TV9 Karnataka Summit 2023: ಕರಾವಳಿ ಕರ್ನಾಟಕದಲ್ಲಿ ನೈತಿಕ ಪೊಲೀಸ್​ಗಿರಿ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ: ಜಿ ಪರಮೇಶ್ವರ್

TV9 Karnataka Summit 2023: ಮೋರಲ್ ಪೊಲೀಸಿಂಗ್ ನಲ್ಲಿ ಭಾಗಿಯಾಗುವವರನ್ನು ಹದ್ದು ಬಸ್ತಿನಲ್ಲಿಡಲು ಮಂಗಳೂರಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪಿಸಲಾಗಿದೆ, ಈ ಪಡೆಯು, ತಾವೇ ಕಾನೂನಿನ ಪರಿಪಾಲಕರು ಅಂತ ಪೋಸು ಬಿಗಿದು ಜನರಿಗೆ ತೊಂದರೆ ಕೊಡುವವರನ್ನು-ಅವರು ಯಾವುದೇ ಸಮುದಾಯದವರಾಗಿರಲಿ-ಹಿಡಿದು ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

|

Updated on: Sep 16, 2023 | 2:57 PM

ಬೆಂಗಳೂರು: ಶುಕ್ರವಾರ ನಗರದ ಖ್ಯಾತ ಹೋಟೆಲೊಂದರಲ್ಲಿ ಅಯೋಜಿಸಲಾಗಿದ್ದ ‘ಕನಸಿನ ಕರುನಾಡು ಟಿವಿ9 ಸಮ್ಮಿಟ್ 2023’ ನಲ್ಲಿ (TV9 Karnataka Summit 2023) ಭಾಗವಹಿಸಿ ಮಾತಾಡಿದ ಗೃಹ ಸಚಿನ ಜಿ ಪರಮೇಶ್ವರ್ (G Parameshwara) ರಾಜ್ಯದೆಲ್ಲೆಡೆ ಕಾನೂನು ಸುವ್ಯವಸ್ಥೆ ಉತ್ತಮಪಡಿಸಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ನೈತಿಕ ಪೊಲೀಸ್ ಗಿರಿ (moral policing) ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದ ಅವರು ಮಂಗಳೂರು, ಉಡುಪಿ ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಪ್ರಕಣಗಳು ಜಾಸ್ತಿ ವರದಿಯಾಗುತ್ತವೆ. ಮೋರಲ್ ಪೊಲೀಸಿಂಗ್ ನಲ್ಲಿ ಭಾಗಿಯಾಗುವವರನ್ನು ಹದ್ದು ಬಸ್ತಿನಲ್ಲಿಡಲು ಮಂಗಳೂರಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪಿಸಲಾಗಿದೆ, ಈ ಪಡೆಯು, ತಾವೇ ಕಾನೂನಿನ ಪರಿಪಾಲಕರು ಅಂತ ಪೋಸು ಬಿಗಿದು ಜನರಿಗೆ ತೊಂದರೆ ಕೊಡುವವರನ್ನು-ಅವರು ಯಾವುದೇ ಸಮುದಾಯದವರಾಗಿರಲಿ-ಹಿಡಿದು ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಮಂಗಳೂರಲ್ಲಿ ಪರಿಸ್ಥಿತಿ ಹದಗೆಟ್ಟಿರುವ ಕಾರಣಕ್ಕೆ ವಿದ್ಯಾರ್ಥಿಗಳು ಓದಲು ಬೆಂಗಳೂರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಮತ್ತು ಅಲ್ಲಿನ ಚೇಂಬರ್ ಆಫ್ ಕಾಮರ್ಸ್ ಸಹ ಬಂದರು ನಗರವನ್ನು ಮೊದಲಿನ ಪ್ರಶಾಂತ ಮಂಗಳೂರು ನಗರವಾಗಿ ಮಾಡಿ ಅಂತ ಮನವಿ ಮಾಡಿದ್ದಾರೆ. ಗೃಹ ಇಲಾಖೆ ಈ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ ಎಂದು ಪರಮೇಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಗಣೇಶನ ಪೆಂಡಾಲ್​ನಲ್ಲಿ ಚಂದ್ರಯಾನ-3 ಯಶೋಗಾಥೆ, ನೆಟ್ಟಿಗರು ಮೂಕವಿಸ್ಮಿತ!
ಗಣೇಶನ ಪೆಂಡಾಲ್​ನಲ್ಲಿ ಚಂದ್ರಯಾನ-3 ಯಶೋಗಾಥೆ, ನೆಟ್ಟಿಗರು ಮೂಕವಿಸ್ಮಿತ!
ನಿಮ್ಮ ಅಮ್ಮನಿಗೂ ಗೊತ್ತಾಯಿತು ನೋಡಿ ನಿಮ್ಮ ಕೆಲಸದ ಬಗ್ಗೆ
ನಿಮ್ಮ ಅಮ್ಮನಿಗೂ ಗೊತ್ತಾಯಿತು ನೋಡಿ ನಿಮ್ಮ ಕೆಲಸದ ಬಗ್ಗೆ
ಹುಬ್ಬಳ್ಳಿ: ಗಣೇಶ ವಿಸರ್ಜನೆ ವೇಳೆ ಪೊಲೀಸರ ಸಖತ್​​ ಡ್ಯಾನ್ಸ್​​: Video
ಹುಬ್ಬಳ್ಳಿ: ಗಣೇಶ ವಿಸರ್ಜನೆ ವೇಳೆ ಪೊಲೀಸರ ಸಖತ್​​ ಡ್ಯಾನ್ಸ್​​: Video
ಇನ್​ಸ್ಪೆಕ್ಟರ್​ ಸೇವೆಗೆ ಪ್ರಧಾನಿ ಮೋದಿ ಶ್ಲಾಘನೆ
ಇನ್​ಸ್ಪೆಕ್ಟರ್​ ಸೇವೆಗೆ ಪ್ರಧಾನಿ ಮೋದಿ ಶ್ಲಾಘನೆ
ಕೀರ್ತಿ ಪತಾಕೆ ಹಾರಿಸ್ತೀವಿ ಅಂತಿದ್ದಾರೆ ಯಾದಗಿರಿಯ ಈ ಕ್ರೀಡಾಪಟುಗಳು, ಆದರೆ
ಕೀರ್ತಿ ಪತಾಕೆ ಹಾರಿಸ್ತೀವಿ ಅಂತಿದ್ದಾರೆ ಯಾದಗಿರಿಯ ಈ ಕ್ರೀಡಾಪಟುಗಳು, ಆದರೆ
ಗಣೇಶೋತ್ಸವದಲ್ಲಿ ಕಾಂತಾರಾ ಚಿತ್ರದ ಪಂಜುರ್ಲಿ ನೃತ್ಯ ಪ್ರದರ್ಶನ
ಗಣೇಶೋತ್ಸವದಲ್ಲಿ ಕಾಂತಾರಾ ಚಿತ್ರದ ಪಂಜುರ್ಲಿ ನೃತ್ಯ ಪ್ರದರ್ಶನ
‘ಕಾವೇರಿಗೆ ನಾನು ಜೀವ ಕೊಡ್ತೀನಿ’ ಎಂದ ನಟ ರಾಘವೇಂದ್ರ ರಾಜ್​ಕುಮಾರ್​
‘ಕಾವೇರಿಗೆ ನಾನು ಜೀವ ಕೊಡ್ತೀನಿ’ ಎಂದ ನಟ ರಾಘವೇಂದ್ರ ರಾಜ್​ಕುಮಾರ್​
ಜನರ ಸಮಸ್ಯೆಗಳನ್ನು ಆಲಿಸಿದ ಉತ್ತರ ವಿಭಾಗದ ಹೊಸ ಡಿಸಿಪಿ ಸೈದಲು ಅಡಾವತ್
ಜನರ ಸಮಸ್ಯೆಗಳನ್ನು ಆಲಿಸಿದ ಉತ್ತರ ವಿಭಾಗದ ಹೊಸ ಡಿಸಿಪಿ ಸೈದಲು ಅಡಾವತ್
ಬಂದ್ ಆಚರಿಸುವ ಬದಲು ಸರ್ಕಾರದ ಪ್ರಯತ್ನಗಳಿಗೆ ಸಹಕಾರ ನೀಡಲಿ:ಡಿಕೆ ಶಿವಕುಮಾರ್
ಬಂದ್ ಆಚರಿಸುವ ಬದಲು ಸರ್ಕಾರದ ಪ್ರಯತ್ನಗಳಿಗೆ ಸಹಕಾರ ನೀಡಲಿ:ಡಿಕೆ ಶಿವಕುಮಾರ್
ಮಂಡ್ಯದಿಂದ ಸ್ಪರ್ಧಿಸುವ ಯೋಚನೆ ಸದ್ಯಕ್ಕಂತೂ ಇಲ್ಲ: ನಿಖಿಲ್ ಕುಮಾರಸ್ವಾಮಿ
ಮಂಡ್ಯದಿಂದ ಸ್ಪರ್ಧಿಸುವ ಯೋಚನೆ ಸದ್ಯಕ್ಕಂತೂ ಇಲ್ಲ: ನಿಖಿಲ್ ಕುಮಾರಸ್ವಾಮಿ