Virat Kohli: ಕೋಚ್ ದ್ರಾವಿಡ್ ದಾಖಲೆಯನ್ನು ಪುಡಿ ಮಾಡಲು ಹೊರಟ ವಿರಾಟ್ ಕೊಹ್ಲಿ

Virat Kohli: ಕೋಚ್ ದ್ರಾವಿಡ್ ದಾಖಲೆಯನ್ನು ಪುಡಿ ಮಾಡಲು ಹೊರಟ ವಿರಾಟ್ ಕೊಹ್ಲಿ
Virat Kohli IND vs SA

South Africa vs India: ಕೇಪ್ ಟೌನ್​ನಲ್ಲಿ ವಿರಾಟ್ ಅಬ್ಬರಿಸಿದರೆ ವಿಶೇಷ ದಾಖಲೆ ನಿರ್ಮಾಣವಾಗಲಿದೆ. ಅದುಕೂಡ ಕೋಚ್ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನೇ ಪುಡಿ ಮಾಡಲಿದ್ದಾರೆ. ಇದಕ್ಕೆ ಬೇಕಾಗಿರುವುದು ಕೊಹ್ಲಿಗೆ ಕೇವಲ 14 ರನ್ ಮಾತ್ರ.

TV9kannada Web Team

| Edited By: Vinay Bhat

Jan 10, 2022 | 10:46 AM

ಸೌತ್ ಆಫ್ರಿಕಾ ಹಾಗೂ ಭಾರತ (India vs South Africa) ನಡುವಣ ಮೂರು ಪಂದ್ಯಗಳ ಟೆಸ್ಟ್ ಸರಣಿ ಪೈಕಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದ ಪರಿಣಾಮ ಸರಣಿ 1-1 ಅಂತರದಿಂದ ಸಮಬಲ ಸಾಧಿಸಿದೆ. ಇದೀಗ ಅಂತಿಮ ಮೂರನೇ ನಿರ್ಣಾಯಕ ಕದನಕ್ಕೆ ಸಜ್ಜಾಗಿರುವ ಟೀಮ್ ಇಂಡಿಯಾ (Team India) ಕೇಪ್ ಟೌನ್​ಗೆ (Cape Town) ಬಂದಿಳಿದಿದ್ದು, ಭರ್ಜರಿ ಅಭ್ಯಾಸದಲ್ಲಿ ನಿರತವಾಗಿದೆ. ಜ. 11 ಮಂಗಳವಾರದಿಂದ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಪಂದ್ಯ ಭಾರತಕ್ಕೆ ಹಾಗೂ ನಾಯಕ ವಿರಾಟ್ ಕೊಹ್ಲಿಗೆ (Virat Kohli) ಮಹತ್ವದ್ದು. ಟೀಮ್ ಇಂಡಿಯಾ ಗೆದ್ದರೆ ಇದೇ ಮೊದಲ ಬಾರಿಗೆ ಹರಿಣಗಳ ನಾಡಲ್ಲಿ ಟೆಸ್ಟ್ ಸರಣಿ ಗೆದ್ದ ಐತಿಹಾಸಿಕ ಸಾಧನೆ ಮಾಡಲಿದೆ. ಇತ್ತ ಕಿಂಗ್ ಕೊಹ್ಲಿ ಅಬ್ಬರಿಸಲೇ ಬೇಕಾದ ಒತ್ತಡದಲ್ಲಿದ್ದಾರೆ. ಒಂದು ಕಡೆ ಕೊಹ್ಲಿ ಎರಡು ವರ್ಷಗಳಿಂದ ಶತಕದ ಬರ ಎದುರಿಸುತ್ತಿದ್ದರೆ ಮತ್ತೊಂದೆಡೆ ಫಾರ್ಮ್ ಸಮಸ್ಯೆ ಬೆಂಬಿಡದೆ ಕಾಡುತ್ತಿದೆ. ಇದಕ್ಕೆಲ್ಲ ನಾಂದಿ ಹಾಡ್ತಾರ ಎಂಬುದು ಕುತೂಹಲ. ಇದರ ನಡುವೆ ನೂತನ ದಾಖಲೆ ಬರೆಯುವ ಹೊಸ್ತಿಲಲ್ಲಿದ್ದಾರೆ ಕಿಂಗ್ ಕೊಹ್ಲಿ.

ಹೌದು, ಕೇಪ್ ಟೌನ್​ನಲ್ಲಿ ವಿರಾಟ್ ಅಬ್ಬರಿಸಿದರೆ ವಿಶೇಷ ದಾಖಲೆ ನಿರ್ಮಾಣವಾಗಲಿದೆ. ಅದುಕೂಡ ಕೋಚ್ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನೇ ಪುಡಿ ಮಾಡಲಿದ್ದಾರೆ. ಇದಕ್ಕೆ ಬೇಕಾಗಿರುವುದು ಕೊಹ್ಲಿಗೆ ಕೇವಲ 14 ರನ್ ಮಾತ್ರ. ಕೊಹ್ಲಿ ಆಫ್ರಿಕಾ ನೆಲದಲ್ಲಿ ಆಡಿದ ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 611 ರನ್ ಬಾರಿಸಿದ್ದಾರೆ. ದ್ರಾವಿಡ್ 11 ಟೆಸ್ಟ್​ಗಳಲ್ಲಿ 624 ರನ್ ಗಳಿಸಿದ್ದಾರೆ. ಕೊಹ್ಲಿ 14 ರನ್ ಗಳಿಸಿದರೆ ಈ ದಾಖಲೆ ಹಿಂದಿಕ್ಕಿ ಹರಿಣಗಳ ನಾಡಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಭಾರತೀಯ ಆಟಗಾರ ಎಂಬ ಸಾಧನೆ ಮಾಡಲಿದ್ದಾರೆ. ಮೊದಲ ಸ್ಥಾನದಲ್ಲಿ ಸಚಿನ್ ತೆಂಡೂಲ್ಕರ್ (1161) ಇದ್ದಾರೆ.

ಇನ್ನು ಕೊಹ್ಲಿ ಬ್ಯಾಟ್​ನಿಂಶ ಶತಕ ಬಂದು ಎರಡು ವರ್ಷಗಳೇ ಕಳೆದಿವೆ. ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕೊಹ್ಲಿ ಬ್ಯಾಟ್​ನಿಂದ ಸೆಂಚುರಿ ಬಂದರೆ ಅದೊಂದು ದೊಡ್ಡ ದಾಖಲೆಯೇ ಆಗಲಿದೆ. ವಿರಾಟ್ ಕೊಹ್ಲಿ ಪ್ರಸ್ತುತ ಎಲ್ಲಾ ಮೂರು ಮಾದರಿಯ ಕ್ರಿಕೆಟ್ ನಲ್ಲಿ 70 ಶತಕ ಸಿಡಿಸಿದ್ದಾರೆ. ಇದರಲ್ಲಿ 41 ನಾಯಕನಾಗಿ ಶತಕ ಗಳಿಸಿದ್ದಾರೆ. ಕೊಹ್ಲಿ ಒಂದು ಶತಕ ಸಿಡಿಸಿದರೆ ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟರ್ ರಿಕಿ ಪಾಂಟಿಂಗ್ ನಾಯಕನಾಗಿ ಗಳಿಸಿದ್ದ 41 ಶತಕಗಳ ದಾಖಲೆಯನ್ನು ಹಿಂದಿಕ್ಕಲಿದ್ದಾರೆ.

ಇತ್ತ ಆಫ್ರಿಕಾ ವಿರುದ್ಧ ಈವರೆಗೆ ಒಟ್ಟಾರೆಯಾಗಿ 13 ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 1128 ರನ್ ಕಲೆಹಾಕಿದ್ದಾರೆ. ಕೊಹ್ಲಿಗಿಂತ ಅಧಿಕವಾಗಿ ಮೂರು ಭಾರತೀಯ ಬ್ಯಾಟರ್​ಗಳು ಮಾತ್ರ ಈ ಸಾಧನೆ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್ 1741 ರನ್, ವಿರೇಂದ್ರ ಸೆಹ್ವಾಗ್ 1306 ರನ್ ಮತ್ತು ರಾಹುಲ್ ದ್ರಾವಿಡ್ 1252 ರನ್ ಕಲೆಹಾಕಿದ್ದಾರೆ. ದ. ಆಫ್ರಿಕಾ ವಿರುದ್ಧದ ಕೊನೇ ಟೆಸ್ಟ್​ನಲ್ಲಿ ಕೊಹ್ಲಿ 124 ರನ್ ಬಾರಿಸಿದರೆ ಕೋಚ್ ರಾಹುಲ್ ದ್ರಾವಿಡ್ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ.

India Playing XI: ಕ್ಲೈಮ್ಯಾಕ್ಸ್ ಕದನಕ್ಕೆ ಎರಡು ಪ್ರಮುಖ ಬದಲಾವಣೆ: ಭಾರತದ ಸಂಭಾವ್ಯ ಪ್ಲೇಯಿಂಗ್ XI ಇಲ್ಲಿದೆ

IPL 2022: ಹರಾಜಿನ ಬಳಿಕ ಅಂತಿಮ ನಿರ್ಧಾರ: ಐಪಿಎಲ್ ಬಗ್ಗೆ ವಿಶೇಷ ಮಾಹಿತಿ ಹಂಚಿಕೊಂಡ ಬಿಸಿಸಿಐ

Follow us on

Related Stories

Most Read Stories

Click on your DTH Provider to Add TV9 Kannada