ಬಾಗಲಕೋಟೆ: ಹಾಸ್ಟೆಲ್ನಿಂದ ಕಾಣೆಯಾಗಿದ್ದ ಫಿಜಿಯೊಥೆರಪಿಸ್ಟ್ ವಿದ್ಯಾರ್ಥಿನಿ ಶವ ರೈಲ್ವೆ ಬ್ರಿಡ್ಜ್ ಕೆಳಗೆ ಪತ್ತೆ
ಬಾಗಲಕೋಟೆ ನಗರದ ಶಿಗಿಕೇರಿ ಕ್ರಾಸ್ ನ ರೇಲ್ವೆ ಬ್ರಿಡ್ಜ್ ಕೆಳಗೆ ಅನುಮಾಮಾಸ್ಪದ ಸ್ಥಿತಿಯಲ್ಲಿ ಫಿಜಿಯೊಥೆರಪಿಸ್ಟ್ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ. ಬಾಗಲಕೋಟೆ ಜಿಲ್ಲೆ ಇಳಕಲ್ ಮೂಲದ ಯುವತಿ, ಸುಮನಾ ಮನೋಹರ್ ಪತ್ತಾರ (೨೨) ಸಾವನ್ನಪ್ಪಿರುವ ವಿದ್ಯಾರ್ಥಿನಿ.
ಬಾಗಲಕೋಟೆ ನಗರದ ಶಿಗಿಕೇರಿ ಕ್ರಾಸ್ ನ ರೇಲ್ವೆ ಬ್ರಿಡ್ಜ್ ಕೆಳಗೆ ಅನುಮಾಮಾಸ್ಪದ ಸ್ಥಿತಿಯಲ್ಲಿ ಫಿಜಿಯೊಥೆರಪಿಸ್ಟ್ ವಿದ್ಯಾರ್ಥಿನಿಯ ಶವ (dead body) ಪತ್ತೆಯಾಗಿದೆ. ಬಾಗಲಕೋಟೆ (Bagalkote) ಜಿಲ್ಲೆ ಇಳಕಲ್ ಮೂಲದ ಯುವತಿ, ಸುಮನಾ ಮನೋಹರ್ ಪತ್ತಾರ (೨೨) ಸಾವನ್ನಪ್ಪಿರುವ ವಿದ್ಯಾರ್ಥಿನಿ. ಬ್ರಿಡ್ಜ್ ಕಳಗೆ ಮುಳ್ಳುಕಂಟಿಯಲ್ಲಿ ಶವ ಪತ್ತೆಯಾಗಿದೆ.
ಸುಮನ್ ಬಾಗಲಕೋಟೆ ಕುಮಾರೇಶ್ವರ್ ಮೆಡಿಕಲ್ ಕಾಲೇಜ್ ನಲ್ಲಿ ಫಿಜಿಯೋತೆರಪಿ ೩ ನೇ ವರ್ಷ ವ್ಯಾಸಂಗ ಮಾಡ್ತಿದ್ದಳು. ಎರಡು ದಿನಗಳ ಹಿಂದೆ ಬೆಳಗ್ಗೆ ಹಾಸ್ಟೆಲ್ (hostel) ನಿಂದ ಕಾಣೆಯಾಗಿದ್ದ (missing) ವಿದ್ಯಾರ್ಥಿನಿ. ಯುವತಿಯ ಪೋಷಕರು ಹಾಸ್ಟೆಲ್ ನಿಂದ ಮಗಳು ಕಾಣೆಯಾಗಿದ್ದರ ಬಗ್ಗೆ ದೂರು ದಾಖಲಿಸಿದ್ದರು. ಸ್ಥಳಕ್ಕೆ ಬಾಗಲಕೋಟೆ ರೈಲ್ವೆ ಹಾಗೂ ಗ್ರಾಮೀಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ