತಿಯೊಬ್ಬ ಭಾರತೀಯ ಮತ್ತು ಹಿಂದಿ ಪ್ರೇಮಿಗಳಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಅವರು ಹೇಳಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತೀಯ ಭಾಷೆಗಳ ಜನಪ್ರಿಯತೆಯು ಸ್ವಾಗತಾರ್ಹ ಮತ್ತು ಪ್ರೋತ್ಸಾಹದಾಯಕವಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
It is a proud moment for??
On the occasion of Hindi Diwas,@UNESCO‘s World Heritage Centre has agreed to publish Hindi descriptions of ??’s UNESCO World Heritage Sites on the WHC website
This historic decision is a celebration of Hindi ensuring global recognition to the language pic.twitter.com/d0LdBJFPvf
— G Kishan Reddy (@kishanreddybjp) January 11, 2022
ವಿಶ್ವ ಹಿಂದಿ ದಿನದ ಅಂಗವಾಗಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಕೂಡ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ, ನಮ್ಮ ಜ್ಞಾನ ಮತ್ತು ಸಂಸ್ಕೃತಿಯನ್ನು ಹರಡುವಲ್ಲಿ ಹಿಂದಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಹಿಂದಿಯ ಬಳಕೆ ಹೆಚ್ಚುತ್ತಿದ್ದು, ಯುವಜನತೆಯಲ್ಲಿ ಅದರ ಜನಪ್ರಿಯತೆಯಿಂದಾಗಿ ಅದಕ್ಕೆ ಉಜ್ವಲ ಭವಿಷ್ಯವಿದೆ ಎಂದರು. ಅದೇ ಸಮಯದಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ತಮ್ಮ ಸಂದೇಶದಲ್ಲಿ, ಜಾಗತಿಕ ಮಟ್ಟದಲ್ಲಿ ಹಿಂದಿಯನ್ನು ಕೊಂಡೊಯ್ಯುವ ನಮ್ಮ ಗುರಿಯತ್ತ ನಾವು ನಿರಂತರವಾಗಿ ಸಾಗುತ್ತಿದ್ದೇವೆ ಎಂದು ಹೇಳಿದರು.
विश्व हिंदी दिवस पर यूनेस्को द्वारा भारत के विश्व धरोहर स्थलों के हिंदी विवरण को अपने वर्ल्ड हेरिटेज सेंटर वेबसाइट पर प्रकाशित करने का निर्णय हर भारतीय और हिन्दी प्रेमी के लिए गर्व की बात है।
वैश्विक मंच पर भारतीय भाषाओं की लोकप्रियता स्वागतयोग्य और प्रोत्साहित करने वाला है। https://t.co/mBjdry3cqq
— Dharmendra Pradhan (@dpradhanbjp) January 11, 2022
ವಿಶ್ವ ಹಿಂದಿ ದಿನವನ್ನು ಪ್ರತಿ ವರ್ಷ ಜನವರಿ 10ರಂದು ಆಚರಿಸಲಾಗುತ್ತದೆ. ವಿಶ್ವದಲ್ಲಿ ಹಿಂದಿಯ ಪ್ರಚಾರಕ್ಕಾಗಿ ಜಾಗೃತಿ ಮೂಡಿಸುವುದು ಮತ್ತು ಹಿಂದಿಯನ್ನು ಅಂತಾರಾಷ್ಟ್ರೀಯ ಭಾಷೆಯಾಗಿ ಪ್ರಸ್ತುತಪಡಿಸುವುದು ಇದರ ಉದ್ದೇಶವಾಗಿದೆ. ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 2006ರ ಜನವರಿ 10 ಅನ್ನು ಪ್ರತಿ ವರ್ಷ ವಿಶ್ವ ಹಿಂದಿ ದಿನವನ್ನಾಗಿ ಆಚರಿಸಲು ಘೋಷಿಸಿದರು.
ಇದನ್ನೂ ಓದಿ: ಭಾರತದ ಸಂಸ್ಕೃತಿ, ಜ್ಞಾನ ಪಸರಿಸುವಲ್ಲಿ ಹಿಂದಿ ಬಹುಮುಖ್ಯ ಪಾತ್ರ ವಹಿಸುತ್ತಿದೆ: ಪ್ರಧಾನಿ ಮೋದಿ