ಸೇತುವೆ ದಾಟಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ಶಿಕ್ಷಕ; ಗ್ರಾಮಸ್ಥರ ನೆರವಿನಿಂದ ಉಳಿಯಿತು ಶಿಕ್ಷಕನ ಪ್ರಾಣ
ತುಂಬಿ ಹರಿಯುವ ಸೇತುವೆ ದಾಟಲು ಹೋಗಿದ್ದ ಶಿಕ್ಷಕನೊಬ್ಬ ನೀರಿನಲ್ಲಿ ಕೊಚ್ಚಿ ಹೋದ ಘಟನೆ ದಾವಣಗೆರೆ(Davanagere) ಜಿಲ್ಲೆ ಚನ್ನಗಿರಿ ತಾಲೂಕಿನ ದೊಡ್ಡಘಟ್ಟ-ಚೊರಡೋಣಿ ಮಧ್ಯ ನಡೆದಿದೆ. ಇದನ್ನು ನೋಡಿ ಎಚ್ಚೆತ್ತ ಗ್ರಾಮಸ್ಥರು, ಕೂಡಲೇ ನೀರಿಗೆ ಹಾರಿ ರಕ್ಷಿಸಿದ್ದಾರೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಶಿಕ್ಷಕ(Teacher)ನ ಪ್ರಾಣ ಉಳಿದಿದೆ.
ದಾವಣಗೆರೆ, ನ.07: ತುಂಬಿ ಹರಿಯುವ ಸೇತುವೆ ದಾಟಲು ಹೋಗಿದ್ದ ಶಿಕ್ಷಕನೊಬ್ಬ ನೀರಿನಲ್ಲಿ ಕೊಚ್ಚಿ ಹೋದ ಘಟನೆ ದಾವಣಗೆರೆ(Davanagere) ಜಿಲ್ಲೆ ಚನ್ನಗಿರಿ ತಾಲೂಕಿನ ದೊಡ್ಡಘಟ್ಟ-ಚೊರಡೋಣಿ ಮಧ್ಯ ನಡೆದಿದೆ. ಇದನ್ನು ನೋಡಿ ಎಚ್ಚೆತ್ತ ಗ್ರಾಮಸ್ಥರು, ಕೂಡಲೇ ನೀರಿಗೆ ಹಾರಿ ರಕ್ಷಿಸಿದ್ದಾರೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಶಿಕ್ಷಕ(Teacher)ನ ಪ್ರಾಣ ಉಳಿದಿದೆ. ಇನ್ನು ರಾತ್ರಿಯಿಂದ ಚನ್ನಗಿರಿ ಭಾಗದಲ್ಲಿ ಸಾಕಷ್ಟು ಮಳೆಯಾಗಿತ್ತು. ಈ ವೇಳೆ ಚನ್ನಗಿರಿ ತಾಲೂಕಿನ ಬಸವಪಟ್ಟಣದಿಂದ ಶಿಕ್ಷಕ ತಿಮ್ಮಯ್ಯ ಎಂಬುವವರು ದೊಡ್ಡಘಟ್ಟ ಗ್ರಾಮದ ಶಾಲೆಗೆ ಹೋಗುತಿದ್ದರು. ಈ ವೇಳೆ ಚಿರಡೋಣಿ-ದೊಡ್ಡಘಟ್ಟ ಮಧ್ಯ ಬರುವ ಸೇತುವೆ ದಾಟುವಾಗ ಬೈಕ್ ಸಮೇತ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದರು. ಶಿಕ್ಷಕ ತಿಮ್ಮಯ್ಯ ಕೊಚ್ಚಿ ಹೋಗುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಈ ಘಟನೆ ಬಸವಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ