AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಶಾರಾಮಿ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಇಮ್ರಾನ್ ಹಶ್ಮಿ, ಬೆಲೆ ಎಷ್ಟು ಗೊತ್ತೆ?

Emraan hashmi: ವಿಲನ್ ಆಗಿ ನಟಿಸಲು ಆರಂಭಿಸಿದ ಬಳಿಕ ಇಮ್ರಾನ್ ಹಶ್ಮಿ ಅದೃಷ್ಟ ಬದಲಾಗಿದೆ. ಸಾಲು-ಸಾಲು ದೊಡ್ಡ ಸಿನಿಮಾಗಳು ಸಿಗುತ್ತಿವೆ. ಇದರ ನಡುವೆ ಹೊಸ ಐಶಾರಾಮಿ ಕಾರನ್ನು ಇಮ್ರಾನ್ ಖರೀದಿ ಮಾಡಿದ್ದಾರೆ. ಕಾರಿನ ಬೆಲೆ ಎಷ್ಟು ಕೋಟಿ ಗೊತ್ತೆ?

ಐಶಾರಾಮಿ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಇಮ್ರಾನ್ ಹಶ್ಮಿ, ಬೆಲೆ ಎಷ್ಟು ಗೊತ್ತೆ?
ಇಮ್ರಾನ್ ಹಶ್ಮಿ
ಮಂಜುನಾಥ ಸಿ.
|

Updated on: Jan 11, 2024 | 10:39 PM

Share

‘ಸೀರಿಯಲ್ ಕಿಸ್ಸರ್’ ಎಂದೇ ಹೆಸರಾಗಿರುವ ಬಾಲಿವುಡ್ (Bollywood)​ ನಟ ಇಮ್ರಾನ್ ಹಶ್ಮಿ (Emraan Hashmi) ಈಗ ವೃತ್ತಿಯಲ್ಲಿ ಮಗ್ಗಲು ಬದಲಿಸಿದ್ದಾರೆ. ಹಲವು ವರ್ಷ ರೊಮ್ಯಾಂಟಿಕ್ ಹೀರೋ, ಪ್ಲೇ ಬಾಯ್ ಪಾತ್ರಗಳನ್ನೇ ಮಾಡುತ್ತಾ ಬಂದಿದ್ದ ಹಿಮ್ರಾನ್ ಹಶ್ಮಿ ‘ಸೆಲ್ಫಿ’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಕೌಟುಂಬಿಕ ವ್ಯಕ್ತಿಯಾಗಿ ನಟಿಸಿದರು. ಅಲ್ಲಿಯೂ ದೊಡ್ಡ ಯಶಸ್ಸು ಕಾಣದಿದ್ದಾಗ ಇದೀಗ ವಿಲನ್ ಆಗಿ ಹೊಸ ಅವತಾರದಲ್ಲಿ ತೆರೆಗೆ ಬರಲು ಸಜ್ಜಾಗಿದ್ದಾರೆ. ‘ಟೈಗರ್ 3’ ಸಿನಿಮಾದಲ್ಲಿ ಸಲ್ಮಾನ್ ಖಾನ್​ಗೆ ವಿಲನ್ ಆಗಿದ್ದ ಇಮ್ರಾನ್, ಇನ್ನೂ ಒಂದು ಸಿನಿಮಾದಲ್ಲಿ ಔಟ್ ಆಂಡ್ ಔಟ್ ವಿಲನ್ ಆಗಿ ಆಯ್ಕೆ ಆಗಿದ್ದಾರೆ.

ವಿಲನ್ ಪಾತ್ರಗಳಿಗೆ ಎಸ್ ಎನ್ನಲು ಆರಂಭಿಸಿದ ಕೂಡಲೇ ಒಂದರ ಹಿಂದೊಂದು ಸಿನಿಮಾಗಳನ್ನು ಇಮ್ರಾನ್ ಹಶ್ಮಿ ಒಪ್ಪಿಕೊಳ್ಳುತ್ತಿದ್ದಾರೆ. ವಿಲನ್ ಆಗಲು ಭಾರಿ ದೊಡ್ಡ ಸಂಭಾವನೆಯನ್ನೇ ಇಮ್ರಾನ್ ಪಡೆದುಕೊಳ್ಳುತ್ತಿದ್ದಾರೆ. ಅದರ ಫಲವಾಗಿ ಇದೀಗ ಇಮ್ರಾನ್, ಭಾರಿ ದುಬಾರಿ ಕಾರೊಂದನ್ನು ಖರೀದಿ ಮಾಡಿದ್ದಾರೆ. ಬಾಲಿವುಡ್​ನ ಕೆಲವೇ ನಟರ ಬಳಿ ಇರುವ ಐಶಾರಾಮಿ ಕಾರಾದ ರೋಲ್ಸ್ ರಾಯ್ಸ್ ಅನ್ನು ಇಮ್ರಾನ್ ಹಶ್ಮಿ ಇದೀಗ ಖರೀದಿ ಮಾಡಿದ್ದಾರೆ.

ಇದನ್ನೂ ಓದಿ:ಬಾಲಿವುಡ್​ಗೆ ಹಾರುವ ಯತ್ನದಲ್ಲಿ ಗ್ಲಾಮರಸ್ ಬೆಡಗಿ ಕೇತಿಕಾ ಶರ್ಮಾ

ಅಮಿತಾಬ್ ಬಚ್ಚನ್, ಶಾರುಖ್ ಖಾನ್ ಇನ್ನು ಕೆಲವು ಬಾಲಿವುಡ್ ನಟ ಹಾಗೂ ನಿರ್ಮಾಪಕರು ಮಾತ್ರವೇ ಹೊಂದಿರುವ ಕೋಟ್ಯಂತರ ರೂಪಾಯಿ ಬೆಲೆಯುಳ್ಳ ರೋಲ್ಸ್ ರಾಯ್ಸ್ ಕಾರಿಗೆ ಇಮ್ರಾನ್ ಹಶ್ಮಿ ಮಾಲೀಕರಾಗಿದ್ದಾರೆ. ರೋಲ್ಸ್ ರಾಯ್ಸ್ ಘೋಸ್ಟ್ ಬ್ಲಾಕ್ ಬ್ಯಾಡ್ಜ್ ಮಾದರಿಯ ಕಾರನ್ನು ಇಮ್ರಾನ್ ಹಶ್ಮಿ ಖರೀದಿ ಮಾಡಿದ್ದು, ಈ ಕಾರಿಗೆ 12. 25 ಕೋಟಿಗೂ ಹೆಚ್ಚು ಮೊತ್ತವನ್ನು ಇಮ್ರಾನ್ ಹಶ್ಮಿ ತೆತ್ತಿದ್ದಾರೆ. ಹಲವು ಐಶಾರಾಮಿ ಸವಲತ್ತುಗಳು, ಭದ್ರತೆ ಹಾಗೂ ಕಂಫರ್ಟ್ ಅನ್ನು ಈ ಕಾರು ಒಳಗೊಂಡಿದೆ.

‘ಟೈಗರ್ 3’ ಸಿನಿಮಾದಲ್ಲಿ ವಿಲನ್ ಆಗಿ ನಟಿಸಿದ್ದ ಇಮ್ರಾನ್ ಹಶ್ಮಿ, ಇದೀಗ ದಕ್ಷಿಣ ಭಾರತ ಚಿತ್ರರಂಗಕ್ಕೂ ಎಂಟ್ರಿ ನೀಡಿದ್ದಾರೆ. ಪವನ್ ಕಲ್ಯಾಣ್ ನಟಿಸಿರುವ ‘ಓಜಿ’ ಸಿನಿಮಾದಲ್ಲಿಯೂ ಇಮ್ರಾನ್ ಹಶ್ಮಿ ವಿಲನ್ ಆಗಿ ನಟಿಸಿದ್ದು, ಈ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ‘ಓಜಿ’ ಇಮ್ರಾನ್​ರ ಮೊದಲ ದಕ್ಷಿಣ ಭಾರತದ ಸಿನಿಮಾ. ರಣ್​ವೀರ್ ಸಿಂಗ್ ನಟಿಸುತ್ತಿರುವ ‘ಡಾನ್ 3’ ಸಿನಿಮಾದಲ್ಲಿಯೂ ಸಹ ಇಮ್ರಾನ್ ಹಶ್ಮಿ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಫರ್ನಾನ್ ಅಖ್ತರ್ ನಿರ್ದೇಶನ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್