ಭಾರತದ ಸಂಸ್ಕೃತಿ, ಜ್ಞಾನ ಪಸರಿಸುವಲ್ಲಿ ಹಿಂದಿ ಬಹುಮುಖ್ಯ ಪಾತ್ರ ವಹಿಸುತ್ತಿದೆ: ಪ್ರಧಾನಿ ಮೋದಿ

ಪ್ರತಿವರ್ಷವೂ ಜನವರಿ 10ರಂದು ವಿಶ್ವ ಹಿಂದಿ ದಿನವನ್ನಾಗಿ ಆಚರಿಸಲಾಗುತ್ತದೆ. ಹಿಂದಿ ಭಾಷೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಗತ್ತಿನಾದ್ಯಂತ ಹಿಂದಿ ಭಾಷಿಗರು ಇದನ್ನು ಆಚರಿಸುತ್ತಾರೆ. ಅದರಲ್ಲೂ ಬೇರೆ ದೇಶಗಳಲ್ಲಿರುವ ಭಾರತದ ರಾಯಭಾರಿ ಕಚೇರಿಗಳಲ್ಲಿ ವಿಶೇಷವಾಗಿ ಇದರ ಆಚರಣೆ ಇರುತ್ತದೆ.

ಭಾರತದ ಸಂಸ್ಕೃತಿ, ಜ್ಞಾನ ಪಸರಿಸುವಲ್ಲಿ ಹಿಂದಿ ಬಹುಮುಖ್ಯ ಪಾತ್ರ ವಹಿಸುತ್ತಿದೆ: ಪ್ರಧಾನಿ ಮೋದಿ
ಪ್ರಧಾನಿ ಮೋದಿ

ದೆಹಲಿ: ನಮ್ಮ ದೇಶದ ಸಂಸ್ಕೃತಿ ಮತ್ತು ಅರಿವನ್ನು ಪಸರಿಸುವಲ್ಲಿ ಹಿಂದಿ ಭಾಷೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಸೋಮವಾರ  ವಿಶ್ವ ಹಿಂದಿ ದಿವಸ(World Hindi Day​ )ನಿಮಿತ್ತ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ವರ್ಚ್ಯುವಲ್​ ಆಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ವಹಿಸಿದ್ದರು.ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವ ಎಸ್​.ಜೈಶಂಕರ್​ ಸಂದೇಶ ಓದಿದರು. ಮಾಹಿತಿ ತಂತ್ರಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಹಿಂದಿ ಭಾಷೆಯ ಬಳಕೆ ಮತ್ತು ಯುವಜನರಲ್ಲಿ ಹೆಚ್ಚುತ್ತಿರುವ ಹಿಂದಿ ಆಸಕ್ತಿ, ಹಿಂದಿಯ ಉಜ್ವಲ ಭವಿಷ್ಯವನ್ನು ತೋರಿಸುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದರು. 

ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವ ಎಸ್.ಜೈಶಂಕರ್​ ಮಾತನಾಡಿ, ಹಿಂದಿಯನ್ನು ಜಾಗತಿಕ ಹಂತದಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ನಾವು ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು. ನಂತರ ಮಾತನಾಡಿದ ಮೀನಾಕ್ಷಿ ಲೇಖಿ, ವಿದೇಶಗಳಲ್ಲೂ ಹಿಂದಿ ಅಧ್ಯಯನ ಉತ್ತೇಜಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.  ವಿದೇಶಗಳಲ್ಲಿ ಭಾರತೀಯ ಭಾಷೆ, ಸಂಸ್ಕೃತಿ ಮತ್ತು ಅಧ್ಯಯನಗಳನ್ನು ಉತ್ತೇಜಿಸಲು ಸರ್ಕಾರ, 13 ಹಿಂದಿ ಪೀಠಗಳು ಸೇರಿ 50 ಪೀಠಗಳನ್ನು ಸ್ಥಾಪಿಸಿದೆ ಎಂದು ಮಾಹಿತಿ ನೀಡಿದರು.  ಹಾಗೇ, ಹಿಂದಿ ಭಾಷೆಯನ್ನು 100ಕ್ಕೂ ಹೆಚ್ಚು ದೇಶಗಳ ಸುಮಾರು 670 ಶಿಕ್ಷಣ ಸಂಸ್ಥೆಗಳಲ್ಲಿ ಕಲಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಮತ್ತು ಎಸ್​.ಜೈಶಂಕರ್​ ಅವರ ಮಾರ್ಗದರ್ಶನದಲ್ಲಿ ಹಿಂದಿ ಜಾಗತಿಕವಾಗಿ ಬೆಳೆಯುತ್ತಿದೆ ಎಂದು ಲೇಖಿ ತಿಳಿಸಿದರು.

ಪ್ರತಿವರ್ಷವೂ ಜನವರಿ 10ರಂದು ವಿಶ್ವ ಹಿಂದಿ ದಿನವನ್ನಾಗಿ ಆಚರಿಸಲಾಗುತ್ತದೆ. ಹಿಂದಿ ಭಾಷೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಗತ್ತಿನಾದ್ಯಂತ ಹಿಂದಿ ಭಾಷಿಗರು ಇದನ್ನು ಆಚರಿಸುತ್ತಾರೆ. ಅದರಲ್ಲೂ ಬೇರೆ ದೇಶಗಳಲ್ಲಿರುವ ಭಾರತದ ರಾಯಭಾರಿ ಕಚೇರಿಗಳಲ್ಲಿ ವಿಶೇಷವಾಗಿ ಇದರ ಆಚರಣೆ ಇರುತ್ತದೆ. 1975 ರ ಜನವರಿ 10 ರಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ಮೊದಲ ವಿಶ್ವ ಹಿಂದಿ ಸಮ್ಮೇಳನ ನಡೆಯಿತು. ಸಮ್ಮೇಳನವನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಉದ್ಘಾಟಿಸಿದ್ದರು.  ಅದಾದ ಬಳಿಕ 2006ರಲ್ಲಿ ಅಂದಿನ ಪ್ರಧಾನಿ ಡಾ. ಮನಮೋಹನ್​ ಸಿಂಗ್ ಅವರು, ಜನವರಿ 10ನ್ನು ವಿಶ್ವ ಹಿಂದಿ ದಿವಸ್​ ಆಗಿ ಆಚರಿಸಲಾಗುವುದು ಎಂದು ಘೋಷಿಸಿದರು. ಅದಾದ ನಂತರ ಪ್ರತಿವರ್ಷ ಜನವರಿ 10 ವಿಶ್ವ ಹಿಂದಿ ದಿನವಾಗಿ ಗುರುತಿಸಿಕೊಂಡಿದ್ದರೂ, ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ವಿಶ್ವ ಹಿಂದಿ ದಿವಸ್ ಆಚರಿಸುತ್ತಿರುವುದು ಇದೇ ಮೊದಲಾಗಿದೆ.

ಇದನ್ನೂ ಓದಿ: Deltacron ಏನಿದು ಡೆಲ್ಟಾಕ್ರೋನ್: ಕೊರೊನಾವೈರಸ್​​ನ ಹೊಸ ರೂಪಾಂತರಿ ಅಥವಾ ಲ್ಯಾಬ್​​ನಲ್ಲಾದ ಪ್ರಮಾದ?

Published On - 8:28 am, Tue, 11 January 22

Click on your DTH Provider to Add TV9 Kannada