AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೃತದೇಹಗಳ ಅಂತ್ಯ ಸಂಸ್ಕಾರ ನೆರವೇರಿಸುವ ಉದಾತ್ತ ಸೇವೆಯಲ್ಲಿ ತೊಡಗಿಸಿಕೊಂಡಿರುವ ಉಡುಪಿ ಮೋಕ್ಷಾ ತಂಡ

Udupi moksha team: ಸೂರಿ ಹಾಗೂ ಅವರ ಸ್ನೇಹಿತರ ತಂಡವು ಈವರೆಗೆ ಸುಮಾರು 200 ಮೃತದೇಹಗಳ ಅಂತ್ಯ ಸಂಸ್ಕಾರ ನೆರವೇರಿಸುವಲ್ಲಿ ಸಹಕರಿಸಿದ್ದಾರೆ. ಕೊರೊನಾ ಸಮಯದಲ್ಲಿ ತಮ್ಮ ಬಂಧುಗಳ ಮನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಅಂತ್ಯಸಂಸ್ಕಾರ ಅದೇ ದಿನ ನೆರವೇರಿಸಲು ಸಾಧ್ಯವಾಗಿರಲಿಲ್ಲ. ಆದರೆ ಆ ಮೃತದೇಹವನ್ನು ಕಾಪಿಡಲು ಸಕಾಲದಲ್ಲಿ ಅವರಿಗೆ ಫ್ರಿಡ್ಜರ್‌ ಸಿಗಲಿಲ್ಲ. 24 ಗಂಟೆಗಳ ಕಾಲ ಆ ಮೃತದೇಹವನ್ನು ಮನೆಯಲ್ಲಿಯೇ ಇಡುವಂತಾಗಿತ್ತು.

ಮೃತದೇಹಗಳ ಅಂತ್ಯ ಸಂಸ್ಕಾರ ನೆರವೇರಿಸುವ ಉದಾತ್ತ ಸೇವೆಯಲ್ಲಿ ತೊಡಗಿಸಿಕೊಂಡಿರುವ ಉಡುಪಿ ಮೋಕ್ಷಾ ತಂಡ
ಮೃತದೇಹಗಳ ಅಂತ್ಯ ಸಂಸ್ಕಾರ ನೆರವೇರಿಸುವ ಉದಾತ್ತ ಸೇವೆಯಲ್ಲಿ ಮೋಕ್ಷಾ ತಂಡ
ಪ್ರಜ್ವಲ್ ಅಮೀನ್​, ಉಡುಪಿ
| Updated By: ಸಾಧು ಶ್ರೀನಾಥ್​

Updated on:Nov 16, 2023 | 11:52 AM

Share

ತಮ್ಮ ಜೀವನದಲ್ಲಿ ನಡೆದ ಒಂದು ಕರಾಳ ಘಟನೆಯಿಂದ ಮನನೊಂದು ಸಮಾಜ ಸೇವೆಗೆ ಇಳಿದವರು ಇವರು. ಕಣ್ಣೆದುರೇ ತನ್ನವರ ದೇಹ ಕೊಳೆತು ಹೋಗುವುದನ್ನು ನೋಡಿ ಅಂದು ಕಣ್ಣೀರಿಟ್ಟಿದ್ದರು. ಆದರೆ ಅಂದು ತನ್ನವರಿಗೆ ಆದ ಸಮಸ್ಯೆ ಮುಂದೆ ಉಳಿದವರಿಗೆ ಆಗಬಾರದು ಎನ್ನುವ ಸದುದ್ದೇಶದಿಂದ ಶವವನ್ನ (dead bodies) ಸಂರಕ್ಷಿಸುವ ಕಾರ್ಯಕ್ಕೆ ಕೈ ಹಾಕಿರುವ ಈ ತಂಡದ ಸಮಾಜ ಸೇವೆ ಬಲು ಅಪರೂಪ. ಹೌದು ಜೀವನದಲ್ಲಿ ಅನುಭವಿಸಿದ ನೋವುಗಳು ಮುಂದೆ ಪರಿವರ್ತನೆಗೆ ದಾರಿ ಮಾಡಿಕೊಡುತ್ತವೆ ಎನ್ನುವುದಕ್ಕೆ ಈ ಮೋಕ್ಷ ಸೂರಿ ಪ್ರತ್ಯಕ್ಷ ಸಾಕ್ಷಿ. ವೃತ್ತಿಯಲ್ಲಿ ಪಿಕಪ್‌ ಚಾಲಕರಾಗಿರುವ ಸುರೇಂದ್ರ ಮತ್ತು ಅವರ ತಂಡದವರು (Udupi moksha team) ಮೋಕ್ಷ ಅನ್ನುವ ಹೆಸರಲ್ಲಿ ಮೃತದೇಹವನ್ನು ಹೆಚ್ಚಿನ ಸಮಯದವರೆಗೆ ಹದಗೆಡದಂತೆ ಕಾಪಿಡಲು ಫ್ರಿಡ್ಜರ್‌ ಅನ್ನು ಉಚಿತವಾಗಿ ಒದಗಿಸುವ ಕೈಂಕರ್ಯ ಕೈಗೊಂಡಿದ್ದಾರೆ. ಸುಮಾರು 15-17 ಮಂದಿಯ ಯುವಕರ ತಂಡವು ಈ ಪುಣ್ಯ ಕಾರ್ಯಕ್ಕೆ (last rites) ಮುಂದಾಗಿದೆ.

ಸೂರಿ ಹಾಗೂ ಅವರ ಸ್ನೇಹಿತರ ತಂಡವು ಈವರೆಗೆ ಸುಮಾರು 200 ಮೃತದೇಹಗಳ ಅಂತ್ಯ ಸಂಸ್ಕಾರ ನೆರವೇರಿಸುವಲ್ಲಿ ಸಹಕರಿಸಿದ್ದಾರೆ. ಕೊರೊನಾ ಸಮಯದಲ್ಲಿ ತಮ್ಮ ಬಂಧುಗಳ ಮನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಅಂತ್ಯಸಂಸ್ಕಾರ ಅದೇ ದಿನ ನೆರವೇರಿಸಲು ಸಾಧ್ಯವಾಗಿರಲಿಲ್ಲ. ಆದರೆ ಆ ಮೃತದೇಹವನ್ನು ಕಾಪಿಡಲು ಸಕಾಲದಲ್ಲಿ ಅವರಿಗೆ ಫ್ರಿಡ್ಜರ್‌ ಸಿಗಲಿಲ್ಲ. 24 ಗಂಟೆಗಳ ಕಾಲ ಆ ಮೃತದೇಹವನ್ನು ಮನೆಯಲ್ಲಿಯೇ ಇಡುವಂತಾಗಿತ್ತು. ಇದನ್ನು ನೋಡಿ ನೊಂದ ಸೂರಿ ಅವರು ತಮ್ಮ ಊರಾದ ಕುಂದಾಪುರ, ಸಾಸ್ತಾನ ಹಾಗೂ ಬೆಂಗಳೂರಿನಲ್ಲಿರುವ ಸ್ನೇಹಿತರೆಲ್ಲರ ಸಹಕಾರದಿಂದ ಈ ಫ್ರಿಡ್ಜರ್‌ ಅನ್ನು ಉಚಿತವಾಗಿ ನೀಡಲು ಯೋಚನೆ ಮಾಡಿ, ಸದ್ಯ ಈ ಉಚಿತ ಸೇವೆ ‌ನೀಡುತ್ತಿದ್ದಾರೆ.

ಮೂಲತಃ ಕೋಟೇಶ್ವರದ ಬೀಜಾಡಿ ನಿವಾಸಿಯಾಗಿರುವ ಸೂರಿ, ತಮ್ಮ ವ್ಯಾಪ್ತಿಯ ಸುಮಾರು 10 ಕಿ.ಮೀ.ವರೆಗೆ ಈ ಫ್ರಿಡ್ಜರ್‌ ಅನ್ನು ಉಚಿತವಾಗಿ ಸಾಗಾಟ ಮಾಡಲು ವಾಹನದ ವ್ಯವಸ್ಥೆಯನ್ನು ಈ ತಂಡದ ವತಿಯಿಂದ ಮಾಡಿಕೊಡುತ್ತಿದ್ದಾರೆ. ಇದರ ಜೊತೆ ವೀಲ್ ಚೇರ್, ಸ್ಟ್ರೇಚರ್, ಕಮೋಡ್ ಚೇರ್, ಕಿಟ್, ಸೆಕ್ಷನ್ ಮೆಷಿನ್, ಬ್ಯಾಕ್ ಆಲ್ಟ್ರನೇಬಲ್ ಬೆಡ್, ವಾಕರ್, ರೋಗಿ ಮಲಗುವ ವಾಟರ್ ಬೆಡ್, ನೆಬ್ಯುಲೈಸರ್, ಜನರೇಟರ್, ಮೃತದೇಹ ಮಲಗಿಸುವ ಸ್ಟೀಲ್ ಮಂಚ, ಶವ ಕ್ರಿಯೆಗೆ ಬೇಕಾದ ಪಾತ್ರೆ, ಮೃತದೇಹದ ಸ್ನಾನ ಮಾಡಿಸುವ ಟೆಂಟ್, ಇನ್ನಿತರ ವಸ್ತುಗಳನ್ನು ಉಚಿತವಾಗಿ ನೀಡಿ ಮಾನವೀಯ ಕೆಲಸ ಮಾಡುತ್ತಿದ್ದಾರೆ. ಯಾವುದೇ ಜಾತಿ ಮತ ಇರಲಿ, ತುರ್ತು ಕರೆ ಬಂದರೆ ಸಮಯಕ್ಕೆ ಸರಿಯಾಗಿ ರಕ್ತದಾನ ಮಾಡಿ ರೋಗಿಯ ಜೀವ ಉಳಿಸುವ ಕೆಲಸಕ್ಕೂ ರೆಡಿಯಾಗುತ್ತಾರೆ. ಈವರೆಗೆ 31 ಬಾರಿ ರಕ್ತದಾನ ಮಾಡಿದ್ದಾರೆ.

Also Read: ಟ್ರಾಕ್ಟರ್ ಉಳುಮೆ ಮಾಡುವಾಗ ತೋಟದಲ್ಲಿ ಪತ್ತೆಯಾಯ್ತು ಮೃತ ದೇಹ, ದಂಗಾದ ರೈತ, ಮುಂದೇನಾಯ್ತು?

ಒಟ್ಟಾರೆಯಾಗಿ ಇವರ ಸೇವೆಯನ್ನು ಗಮನಿಸಿ ಅನೇಕ ಜನರು ಹಣ ನೀಡಲು ಮುಂದೆ ಬಂದಿದ್ದಾರೆ. ಆದರೆ ಇವರು ಎಲ್ಲಿಯೂ ಹಣ ಪಡೆಯದೆ ಅವರಿಂದ ಸೇವಾ ಕಾರ್ಯಕ್ಕೆ ಬೇಕಾದ ವಸ್ತುಗಳನ್ನು ಪಡೆದು ಅದೆಲ್ಲವನ್ನೂ ರೋಗಿಗಳಿಗೆ ಉಚಿತವಾಗಿ ನೀಡುತ್ತಿರುವುದು ಶ್ಲಾಘನೀಯ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:43 am, Tue, 7 November 23

ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಸಂಪುಟ ಸಭೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವುದು ದುಂದು ವೆಚ್ಚವಲ್ಲವೇ?
ಸಂಪುಟ ಸಭೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವುದು ದುಂದು ವೆಚ್ಚವಲ್ಲವೇ?
ಸಂವೇದನೆಯಿಲ್ಲದ, ಸೂಕ್ಷ್ಮತೆ ಗೊತ್ತಿರದ ಸಿಬ್ಬಂದಿಯಿಂದ ಸಮೀಕ್ಷೆ ಬೇಕಿತ್ತೇ?
ಸಂವೇದನೆಯಿಲ್ಲದ, ಸೂಕ್ಷ್ಮತೆ ಗೊತ್ತಿರದ ಸಿಬ್ಬಂದಿಯಿಂದ ಸಮೀಕ್ಷೆ ಬೇಕಿತ್ತೇ?