Andhra Pradesh: ಮಾನವೀಯತೆ ಸಾಕಾರಗೊಳಿಸಿದ ಆಂಧ್ರ ರೈಲ್ವೆ ಪೊಲೀಸರು ಕಚ್ಚಾ ಡೋಲಿ ಕಟ್ಟಿ ಮೃತ ದೇಹವನ್ನು ಹೊತ್ತೊಯ್ದರು!
ಎರಡು ಕಿಲೋ ಮೀಟರ್ ದೂರದ ಬುಡಂಪಾಡು ಎಂಬಲ್ಲಿಗೆ ಡೋಲಿಯಲ್ಲಿ ಶವವನ್ನು ಹೊತ್ತೊಯ್ದಿದ್ದಾರೆ. ಅಲ್ಲಿಂದ ಶವವನ್ನು ಗುಂಟೂರು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಯಿತು.
ಗುಂಟೂರು, ಜುಲೈ 29: ರೈಲ್ವೆ ಪೊಲೀಸರು (ಜಿಆರ್‌ಪಿ Railway Police) ಮತ್ತೊಮ್ಮೆ ಮಾನವೀಯತೆ (Humanity) ಮೆರೆದಿದ್ದಾರೆ. ಕಚ್ಚಾ ಡೋಲಿ ಕಟ್ಟಿಕೊಂಡು ( Kaccha Doly) ಮೃತ ದೇಹವನ್ನು ಕೆಲವು ಕಿಲೋಮೀಟರ್ ವರೆಗೆ ಸಾಗಿಸಲಾಗಿದೆ. ರೈಲ್ವೆ ಪೊಲೀಸರ ಪ್ರಕಾರ ಚೇಬ್ರೋಲು ಮಂಡಲದ ವೆಜೆಂಡ್ಲಾ ರೈಲು ನಿಲ್ದಾಣಕ್ಕೆ ಒಂದು ಫೋನ್ ಕರೆ ಬಂದಿದೆ. ರೈಲ್ವೆ ನಿಲ್ದಾಣದಿಂದ ಅನತಿ ದೂರದಲ್ಲಿರುವ ಹಳಿಯಲ್ಲಿ ಮೃತದೇಹವಿದೆ ಎಂದು ಕರೆ ಮಾಡಿದವರು ತಿಳಿಸಿದ್ದಾರೆ. ಈ ವಿಷಯವನ್ನು ಸ್ಥಳೀಯ ಗ್ರಾಮ ಪಂಚಾಯತ್ ಸಿಬ್ಬಂದಿ ಪೊಲೀಸ್ ಠಾಣೆಯ ಗಮನಕ್ಕೆ ತಂದರು. ತಕ್ಷಣ ಜಿಆರ್‌ಪಿ ಎಸ್‌ಎಸ್‌ಐ ಶ್ರೀನಿವಾಸ ರಾವ್, ಆರ್‌ಪಿಎಫ್ ಎಸ್‌ಎಸ್‌ಐ ರಮೇಶ್ ಮತ್ತು ಕಾನ್‌ಸ್ಟೆಬಲ್ ಶ್ರೀನಿವಾಸ ರಾವ್ ಚೇಬ್ರೋಲು ರೈಲು ನಿಲ್ದಾಣ ತಲುಪಿದರು. ಅಲ್ಲಿಂದ ಮೃತ ದೇಹವಿದ್ದ ಪ್ರದೇಶಕ್ಕೆ ಹೋದರು. ಆದರೆ, ಮೃತದೇಹದ (Dead body) ಗುರುತು ಸಿಗದಂತಾಗಿತ್ತು. ಅಲ್ಲಿ ಆಂಬ್ಯುಲೆನ್ಸ್ ಸ್ಥಳಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಬೆಳೆ, ಪೈರುಪಚ್ಚೆ, ಗದ್ದೆಗಳು ಇರುವುದರಿಂದ ಅಲ್ಲಿಗೆ ಯಾವುದೇ ವಾಹನ ಬರಲಾಗದ ಪರಿಸ್ಥಿತಿ ಇದೆ. ಆಗ ಮೂವರೂ ಒಟ್ಟಾಗಿ ಯೋಚಿಸಿದರು. ಹೇಗಾದರೂ ಮಾಡಿ ಶವವನ್ನು ಅಲ್ಲಿಂದ ಶವಾಗಾರಕ್ಕೆ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ (Guntur, Andhra Pradesh).
ಅಲ್ಲಿಂದ ಗುಂಟೂರು ತಲುಪುವುದಕ್ಕಿಂತ ಚೇಬ್ರೋಲು ಮಂಡಲಕ್ಕೆ ಬಂದು ಬುಡಂಪಾಡುವಿಗೆ ಹೋಗಿ, ಅಲ್ಲಿಂದ ಗುಂಟೂರಿಗೆ ಹೋಗುವುದು ಸುಲಭ ಎಂದು ಮೂವರೂ ನಿರ್ಧರಿಸಿದರು. ಆದರೆ, ಬುಡಂಪಾಡುಗೆ ಎರಡು ಕಿ.ಮೀ. ಮೃತ ದೇಹವನ್ನು ಕೊಂಡೊಯ್ಯಲು ಬೇಕಾದ ವ್ಯವಸ್ಥೆಯಿರಲಿಲ್ಲ. ಅಲ್ಲಿ ಸಿಕ್ಕ ಚಿಕ್ಕ ವಸ್ತುಗಳಿಂದ ಡೋಲಿಯನ್ನು ತಯಾರಿಸಿಕೊಂಡರು.
ಬಳಿಕ ಅಲ್ಲಿಂದ ಎರಡು ಕಿಲೋ ಮೀಟರ್ ದೂರದ ಬುಡಂಪಾಡು ಎಂಬಲ್ಲಿಗೆ ಡೋಲಿಯಲ್ಲಿ ಶವವನ್ನು ಹೊತ್ತೊಯ್ದಿದ್ದಾರೆ. ಅಲ್ಲಿಂದ ಶವವನ್ನು ಗುಂಟೂರು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಯಿತು. ಆದರೆ, ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆಕಸ್ಮಿಕವಾಗಿ ರೈಲಿನಿಂದ ಬಿದ್ದು ಸಾವನ್ನಪ್ಪಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಗ್ರಾ. ಪಂ. ಪೊಲೀಸರು ತಿಳಿಸಿದ್ದಾರೆ.
ಮೃತ ದೇಹವನ್ನು ಶವಾಗಾರಕ್ಕೆ ತಂದ ಮೂವರು ಪೊಲೀಸರು ಮಾನವೀಯತೆ ಮೆರೆದ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೂರೂ ಸಿಬ್ಬಂದಿಯನ್ನು ಮೇಲಧಿಕಾರಿಗಳು ಶ್ಲಾಘಿಸಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ