Insurance: ಪೊಲೀಸ್ ವಾಹನದ ದಾಖಲೆಯನ್ನೇ ಕೇಳಿದ ವಾಹನ ಸವಾರ, ಕಕ್ಕಾಬಿಕ್ಕಿಯಾದ ಪೊಲೀಸ್!
Kundapura police: ನಡುರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ, ಸಾರ್ವಜನಿಕರಿಗೆ ಫೈನ್ ಹಾಕುತ್ತಿದ್ದ ಪೊಲೀಸ್ ಅಧಿಕಾರಿನ್ನೇ ವಾಹನ ಸವಾರರೊಬ್ಬರು ವಾಹನದ ದಾಖಲೆ ಕೊಡುವಂತೆ ಜೋರಾಗಿಯೇ ಕೇಳಿದ್ದಾರೆ. ಅದಕ್ಕೆ ಕಕ್ಕಾಬಿಕ್ಕಿಯಾಗುವ ಸರದಿ ಪೊಲೀಸ್ ಅಧಿಕಾರಿಯದ್ದಾಗಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದ ಗ್ರಾಮದ ಅರೆಹೊಳೆ ಕ್ರಾಸ್ ಬಳಿ ಈ ಪ್ರಸಂಗ ನಡೆದಿದೆ.
ಉಡುಪಿ: ನಡುರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ, ಸಾರ್ವಜನಿಕರಿಗೆ ಫೈನ್ ಹಾಕುತ್ತಿದ್ದ ಪೊಲೀಸ್ ಅಧಿಕಾರಿನ್ನೇ ವಾಹನ ಸವಾರರೊಬ್ಬರು ವಾಹನದ ದಾಖಲೆ ಕೊಡುವಂತೆ ಜೋರಾಗಿಯೇ ಕೇಳಿದ್ದಾರೆ. ಅದಕ್ಕೆ ಕಕ್ಕಾಬಿಕ್ಕಿಯಾಗುವ ಸರದಿ ಪೊಲೀಸ್ ಅಧಿಕಾರಿಯದ್ದಾಗಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದ ಗ್ರಾಮದ ಅರೆಹೊಳೆ ಕ್ರಾಸ್ ಬಳಿ ಈ ಪ್ರಸಂಗ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕುಂದಾಪುರ ಪೊಲೀಸ್ ಸಿಬ್ಬಂದಿಯಿಂದ (kundapura, udupi) ವಾಹನ ತಪಾಸಣೆ ನಡೆಯುತ್ತಿತ್ತು.
ಸೀಟ್ ಬೆಲ್ಟ್, ಇನ್ಶೂರೆನ್ಸ್ , ಹೆಲ್ಮೆಟ್ ವಿಚಾರವಾಗಿ ಪೊಲೀಸರು ಸವಾರರಿಗೆ ಫೈನ್ ಹಾಕುತ್ತಿದ್ದರು. ಈ ವೇಳೆ ತಪಾಸಣೆ ಮಾಡುತ್ತಿದ್ದ ಪೊಲೀಸ್ ವಾಹನದ ಮಾಹಿತಿ ಕಲೆಹಾಕಿದ ವಾಹನ ಸವಾರರೊಬ್ಬರು ಸುಮಾರು 13 ವರ್ಷಗಳಿಂದ ಇನ್ಶೂರೆನ್ಸ್ ಕಟ್ಟದೆ (insurance papers) ಓಡಾಡುತ್ತಿರುವ ಪೊಲೀಸ್ ಇಲಾಖೆಯ ವಾಹನದ ದಾಖಲೆ ಪತ್ರವನ್ನು ತೋರಿಸುವಂತೆ ಕೇಳಿದ್ದಾರೆ.
2011 ಕ್ಕೆ ಇನ್ಶೂರೆನ್ಸ್ ಡ್ಯೂ ಆಗಿರುವ ಪೊಲೀಸ್ ವಾಹನ ಕುರಿತು ವಾಹನ ಸವಾರ ವಿಚಾರಿಸಿದ್ದಾರೆ. ಈ ಕುರಿತು ಸೀದಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನೇ ಕೇಳಿ. ಸದ್ಯಕ್ಕೆ ನನಗೆ ಫೈನ್ ಹಾಕಲು ಬಿಡಿ ಎಂದು ಪೊಲೀಸ್ ಅಧಿಕಾರಿ ಜಬರದಸ್ತು ಮಾಡಿದ್ದಾರೆ. ಹಾಗಾದ್ರೆ ಜನಸಾಮಾನ್ಯರಿಗೆ ಒಂದು ನ್ಯಾಯ, ಪೊಲೀಸರಿಗೆ ಒಂದು ನ್ಯಾಯವಾ? ಎಂದು ವಾಹನ ಸವಾರ ಪ್ರಶ್ನಿಸಿದ್ದಾರೆ. ಸದ್ಯ ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು (viral video), ವಾಹನ ಸವಾರನ ಕುರಿತು ಪ್ರಶಂಸೆಗಳು ವ್ಯಕ್ತವಾಗುತ್ತಿವೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:39 pm, Tue, 7 November 23