ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ನಗರದ ಹೊಂಬಳ ರಸ್ತೆಯ ಸರ್ವಜ್ಞ ಸರ್ಕಲ್ ಬಳಿ ಕಡಲೆ ಕಳ್ಳತನ ಪ್ರಕರಣದಲ್ಲಿ ರೈತರು ಕಳ್ಳನನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ನಡೆದಿದೆ. ಬೆಳಗಿನ ಜಾವ ಜಮೀನಿನಲ್ಲಿ ಕಡಲೆ ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ವಾಯುವಿಹಾರಕ್ಕೆ ಬಂದ ಜನರ ಕಣ್ಣಿಗೆ ಕಳ್ಳ ಬಿದ್ದಿದ್ದು, ತಕ್ಷಣ ರೈತರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ರೈತರು ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಧರ್ಮದೇಟು ನೀಡಿದ್ದಾರೆ. ಕಳೆದ ಹಲವು ದಿನಗಳಿಂದ ರೈತರ ಜಮೀನುಗಳಲ್ಲಿ ಕಡಲೆ ಕಳ್ಳತನ ನಡೆಯುತ್ತಿದ್ದು, ಇದರಿಂದ ರೈತರು ಕಂಗಾಲಾಗಿದ್ದರು ಎನ್ನಲಾಗಿದೆ. ಆಕ್ರೋಶಗೊಂಡ ರೈತರು ಕಳ್ಳನ ತಲೆ ಹಾಗೂ ಕೊರಳಿಗೆ ಕಡಲೆ ಗಿಡಗಳ ಮಾಲೆ ಹಾಕಿ ಪಾಠ ಕಲಿಸಿದ್ದಾರೆ. ಮಾಹಿತಿ ಪಡೆದ ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಗದಗ, ಜನವರಿ 10: ನಗರದ ಹೊಂಬಳ ರಸ್ತೆಯ ಸರ್ವಜ್ಞ ಸರ್ಕಲ್ ಬಳಿ ಕಡಲೆ ಕಳ್ಳತನ ಪ್ರಕರಣದಲ್ಲಿ ರೈತರು ಕಳ್ಳನನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ನಡೆದಿದೆ. ಬೆಳಗಿನ ಜಾವ ಜಮೀನಿನಲ್ಲಿ ಕಡಲೆ ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ವಾಯುವಿಹಾರಕ್ಕೆ ಬಂದ ಜನರ ಕಣ್ಣಿಗೆ ಕಳ್ಳ ಬಿದ್ದಿದ್ದು, ತಕ್ಷಣ ರೈತರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ರೈತರು ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಧರ್ಮದೇಟು ನೀಡಿದ್ದಾರೆ. ಕಳೆದ ಹಲವು ದಿನಗಳಿಂದ ರೈತರ ಜಮೀನುಗಳಲ್ಲಿ ಕಡಲೆ ಕಳ್ಳತನ ನಡೆಯುತ್ತಿದ್ದು, ಇದರಿಂದ ರೈತರು ಕಂಗಾಲಾಗಿದ್ದರು ಎನ್ನಲಾಗಿದೆ. ಆಕ್ರೋಶಗೊಂಡ ರೈತರು ಕಳ್ಳನ ತಲೆ ಹಾಗೂ ಕೊರಳಿಗೆ ಕಡಲೆ ಗಿಡಗಳ ಮಾಲೆ ಹಾಕಿ ಪಾಠ ಕಲಿಸಿದ್ದಾರೆ. ಮಾಹಿತಿ ಪಡೆದ ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

