Lal Bahadur Shastri: ದೇಶದ ಎರಡನೇ ಪ್ರಧಾನಿ, ಸರಳ-ಪ್ರಾಮಾಣಿಕ ರಾಜಕಾರಣಿ ಲಾಲ್​ ಬಹದ್ದೂರ್​ ಶಾಸ್ತ್ರಿ 56ನೇ ಪುಣ್ಯತಿಥಿ ಇಂದು

Lal Bahadur Shastri Death Anniversary: ಲಾಲ್​ ಬಹದ್ದೂರ್​ ಶಾಸ್ತ್ರಿ ಹುಟ್ಟಿದ್ದು 1904ರ ಅಕ್ಟೋಬರ್​ 2ರಂದು ಜನಿಸಿದ್ದಾರೆ. ಮಹಾತ್ಮಾ ಗಾಂಧೀಜಿಯವರ ಜನ್ಮದಿನದಂದೇ ಅವರ ಹುಟ್ಟುಹಬ್ಬವನ್ನೂ ದೇಶಾದ್ಯಂತ ಆಚರಿಸಲಾಗುತ್ತದೆ.

Lal Bahadur Shastri: ದೇಶದ ಎರಡನೇ ಪ್ರಧಾನಿ, ಸರಳ-ಪ್ರಾಮಾಣಿಕ ರಾಜಕಾರಣಿ ಲಾಲ್​ ಬಹದ್ದೂರ್​ ಶಾಸ್ತ್ರಿ 56ನೇ ಪುಣ್ಯತಿಥಿ ಇಂದು
Follow us
TV9 Web
| Updated By: Lakshmi Hegde

Updated on:Jan 11, 2022 | 10:06 AM

ಭಾರತದ ಮಾಜಿ ಪ್ರಧಾನಿ ಲಾಲ್​ ಬಹದ್ದೂರ್ ಶಾಸ್ತ್ರಿ(Lal Bahadur Shastri) ಅವರ 56ನೇ ಪುಣ್ಯತಿಥಿ(Death Anniversary) ಇಂದು. ಲಾಲ್​ ಬಹದ್ದೂರ್ ಶಾಸ್ತ್ರಿ 1966ರ ಜನವರಿ 11ರಂದು ಉಜ್ಬೆಕಿಸ್ತಾನ್​​ದ ತಾಷ್ಕೆಂಟ್​​ನಲ್ಲಿ ನಿಧನರಾಗಿದ್ದಾರೆ. ಲಾಲ್​ ಬಹದ್ದೂರ್​ ಶಾಸ್ತ್ರಿಯವರು ಜವಾಹರ್​ ಲಾಲ್​ ನೆಹರೂ ಬಳಿಕ ದೇಶದ ಪ್ರಧಾನಿ ಹುದ್ದೆಗೆ ಏರಿದವರು. ಅಂದರೆ ಭಾರತದ ಎರಡನೇ ಪ್ರಧಾನಿ. ಸರಳತೆ ಮತ್ತು ಪ್ರಾಮಾಣಿಕತೆಗೆ ಹೆಸರಾದವರು. ಅವರಿಗೆ ಮರಣೋತ್ತರ ಭಾರತ ರತ್ನ ನೀಡಿ ಗೌರವಿಸಲಾಗಿದೆ. ಹೀಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಪಡೆದ ಮೊದಲಿಗರು ಇವರು. 

ಲಾಲ್​ ಬಹದ್ದೂರ್​ ಶಾಸ್ತ್ರಿ ಹುಟ್ಟಿದ್ದು 1904ರ ಅಕ್ಟೋಬರ್​ 2ರಂದು ಜನಿಸಿದ್ದಾರೆ. ಮಹಾತ್ಮಾ ಗಾಂಧೀಜಿಯವರ ಜನ್ಮದಿನದಂದೇ ಅವರ ಹುಟ್ಟುಹಬ್ಬವನ್ನೂ ದೇಶಾದ್ಯಂತ ಆಚರಿಸಲಾಗುತ್ತದೆ. ಗಾಂಧಿ ಹುಟ್ಟಿ 35ವರ್ಷಗಳ ಬಳಿಕ ಜನಿಸಿದ ಶಾಸ್ತ್ರಿ, ನಂತರದ ದಿನಗಳಲ್ಲಿ ಮಹಾತ್ಮ ಗಾಂಧಿಯವರ ಕಟ್ಟಾ ಅನುಯಾಯಿ ಆದರು. ರಾಜಕೀಯ ಜೀವನದಲ್ಲಿ ಪ್ರಮುಖ ಖಾತೆಗಳನ್ನು ಹೊಂದಿದ್ದ ಅವರು, 1964ರ ಜೂನ್​​ನಿಂದ 1966ರ ಜನವರಿ ವರೆಗೆ ದೇಶದ ಪ್ರಧಾನಿಯಾಗಿದ್ದರು. ಭಾರತದ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಜೈ ಜವಾನ್​, ಜೈ ಕಿಸಾನ್ ಎಂಬ ಘೋಷವಾಕ್ಯದ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಹೊಳಹು ನೀಡಿದವರು. ಆದರೆ ಇವರ ಸಾವಿನ ಸುತ್ತ ಇರುವ ಅನುಮಾನಗಳು ಮಾತ್ರ ಇಂದಿಗೂ ಬಗೆಹರಿದಿಲ್ಲ.

1965ರಲ್ಲಿ ಭಾರತ-ಪಾಕ್​ ಯುದ್ಧ ನಡೆದಿತ್ತು. ಅದರ ಬೆನ್ನಲ್ಲೇ 1966ರ ಜನವರಿ 10ರಂದು ಅವರು ತಾಷ್ಕೆಂಟ್​ಗೆ ತೆರಳಿದ್ದರು. ಪಾಕಿಸ್ತಾನದ ಅಂದಿನ ಅಧ್ಯಕ್ಷ ಅಯೂಬ್​ ಖಾನ್​ರೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಸಂಬಂಧ ಅಲ್ಲಿಗೆ ತೆರಳಿದ್ದರು. ಆದರೆ ಅಯೂಬ್​ ಖಾನ್​​ರನ್ನು ಭೇಟಿಯಾಗಿ ಒಂದೇ ತಾಸಿನಲ್ಲಿ ನಿಧನರಾದರು. ಈ ಸಾವು ಇಂದಿಗೂ ನಿಗೂಢವೇ ಆಗಿದೆ. ಶಾಸ್ತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದೇ ಹೇಳಲಾಯಿತಾದರೂ ಕೆಲವು ಅನುಮಾನಗಳಿಗೆ ಇವತ್ತಿಗೂ ಉತ್ತರ ಸಿಕ್ಕಿಲ್ಲ. ಅಂದು ಲಾಲ್ ಬಹದ್ದೂರ್ ಶಾಸ್ತ್ರಿ ಮೃತದೇಹದ ಮುಖ ಮತ್ತು ಇಡೀ ದೇಹ ನೀಲಿ ಬಣ್ಣಕ್ಕೆ ತಿರುಗಿತ್ತು.  ಹೊಟ್ಟೆ, ಬೆನ್ನು, ಕುತ್ತಿಗೆಯ ಮೇಲೆ ಕತ್ತರಿಸಿದ ಗುರುತು ಹಾಗೂ ಬಿಳಿ ಕಲೆಗಳು ಇದ್ದವು ಎಂದು ಕುಟುಂಬದ ಸದಸ್ಯರೇ ಹೇಳಿದ್ದಾರೆ.  ಶಾಸ್ತ್ರಿ ಸಾವಿನ ತನಿಖೆ ಸಂಬಂಧಪಟ್ಟ ಯಾವುದೇ ದಾಖಲೆ ಪಾರ್ಲಿಮೆಂಟ್​ ಲೈಬ್ರರಿಯಲ್ಲೂ ಇಲ್ಲ.  ಹಾಗಾಗಿ ಇಂದಿಗೂ ಅವರ ಸಾವು ನಿಗೂಢ.

ಲಾಲ್​ ಬಹದ್ದೂರ್​ ಶಾಸ್ತ್ರಿ ಬಗೆಗಿನ ಒಂದಷ್ಟು ವಿಚಾರಗಳು ಇಲ್ಲಿವೆ..

1. ಲಾಲ್​ ಬಹದ್ದೂರ್ ಶಾಸ್ತ್ರಿ ಹುಟ್ಟಿದ್ದು ಉತ್ತರಪ್ರದೇಶದ ಮುಘಲ್ಸರಾಯ್​ ಎಂಬಲ್ಲಿ. ಅವರು ಒಂದೂವರೆ ವರ್ಷದಲ್ಲಿದ್ದಾಗಲೇ ತಂದೆಯನ್ನು ಕಳೆದುಕೊಂಡು, ಅಮ್ಮನ ಮಡಿಲಲ್ಲೇ ಬೆಳೆದವರು.  ವಿದ್ಯಾಭ್ಯಾಸವನ್ನು ವಾರಾಣಸಿಯಲ್ಲಿ ಮಾಡಿದ್ದಾರೆ. 2. ಬೆಳೆಯುತ್ತಲೇ ಗಾಂಧಿಯವರ ಅನುಯಾಯಿಯಾಗಿದ್ದ ಅವರು, 16 ವರ್ಷದಲ್ಲಿದ್ದಾಗ ಮಹಾತ್ಮ ಗಾಂಧಿ ಕರೆಗೆ ಓಗುಟ್ಟು ಅಸಹಕಾರ ಚಳವಳಿಯಲ್ಲಿ ಪಾಲ್ಗೊಂಡರು. 3. ಶಾಸ್ತ್ರಿ ನಂತರ ವಾರಾಣಸಿಯ ಕಾಶಿ ವಿದ್ಯಾಪೀಠವನ್ನು ಸೇರಿದರು ಮತ್ತು ಹಲವಾರು ರಾಷ್ಟ್ರೀಯವಾದಿಗಳು ಮತ್ತು ಬುದ್ಧಿಜೀವಿಗಳ ಪ್ರಭಾವಕ್ಕೆ ಒಳಗಾದರು. ನಿಜ ಹೇಳಬೇಕು ಎಂದರೆ ಶಾಸ್ತ್ರಿ ಎಂಬುದು ಅವರಿಗೆ ಶಿಕ್ಷಣ ಸಂಸ್ಥೆಯಿಂದ ಸಿಕ್ಕ ಬ್ಯಾಚುಲರ್​ ಪದವಿ. ಆದರೆ ನಂತರದ ದಿನಗಳಲ್ಲಿ ಅವರ ಹೆಸರಿನ ಭಾಗವಾಗಿಯೇ ಸಾರ್ವಜನಿಕರಿಗೆ ಚಿರಪರಿಚಿತವಾಯಿತು. 4. 1946ರಲ್ಲಿ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಶಾಸ್ತ್ರಿಯವರನ್ನು ಸಂಸದೀಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಯಿತು. 5. ಇವರು 1951ರಲ್ಲಿ ದೆಹಲಿಗೆ ತೆರಳಿದರು. ಕೇಂದ್ರ ಸರ್ಕಾರದ ಸಂಪುಟದಲ್ಲಿ ಹಲವು ಪ್ರಮುಖ ಇಲಾಖೆಗಳನ್ನು ನಿಭಾಯಿಸಿದ್ದರು. ರೈಲ್ವೆ, ಸಾರಿಗೆ ಮತ್ತು ಸಂವಹನ ಹಾಗೂ ವಾಣಿಜ್ಯ ಮತ್ತು ಉದ್ಯಮ ಇಲಾಖೆಗಳಂಥ ಮಹತ್ವದ ಸಚಿವಾಲಯಗಳ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 6. ಶಾಸ್ತ್ರಿ ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ರೈಲು ದುರಂತವೊಂದು ಸಂಭವಿಸಿ ಅನೇಕರು ಪ್ರಾಣಕಳೆದುಕೊಂಡರು. ಅದರ ಬೆನ್ನಲ್ಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅದಾದ ಬಳಿಕ 1964ರಲ್ಲಿ ನೆಹರೂ ಮರಣದ ನಂತರ ಭಾರತದ ಪ್ರಧಾನಿಯಾಗಿ ಹುದ್ದೆಗೇರಿದರು.  ದೇಶದ ಆಹಾರ ಮತ್ತು ಡೇರಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಅವರು ಹಸಿರು ಕ್ರಾಂತಿ ಮತ್ತು ಶ್ವೇತ ಕ್ರಾಂತಿಯನ್ನು ಉತ್ತೇಜಿಸಿದ್ದರು.

ಇದನ್ನೂ ಓದಿ: ಚಿತ್ರರಂಗದ ಅನಿಶ್ಚಿತತೆ ನಡುವೆ ಹೊಸ ಸಾಹಸಕ್ಕೆ ಮುಂದಾ ಅಕ್ಕಿನೇನಿ ನಾಗಾರ್ಜುನ-ನಾಗ ಚೈತನ್ಯ

Published On - 9:47 am, Tue, 11 January 22

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!