Novak Djokovic: ಜೊಕೊವಿಕ್‌ ಗಡಿಪಾರು ತೀರ್ಪಿಗೆ ಆಸ್ಟ್ರೇಲಿಯಾ ನ್ಯಾಯಾಧೀಶರಿಂದ ಮಧ್ಯಂತರ ತಡೆಯಾಜ್ಞೆ

ನೊವಾಕ್‌ ಜೊಕೊವಿಕ್‌ ಗಡಿಪಾರು ತೀರ್ಪಿಗೆ ಆಸ್ಟ್ರೇಲಿಯಾ ನ್ಯಾಯಾಧೀಶರು ಮಧ್ಯಂತರ ತಡೆಯಾಜ್ಞೆ ನೀಡಿದ್ದಾರೆ. ಗಡಿಪಾರು ಗಡುವು ತಾತ್ಕಾಲಿಕವಾಗಿ ಮುಂದೂಡಿಕೆಯಾಗಿದೆ.

Novak Djokovic: ಜೊಕೊವಿಕ್‌ ಗಡಿಪಾರು ತೀರ್ಪಿಗೆ ಆಸ್ಟ್ರೇಲಿಯಾ ನ್ಯಾಯಾಧೀಶರಿಂದ ಮಧ್ಯಂತರ ತಡೆಯಾಜ್ಞೆ
Novak Djokovic
Follow us
TV9 Web
| Updated By: Vinay Bhat

Updated on: Jan 10, 2022 | 11:50 AM

ಟೆನಿಸ್​ ಲೋಕದ ನಂ.1 ಆಟಗಾರ ಸರ್ಬಿಯಾದ ನೊವಾಕ್‌ ಜೊಕೊವಿಕ್‌ (Novak Djokovic) ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿ ಆಡಲು ಹೋಗಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಕೋವಿಡ್‌-19 (Covid 19) ಕಾರಣ ಆಸ್ಟ್ರೇಲಿಯಾದಲ್ಲಿ ಕಟ್ಟು ನಿಟ್ಟಿನ ನಿಯಮಗಳು ಜಾರಿಯಲ್ಲಿವೆ. ಈ ಹಿನ್ನೆಲೆಯಲ್ಲಿ ನೊವಾಕ್‌ ಜೊಕೊವಿಕ್‌ ಸರಿಯಾದ ದಾಖಲಾತಿಗಳನ್ನು ಒದಗಿಸುವಲ್ಲಿ ವಿಫಲರಾದ ಕಾರಣ ಅವರ ವೀಸಾ ತಿರಸ್ಕರಿಸಲಾಗಿದೆ. ಇದರ ವಿಚಾರಣೆಯನ್ನು ಆಸ್ಟ್ರೇಲಿಯಾ ನ್ಯಾಯಾಲಯ ಸೋಮವಾರ ಕೈಗೆತ್ತಿಕೊಂಡಿದ್ದು, ಮೆಲ್ಬರ್ನ್​ನಲ್ಲಿ ಕೋರ್ಟ್ (Melbourne Court) ಕೇಸ್ ನಡೆಯುತ್ತಿದೆ. ಸದ್ಯಕ್ಕೆ ನೊವಾಕ್‌ ಜೊಕೊವಿಕ್‌ ಗಡಿಪಾರು ತೀರ್ಪಿಗೆ ಆಸ್ಟ್ರೇಲಿಯಾ ನ್ಯಾಯಾಧೀಶರು ಮಧ್ಯಂತರ ತಡೆಯಾಜ್ಞೆ ನೀಡಿದ್ದಾರೆ. ಗಡಿಪಾರು ಗಡುವು ತಾತ್ಕಾಲಿಕವಾಗಿ ಮುಂದೂಡಿಕೆಯಾಗಿದೆ.

ಕೋವಿಡ್‌–19ಕ್ಕೆ ಸಂಬಂಧಿಸಿದ ಲಸಿಕೆ ಹಾಕಿಸುವುದರಿಂದ ವಿನಾಯಿತಿ ಲಭಿಸಿದರೂ ದೇಶದೊಳಗೆ ಪ್ರವೇಶಕ್ಕೆ ನಿರ್ಬಂಧ ಇಲ್ಲ ಎಂದು ಟೆನಿಸ್ ಆಟಗಾರ ನೊವಾಕ್ ಜೊಕೊವಿಚ್ ಅವರಿಗೆ ಭರವಸೆ ನೀಡಿರಲಿಲ್ಲ ಎಂದು ಆಸ್ಟ್ರೇಲಿಯಾ ಭಾನುವಾರ ತಿಳಿಸಿದ್ದು ಹೊಸ ಬೆಳವಣಿಗೆಗೆ ಕಾರಣವಾಗಿದೆ.

ಏನಿದು ಪ್ರಕರಣ?:

ಆಸ್ಟ್ರೇಲಿಯನ್‌ ಓಪನ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂಬ ನಿರ್ಬಂಧವಿದೆ. ಆದರೆ ವಿಶ್ವದ ಒಂದನೇ ನಂಬರ್ ಆಟಗಾರ, ಸರ್ಬಿಯಾದ ನೊವಾಕ್ ಜೊಕೊವಿಚ್ ಲಸಿಕೆ ಹಾಕಿಸಿಕೊಳ್ಳಲು ಸಿದ್ಧ ಇರಲಿಲ್ಲ. ಟೂರ್ನಿಯಲ್ಲಿ ಆಡಲು ಅವರಿಗೆ ವೈದ್ಯಕೀಯ ತಂಡ ವಿನಾಯಿತಿ ನೀಡಿತ್ತು. ಆದರೆ ದೇಶಕ್ಕೆ ಕಾಲಿಡುತ್ತಿದ್ದಂತೆ ಅವರನ್ನು ವಶಕ್ಕೆ ಪಡೆದುಕೊಂಡಿದ್ದ ಅಧಿಕಾರಿಗಳು ವಿಸಾ ರದ್ದುಮಾಡಿ ಪಾರ್ಕ್‌ ಹೋಟೆಲ್‌ನಲ್ಲಿ ಇರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜೊಕೊವಿಚ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇಂದು ಈ ಬಗ್ಗೆ ವಿಚಾರಣೆ ನಡೆಯುತ್ತಿದ್ದು, ಜೊಕೊವಿಕ್‌ ಅವರ ಗಡಿಪಾರು ಪ್ರಕ್ರಿಯೆಯನ್ನು ಸದ್ಯಕ್ಕೆ ಮುಂಡೂಡಲಾಗಿದೆ.

ಈಗಾಗಲೇ ಜೊಕೊವಿಚ್ ಅವರ ವಿಸಾವನ್ನು ರದ್ದು ಮಾಡಲಾಗಿದೆ. ಆಸ್ಟ್ರೇಲಿಯಾದ ಅಧಿಕಾರಿಗಳು ಇದನ್ನು ಪುನರ್‌ಪರಿಶೀಲಿಸದೇ ಇದ್ದರೆ ಅಥವಾ ‍ಪೂರಕ ದಾಖಲೆಗಳನ್ನು ಸಲ್ಲಿಸದೇ ಇದ್ದರೆ ಈ ಬಾರಿಯ ಆಸ್ಟ್ರೇಲಿಯನ್ ಓಪನ್‌ ಟೂರ್ನಿಯಲ್ಲಿ ಆಡಲು ಅವಕಾಶ ಇರುವುದಿಲ್ಲ. ಕೋವಿಡ್‌ ನಿಯಮಗಳ ಪ್ರಕಾರ 3 ಆವೃತ್ತಿಗಳಲ್ಲಿ ಆಡುವ ಅಕವಾಶ ಕಳೆದುಕೊಳ್ಳಲಿದ್ದಾರೆ. ಇದರ ಬೆನ್ನಲ್ಲೇ ಜೊಕೊವಿಚ್ ಆಸ್ಟ್ರೇಲಿಯಾ ಅಧಿಕಾರಿಗಳ ಕ್ರಮದ ವಿರುದ್ಧ ಸವಾಲು ಹಾಕಿದ್ದಾರೆ. ಟೂರ್ನಿಯ ಆಯೋಜಕರು ತಮಗೆ ಡಿಸೆಂಬರ್ 30ರಂದು ಹಸಿರು ನಿಶಾನೆ ನೀಡಿರುವ ಹಿನ್ನೆಲೆಯಲ್ಲಿ ಇಲ್ಲಿಗೆ ಬಂದಿರುವುದಾಗಿ ತಿಳಿಸಿದ್ದಾರೆ.

ವಿಶ್ವದ ನಂ.1 ಆಟಗಾರ ಹಾಗೂ ಆಸ್ಟ್ರೇಲಿಯನ್‌ ಓಪನ್‌ ಟೂರ್ನಿಯಲ್ಲಿ ದಾಖಲೆಯ 9 ಬಾರಿ ಟ್ರೋಫಿ ಗೆದ್ದಿರುವ ನೊವಾಕ್‌ಗೆ ಕೋವಿಡ್‌-19 ಲಸಿಕೆ ಪಡೆಯದೇ ಇದ್ದರೂ ವೈದ್ಯಕೀಯ ಕಾರಣ ಹಿನ್ನೆಲೆಯಲ್ಲಿ ಟೂರ್ನಿಗೆ ಪ್ರವೇಶ ಲಭ್ಯವಾಗಿತ್ತು. ಆದರೆ, ವೈದ್ಯಕೀಯ ಕಾರಣ ಕೊಟ್ಟು ಪಡೆಯಬೇಕಾದ ವೀಸಾ ತೆಗೆದುಕೊಳ್ಳದೇ ಇದ್ದ ಕಾರಣ ಈ ಗೊಂದಲಕ್ಕೆ ಸಿಲುಕಿದ್ದಾರೆ. ಆಸ್ಟ್ರೇಲಿಯಾದಲ್ಲಿ ಲಸಿಕೆಗಳಿಗೆ ಬಹಳ ಒತ್ತು ಕೊಡಲಾಗಿದೆ. ಅಲ್ಲಿನ ಬಹುತೇಕ ರಾಜ್ಯಗಳಲ್ಲಿ 12 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಬಹುತೇಕರು ಲಸಿಕೆ ಹಾಕಿಸಿಕೊಂಡಿದ್ದಾರೆ. ಅಂಥ ಆಸ್ಟ್ರೇಲಿಯಾ ದೇಶದಲ್ಲಿ ನಿಂತು ಲಸಿಕೆ ವಿರುದ್ಧ ಜೋಕೊವಿಚ್ ಮಾತನಾಡುತ್ತಿದ್ದಾರೆ ಎಂಬುದು ಅಲ್ಲಿನ ಸರ್ಕಾರದಲ್ಲಿರುವವರ ಆಕ್ರೋಶ.

Virat Kohli: ಕೋಚ್ ದ್ರಾವಿಡ್ ದಾಖಲೆಯನ್ನು ಪುಡಿ ಮಾಡಲು ಹೊರಟ ವಿರಾಟ್ ಕೊಹ್ಲಿ

India Playing XI: ಕ್ಲೈಮ್ಯಾಕ್ಸ್ ಕದನಕ್ಕೆ ಎರಡು ಪ್ರಮುಖ ಬದಲಾವಣೆ: ಭಾರತದ ಸಂಭಾವ್ಯ ಪ್ಲೇಯಿಂಗ್ XI ಇಲ್ಲಿದೆ