Video: ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಹಾಸನದ ಸಕಲೇಶಪುರದಲ್ಲಿ, ಬಸ್ ಕೆಟ್ಟು ನಿಂತಿದ್ದರಿಂದ ತಾಯಿಯಿಂದ ಮಗು ಬೇರ್ಪಟ್ಟ ಘಟನೆ ನಡೆದಿದೆ. ಧರ್ಮಸ್ಥಳದಿಂದ ಕೋಲಾರಕ್ಕೆ ತೆರಳುತ್ತಿದ್ದ ಆರು ಜನರ ತಂಡದಲ್ಲಿ ಮಗು ಕಳೆದುಹೋಗಿತ್ತು. ಬಸ್ ಕಂಡಕ್ಟರ್ ಮಗುವನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ ನಂತರ, ತಾಯಿ ಮತ್ತು ಮಗು ಮರು ಒಂದಾಗಿದ್ದಾರೆ. ಈ ಘಟನೆ ಮಗು ಮತ್ತು ತಾಯಿಯ ಮರುಮಿಲನದ ಸಂತಸದ ಅಂತ್ಯ ಕಂಡಿದೆ.
ಹಾಸನ, ಡಿ.31 : ಪೋಷಕರಿಂದ ದೂರವಾಗಿದ್ದ ಮಗುವನ್ನು ತಾಯಿ ಮಡಿಲಿಗೆ ಸೇರಿಸಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ, ಬಾಗೆ ಗ್ರಾಮದಲ್ಲಿ ನಡೆದಿದೆ. ಬಾಲಕಿ ನಿನ್ನೆ ರಾತ್ರಿ ತಾಯಿಯಿಂದ ತಪ್ಪಿಸಿಕೊಂಡಿದ್ದಾಳೆ. ತಾಯಿ, ಮಗು ಸೇರಿ ಆರು ಜನರ ತಂಡ ಧರ್ಮಸ್ಥಳದಿಂದ ಕೋಲಾರಕ್ಕೆ ತೆರಳುತ್ತಿದ್ದ ವೇಳೆ ಬಾಗೆ ಗ್ರಾಮದ ಬಳಿ ಸಾರಿಗೆ ಬಸ್ ಕೆಟ್ಟು ನಿಂತಿದೆ. ಈ ವೇಳೆ ಪ್ರಯಾಣಿಕರನ್ನು ಕಂಡಕ್ಟರ್ ಮತ್ತೊಂದು ಬಸ್ಸಿನಲ್ಲಿ ಕಳುಹಿಸಿದ್ದಾನೆ. ಆದರೆ ಬಾಲಕಿ ಗೊಂದಲದಿಂದ ಕೆಟ್ಟು ನಿಂತಿದ್ದ ಬಸ್ಸಿನಲ್ಲೇ ಕುಳಿತಿದ್ದಾಳೆ. ಮತ್ತೊಂದು ಕಡೆ ಬಾಲಕಿಯ ತಾಯಿ ಮಗಳು ಬಸ್ ಹತ್ತಿದ್ದಾಳೋ ಇಲ್ಲವೋ ಎಂಬುದನ್ನು ಗಮನಿಸದೆ ಸ್ನೇಹಿತೆಯರ ಜೊತೆ ತೆರಳಿದ್ದಾಳೆ. ರಿಪೇರಿಯಾದ ನಂತರ ಬೆಂಗಳೂರು ಕಡೆಗೆ ಹೊರಟಿದ್ದ ಬಸ್ನಲ್ಲಿ ಬಾಲಕಿಯನ್ನು ಕಂಡು ಬಸ್ ನಿರ್ವಾಹಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಲಕಿ ತಾಯಿಗೆ ಕರೆ ಮಾಡಿದ್ದಾರೆ. ಅಷ್ಟರಲ್ಲಿ ಹಾಸನ ಸಮೀಪ ಬಂದಿದ್ದ ತಾಯಿ, ವಾಪಾಸ್ ಬಂದು ಮಗಳನ್ನು ಕರೆದುಕೊಂಡು ಹೋಗಿದ್ದಾಳೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
