ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ ಮಾಡಿದ ಸುದೀಪ್
‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಕೊನೆಯ ವಾರದ ಪಂಚಾಯ್ತಿಯು ಇಂದು ನಡೆಯಲಿದೆ ಮತ್ತು ಸುದೀಪ್ ಅವರು ಇದನ್ನು ನಡೆಸಿಕೊಡಲಿದ್ದಾರೆ. ಈ ಪೈಕಿ ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಕುತೂಹಲವು ಅಭಿಮಾನಿಗಳಿಗೆ ಮೂಡಿದೆ. ಈ ವಾರ ಪ್ರಮುಖರೆ ನಾಮಿನೇಟ ಆಗಿರುವುದು ಅಚ್ಚರಿಯ ಸಂಗತಿ.
ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಲ್ಲಿ ರಘು ಹಾಗೂ ಗಿಲ್ಲಿ ಜೊತೆ ಆಪ್ತವಾಗಿರೋದು ಗೊತ್ತೇ ಇದೆ. ಇವರ ಆಪ್ತತೆ ಬಗ್ಗೆ ಆಗಾಗ ಪ್ರಶ್ನೆ ಮೂಡುತ್ತದೆ. ಇವರಿಬ್ಬರ ಜೊತೆ ಬೇರೆ ಯಾರೇ ಕ್ಲೋಸ್ ಆದರೂ ಇದನ್ನು ರಕ್ಷಿತಾ ಸಹಿಸೋದಿಲ್ಲ. ಈ ವಿಷಯವನ್ನು ಸುದೀಪ್ ಪ್ರಶ್ನೆ ಮಾಡಿದ್ದಾರೆ. ‘ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ’ ಎಂದು ರಕ್ಷಿತಾಗೆ ಪಾಠ ಮಾಡಲಾಗಿದೆ.
ಇನ್ನು, ಇದು ಈ ವಾರ ನಡೆಯೋದು ಕೊನೆಯ ಕಿಚ್ಚನ ಪಂಚಾಯ್ತಿ. ಏಕೆಂದರೆ ಮುಂದಿನ ವಾರ ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಈ ವಾರ ಧನುಷ್ ಅವರನ್ನು ಹೊರತುಪಡಿಸಿ ಉಳಿದವರು ಅಂದರೆ ಕಾವ್ಯಾ, ಗಿಲ್ಲಿ, ರಕ್ಷಿತಾ, ಅಶ್ವಿನಿ ಗೌಡ, ರಘು, ರಾಶಿಕಾ, ಅಶ್ವಿನಿ, ಧ್ರುವಂತ್ ನಾಮಿನೇಟ್ ಆಗಿದ್ದಾರೆ. ಇವರ ಪೈಕಿ ಒಬ್ಬರು ಈ ವಾರವರೇ ಎಲಿಮಿನೇಟ್ ಆಗುವ ಸಾಧ್ಯತೆ ಇದೆ. ಈ ಬಗ್ಗೆ ಶೀಘ್ರವೇ ನಿರ್ಧಾರ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
