AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಶಿ ವಿಶ್ವನಾಥ ಧಾಮ ನವೀಕರಣಕ್ಕೆ ಶ್ರಮಿಸುತ್ತಿರುವ ಕಾರ್ಮಿಕರಿಗೆ ಪಾದರಕ್ಷೆ ಕಳಿಸಿದ ಪ್ರಧಾನಿ ಮೋದಿ; ಇದರ ಹಿಂದಿದೆ ಸೂಕ್ಷ್ಮ ಕಾರಣ

2019ರಲ್ಲಿ ಪ್ರಯಾಗ್​ರಾಜ್​​ನಲ್ಲಿ ನಡೆದಿದ್ದ ಕುಂಭಮೇಳದ ವೇಳೆ, ಪ್ರಧಾನಿ ಮೋದಿ ಪೌರ ಕಾರ್ಮಿಕರ ಪಾದಪೂಜೆ ಮಾಡಿ, ನಂತರ ಅವರನ್ನು ಸನ್ಮಾನಿಸಿದ್ದರು. ಇತ್ತೀಚೆಗೆ ಕಾಶಿ ವಿಶ್ವನಾಥ ಧಾಮ ಕಾರಿಡಾರ್​ ಉದ್ಘಾಟನೆ ಮಾಡಲು ಹೋಗಿದ್ದಾಗ, ಅದರ ನಿರ್ಮಾಣ ಮಾಡಿದ್ದ ಕಾರ್ಮಿಕರೊಟ್ಟಿಗೆ ಕುಳಿತು ಊಟ ಮಾಡಿದ್ದರು.

ಕಾಶಿ ವಿಶ್ವನಾಥ ಧಾಮ ನವೀಕರಣಕ್ಕೆ ಶ್ರಮಿಸುತ್ತಿರುವ ಕಾರ್ಮಿಕರಿಗೆ ಪಾದರಕ್ಷೆ ಕಳಿಸಿದ ಪ್ರಧಾನಿ ಮೋದಿ; ಇದರ ಹಿಂದಿದೆ ಸೂಕ್ಷ್ಮ ಕಾರಣ
ಕಾರ್ಮಿಕರಿಗೆ ಪಾದರಕ್ಷೆ ಕಳಿಸಿದ ಪ್ರಧಾನಿ ಮೋದಿ
TV9 Web
| Updated By: Lakshmi Hegde|

Updated on:Jan 10, 2022 | 12:16 PM

Share

ಕಾಶಿ ವಿಶ್ವನಾಥ ಧಾಮ ಕಾರಿಡಾರ್(Kashi Vishwanath Dham corridor)​ ಮೊದಲ ಹಂತವನ್ನು ಇತ್ತೀಚೆಗಷ್ಟೇ ಪ್ರಧಾನಿ ಮೋದಿ (PM Modi) ಉದ್ಘಾಟನೆ ಮಾಡಿದ್ದಾರೆ. ವಾರಾಣಸಿಯಲ್ಲಿ ಕಾಶಿ ದೇಗುಲ ನವೀಕರಣದ ಬಗ್ಗೆ ವಿಶೇಷ ಆಸಕ್ತಿ, ಆಸ್ಥೆ ವಹಿಸಿರುವ ಪಿಎಂ ಮೋದಿ ಪುರಾತನ ನಗರ ಮತ್ತು ವಿಶ್ವನಾಥ ದೇವಾಲಯದ ವೈಭವ ಮತ್ತೆ ಮಾರ್ದನಿಸುವಂತೆ ಮಾಡಿದ್ದಾರೆ. ಅಲ್ಲಿ ಇನ್ನೂ ಕೂಡ ಕೆಲಸ ನಡೆಯುತ್ತಿದೆ. ಆದರೆ ಈ ಮಧ್ಯೆ ಒಂದು ಸೂಕ್ಷ್ಮ ವಿಷಯವನ್ನು ಗಮನಿಸಿದ ಪ್ರಧಾನಿ ಮೋದಿ, ಮಹತ್ವದ ಕೆಲಸ ಮಾಡಿದ್ದಾರೆ.

ಕಾಶಿ ವಿಶ್ವನಾಥ ದೇಗುಲದ ಆವರಣದಲ್ಲಿ ಯಾರೊಬ್ಬರೂ ರಬ್ಬರ್​ ಅಥವಾ ಚರ್ಮದ ಪಾದರಕ್ಷೆ (ಚಪ್ಪಲಿ)ಯನ್ನು ಧರಿಸುವಂತಿಲ್ಲ. ಅರ್ಚಕರಾಗಲಿ, ದೇವರ ದರ್ಶನಕ್ಕೆ ಹೋಗುವ ಭಕ್ತರಾಗಲಿ, ಭದ್ರತಾ ಸಿಬ್ಬಂದಿಯೇ ಆಗಲಿ ಅಥವಾ ಸ್ವಚ್ಛತೆಗಾಗಿ ಹೋಗುವವರೇ ಆಗಲಿ, ಯಾರೂ ಸಹ ಪಾದರಕ್ಷೆ  ಧರಿಸಿ ದೇಗುಲದ ಆವರಣದೊಳಗೆ ಕಾಲಿಡಬಾರದು. ಹೀಗಾಗಿ ಅಲ್ಲಿ ಅಭಿವೃದ್ಧಿ ಕಾರ್ಯ ಮಾಡುತ್ತಿರುವ ಕಾರ್ಮಿಕರು ಬರಿಗಾಲಿನಲ್ಲಿಯೇ  ಕೆಲಸ ಮಾಡುತ್ತಿದ್ದಾರೆ. ಇದನ್ನು ಗಮನಿಸಿ, ಅವರ ಕಷ್ಟವನ್ನು ಅರ್ಥ ಮಾಡಿಕೊಂಡ ಪ್ರಧಾನಿ ಸುಮಾರು 100 ಜೊತೆ ಸೆಣಬಿನ ಪಾದರಕ್ಷೆಗಳನ್ನು ಕಾರ್ಮಿಕರಿಗಾಗಿ ಕಳಿಸಿಕೊಟ್ಟಿದ್ದಾರೆ.  ಈಗ ವಿಪರೀತ ಚಳಿ ಬೀಳುತ್ತಿದೆ. ಅದರಲ್ಲೂ ನಿರ್ಮಾಣ ಕಾಮಗಾರಿಗಳನ್ನು ಪಾದರಕ್ಷೆ ಇಲ್ಲದೆ ಮಾಡುವುದು ತುಸು ಕಷ್ಟವೂ ಹೌದು. ಇದನ್ನೆಲ್ಲ ಗಮನಿಸಿದ ದೇಶದ ಪ್ರಧಾನಮಂತ್ರಿ 100 ಜೊತೆ ಸೆಣಬಿನ ಪಾದರಕ್ಷೆ ಕಳಿಸಿಕೊಟ್ಟಿದ್ದಾರೆ. ಈ ಮೂಲಕ ತಾವು ಪ್ರಧಾನಮಂತ್ರಿಯಲ್ಲ, ಪ್ರಧಾನ ಸೇವಕ ಎಂಬುದನ್ನು ಮತ್ತೊಮ್ಮೆ ಸಾಕ್ಷೀಕರಿಸಿದ್ದಾರೆ. ಪ್ರಧಾನಿ ಕಳಿಸಿಕೊಟ್ಟ ಪಾದರಕ್ಷೆ ನೋಡಿ, ಅಲ್ಲಿನ ಕಾರ್ಮಿಕರು ಸಿಕ್ಕಾಪಟೆ ಸಂತೋಷ ವ್ಯಕ್ತಪಡಿಸಿದ್ದಾರೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

Footwear

ಪಾದರಕ್ಷೆ ಧರಿಸಿರುವ ಕಾರ್ಮಿಕರು

ಪ್ರಧಾನಮಂತ್ರಿ ನರೇಂದ್ರ ಮೋದಿ ಬಡವರಿಗಾಗಿ ಅದೆಷ್ಟೋ ಅಭಿವೃದ್ಧಿ ಯೋಜನೆಗಳನ್ನು ತಂದಿದ್ದಾರೆ. ತಳಮಟ್ಟದ ವರ್ಗವೆಂದರೆ ಅದೇನೋ ಪ್ರೀತಿ ಅವರಿಗೆ. ಈ ಹಿಂದೆ 2019ರಲ್ಲಿ ಪ್ರಯಾಗ್​ರಾಜ್​​ನಲ್ಲಿ ನಡೆದಿದ್ದ ಕುಂಭಮೇಳದ ವೇಳೆ, ಪ್ರಧಾನಿ ಮೋದಿ ಪೌರ ಕಾರ್ಮಿಕರ ಪಾದಪೂಜೆ ಮಾಡಿ, ನಂತರ ಅವರನ್ನು ಸನ್ಮಾನಿಸಿದ್ದರು. ಇತ್ತೀಚೆಗೆ ಕಾಶಿ ವಿಶ್ವನಾಥ ಧಾಮ ಕಾರಿಡಾರ್​ ಉದ್ಘಾಟನೆ ಮಾಡಲು ಹೋಗಿದ್ದಾಗ, ಅದರ ನಿರ್ಮಾಣ ಮಾಡಿದ್ದ ಕಾರ್ಮಿಕರೊಟ್ಟಿಗೆ ಕುಳಿತು ಊಟ ಮಾಡಿದ್ದರು. ಅಷ್ಟೇ ಅಲ್ಲ, ಅವರನ್ನೆಲ್ಲ ಒಂದೆಡೆ ಕೂರಿಸಿಕೊಂಡು ಪ್ರತಿಯೊಬ್ಬರ ಬಳಿಯೂ ಹೋಗಿ, ಅವರ ಮೇಲೆ ಗುಲಾಬಿ ಹೂವುಗಳ ಎಸಳುಗಳನ್ನು ಚೆಲ್ಲುವ ಮೂಲಕ ಗೌರವ ಸಲ್ಲಿಸಿದ್ದರು.

ಇದನ್ನೂ ಓದಿ: Novak Djokovic: ಜೊಕೊವಿಕ್‌ ಗಡಿಪಾರು ತೀರ್ಪಿಗೆ ಆಸ್ಟ್ರೇಲಿಯಾ ನ್ಯಾಯಾಧೀಶರಿಂದ ಮಧ್ಯಂತರ ತಡೆಯಾಜ್ಞೆ

Published On - 12:09 pm, Mon, 10 January 22

Daily Devotional: ಮಕ್ಕಳಿಗೆ ಬಾಲಾರಿಷ್ಟ ದೋಷಕ್ಕೆ ಪರಿಹಾರ ತಿಳಿಯಿರಿ
Daily Devotional: ಮಕ್ಕಳಿಗೆ ಬಾಲಾರಿಷ್ಟ ದೋಷಕ್ಕೆ ಪರಿಹಾರ ತಿಳಿಯಿರಿ
Daily horoscope: ಹಿಂಜರಿಕೆಯಿಂದ ನಿಮಗೆ ಒಳ್ಳೆಯದೇ ಆಗಲಿದೆ
Daily horoscope: ಹಿಂಜರಿಕೆಯಿಂದ ನಿಮಗೆ ಒಳ್ಳೆಯದೇ ಆಗಲಿದೆ
ವಿದ್ಯುತ್​ ದೀಪಾಲಂಕಾರ ನೋಡುತ್ತ ಮೈಸೂರು ಅರಮನೆಗೆ ಬಂದ ದಸರಾ ಆನೆಗಳು
ವಿದ್ಯುತ್​ ದೀಪಾಲಂಕಾರ ನೋಡುತ್ತ ಮೈಸೂರು ಅರಮನೆಗೆ ಬಂದ ದಸರಾ ಆನೆಗಳು
ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ರೂ.: ಯತ್ನಾಳ್
ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ರೂ.: ಯತ್ನಾಳ್
ಮೋದಿ ತೆರಳುತ್ತಿದ್ದ ವೇಳೆ ಬ್ಯಾರಿಕೇಡ್​ ಜಂಪ್ ಮಾಡಲು ಯತ್ನಿಸಿದ ಯುವಕ
ಮೋದಿ ತೆರಳುತ್ತಿದ್ದ ವೇಳೆ ಬ್ಯಾರಿಕೇಡ್​ ಜಂಪ್ ಮಾಡಲು ಯತ್ನಿಸಿದ ಯುವಕ
8 ಸಿಕ್ಸರ್, 83 ರನ್; ಟಿಮ್ ಡೇವಿಡ್ ಸಿಡಿಲಬ್ಬರದ ಬ್ಯಾಟಿಂಗ್‌
8 ಸಿಕ್ಸರ್, 83 ರನ್; ಟಿಮ್ ಡೇವಿಡ್ ಸಿಡಿಲಬ್ಬರದ ಬ್ಯಾಟಿಂಗ್‌
‘ಸನ್ ಆಫ್ ಮುತ್ತಣ್ಣ’ ಸಿನಿಮಾದ ಬಗ್ಗೆ ನಟ ರಂಗಾಯಣ ರಘು ಮಾತು
‘ಸನ್ ಆಫ್ ಮುತ್ತಣ್ಣ’ ಸಿನಿಮಾದ ಬಗ್ಗೆ ನಟ ರಂಗಾಯಣ ರಘು ಮಾತು
ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾಗೆ ಮುಹೂರ್ತ; ಜೋಡಿಯಾದ ಬೃಂದಾ ಆಚಾರ್ಯ
ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾಗೆ ಮುಹೂರ್ತ; ಜೋಡಿಯಾದ ಬೃಂದಾ ಆಚಾರ್ಯ
2014ರಿಂದ ಕರ್ನಾಟಕ ರೈಲ್ವೆ ಬಜೆಟ್​ನಲ್ಲಿ 9 ಪಟ್ಟು ಹೆಚ್ಚಳ: ಅಶ್ವಿನಿ
2014ರಿಂದ ಕರ್ನಾಟಕ ರೈಲ್ವೆ ಬಜೆಟ್​ನಲ್ಲಿ 9 ಪಟ್ಟು ಹೆಚ್ಚಳ: ಅಶ್ವಿನಿ
ಹಳದಿ ಮಾರ್ಗಕ್ಕೆ ಚಾಲನೆ ನೀಡಿ ಮೆಟ್ರೋದಲ್ಲಿ ಮೋದಿ ಪ್ರಯಾಣ: ವಿಡಿಯೋ ನೋಡಿ
ಹಳದಿ ಮಾರ್ಗಕ್ಕೆ ಚಾಲನೆ ನೀಡಿ ಮೆಟ್ರೋದಲ್ಲಿ ಮೋದಿ ಪ್ರಯಾಣ: ವಿಡಿಯೋ ನೋಡಿ