ಡಿಕೆ ಶಿವಕುಮಾರ್ ಜೊತೆ ನಡೆದ ಮಾತುಕತೆಯ ಅರ್ಧಭಾಗ ಮಾತ್ರ ಸತೀಶ್ ಜಾರಕಿಹೊಳಿ ಹೇಳುತ್ತಾರೆ, ಅಸಲಿ ವಿಷಯ ಹೇಳಲ್ಲ!
ಶಿವಕುಮಾರ್ ವಾಪಸ್ಸು ಹೋದ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಸತೀಶ್; ರಾಜಕೀಯ, ಸಂಘಟನೆ ಮತ್ತು ಮುಂಬರುವ ಲೋಕಸಭಾ ಚುನಾವಣೆಗಳ ಬಗ್ಗೆ ತಮ್ಮ ನಡುವೆ ಚರ್ಚೆ ನಡೆಯಿತು ಎಂದು ಹೇಳಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನು ಬದಲಾಯಿಸಬೇಕಿದೆ ಎಂದು ಅವರು ಬೆಳಗಾವಿ ರಾಜಕೀಯ ಕುರಿತು ಪ್ರತ್ಯೇಕ ಚರ್ಚೆಯೇನೂ ನಡೆಯಲಿಲ್ಲ ಎಂದರು.
ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಇಂದು ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಮನೆಗೆ ಬಂದು ಹೋದರು ಆದರೆ ಸತೀಶ್ ಮಾತ್ರ ಅವರು ಬಂದಿದ್ದ ಅಸಲು ಕಾರಣವನ್ನು ಹೇಳಲೊಲ್ಲರು. ಬಂದರು ಹೋದರು ಅಂತಷ್ಟೇ ಮುಗುಳ್ನಗುತ್ತಾ ಹೇಳುತ್ತಾರೆ. ಶಿವಕುಮಾರ್ ವಾಪಸ್ಸು ಹೋದ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಸತೀಶ್; ರಾಜಕೀಯ, ಸಂಘಟನೆ ಮತ್ತು ಮುಂಬರುವ ಲೋಕಸಭಾ ಚುನಾವಣೆಗಳ (Lok Sabha polls) ಬಗ್ಗೆ ತಮ್ಮ ನಡುವೆ ಚರ್ಚೆ ನಡೆಯಿತು ಎಂದು ಹೇಳಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನು ಬದಲಾಯಿಸಬೇಕಿದೆ ಎಂದು ಅವರು ಬೆಳಗಾವಿ ರಾಜಕೀಯ ಕುರಿತು ಪ್ರತ್ಯೇಕ ಚರ್ಚೆಯೇನೂ ನಡೆಯಲಿಲ್ಲ ಎಂದರು. ಬೆಂಗಳೂರು ಟನೆಲ್ ವಿಷಯದಲ್ಲಿ ಲೋಕೋಪಯೋಗಿ ಇಲಾಖೆ ಮತ್ತು ಬಿಬಿಎಂಪಿ ನಡುವೆ ಇರುವ ಜಗಳದ ಬಗ್ಗೆ ವಿಚಾರಿಸಿದಾಗ, ಅದನ್ನು ಯಾರು ನಿರ್ಮಿಸಬೇಕು ಅನ್ನೋ ಚರ್ಚೆ ನಡೆಯುತ್ತಿದೆ, ಬಿಬಿಎಂಪಿ ಅಥವಾ ಬಿಡಿಎ ನಿರ್ಮಿಸಬೇಕಾ ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸುಪರ್ದಿಗೆ ಒಪ್ಪಿಸಿಕೊಡಬೇಕಾ ಅನ್ನೋ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿವೇಚನೆಗೆ ಬಿಡಲಾಗಿದೆ, ಅವರೇ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ