ಯುನೆಸ್ಕೋದಿಂದ ಪಾರಂಪರಿಕ ಗೌರವ ಪಡೆದ ಕೊಲ್ಕತ್ತ ದುರ್ಗಾಪೂಜೆ; ಸಂತೋಷ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಸಿಎಂ ಮಮತಾ ಬ್ಯಾನರ್ಜಿ

ಭಾರತದ ಕೋಲ್ಕತ್ತದಲ್ಲಿ ನಡೆಯುವ ದುರ್ಗಾಪೂಜೆಗೆ ಯುನೆಸ್ಕೋದ ಪಾರಂಪರಿಕ ಗೌರವ ಸಿಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಸಂತೋಷ ವ್ಯಕ್ತಪಡಿಸಿದ್ದಾರೆ. ಇದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಮತ್ತು ಖುಷಿಪಡುವ ವಿಚಾರ ಎಂದಿದ್ದಾರೆ.

ಯುನೆಸ್ಕೋದಿಂದ ಪಾರಂಪರಿಕ ಗೌರವ ಪಡೆದ ಕೊಲ್ಕತ್ತ ದುರ್ಗಾಪೂಜೆ; ಸಂತೋಷ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಸಿಎಂ ಮಮತಾ ಬ್ಯಾನರ್ಜಿ
ದುರ್ಗಾಪೂಜೆ
Follow us
TV9 Web
| Updated By: Lakshmi Hegde

Updated on: Dec 16, 2021 | 8:29 AM

ಕೋಲ್ಕತ್ತದಲ್ಲಿ ನಡೆಯುವ ವೈಭವಯುತವಾದ ದುರ್ಗಾಪೂಜೆಗೆ ಯುನೆಸ್ಕೋ(UNESCO)ದಿಂದ ಮಾನ್ಯತೆ ಸಿಕ್ಕಿದೆ. ಕೋಲ್ಕತ್ತಾದ ದುರ್ಗಾಪೂಜೆಯನ್ನು ಯುನೆಸ್ಕೋ ತನ್ನ, ‘ಮಾನವೀಯತೆಯ ಅಮೂರ್ತ ಸಾಂಸ್ಕೃತಿ ಪಾರಂಪರಿಕ’ ಪಟ್ಟಿಯಲ್ಲಿ ಸೇರಿಸಿದೆ. ಈ ಅಮೂರ್ತ ಸಾಂಸ್ಕೃತಿಕ ಪರಂಪರೆ ಎಂಬುದು, ವಿಶ್ವದಲ್ಲಿ ಪುರಾತನವಾಗಿರುವ ಸಂಸ್ಕೃತಿ, ಪರಂಪರೆಯನ್ನು ರಕ್ಷಿಸುವ ದೃಷ್ಟಿಯಿಂದ ವಿಶ್ವ ಸಂಸ್ಥೆ ನೀಡುವ ಗೌರವ ಮತ್ತು ಮಾನ್ಯತೆಯಾಗಿದೆ. ಅದೀಗ ಕೋಲ್ಕತ್ತದ ದುರ್ಗಾಪೂಜೆಗೆ ಸಿಗುವ ಮೂಲಕ ಅದರ ವೈಭವ ಇನ್ನಷ್ಟು ಹೆಚ್ಚಿದೆ.

ಯುನೆಸ್ಕೋ ತನ್ನ ಟ್ವಿಟರ್​​ ಅಕೌಂಟ್​​ನಲ್ಲಿ ಈ ವಿಚಾರವನ್ನು ಘೋಷಿಸಿದೆ. ಕೋಲ್ಕತ್ತದ ದುರ್ಗಾಪೂಜೆಯನ್ನು ಅಮೂರ್ತ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಸೇರಿಸಲಾಗಿದೆ. ಅಭಿನಂದನೆಗಳು ಭಾರತ ಎಂದು ಹೇಳಿದೆ. ಹಾಗೇ, ಒಂದು ದೇವಿಯ ಮುಖದ ಸುಂದರ ಚಿತ್ರವನ್ನೂ ಪೋಸ್ಟ್ ಮಾಡಿದೆ. ಕೋಲ್ಕತ್ತದ ದುರ್ಗಾಪೂಜೆಯನ್ನು ಪಾರಂಪರಿಕ ಪಟ್ಟಿಯಲ್ಲಿ ಸೇರಿಸುವ ನಿರ್ಧಾರವನ್ನು ಯುನೆಸ್ಕೋದ ಅಂತರ್ ಸರ್ಕಾರಿ ಸಮಿತಿಯ ವಾರ್ಷಿಕ ಸಮ್ಮೇಳನದಲ್ಲಿ ತೆಗೆದುಕೊಳ್ಳಲಾಗಿದೆ. ಡಿ.13ರಿಂದ 18ರವರೆಗೆ ಸಮಾವೇಶದ ವಿವಿಧ ಸೆಷನ್​ಗಳು ನಡೆಯಲಿದ್ದು, ಅದರಲ್ಲಿ ದುರ್ಗಾಪೂಜೆಗೆ ಮಾನ್ಯತೆ ನೀಡಲಾಗಿದೆ. ಬಳಿಕ ಸುದ್ದಿಗೋಷ್ಠಿ ನಡೆಸಿದ ಯುನೆಸ್ಕೋ ಅಧಿಕಾರಿಗಳು ಈ ವಿಚಾರ ತಿಳಿಸಿದ್ದಾರೆ. ದುರ್ಗಾಪೂಜೆ, ಧರ್ಮ ಮತ್ತು ಕಲೆ ಪ್ರದರ್ಶನ ಅತ್ಯುತ್ತಮ ನಿದರ್ಶನ, ಇದರಲ್ಲಿ ಕಲಾವಿದರು, ವಿನ್ಯಾಸಕಾರರಿಗೆ ಜೀವನ ಕಟ್ಟಿಕೊಳ್ಳುವ ಅವಕಾಶ ನೀಡುತ್ತದೆ ಎಂದು ಹೇಳಿದ್ದಾರೆ.

The decision to include Durga Puja in the list was taken during the sixteenth session of the annual convention of UNESCO’s Intergovernmental Committee for the Safeguarding of Intangible Cultural Heritage held online from December 13 to December 18.

ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ ಭಾರತದ ಕೋಲ್ಕತ್ತದಲ್ಲಿ ನಡೆಯುವ ದುರ್ಗಾಪೂಜೆಗೆ ಯುನೆಸ್ಕೋದ ಪಾರಂಪರಿಕ ಗೌರವ ಸಿಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಸಂತೋಷ ವ್ಯಕ್ತಪಡಿಸಿದ್ದಾರೆ. ಇದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಮತ್ತು ಖುಷಿಪಡುವ ವಿಚಾರ ಎಂದಿದ್ದಾರೆ. ಹಾಗೇ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಟ್ವೀಟ್ ಮೂಲಕ ಸಂತೋಷ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳಕ್ಕೆ ಇದೊಂದು ಹೆಮ್ಮೆ ಪಡುವ ಕ್ಷಣ. ಇಡೀ ಜಗತ್ತಿನಾದ್ಯಂತ ಇರುವ ಬಂಗಾಳಿಯರಿಗೆ ದುರ್ಗಾಪೂಜೆಯೆಂಬುದು ಕೇವಲ ಪೂಜೆಯಲ್ಲ, ಅದೊಂದು ಭಾವನಾತ್ಮಕ ಸಮಾರಂಭ. ಇದೀಗ ಈ ಪೂಜೆ ವಿಶ್ವಸಂಸ್ಥೆಯ ಪಾರಂಪರಿಕ ಮಾನ್ಯತೆ ಪಡೆದಿದ್ದು ನಮಗೆಲ್ಲರಿಗೂ ಅತ್ಯಧಿಕ ಸಂತೋಷ ತಂದಿದೆ ಎಂದಿದ್ದಾರೆ. ಗೃಹ ಸಚಿವ ಅಮಿತ್​ ಶಾ ಕೂಡ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಪ್ರಶಸ್ತಿಗಳ ರಾಜ, ಬೆಟ್ಟದ ಹುಲಿ ಖ್ಯಾತಿಯ ಟಗರು ಸಾವು; ಅಂತಿಮ ದರ್ಶನಕ್ಕೆ ಹೊರ ರಾಜ್ಯಗಳಿಂದ ಬಂದ ಜನ

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ