ಟಿವಿ9 ಬಿಗ್ ಇಂಪ್ಯಾಕ್ಟ್: ಪ್ಯಾರಾ-ಅಥ್ಲೀಟ್ ಪ್ರಸಾದ್ಗೆ ಸಿಕ್ತು ಸೂರು ಭಾಗ್ಯ!
ಪ್ಯಾರಾಲಿಂಪಿಕ್ ಕ್ರೀಡಾಪಟು ಪ್ರಸಾದ್ ಕುಟುಂಬವು ಐದು ವರ್ಷಗಳಿಂದ ಮನೆಗಾಗಿ ನಡೆಸುತ್ತಿದ್ದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಟಿವಿ9 ವಾಹಿನಿಯು ಪ್ರಸಾದ್ ಅವರ ಕಷ್ಟವನ್ನು ಬೆಳಕಿಗೆ ತಂದ ಕೇವಲ 12 ಗಂಟೆಗಳಲ್ಲಿಯೇ ರಾಜೀವ್ ಗಾಂಧಿ ವಸತಿ ನಿಗಮದಿಂದ ಅವರಿಗೆ ಫ್ಲಾಟ್ ಮಂಜೂರಾಗಿದೆ. ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದರೂ ಪ್ರಸಾದ್ ಫ್ಲೋರ್‌ಬಾಲ್, ಬಾಸ್ಕೆಟ್‌ಬಾಲ್, ಸೈಕ್ಲಿಂಗ್ ಸೇರಿ ಹಲವು ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ಬೆಂಗಳೂರು, ಜನವರಿ 10: ಪ್ಯಾರಾಲಿಂಪಿಕ್ ಕ್ರೀಡಾಪಟು ಪ್ರಸಾದ್ ಕುಟುಂಬವು ಐದು ವರ್ಷಗಳಿಂದ ಮನೆಗಾಗಿ ನಡೆಸುತ್ತಿದ್ದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಟಿವಿ9 ವಾಹಿನಿಯು ಪ್ರಸಾದ್ ಅವರ ಕಷ್ಟವನ್ನು ಬೆಳಕಿಗೆ ತಂದ ಕೇವಲ 12 ಗಂಟೆಗಳಲ್ಲಿಯೇ ರಾಜೀವ್ ಗಾಂಧಿ ವಸತಿ ನಿಗಮದಿಂದ ಅವರಿಗೆ ಫ್ಲಾಟ್ ಮಂಜೂರಾಗಿದೆ. ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದರೂ ಪ್ರಸಾದ್ ಫ್ಲೋರ್‌ಬಾಲ್, ಬಾಸ್ಕೆಟ್‌ಬಾಲ್, ಸೈಕ್ಲಿಂಗ್ ಸೇರಿ ಹಲವು ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ತಂದೆ ರಾಮು ಅವರೊಂದಿಗೆ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಈ ಕುಟುಂಬ, ಮನೆ ಬಾಡಿಗೆ ಕಟ್ಟಲೂ ಪರದಾಡುತ್ತಿತ್ತು. ರಾಜೀವ್ ಗಾಂಧಿ ವಸತಿ ಯೋಜನೆಯಡಿ ಒಂದು ಲಕ್ಷ ರೂಪಾಯಿ ಪಾವತಿಸಿದ್ದರೂ, ಬಿದರಹಳ್ಳಿಯ ಬಿ-ಬ್ಲಾಕ್ ಕಾಮಗಾರಿ ವಿಳಂಬದಿಂದ ಮನೆ ಮಂಜೂರಾಗಿರಲಿಲ್ಲ. ಟಿವಿ9 ನಿನ್ನೆ ಬೆಳಗ್ಗೆ 9 ಗಂಟೆಗೆ ಈ ಕುರಿತು ವರದಿ ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲೇ ಎಂ.ಡಿ ಪರಶುರಾಮ್ ಅವರು ಪ್ರಸಾದ್ ಅವರ ತಂದೆ ರಾಮುಗೆ ಬಿದರಹಳ್ಳಿ ಎ-ಬ್ಲಾಕ್‌ನಲ್ಲಿ 601ನೇ ಸಂಖ್ಯೆಯ ಫ್ಲಾಟ್ ಹಂಚಿಕೆ ಪತ್ರ ನೀಡಿದ್ದಾರೆ. ಮಹದೇವಪುರ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರ ಕೋಟಾದಲ್ಲಿ ಈ ಮನೆ ಮಂಜೂರಾಗಿದೆ. ಪ್ರಸಾದ್ ತಂದೆ ರಾಮು ಟಿವಿ9ಗೆ ಧನ್ಯವಾದ ಅರ್ಪಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

