AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಂಜಾವೂರಿನಲ್ಲಿ ಸಿಲಿಂಡರ್ ಸ್ಫೋಟ: ಬೆಂಕಿ ನಂದಿಸಲು ಹೋದ 10 ಜನರಿಗೆ ಸುಟ್ಟ ಗಾಯ, 7 ಮಂದಿ ಸ್ಥಿತಿ ಗಂಭೀರ

ತಂಜಾವೂರಿನ ಲಕ್ಷ್ಮಿಪುರಂನಲ್ಲಿ ಹುಲ್ಲಿನ ಮನೆಗೆ ಬೆಂಕಿ ಬಿದ್ದಾಗ, ಅದನ್ನು ನಂದಿಸಲು ಹೋದ 10 ಜನರಿಗೆ LPG ಸಿಲಿಂಡರ್ ಸ್ಫೋಟದಿಂದ ಸುಟ್ಟ ಗಾಯಗಳಾಗಿವೆ. 15 ವರ್ಷದ ಬಾಲಕಿ ಸೇರಿದಂತೆ 7 ಮಂದಿಯ ಸ್ಥಿತಿ ಗಂಭೀರವಾಗಿದೆ. ಅಗ್ನಿ ಅನಾಹುತಕ್ಕೆ ನಿಖರ ಕಾರಣ ತಿಳಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆಯು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ತಂಜಾವೂರಿನಲ್ಲಿ ಸಿಲಿಂಡರ್ ಸ್ಫೋಟ: ಬೆಂಕಿ ನಂದಿಸಲು ಹೋದ 10 ಜನರಿಗೆ ಸುಟ್ಟ ಗಾಯ, 7 ಮಂದಿ ಸ್ಥಿತಿ ಗಂಭೀರ
ಬೆಂಕಿ
ನಯನಾ ರಾಜೀವ್
|

Updated on: Jul 30, 2026 | 1:45 PM

Share

ತಂಜಾವೂರು, ಜುಲೈ 30: ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುಓಣಂ ಬಳಿಯ ಲಕ್ಷ್ಮಿಪುರಂ ಗ್ರಾಮದಲ್ಲಿ ಭೀಕರ ಅಗ್ನಿ ಅನಾಹುತ(Fire Accident) ಸಂಭವಿಸಿದೆ. ಹುಲ್ಲಿನ ಮನೆಗೆ ಬಿದ್ದ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದ್ದಾಗ ಎಲ್‌ಪಿಜಿ (LPG) ಸಿಲಿಂಡರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡು, 15 ವರ್ಷದ ಬಾಲಕಿ ಸೇರಿದಂತೆ ಕನಿಷ್ಠ 10 ಜನರಿಗೆ ಸುಟ್ಟ ಗಾಯಗಳಾಗಿವೆ.

ದುರಂತ ಸಂಭವಿಸಿದ್ದು ಹೇಗೆ? ರೈತ ಮುರುಗಯನ್ ಎಂಬುವವರ ಕುಟುಂಬವು ತಮ್ಮ ಹುಲ್ಲಿನ ಮನೆಯಲ್ಲಿ ಮಲಗಿದ್ದಾಗ ಬೆಳಗಿನ ಜಾವ ಸುಮಾರು 2 ಗಂಟೆಯ ವೇಳೆಗೆ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯನ್ನು ಗಮನಿಸಿದ ನೆರೆಹೊರೆಯವರು ತಕ್ಷಣವೇ ಕುಟುಂಬಸ್ಥರನ್ನು ಮನೆಯಿಂದ ಸುರಕ್ಷಿತವಾಗಿ ಹೊರತರಲು ಸಹಾಯ ಮಾಡಿದ್ದಾರೆ. ಅಗ್ನಿಶಾಮಕ ವಾಹನ ಬರುವುದು ತಡವಾಗುತ್ತದೆ ಎಂದು ಸ್ಥಳೀಯರು ಬಕೆಟ್‌ಗಳಲ್ಲಿ ನೀರು ತಂದು ಬೆಂಕಿ ನಂದಿಸಲು ಮುಂದಾಗಿದ್ದಾರೆ. ಆದರೆ, ಅಡುಗೆಮನೆಯೊಳಗೆ ಸಿಲಿಂಡರ್ ಇರುವುದು ಯಾರಿಗೂ ತಿಳಿದಿರಲಿಲ್ಲ. ಜನರು ಜಮಾಯಿಸಿದ ಬೆನ್ನಲ್ಲೇ ಸಿಲಿಂಡರ್ ಭೀಕರವಾಗಿ ಸ್ಫೋಟಗೊಂಡಿದೆ.

ಸ್ಫೋಟದ ತೀವ್ರತೆಗೆ ರೈತ ಮುರುಗಯನ್ ಹಾಗೂ ಅವರ 15 ವರ್ಷದ ಮಗಳು ಅಭಿನಯ ಸೇರಿದಂತೆ ಕಾಸಿನಾಥನ್, ರಾಜಶೇಖರ್, ಪಳನಿವೇಲ್, ವೆಂಬಯ್ಯನ್, ಕಲೈಯರಸಿ, ಭುವನೇಶ್ವರನ್, ಸೆಲ್ವರಾಜ್ ಮತ್ತು ಕಲಿಯಮ್ಮಾಳ್ ಸುಟ್ಟ ಗಾಯಗಳಿಂದ ನರಳಿದ್ದಾರೆ. ಪ್ರತ್ಯಕ್ಷದರ್ಶಿ ದುರ್ಗಾದೇವಿ ಎಂಬುವವರು ಮಾತನಾಡಿ, “ಗಂಡಸರು ನೀರು ತಂದು ಬೆಂಕಿ ಆರಿಸಲು ಹೋದಾಗ ಸಿಲಿಂಡರ್ ಇರುವುದು ಗೊತ್ತಿರಲಿಲ್ಲ. ಕೆಲವರ ದೇಹ ಶೇಕಡಾ 80 ಕ್ಕಿಂತ ಹೆಚ್ಚು ಸುಟ್ಟುಹೋಗಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಓದಿ: ಆಕ್ಸಿಜನ್ ಸಿಲಿಂಡರ್ ಸ್ಫೋಟ: ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಭಾರಿ ಅಗ್ನಿ ಅವಘಡ

ಆಸ್ಪತ್ರೆಗೆ ದಾಖಲು ಹಾಗೂ ಪೊಲೀಸ್ ತನಿಖೆ ಗಾಯಾಳುಗಳನ್ನು ತಕ್ಷಣವೇ ರಕ್ಷಿಸಿ ಮೂವರನ್ನು ಪಟ್ಟುಕೊಟ್ಟೈ ಸರ್ಕಾರಿ ಆಸ್ಪತ್ರೆಗೆ ಹಾಗೂ ತೀವ್ರ ಸುಟ್ಟ ಗಾಯಗಳಾಗಿರುವ 7 ಜನರನ್ನು ತಂಜಾವೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಗಿದೆ. ಆಸ್ಪತ್ರೆಯ ಬಳಿ ಗಾಯಾಳುಗಳ ಸಂಬಂಧಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ತಿರುಓಣಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಆರಂಭಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us