ಖಚಿತವಾಯ್ತು ಸುದ್ದಿ, ‘ಲಗಾನ್’ ನಿರ್ದೇಶಕನ ಸಿನಿಮಾದಲ್ಲಿ ರಿಷಬ್ ಶೆಟ್ಟಿ

Rishab Shetty: ‘ಕಾಂತಾರ’ ಸಿನಿಮಾದ ಬಳಿಕ ರಿಷಬ್​ರ ವೃತ್ತಿ ಜೀವನದ ದಿಕ್ಕೇ ಬದಲಾಗಿದೆ. ಬಾಲಿವುಡ್​ನ ಬಡಾ ನಿರ್ದೇಶಕರ ಸಿನಿಮಾದಲ್ಲಿ ನಟಿಸಲಿದ್ದಾರೆ ರಿಷಬ್.

ಖಚಿತವಾಯ್ತು ಸುದ್ದಿ, ‘ಲಗಾನ್’ ನಿರ್ದೇಶಕನ ಸಿನಿಮಾದಲ್ಲಿ ರಿಷಬ್ ಶೆಟ್ಟಿ
Follow us
ಮಂಜುನಾಥ ಸಿ.
|

Updated on:Jan 12, 2024 | 8:20 PM

ಕಾಂತಾರ’ (Kantara) ಸಿನಿಮಾ ರಿಷಬ್ ಶೆಟ್ಟಿಯ ಜೀವನವನ್ನು ಬದಲಾಯಿಸಿಬಿಟ್ಟಿದೆ. ರಿಷಬ್ ತಮ್ಮ ಬದುಕನ್ನು ಕಾಂತಾರಕ್ಕೆ ಮುಂಚೆ ಕಾಂತಾರಕ್ಕೆ ನಂತರ ಎಂದು ಎರಡು ಭಾಗಗಳಾಗಿ ವಿಂಗಡಿಸಬಹುದಾದು ಅಷ್ಟು ದೊಡ್ಡ ಪರಿಣಾಮವನ್ನು ‘ಕಾಂತಾರ’ ಸಿನಿಮಾದ ಯಶಸ್ಸು ರಿಷಬ್ ವೃತ್ತಿ ಬದುಕಿನ ಮೇಲೆ ಬೀರಿದೆ. ‘ಕಾಂತಾರ’ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬದಲಾಗಿರುವ ರಿಷಬ್​ಗೆ ಈಗ ಬಾಲಿವುಡ್​ನ ದೊಡ್ಡ ನಿರ್ದೇಶಕರ ಸಿನಿಮಾದಲ್ಲಿ ನಟಿಸುವ ಆಫರ್ ಅರಸಿ ಬಂದಿದೆ.

ಭಾರತದ ಸಿನಿಮಾ ಇತಿಹಾಸದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದಾಗಿರುವ ‘ಲಗಾನ್’ ಸಿನಿಮಾವನ್ನು ನಿರ್ದೇಶನ ಮಾಡಿರುವ ಅಶುತೋಷ್ ಗೋವರೀಕರ್ ಅವರ ಹೊಸ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಟಿಸಲಿದ್ದಾರೆ. ಹೀಗೊಂದು ಸುದ್ದಿ ಕಳೆದ ಕೆಲ ತಿಂಗಳುಗಳಿಂದ ಹರಿದಾಡುತ್ತಿತ್ತು. ಆದರೆ ಇದೀಗ ಸುದ್ದಿ ಖಚಿತವಾಗಿದೆ. ರಿಷಬ್ ಶೆಟ್ಟಿ ಇಂದು ಬಹಿರಂಗವಾಗಿ ಅಶುತೋಷ್ ಗೋವರಿಕರ್ ಜೊತೆಗೆ ಮುಂಬೈನ ಅವರ ಕಚೇರಿಯ ಮುಂದೆ ಕಾಣಿಸಿಕೊಂಡಿದ್ದಾರೆ. ಆ ಮೂಲಕ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿರುವ ಸ್ಪಷ್ಟ ಸುಳಿವು ನೀಡಿದ್ದಾರೆ.

ಆಶುತೋಷ್ ಗೋವರೀಕರ್ ಹಾಗೂ ರಿಷಬ್ ಶೆಟ್ಟಿ ಕಳೆದ ಕೆಲವು ತಿಂಗಳುಗಳಿಂದ ಭೇಟಿ ಆಗುತ್ತಲೇ ಇದ್ದರು. ಸಿನಿಮಾ ಬಗ್ಗೆ ಇಬ್ಬರೂ ಸಹ ಚರ್ಚೆ ನಡೆಸುತ್ತಿದ್ದರು. ಇದೀಗ ಎಲ್ಲವೂ ಫೈನಲ್ ಆಗಿದ್ದು, ಸಿನಿಮಾದ ಘೋಷಣೆಯೊಂದೆ ಬಾಕಿ ಉಳಿದಿದೆ. ಅದೇ ಕಾರಣಕ್ಕೆ ಇದೀಗ, ರಿಷಬ್ ಶೆಟ್ಟಿ ಹಾಗೂ ಆಶುತೋಷ್ ಗೋವರೀಕರ್ ಅವರು ಮುಂಬೈನಲ್ಲಿ ಒಟ್ಟಿಗೆ ಪಾಪರಾಟ್ಜಿಗಳ ಮುಂದೆ ಕಾಣಿಸಿಕೊಂಡಿದ್ದು, ಒಟ್ಟಿಗೆ ಫೋಟೊಕ್ಕೆ ಫೋಸು ನೀಡಿದ್ದಾರೆ.

ಇದನ್ನೂ ಓದಿ:ಕನ್ನಡ ಚಿತ್ರರಂಗದ ಬಗ್ಗೆ ನಿರ್ಲಕ್ಷ್ಯ; ಒಟಿಟಿ ಪ್ಲಾಟ್​ಫಾರ್ಮ್​ಗಳ ಬಗ್ಗೆ ರಿಷಬ್ ಶೆಟ್ಟಿ ಅಸಮಾಧಾನ

‘ಬಾಲಿವುಡ್​ ಕಲ್ಚರ್’ ಸಿನಿಮಾಗಳಿಗಿಂತಲೂ ಬಹಳ ಭಿನ್ನವಾಗಿ, ನೆಲದ ಕತೆಗಳನ್ನು ಸಿನಿಮಾ ಮಾಡುವ ನಿರ್ದೇಶಕ ಆಶುತೋಷ್ ಗೋವರೀಕರ್, ಭಾರತದ ಪ್ರದೇಶವೊಂದರ ಸಂಸ್ಕೃತಿಗೆ ಸಂಬಂಧಿಸಿದ ಕತೆಯೊಂದನ್ನು ತಯಾರು ಮಾಡಿಕೊಟ್ಟುಕೊಂಡು ನಟರಿಗಾಗಿ ಹುಡುಕಾಟ ನಡೆಸಿದ್ದರಂತೆ. ‘ಕಾಂತಾರ’ ಸಿನಿಮಾನಲ್ಲಿ ರಿಷಬ್ ಶೆಟ್ಟಿಯವರ ನಟನೆ ನೋಡಿ ಮೆಚ್ಚಿ, ತಮ್ಮ ಸಿನಿಮಾದಲ್ಲಿ ನಟಿಸುವಂತೆ ರಿಷಬ್​ರನ್ನು ಕೇಳಿದ್ದಾರೆ. ಅಂತೆಯೇ ಕೆಲವು ಚರ್ಚೆಗಳ ಬಳಿಕ ರಿಷಬ್, ಅಶುತೋಷ್​ರ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ಸಿನಿಮಾದ ಅಧಿಕೃತ ಘೋಷಣೆ ಆಗಲಿದ್ದು, ಸಿನಿಮಾದ ಚಿತ್ರೀಕರಣ ಮಾರ್ಚ್ ತಿಂಗಳಿನಿಂದ ಆರಂಭವಾಗಲಿದೆ. ರಿಷಬ್ ಶೆಟ್ಟಿ ಪ್ರಸ್ತುತ ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್​ನ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಆ ಸಿನಿಮಾದ ಚಿತ್ರೀಕರಣ ಮುಗಿಸಿದ ಬಳಿಕವಷ್ಟೆ ಅಶುತೋಷ್​ರ ಸಿನಿಮಾದಲ್ಲಿ ನಟಿಸಲು ಆರಂಭಿಸಲಿದ್ದಾರೆ.

ಅಶುತೋಷ್ ಗೋವರೀಕರ್ ಅವರು ‘ಲಗಾನ್’, ‘ಸ್ವದೇಸ್’, ‘ಜೋಧಾ ಅಖ್ಬರ್’ ಅಂಥಹಾ ಕಲ್ಟ್ ಕ್ಲಾಸಿಕ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಆದರೆ ಅಶುತೋಷ್ ನಿರ್ದೇಶನ ಮಾಡಿರುವ ಕಳೆದ ಎರಡು ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ವಿಫಲವಾಗಿವೆ. ಈಗ ರಿಷಬ್​ರಿಂದಾಗಿ ಆದರೂ ಅಶುತೋಷ್​ರ ಅದೃಷ್ಟ ಬದಲಾಗುತ್ತದೆಯೇ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:19 pm, Fri, 12 January 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ