Indian Railways: ರೈಲು ಬಿಡಬೇಡಿ ಅನ್ನಬೇಡಿ! ನಿಜವಾಗಿಯೂ ನಿಲ್ದಾಣಕ್ಕೆ ರೈಲು 90 ನಿಮಿಷ ಮುಂಚಿತವಾಗಿಯೇ ಬಂದುಬಿಟ್ಟಿತು.. ಪ್ರಯಾಣಿಕರಿಗೆ ಆತಂಕವೋ ಆತಂಕ!

Vasco da Gama-Hajarat Nizamuddin Goa Express train: ವಾಸ್ತವವಾಗಿ ದೆಹಲಿಯತ್ತ ಹೋಗಬೇಕಿದ್ದ ರೈಲು ಆ ನಿಲ್ದಾಣದಲ್ಲಿ 45 ಜನರನ್ನು ಕರೆದೊಯ್ಯಬೇಕಿತ್ತು. ಆದರೆ 9.45 ಕ್ಕೆ ಪ್ರಯಾಣಿಕರು ಅಲ್ಲಿಗೆ ಬಂದಾಗ ರೈಲು ಹೊರಟಿರುವುದು ತಿಳಿದು ಪೆಚ್ಚಾಗಿದ್ದಾರೆ/ಬೆಚ್ಚಿಬಿದ್ದಿದ್ದಾರೆ.

Indian Railways: ರೈಲು ಬಿಡಬೇಡಿ ಅನ್ನಬೇಡಿ! ನಿಜವಾಗಿಯೂ ನಿಲ್ದಾಣಕ್ಕೆ ರೈಲು 90 ನಿಮಿಷ ಮುಂಚಿತವಾಗಿಯೇ ಬಂದುಬಿಟ್ಟಿತು.. ಪ್ರಯಾಣಿಕರಿಗೆ ಆತಂಕವೋ ಆತಂಕ!
ರೈಲು ನಿಜವಾಗಿಯೂನೇ ನಿಲ್ದಾಣಕ್ಕೆ 90 ನಿಮಿಷ ಮುಂಚಿತವಾಗಿ ಬಂದುಬಿಟ್ಟಿತು..
Follow us
ಸಾಧು ಶ್ರೀನಾಥ್​
|

Updated on:Jul 29, 2023 | 11:28 AM

ನಮ್ಮ ಭಾರತೀಯ ರೈಲು (Indian Railways) ಅಂದ್ರೆ ಅದು ಯಾವತ್ತೂ ಸಮಯಕ್ಕೆ ಸರಿಯಾಗಿ ಬಂದಿದ್ದಿಲ್ಲ. ತಡವಾಗಿ ಬರುವುದೇ ಅದರ ಜಾಯಮಾನ. ಜಪಾನು ಇತರೆ ದೇಶಗಳಲ್ಲಿರುವಂತೆ ಕರಾರುವಕ್ಕಾಗಿ ಸಮಯಕ್ಕೆ ಸರಿಯಾಗಿ ಬರುವ ವಿಶೇಷತೆ ನಮ್ಮ ರೈಲುಗಳಿಲ್ಲ ಬಿಡಿ. ಆದರೂ ಸಮಯಕ್ಕೆ ಸರಿಯಾಗಿ ರೈಲು ಬಂದುಬಿಟ್ಟರೆ ಪ್ರಯಾಣಿಕರಿಗೆ (Passengers) ನಿಜಕ್ಕೂ ಖುಷಿಯೇ ಆಗುತ್ತದೆ. ಅಂತಹುದರಲ್ಲಿ ಇಲ್ಲೊಂದು ರೈಲು ಕರಾರುವಕ್ಕಾಗಿ ಒಂದೂವರೆ ಗಂಟೆ ಮುಂಚಿತವಾಗಿ ಸ್ಟೇಷನ್ನಿನೊಳಕ್ಕೆ ಬಂದುಬಿಟ್ಟರೆ ಗತಿಯೇನು? ಪ್ರಯಾಣಿಕರು ಎಲ್ಲಿ ಹೋಗಬೇಕು? ಸಿಬ್ಬಂದಿಯ ಗತಿಯೇನು? ಅಂತಹ ಪ್ರಸಂಗವೂ ನಿನ್ನೆ ಶುಕ್ರವಾರ ನಡೆದಿದೆ.

ದೇಶದಲ್ಲಿ ಸಂಚರಿಸುವ ಸಾವಿರಾರು ರೈಲುಗಳು ಕಾಲಕಾಲಕ್ಕೆ ನಿಲ್ದಾಣಕ್ಕೆ ತಡವಾಗಿ ಬರುವುದು ಸಾಮಾನ್ಯ. ಆದರೆ ವಾಸ್ಕೋಡಿಗಾಮಾ – ಹಜರತ್ ನಿಜಾಮುದ್ದೀನ್ ಗೋವಾ ಎಕ್ಸ್‌ಪ್ರೆಸ್ (Vasco da Gama-Hajarat Nizamuddin Goa Express) ಎಲ್ಲಾ ಪ್ರಯಾಣಿಕರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. 90 ನಿಮಿಷ ಮುಂಚಿತವಾಗಿ ನಿಲ್ದಾಣಕ್ಕೆ ಬಂದುಬಿಟ್ಟಿದೆ. ಇದರಿಂದ ಪ್ರಯಾಣಿಕರು ಗೊಂದಲಕ್ಕೊಳಗಾದರು. ವಿವರಗಳನ್ನು ನೋಡುವುದಾದರೆ, ಈ ರೈಲು ಮಹಾರಾಷ್ಟ್ರದ ಮನ್ಮಾಡ್ ಜಂಕ್ಷನ್‌ಗೆ (Maharashtra Manmad junction) ಬೆಳಿಗ್ಗೆ 10.35 ಕ್ಕೆ ಆಗಮಿಸ ಬೆಕಿತ್ತು. ಆದರೆ, ಆ ರೈಲು ಮಾರ್ಗ ಬದಲಿಸಿಕೊಂಡು 9.05 ಕ್ಕೇ ನಿಲ್ದಾಣಕ್ಕೆ ತಲುಪಿಬಿಟ್ಟಿದೆ. ಆದರೆ ಆ ಟ್ರೈನಿಗೆ ಹೋಗಬೇಕಿದ್ದ ಪ್ರಯಾಣಿಕರು ನಿಲ್ದಾಣಕ್ಕೆ ಬಂದಿರಲಿಲ್ಲ. ಆದರೂ ರೈಲು ನಿಲ್ದಾಣಕ್ಕೆ ಬಂದ ಐದೇ ನಿಮಿಷದಲ್ಲಿ ಹೊರಟುಬಿಟ್ಟಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ವಾಸ್ತವವಾಗಿ ದೆಹಲಿಯತ್ತ ಹೋಗಬೇಕಿದ್ದ ರೈಲು ಆ ನಿಲ್ದಾಣದಲ್ಲಿ 45 ಜನರನ್ನು ಕರೆದೊಯ್ಯಬೇಕಿತ್ತು. ಆದರೆ 9.45 ಕ್ಕೆ ಪ್ರಯಾಣಿಕರು ಅಲ್ಲಿಗೆ ಬಂದಾಗ ರೈಲು ಹೊರಟಿರುವುದು ತಿಳಿದು ಪೆಚ್ಚಾಗಿದ್ದಾರೆ/ಬೆಚ್ಚಿಬಿದ್ದಿದ್ದಾರೆ. ತಮಗೆ ಕೂಡಲೇ ಪರ್ಯಾಯವಾಗಿ ಮತ್ತೊಂದು ರೈಲು ವ್ಯವಸ್ಥೆ ಮಾಡಬೇಕು ಎಂದು ನಿಲ್ದಾಣ ವ್ಯವಸ್ಥಾಪಕರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ : ಮೊಹರಂ ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶ, ಇಬ್ಬರ ಸಾವು

ಮನ್ಮಾಡ್ ಸ್ಟೇಷನ್​ ಅಧಿಕಾರಿಗಳು ಪ್ರಯಾಣಿಕರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ಅವರಿಗಾಗಿ ಅದೇ ಸಮಯದಲ್ಲಿ ಮನ್ಮಾಡ್ ಸ್ಟೇಷನ್​​ ಗೆ ಆಗಮಿಸುತ್ತಿದ್ದ ಗೀತಾಂಜಲಿ ಎಕ್ಸ್‌ಪ್ರೆಸ್ ಅನ್ನು ಕೋರಿಕೆಯ ಮೇರೆಗೆ ನಿಲ್ಲಿಸಿದ್ದಾರೆ. ಅಲ್ಲಿ ಕಾಯುತ್ತಿದ್ದ 45 ಮಂದಿ ಪ್ರಯಾಣಿಕರನ್ನೂ ಆ ಟ್ರೈನಿಗೆ ಹತ್ತಿಸಿ, ಮುಂದೆ ಜಲಾಪ್‌ ಸ್ಟೇಷನ್ ನಲ್ಲಿ ಇಳಿದುಕೊಳ್ಲುವಂತೆ ಸೂಚಿಸಿದ್ದಾರೆ. ಅದುವರೆಗೂ ಜಲಗಾವ್​ ಸ್ಟೇಷನ್ (Jalgaon) ನಲ್ಲಿ ದೆಹಲಿಯತ್ತ ಚಲಿಸುತ್ತಿರುವ ವಾಸ್ಕೋಡಿಗಾಮಾ – ಹಜರತ್ ನಿಜಾಮುದ್ದೀನ್ ಗೋವಾ ಎಕ್ಸ್‌ಪ್ರೆಸ್ ಅನ್ನು ತಡೆಹಿಡಿಯುವಂತೆಯೂ ಅಧಿಕಾರಿಗಳು ಸೂಚನೆ ಕೊಟ್ಟಿದ್ದರು ಅನ್ನಿ. ಅದರೊಂದಿಗೆ ಪರಿಸ್ಥಿತಿ ಶಾಂತವಾಯಿತು, ಪ್ರಯಾಣಿಕರೂ ಶಾಂತವಾದರು! ಇಷ್ಟಕ್ಕೂ ರೈಲು ಬೇಗ ಬಂದಿದ್ದು ಯಾಕೆ ಎಂಬುದಕ್ಕೆ ಪ್ರತಿಕ್ರಿಯಿಸಿರುವ ರೈಲ್ವೆ ಸಿಬ್ಬಂದಿ ಆ ರೈಲಿನಲ್ಲಿ ದರೋಡೆ ನಡೆದಿತ್ತು ಎಂದಿದ್ದಾರೆ. ಅದರ ಬಗ್ಗೆಯೂ ಈಗ ತನಿಖೆ ಆರಂಭಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:18 am, Sat, 29 July 23