AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಒಂದು ಫೋಟೋ ಸಾಕು ಎಲ್ಲವನ್ನೂ ಹೇಳುತ್ತಿದೆ, ಆಂಬ್ಯುಲೆನ್ಸ್ ಸಿಗದೇ ಬೈಕ್​ ಮೇಲೆ ಮಂಚ ಕಟ್ಟಿ, ಸ್ವಗ್ರಾಮಕ್ಕೆ ಅಣ್ಣನ ಶವ ಸಾಗಿಸಿದ ತಮ್ಮ!

Bike Ambulance? ಗಡ್ಚಿರೋಲಿ ಜಿಲ್ಲೆಯಲ್ಲಿ ಆಂಬ್ಯುಲೆನ್ಸ್ ಸಿಗದಿದ್ದಾಗ, ಯುವಕನೊಬ್ಬ ತನ್ನ ಅಣ್ಣನ ಶವವನ್ನು ಬೈಕ್‌ಗೆ ಕಟ್ಟಿ ತನ್ನ ಸ್ವಗ್ರಾಮಕ್ಕೆ ಸಾಗಿಸಿದ್ದಾನೆ. ಮೃತದೇಹವನ್ನು ಬೈಕ್‌ಗೆ ಕಟ್ಟಿ ತಂದಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಒಂದು ಫೋಟೋ ಸಾಕು ಎಲ್ಲವನ್ನೂ ಹೇಳುತ್ತಿದೆ, ಆಂಬ್ಯುಲೆನ್ಸ್ ಸಿಗದೇ ಬೈಕ್​ ಮೇಲೆ ಮಂಚ ಕಟ್ಟಿ, ಸ್ವಗ್ರಾಮಕ್ಕೆ ಅಣ್ಣನ ಶವ ಸಾಗಿಸಿದ ತಮ್ಮ!
ಆಂಬ್ಯುಲೆನ್ಸ್ ಸಿಗದೇ ಬೈಕ್​ ಮೇಲೆ ಮಂಚ ಕಟ್ಟಿ, ಸ್ವಗ್ರಾಮಕ್ಕೆ ಅಣ್ಣನ ಶವ ಸಾಗಿಸಿದ ತಮ್ಮ!
ಸಾಧು ಶ್ರೀನಾಥ್​
|

Updated on:Jul 25, 2023 | 1:53 PM

Share

ಮಹಾರಾಷ್ಟ್ರ ಸರ್ಕಾರವು ತನ್ನ ಆರೋಗ್ಯ ವ್ಯವಸ್ಥೆಗಳಿಗಾಗಿ ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತದೆ. ಹಳ್ಳಿಗಳು ಮತ್ತು ನಗರಗಳಲ್ಲಿ ಎಲ್ಲೆಡೆ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ಹಕ್ಕುಗಳನ್ನು ನೀಡುತ್ತದೆ, ಆದರೆ ಚಿತ್ರವು ಆ ಎಲ್ಲಾ ಹಕ್ಕುಗಳನ್ನು ಪ್ರಶ್ನಿಸುವಂತಿದೆ/ ಅಣಕಿಸುವಂತಿದೆ. ಗಡ್ಚಿರೋಲಿ ಜಿಲ್ಲಾಸ್ಪತ್ರೆಯಲ್ಲಿ ಯುವಕ ಮೃತಪಟ್ಟಿದ್ದಾನೆ. ಆಂಬ್ಯುಲೆನ್ಸ್  (Ambulance) ಸಿಗದಿದ್ದಾಗ ಆತನ ತಮ್ಮ (brother) ಮೃತದೇಹವನ್ನು (dead body) ಬೈಕ್ (Bike) ನಲ್ಲಿ ಕಟ್ಟಿ ತಂದಿದ್ದಾರೆ. ಈ ವೇಳೆ ಇದನ್ನು ನೋಡಿದವರಿಗೆ ಆಶ್ಚರ್ಯವಾಗಿದೆ.

ಗಡ್ಚಿರೋಲಿಯ ಭಾಮ್ರಗಡದಲ್ಲಿ ಆಂಬ್ಯುಲೆನ್ಸ್ ಸಿಗದಿದ್ದಾಗ ಯುವಕನ ಶವವನ್ನು ಬೈಕ್‌ನಲ್ಲಿ ಕಟ್ಟಿ ಅವನ ಗ್ರಾಮಕ್ಕೆ ಕೊಂಡೊಯ್ಯಲಾಯಿತು. ಮಾಹಿತಿ ಪ್ರಕಾರ ಗಣೇಶ್ ತೇಲಮಿ ಎಂಬ ಯುವಕ ಕ್ಷಯರೋಗದಿಂದ ಬಳಲುತ್ತಿದ್ದ. ಗಡ್ಚಿರೋಲಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಕೆಲ ದಿನಗಳ ಹಿಂದೆ ಆತನ ಸ್ಥಿತಿ ಹದಗೆಟ್ಟಿದ್ದು, ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದರೂ ಗಣೇಶ್ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ದಿನದಿಂದ ದಿನಕ್ಕೆ ಅವನ ಸ್ಥಿತಿ ಹದಗೆಡುತ್ತಿತ್ತು. ಸೋಮವಾರ ರಾತ್ರಿ ಚಿಕಿತ್ಸೆ ವೇಳೆ ಗಣೇಶ್ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದ್ದು, ಆಂಬ್ಯುಲೆನ್ಸ್ ಗಾಗಿ ಕುಟುಂಬಸ್ಥರು ರಾತ್ರಿಯಿಡೀ ಅಲ್ಲಿ ಇಲ್ಲಿ ಅಲೆದಾಡಿದ್ದಾರೆ, ಆದರೆ ಆಂಬುಲೆನ್ಸ್ ಪತ್ತೆಯಾಗಿಲ್ಲ.

ಕೊನೆಗೆ ಇಂದು ಮಂಗಳವಾರ ಬೆಳಗ್ಗೆ ಕೂಡ ಆಂಬ್ಯುಲೆನ್ಸ್ ಗಾಗಿ ಸಂಬಂಧಿಕರು ಹರಸಾಹಸ ಪಟ್ಟರೂ ಗಣೇಶ್ ಮೃತದೇಹವನ್ನು ಗ್ರಾಮಕ್ಕೆ ಕೊಂಡೊಯ್ಯಲು ಆಂಬುಲೆನ್ಸ್ ಸಿಗಲಿಲ್ಲ. ಬೇಸತ್ತ ಕುಟುಂಬಸ್ಥರು ಗಣೇಶ್ ಮೃತದೇಹವನ್ನು ಮಂಚದ ಮೇಲೆ ಇಟ್ಟು ಬೈಕ್ ನಲ್ಲಿ ಕಟ್ಟಿ ನಂತರ ಗ್ರಾಮಕ್ಕೆ ತಂದಿದ್ದಾರೆ. ಈ ವೇಳೆ ದಾರಿಯಲ್ಲಿ ಈ ದೃಶ್ಯವನ್ನು ನೋಡಿದವರಿಗೆ ಸಖೇದ ಆಶ್ಚರ್ಯವಾಗಿದೆ. ಗಣೇಶ್ ಸಹೋದರ ಬೈಕ್‌ನಲ್ಲಿ ಮೃತದೇಹದೊಂದಿಗೆ ಗ್ರಾಮ ತಲುಪಿದಾಗ ಜನಸಾಗರವೇ ಅಲ್ಲಿ ನೆರೆದಿತ್ತು.

ಅಣ್ಣನ ಚಿಕಿತ್ಸೆಗೆ ಖರ್ಚು ಮಾಡಿದ ಹಣ, ಆಂಬ್ಯುಲೆನ್ಸ್ ಬುಕ್ ಮಾಡಲು ಹಣ ಉಳಿದಿಲ್ಲ

ರಾತ್ರಿಯಿಂದಲೇ ಆಂಬ್ಯುಲೆನ್ಸ್‌ಗಾಗಿ ಪರದಾಡುತ್ತಿದ್ದು, ಆಸ್ಪತ್ರೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾರೂ ಕಿವಿಗೊಡಲಿಲ್ಲ ಎಂದು ಗಣೇಶ್ ಅವರ ಸಹೋದರ ತಿಳಿಸಿದರು. ಇದರಿಂದ ನೊಂದ ಜನರು ಬೈಕ್‌ನಿಂದಲೇ ಮೃತದೇಹವನ್ನು ತಂದಿದ್ದರು. ಮತ್ತೊಂದೆಡೆ, ಖಾಸಗಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಬಹುದಾಗಿತ್ತು ಅಲ್ಲವಾ ಎಂದು ಜನರು ಕೇಳಿದಾಗ, ಅಣ್ಣನ ಚಿಕಿತ್ಸೆಗೆ ತುಂಬಾ ಹಣ ಖರ್ಚು ಮಾಡಲಾಗಿದ್ದು, ಈಗ ಆಂಬ್ಯುಲೆನ್ಸ್ ಬುಕ್ ಮಾಡಲು ತಮ್ಮ ಬಳಿ ಹಣವಿರಲಿಲ್ಲ ಎಂದು ಗಣೇಶ್ ಸಹೋದರ ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:36 pm, Tue, 25 July 23

Follow Us
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ
ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ