ಮಿಸ್​ ಯೂನಿವರ್ಸ್​ ಹರ್ನಾಜ್​ ಸಂಧು ಭಾರತಕ್ಕೆ ಬರುತ್ತಿದ್ದಂತೆ ಭೇಟಿಯಾಗಿ ಸೆಲ್ಫೀ ತೆಗೆದುಕೊಂಡ ಶಶಿ ತರೂರ್​; ಸಮಚಿತ್ತ, ಆಕರ್ಷಕ ಎಂದು ಹೊಗಳಿಕೆ

2021ನೇ ಸಾಲಿನ ಭುವನ ಸುಂದರಿ(Miss Universe)ಯಾಗಿ ಆಯ್ಕೆಯಾದ ಹರ್ನಾಜ್​ ಕೌರ್ ಸಂಧು(Harnaaz Kaur Sandhu) ನಿನ್ನೆ ಭಾರತಕ್ಕೆ ಆಗಮಿಸಿದ್ದಾರೆ. ಮುಂಬೈ ಏರ್​ಪೋರ್ಟ್​ಗೆ ಬಂದಿಳಿದ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಹರ್ನಾಜ್​ ಸಂಧು 70ನೇ ಮಿಸ್​ ಯೂನಿವರ್ಸ್​ ಆಗಿ ಆಯ್ಕೆಯಾಗುವ ಜತೆಗೆ ಬರೋಬ್ಬರಿ 21 ವರ್ಷದ ಬಳಿಕ ಭಾರತಕ್ಕೆ ಈ ಪಟ್ಟ ತಂದುಕೊಟ್ಟವರು. 2000ರಲ್ಲಿ ಲಾರಾ ದತ್ತಾ ಮಿಸ್ ಯೂನಿವರ್ಸ್ ಆಗಿದ್ದರು. ಅದಾದ ನಂತರ ಭಾರತಕ್ಕೆ ಭುವನ ಸುಂದರಿ ಕಿರೀಟ ಬಂದಿರಲ್ಲಿ. ಈ ಬಾರಿ ಪಂಜಾಬ್​ನ ಸುಂದರಿ ಹರ್ನಾಜ್​ ಸಂಧು […]

ಮಿಸ್​ ಯೂನಿವರ್ಸ್​ ಹರ್ನಾಜ್​ ಸಂಧು ಭಾರತಕ್ಕೆ ಬರುತ್ತಿದ್ದಂತೆ ಭೇಟಿಯಾಗಿ ಸೆಲ್ಫೀ ತೆಗೆದುಕೊಂಡ ಶಶಿ ತರೂರ್​; ಸಮಚಿತ್ತ, ಆಕರ್ಷಕ ಎಂದು ಹೊಗಳಿಕೆ
ಭುವನ ಸುಂದರಿಯೊಂದಿಗೆ ಫೋಟೋ ತೆಗೆದುಕೊಂಡ ಶಶಿ ತರೂರ್​
Follow us
TV9 Web
| Updated By: Lakshmi Hegde

Updated on: Dec 16, 2021 | 9:15 AM

2021ನೇ ಸಾಲಿನ ಭುವನ ಸುಂದರಿ(Miss Universe)ಯಾಗಿ ಆಯ್ಕೆಯಾದ ಹರ್ನಾಜ್​ ಕೌರ್ ಸಂಧು(Harnaaz Kaur Sandhu) ನಿನ್ನೆ ಭಾರತಕ್ಕೆ ಆಗಮಿಸಿದ್ದಾರೆ. ಮುಂಬೈ ಏರ್​ಪೋರ್ಟ್​ಗೆ ಬಂದಿಳಿದ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಹರ್ನಾಜ್​ ಸಂಧು 70ನೇ ಮಿಸ್​ ಯೂನಿವರ್ಸ್​ ಆಗಿ ಆಯ್ಕೆಯಾಗುವ ಜತೆಗೆ ಬರೋಬ್ಬರಿ 21 ವರ್ಷದ ಬಳಿಕ ಭಾರತಕ್ಕೆ ಈ ಪಟ್ಟ ತಂದುಕೊಟ್ಟವರು. 2000ರಲ್ಲಿ ಲಾರಾ ದತ್ತಾ ಮಿಸ್ ಯೂನಿವರ್ಸ್ ಆಗಿದ್ದರು. ಅದಾದ ನಂತರ ಭಾರತಕ್ಕೆ ಭುವನ ಸುಂದರಿ ಕಿರೀಟ ಬಂದಿರಲ್ಲಿ. ಈ ಬಾರಿ ಪಂಜಾಬ್​ನ ಸುಂದರಿ ಹರ್ನಾಜ್​ ಸಂಧು ಆ ಗರಿಮೆ ಮುಡಿದಿದ್ದಾರೆ. ಮಿಸ್​ ಯೂನಿವರ್ಸ್​ ಆಯ್ಕೆಯ ಕೊನೇ ಹಂತದ ಸಮಾರಂಭದ ಇಸ್ರೇಲ್​ನ ಐಲಾಟ್​​ನಲ್ಲಿ ಡಿಸೆಂಬರ್​ 13ರಂದು ನಡೆದಿತ್ತು. 

ಹರ್ನಾಜ್​ ಸಂಧು ಅವರಿಗೆ ಈಗಾಗಲೇ ಹಲವು ಗಣ್ಯರು ಶುಭಕೋರಿದ್ದಾರೆ. ಈ ಮಧ್ಯೆ ಗಮನಸೆಳೆದಿದ್ದು, ಕಾಂಗ್ರೆಸ್​ನ ಸಂಸದ ಶಶಿ ತರೂರ್​. ಹರ್ನಾಜ್​ ಸಂಧು ನಿನ್ನೆ ಭಾರತಕ್ಕೆ ಬಂದಿಳಿಯುತ್ತಿದ್ದಂತೆ ಶಶಿ ತರೂರ್​ ಹೋಗಿ ಅವರನ್ನು ಭೇಟಿಯಾಗಿದ್ದಾರೆ. ನಂತರ ಟ್ವಿಟರ್​ನಲ್ಲಿ ಮಿಸ್ ಯೂನಿವರ್ಸ್​ ಹರ್ನಾಜ್​ ಜತೆಗಿನ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಭುವನಸುಂದರಿ ಹರ್ನಾಜ್​ ಕೌರ್ ಸಂಧು ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದೆ. ಹರ್ನಾಜ್​ ವಿಜಯದೊಂದಿಗೆ ಭಾರತಕ್ಕೆ ಮರಳಿದ್ದಾರೆ. ಭಾರತ ಹೆಮ್ಮೆಯಿಂದ ಅವರನ್ನು ಸ್ವಾಗತಿಸಿದೆ ಎಂದು ಕ್ಯಾಪ್ಷನ್ ಬರೆದಿದ್ದಾರೆ. ಹರ್ನಾಜ್​ ವೇದಿಕೆ ಮೇಲೆ ಹೇಗೆ ಆಕರ್ಷಕವಾಗಿ ಮತ್ತು ಸಮಚಿತ್ತದಿಂದ ಕಾಣಿಸಿಕೊಂಡಿದ್ದರೋ, ಹಾಗೇ ನೈಜವಾಗಿಯೂ ಇದ್ದಾರೆ ಎಂದು ಶಶಿ ತರೂರ್​ ಹೇಳಿದ್ದಾರೆ.

ಇನ್ನು ಹರ್ನಾಜ್ ಕೌರ್ ಸಂಧು ಅವರು ಶಶಿ ತರೂರ್​ ಟ್ವೀಟ್​ನ್ನು ರೀಟ್ವೀಟ್ ಮಾಡಿಕೊಂಡಿದ್ದಾರೆ. ಶಶಿ ತರೂರ್​ರನ್ನು ಭೇಟಿಯಾಗಿದ್ದು ತುಂಬ ಖುಷಿಯಾಯಿತು ಎಂದು ಹೇಳಿಕೊಂಡಿದ್ದಾರೆ. ಚಂಡಿಗಢದ ಸಿಖ್​ ಮನೆತದ ಹರ್ನಾಜ್​ ಕೌರ್​ ಸಂಧುಗೆ ಇದೀಗ 21 ವರ್ಷ.. ಅವರ ವಾರ್ಷಿಕ ಆದಾಯ ಒಂದು ಮಿಲಿಯನ್​ ಡಾಲರ್​ ಎಂದು ವರದಿಯೊಂದರಲ್ಲಿ ಹೇಳಲಾಗಿದೆ.  ಹರ್ನಾಜ್ 2017ರಲ್ಲಿ ಮಿಸ್​ ಚಂಡೀಗಡ ಹಾಗೂ 2018ರಲ್ಲಿ ಮಿಸ್​ ಮಾಕ್ಸ್​ ಸ್ಟಾರ್​ ಆಫ್​ ಇಂಡಿಯಾ ಪಟ್ಟವನ್ನು ಗೆದ್ದಿದ್ದರು. ನಂತರ 2019ರಲ್ಲಿ ಪಂಜಾಬ್​ನ ಫೆಮಿನಾ ಮಿಸ್​ ಇಂಡಿಯಾ ಪಟ್ಟ ಗೆದ್ದು ಫೆಮಿನಾ ಮಿಸ್​ ಇಂಡಿಯಾ ಸ್ಪರ್ಧೆಯಲ್ಲೂ ಭಾಗವಹಿಸಿದ್ದರು. ಇದೀಗ 2021ರಲ್ಲಿ ಮಿಸ್​ ಯುನಿವರ್ಸ್​ ಆಗಿ ಗೆದ್ದು ಭಾರತಕ್ಕೆ ಹೊಸ ಗೆಲುವು ತಂದುಕೊಟ್ಟಿದ್ದಾರೆ.

ಇದನ್ನೂ ಓದಿ: T Natarajan: ಟೀಮ್ ಇಂಡಿಯಾದಲ್ಲಿಲ್ಲ ಅವಕಾಶ: ಹುಟ್ಟೂರಿನಲ್ಲೇ ಸ್ವಂತ ಕ್ರಿಕೆಟ್ ಮೈದಾನ ಕಟ್ಟಿದ ಸ್ಟಾರ್ ಆಟಗಾರ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ