ನಾಯಂಡಹಳ್ಳಿ ಪ್ಲಾಸ್ಟಿಕ್ ಗೋದಾಮಿನಲ್ಲಿ ಅಗ್ನಿ ಅನಾಹುತ: ಸುತ್ತಮುತ್ತ ಕವಿದ ದಟ್ಟ ಹೊಗೆ
ಬೆಂಗಳೂರಿನ ನಾಯಂಡಹಳ್ಳಿಯ ಪ್ಲಾಸ್ಟಿಕ್ ಗೋದಾಮಿನಲ್ಲಿ ಭಾರಿ ಅಗ್ನಿ ಅನಾಹುತ ಸಂಭವಿಸಿದೆ. ಟನ್‌ಗಟ್ಟಲೆ ಸ್ಕ್ರಾಪ್ ಪ್ಲಾಸ್ಟಿಕ್ ಸಂಗ್ರಹಿಸಿದ್ದರಿಂದ ಬೆಂಕಿ ನಿಯಂತ್ರಣಕ್ಕೆ ಬಾರದ ಕಾರಣ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಹಾಸವನ್ನೇ ಪಟ್ಟಿದ್ದಾರೆ. ದಟ್ಟ ಹೊಗೆ ಇಡೀ ಪ್ರದೇಶವನ್ನು ಆವರಿಸಿತ್ತಾದರೂ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಆಸ್ತಿಪಾಸ್ತಿ ನಷ್ಟ ಉಂಟಾಗಿದೆ.
ಬೆಂಗಳೂರು, ಮೇ 14: ನಾಯಂಡಹಳ್ಳಿ ಪ್ಲಾಸ್ಟಿಕ್ ಗೋದಾಮಿನಲ್ಲಿ ಭೀಕರ ಅಗ್ನಿ ಅನಾಹುತ ಸಂಭವಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟ ಪ್ರಸಂಗ ನಡೆದಿದೆ. ವೃಷಭಾವತಿ ನದಿ ಪಕ್ಕದಲ್ಲಿರುವ ಈ ಗೋದಾಮಿನಲ್ಲಿ ಟನ್‌ಗಟ್ಟಲೆ ಸ್ಕ್ರಾಪ್ ಪ್ಲಾಸ್ಟಿಕ್, ಹಳೆಯ ಪೈಪ್‌ಗಳು ಹಾಗೂ ಇತರೆ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಲಾಗಿತ್ತು. ಇದು ಬೆಂಕಿ ಹರಡಲು ಮುಖ್ಯ ಕಾರಣವಾಗಿದೆ. ಪ್ಲಾಸ್ಟಿಕ್‌ನಿಂದಾಗಿ ಬೆಂಕಿಯ ತೀವ್ರತೆ ಹೆಚ್ಚಾಗಿದ್ದು, ದಟ್ಟ ಹೊಗೆ ಇಡೀ ನಾಯಂಡಹಳ್ಳಿ ಪ್ರದೇಶವನ್ನು ಆವರಿಸಿತ್ತು. ಈ ಅಗ್ನಿ ಅನಾಹುತದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಕಿಡಿಗೇಡಿಗಳ ಕೃತ್ಯದಿಂದ ಅಥವಾ ಬಿಸಿಲಿನ ತಾಪಕ್ಕೆ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

