Updated on: Jun 25, 2023 | 2:53 PM
ಮಳೆಗಾಗಿ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮಸ್ಥರ ವಿಶಿಷ್ಟ ಆಚರಣೆ.
ಮಳೆಯಾಗಲೆಂದು ಹೂತಿದ್ದ ಶವಕ್ಕೆ ನೀರು ಹಾಕಿದ್ದಾರೆ.
ಹೂತಿದ್ದ ಶವದ ಬಾಯಿಗೆ ನೀರು ತಾಗಿದರೆ ಮಳೆಯಗುತ್ತದೆ ಎಂಬ ನಂಬಿಕೆ ಗ್ರಾಮಸ್ಥರದ್ದು.
ಗ್ರಾಮದ ವಾಗೀಶ ಹಿರೇಮಠ ನೇತೃತ್ವದಲ್ಲಿ ಹೂತಿದ್ದ ಶವದ ಮೇಲೆ ಗ್ರಾಮಸ್ಥರು ನೀರು ಹಾಕಿದ್ದಾರೆ.
ಕಳೆದ ವರ್ಷವೂ ಇದೇ ರೀತಿ ಗ್ರಾಮದಲ್ಲಿ ಹೂತಿದ್ದ ಶವದ ಮೇಲೆ ನೀರು ಹಾಕಿದ್ದರು.
ಕಾಕತಾಳೀಯವೆಂಬಂತೆ ಆಗ ಸ್ವಲ್ಪ ಮಳೆಯಾಗಿತ್ತು.
ಈ ಬಾರಿಯೂ ಶವದ ಮೇಲೆ ನೀರು ಹಾಕಿ ಕಲಕೇರಿ ವಾಸಿಗಳು ಮಳೆಗಾಗಿ ಪ್ರಾರ್ಥಿಸಿದ್ದಾರೆ.