AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ISL: 3-0 ಗೋಲುಗಳ ಅಂತರದಿಂದ ಹಾಲಿ ಚಾಂಪಿಯನ್ ಮುಂಬೈ ತಂಡಕ್ಕೆ ಸೋಲುಣಿಸಿದ ಬೆಂಗಳೂರು ಎಫ್‌ಸಿ

ISL: ಬೆಂಗಳೂರು ಎಫ್‌ಸಿ ಸೋಮವಾರ ನಡೆದ ಇಂಡಿಯನ್ ಸೂಪರ್ ಲೀಗ್ (ISL)ನಲ್ಲಿ ಪ್ರಸಕ್ತ ಚಾಂಪಿಯನ್ ಮುಂಬೈ ಸಿಟಿ ಎಫ್‌ಸಿಯನ್ನು ಏಕಪಕ್ಷೀಯ ಪಂದ್ಯದಲ್ಲಿ 3-0 ಗೋಲುಗಳಿಂದ ಸೋಲಿಸಿತು.

ISL: 3-0 ಗೋಲುಗಳ ಅಂತರದಿಂದ ಹಾಲಿ ಚಾಂಪಿಯನ್ ಮುಂಬೈ ತಂಡಕ್ಕೆ ಸೋಲುಣಿಸಿದ ಬೆಂಗಳೂರು ಎಫ್‌ಸಿ
ಬೆಂಗಳೂರು ಎಫ್‌ಸಿ
TV9 Web
| Updated By: ಪೃಥ್ವಿಶಂಕರ|

Updated on: Jan 10, 2022 | 10:22 PM

Share

ಬೆಂಗಳೂರು ಎಫ್‌ಸಿ ಸೋಮವಾರ ನಡೆದ ಇಂಡಿಯನ್ ಸೂಪರ್ ಲೀಗ್ (ISL)ನಲ್ಲಿ ಪ್ರಸಕ್ತ ಚಾಂಪಿಯನ್ ಮುಂಬೈ ಸಿಟಿ ಎಫ್‌ಸಿಯನ್ನು ಏಕಪಕ್ಷೀಯ ಪಂದ್ಯದಲ್ಲಿ 3-0 ಗೋಲುಗಳಿಂದ ಸೋಲಿಸಿತು. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರುವ ಮುಂಬೈನ ಕನಸು ಕೂಡ ಭಗ್ನಗೊಂಡಿತು. ಮುಂಬೈ ತಂಡ ಕಳೆದ ಐದು ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಮಾತ್ರ ಗೆಲ್ಲಲು ಶಕ್ತವಾಗಿದೆ. ಇಂದಿನ ಸೋಲು ಇಂಗ್ಲಿಷ್ ಕೋಚ್ ಡೆಸ್ ಬಕಿಂಗ್‌ಹ್ಯಾಮ್ ಮತ್ತು ಅವರ ತಂಡಕ್ಕೆ ನಿಜವಾಗಿಯೂ ನಿರಾಸೆ ತಂದಿದೆ. ಇಂದು ತಂಡಕ್ಕೆ ಸಂಪೂರ್ಣ ಹಿಡಿತದಿಂದ ಆಡಲು ಸಾಧ್ಯವಾಗಲಿಲ್ಲ. ಈ ಸೋಲಿನಿಂದಾಗಿ ಮುಂಬೈ ಐದು ಪಂದ್ಯಗಳಿಂದ ಗೆಲುವಿನಿಂದ ದೂರ ಉಳಿದಿದೆ.

ಬೆಂಗಳೂರು ಈ ಋತುವಿನ ಮೂರನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಏರಿದೆ. ಜರ್ಮನಿಯ ಕೋಚ್ ಮಾರ್ಕೊ ಪೆಝೋಲ್ಲಿ ಅವರ ಕೋಂಚಿಗ್​ನಲ್ಲಿ ಬೆಂಗಳೂರು 11 ಪಂದ್ಯಗಳಿಂದ 13 ಅಂಕಗಳನ್ನು ಗಳಿಸಿದೆ. ಅದೇ ವೇಳೆಗೆ ಮುಂಬೈ ನಾಲ್ಕನೇ ಸೋಲಿನಿಂದಾಗಿ ಮತ್ತೆ ಅಗ್ರಸ್ಥಾನಕ್ಕೇರಲು ಸಾಧ್ಯವಾಗದೆ ಎರಡನೇ ಸ್ಥಾನದಲ್ಲಿಯೇ ಉಳಿದಿದೆ. ಅವರು 11 ಪಂದ್ಯಗಳಿಂದ ಐದು ಗೆಲುವು ಮತ್ತು ಎರಡು ಡ್ರಾಗಳಿಂದ 17 ಅಂಕಗಳನ್ನು ಹೊಂದಿದ್ದಾರೆ. ಬೆಂಗಳೂರು ಪರ ಡ್ಯಾನಿಶ್ ಫಾರೂಕ್ ಒಂದು ಮತ್ತು ಪ್ರಿನ್ಸ್ ಇಬಾರಾ ಎರಡು ಗೋಲು ಗಳಿಸಿದರು.

ಆರಂಭದಿಂದಲೂ ಬೆಂಗಳೂರು ಮೇಲುಗೈ ಈ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಸಂಪೂರ್ಣ ಪ್ರಾಬಲ್ಯ ಮೆರೆಯಿತು. ಮುಂಬೈ ಆಟಗಾರರು ತಮ್ಮ ಶಾರ್ಟ್ ಪಾಸಿಂಗ್ ಆಟವನ್ನು ಆಡಲು ಅವಕಾಶ ನೀಡದ ಕೋಚ್ ಪೆಝೌಲಿ ಅವರ ಹೈ-ಪ್ರೆಸ್ಸಿಂಗ್ ಫುಟ್‌ಬಾಲ್ ಆಡುವ ತಂತ್ರವು ಪಂದ್ಯದುದ್ದಕ್ಕೂ ಯಶಸ್ವಿಯಾಗಿ ಮುಂದುವರೆಯಿತು. ದ್ವಿತೀಯಾರ್ಧದಲ್ಲೂ ಪದೇ ಪದೇ ದಾಳಿಗೆ ಒಳಗಾದ ಬೆಂಗಳೂರಿನ ಈ ಪರಿಣಾಮಕಾರಿ ತಂತ್ರಗಾರಿಕೆಯ ಮುಂದೆ ಮುಂಬೈ ಸಿಟಿಯ ರಕ್ಷಣಾ ವಿಭಾಗ ಸಂಪೂರ್ಣ ಒತ್ತಡಕ್ಕೆ ಸಿಲುಕಿತ್ತು. ಕಾಂಗೋಸ್ ಫಾರ್ವರ್ಡ್ ಇಬಾರಾ ಎರಡು ಗೋಲುಗಳನ್ನು ಗಳಿಸಿದರು ಮತ್ತು ರೈಟ್ ಬ್ಯಾಕ್ ರೋಶನ್ ನೌರೆಮ್ ಅದ್ಭುತ ಆಟದ ಮೂಲಕ ತಮ್ಮ ಛಾಪು ಮೂಡಿಸಿದರು. ದ್ವಿತೀಯಾರ್ಧದಲ್ಲಿ ಮುಂಬೈ ಕೆಲವು ಅವಕಾಶಗಳನ್ನು ಸೃಷ್ಟಿಸಲು ಹೆಣಗಾಡಿದರೂ, ಕೆಲವೊಮ್ಮೆ ಅದೃಷ್ಟ ಮತ್ತು ಕೆಲವೊಮ್ಮೆ ಬೆಂಗಳೂರು ಗೋಲ್‌ಕೀಪರ್ ಗುರುಪ್ರೀತ್ ಸಂಧು ಗೋಲ್‌ಪೋಸ್ಟ್‌ನ ನಡುವೆ ಬರುತ್ತಲೇ ಇದ್ದರು. ಹಾಗಾಗಿ ದ್ವಿತೀಯಾರ್ಧದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ.

ರಕ್ಷಣಾ ವಿಭಾಗ ಕಳಪೆಯಾಗಿ ಕೆಲಸ ಮಾಡಿದೆ ಮೊದಲಾರ್ಧದಲ್ಲಿ ಬೆಂಗಳೂರು ಅತ್ಯುತ್ತಮ ಫುಟ್ಬಾಲ್ ಆಡಲು ಆರಂಭಿಸಿತು. ನಂತರ ಮುಂಬೈ ಸಿಟಿಯ ರಕ್ಷಣಾ ವಿಭಾಗವು ಸಂಪೂರ್ಣ ಒತ್ತಡಕ್ಕೊಳಗಾಯಿತು . ಹೀಗಾಗಿ, ಬೆಂಗಳೂರು ತಂಡಕ್ಕೆ ಹಲವಾರು ಗೋಲು ಗಳಿಸುವ ಅವಕಾಶಗಳು ದೊರೆತವು. ಪ್ರಿನ್ಸ್ ಇಬಾರಾ ಎರಡು ಗೋಲು ಮತ್ತು ಡ್ಯಾನಿಶ್ ಫಾರೂಕ್ ಅವರ 1 ಗೋಲುಗಳಿಂದ ಬೆಂಗಳೂರನ್ನು 3-0ಯಿಂದ ಮುನ್ನಡೆ ಸಾಧಿಸುವಂತೆ ಮಾಡಿದರು.

ಖಾತೆ ತೆರೆದ ಡ್ಯಾನಿಶ್ ಪಂದ್ಯದ 8ನೇ ನಿಮಿಷದಲ್ಲಿ ಡ್ಯಾನಿಶ್ ಫಾರೂಕ್ ಮೊದಲ ಗೋಲು ಬಾರಿಸಿ ಬೆಂಗಳೂರು ಎಫ್‌ಸಿಗೆ 1-0 ಮುನ್ನಡೆ ಒದಗಿಸಿದರು.ನಂತರ 23ನೇ ನಿಮಿಷದಲ್ಲಿ ಪ್ರಿನ್ಸ್ ಇಬಾರಾ ಅದ್ಭುತ ಹೆಡರ್ ಮೂಲಕ ಗೋಲು ಗಳಿಸಿದಾಗ ಬೆಂಗಳೂರು 2-0 ಮುನ್ನಡೆ ಸಾಧಿಸಿತು. ಪಂದ್ಯದ ಅರ್ಧ-ಸಮಯದ ಮೊದಲು ಮತ್ತು ನಾಲ್ಕು ನಿಮಿಷಗಳ ನಿಲುಗಡೆ ಸಮಯದಲ್ಲಿ 45+4 ನೇ ನಿಮಿಷದಲ್ಲಿ ಪ್ರಿನ್ಸ್ ಇಬಾರಾ ಬೆಂಗಳೂರು ಪರವಾಗಿ ತನ್ನ ಎರಡನೇ ಮತ್ತು ಮೂರನೇ ಗೋಲು ಗಳಿಸಿದರು. ಈ ಮೂಲಕ ಸ್ಕೋರ್ ಬೆಂಗಳೂರಿನ ಪರ 3-0 ಆಯಿತು.

‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ