ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ಸಿಗುವ ಬಗ್ಗೆ ಹಾಸನದಲ್ಲಿ ಸುಳಿವು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಕಬ್ಬು ಮತ್ತ ಭತ್ತ ಬೆಳೆಯುವ ರೈತರು 5 ಗಂಟೆಗಳ ಕಾಲ 3 ಫೇಸ್ ನಲ್ಲಿ ವಿದ್ಯುತ್ ಪೂರೈಸಬೇಕೆಂಬ ಬೇಡಿಕೆ ಇಟ್ಟಿದ್ದರು, ಅವರಿಗೆ 7 ಗಂಟೆಗಳ ಕಾಲ 3 ಪೇಸ್ ನಲ್ಲಿ ಪವರ್ ನೀಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸಿಎಂ ಹೇಳಿದರು. ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇಗೌಡ ಅವರಿಗೆ ಮಂತ್ರಿ ಸ್ಥಾನ ನೀಡುವ ಬಗ್ಗೆ ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ, ಅವರ ಹೆಸರೂ ಪಟ್ಟಿಯಲ್ಲಿದೆ ಅಂತ ನಗುತ್ತಾ ಹೇಳಿದರು.
ಹಾಸನ: ಹಾಸನಾಂಬೆಯ ದರ್ಶನದ ಬಳಿಕ ಮಾಧ್ಯ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಬೇರೆ ಪಕ್ಷಗಳ ನಾಯಕರನ್ನು ಪಕ್ಷಕ್ಕೆ ಬನ್ನಿ ಅಂತ ಕಾಂಗ್ರೆಸ್ (Congress party) ಯಾವತ್ತೂ ಆಹ್ವಾನಿಸಲ್ಲ; ಆದರೆ ಪಕ್ಷದ ನಾಯಕತ್ವ, ತತ್ವಸಿದ್ಧಾಂತ ಒಪ್ಪಿಕೊಂಡು ಬರಲಿಚ್ಛಿಸುವವರನ್ನು ಬೇಡ ಅನ್ನಲ್ಲ ಅಂತ ಹೇಳಿದರು. ವಿದ್ಯುತ್ ಸಮಸ್ಯೆಯ (power crisis) ಬಗ್ಗೆ ಮಾತಾಡಿದ ಸಿದ್ದರಾಮಯ್ಯ ಸ್ಥಿತಿಯಲ್ಲಿ ಈಗ ಸ್ವಲ್ಪ ಸುಧಾರಣೆಯಾಗಿದೆ, 800 ಮೆಗಾವ್ಯಾಟ್ ಥರ್ಮಲ್ ಪವರ್ ಹೆಚ್ಚುವರಿಯಾಗಿ ಉತ್ಪಾದನೆಯಾಗುತ್ತಿದೆ, ರಾಜ್ಯದಲ್ಲಿ ಜನರೇಟ್ ಆಗುವ ವಿದ್ಯುತ್ ಅನ್ನು ಬೇರೆ ರಾಜ್ಯಗಳಿಗೆ ನೀಡದಂತೆ ಅದೇಶ ಹೊರಡಿಸಲಾಗಿದೆ ಮತ್ತು ಸಕ್ಕರೆ ಕಾರ್ಖಾನೆಗಳಲ್ಲಿ ಕೆಲಸ ಶುರು ಆಗಿರುವುದರಿಂದ ಕೋಜನರೇಶನ್ ಮೂಲಕ 450 ಮೆಗಾವ್ಯಾಟ್ ಪವರ್ ಲಭ್ಯವಾಗಲಿದೆ ಎಂದು ಹೇಳಿದರು. ಕಬ್ಬು ಮತ್ತ ಭತ್ತ ಬೆಳೆಯುವ ರೈತರು 5 ಗಂಟೆಗಳ ಕಾಲ 3 ಫೇಸ್ ನಲ್ಲಿ ವಿದ್ಯುತ್ ಪೂರೈಸಬೇಕೆಂಬ ಬೇಡಿಕೆ ಇಟ್ಟಿದ್ದರು, ಅವರಿಗೆ 7 ಗಂಟೆಗಳ ಕಾಲ 3 ಪೇಸ್ ನಲ್ಲಿ ಪವರ್ ನೀಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸಿಎಂ ಹೇಳಿದರು. ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇಗೌಡ ಅವರಿಗೆ ಮಂತ್ರಿ ಸ್ಥಾನ ನೀಡುವ ಬಗ್ಗೆ ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ, ಅವರ ಹೆಸರೂ ಪಟ್ಟಿಯಲ್ಲಿದೆ ಅಂತ ನಗುತ್ತಾ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ