ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಗೇಟ್​ ಮೇಲೆಯೇ ಬಟ್ಟೆ ಒಣ ಹಾಕಿದ ಮಹಿಳೆ, ವಿಡಿಯೋ ವೈರಲ್

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಗೇಟ್​ ಮೇಲೆಯೇ ಬಟ್ಟೆ ಒಣ ಹಾಕಿದ ಮಹಿಳೆ, ವಿಡಿಯೋ ವೈರಲ್

ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಆಯೇಷಾ ಬಾನು

Updated on: Nov 07, 2023 | 2:55 PM

ಹುಬ್ಬಳ್ಳಿಯ ಪಾಲಿಕೆ ಕಚೇರಿಯ ಎದುರಿರುವ ಪ್ರಮುಖ ಗೇಟ್‌ ಮೇಲೆ ಅಲೆಮಾರಿ ಮಹಿಳೆಯೊಬ್ಬರು ಬಟ್ಟೆಗಳನ್ನು ಒಗೆದು ಒಣ ಹಾಕಿದ್ದಾರೆ. ಇದರಿಂದ ಮಹಾನಗರ ಪಾಲಿಕೆ ಸಿಬ್ಬಂದಿ ನಗೆಪಾಟಲಿಗೆ ಗುರಿಯಾಗಿದ್ದಾರೆ. ಪಾಲಿಕೆ‌ ಕಚೇರಿಯ ಎದುರಿಗೆ ಇರುವ ಎಂಟ್ರಿ ಮತ್ತು ಎಕ್ಸಿಟ್ ಗೇಟ್​ಗಳಿಗೆ ಬೀಗ ಹಾಕಲಾಗಿದೆ. ಇದನ್ನು ಗಮನಿಸಿದ ಮಹಿಳೆ ಇಲ್ಲಿ ಯಾರು ಬರಲ್ಲವೇನೂ ಎಂದು ಬಟ್ಟೆಗಳನ್ನು ಒಣಗಲು ಹಾಕಿದ್ದಾರೆ.

ಹುಬ್ಬಳ್ಳಿ, ನ.07: ವರ್ಷದ ಹಿಂದೆ ಸುವರ್ಣ ವಿಧಾನ ಸೌಧದ ಆವರಣದ ಪ್ರವೇಶದ್ವಾರದ ಮೆಟ್ಟಿಲಿನ ಮೇಲೆ ಶಾವಿಗೆ, ಸಂಡಿಗೆ, ಹಪ್ಪಳ ಒಣ ಹಾಕಿದ್ದ ವಿಡಿಯೋ ಭಾರೀ ಸದ್ದು ಮಾಡಿತ್ತು. ಇದೀಗ ಇದೇ ರೀತಿಯ ಮತ್ತೊಂದು ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ (Hubli-Dharwad Municipal Corporation) ಗೇಟ್‌ ಮೇಲೆ ಮಹಿಳೆಯೊಬ್ಬರು ಬಟ್ಟೆಗಳನ್ನು ಒಣಗಿಸಲು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹುಬ್ಬಳ್ಳಿಯ ಪಾಲಿಕೆ ಕಚೇರಿಯ ಎದುರಿರುವ ಪ್ರಮುಖ ಗೇಟ್‌ ಮೇಲೆ ಅಲೆಮಾರಿ ಮಹಿಳೆಯೊಬ್ಬರು ಬಟ್ಟೆಗಳನ್ನು ಒಗೆದು ಒಣ ಹಾಕಿದ್ದಾರೆ. ಇದರಿಂದ ಮಹಾನಗರ ಪಾಲಿಕೆ ಸಿಬ್ಬಂದಿ ನಗೆಪಾಟಲಿಗೆ ಗುರಿಯಾಗಿದ್ದಾರೆ. ಪಾಲಿಕೆ‌ ಕಚೇರಿಯ ಎದುರಿಗೆ ಇರುವ ಎಂಟ್ರಿ ಮತ್ತು ಎಕ್ಸಿಟ್ ಗೇಟ್​ಗಳಿಗೆ ಬೀಗ ಹಾಕಲಾಗಿದೆ. ಇದನ್ನು ಗಮನಿಸಿದ ಮಹಿಳೆ ಇಲ್ಲಿ ಯಾರು ಬರಲ್ಲವೇನೂ ಎಂದು ಬಟ್ಟೆಗಳನ್ನು ಒಣಗಲು ಹಾಕಿದ್ದಾರೆ. ಅಲೆಮಾರಿ ಕುಟುಂಬಕ್ಕೆ ಸೇರಿದ ಮಹಿಳೆಯ ಈ ಕೆಲಸ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ