AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರು ಅಪಘಾತ, ಕೃಷ್ಣ ಮೃಗ ಹತ್ಯೆ; ಸಲ್ಮಾನ್ ಖಾನ್ ಮಾಡಿಕೊಂಡ ವಿವಾದಗಳು ಒಂದೆರಡಲ್ಲ

ಸಲ್ಮಾನ್ ಖಾನ್ ಸಾಕಷ್ಟು ಬಾರಿ ಜೈಲು ಸೇರಬೇಕಾಯಿತು. ಅವರು ಮಾಡಿರುವ ವಿವಾದಗಳು ಒಂದೆರಡಲ್ಲ. ಅವರು ಮಾಡಿಕೊಂಡಿರುವುದು ಸಣ್ಣ ವಿವಾದಗಳು ಅಲ್ಲವೇ ಅಲ್ಲ. ಆ ಬಗ್ಗೆ ಇಲ್ಲಿದೆ ವಿವರ.

ಕಾರು ಅಪಘಾತ, ಕೃಷ್ಣ ಮೃಗ ಹತ್ಯೆ; ಸಲ್ಮಾನ್ ಖಾನ್ ಮಾಡಿಕೊಂಡ ವಿವಾದಗಳು ಒಂದೆರಡಲ್ಲ
ಸಲ್ಮಾನ್ ಖಾನ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Dec 27, 2023 | 8:28 AM

Share

ನಟ ಸಲ್ಮಾನ್ ಖಾನ್ (Salman Khan) ಅವರು ಬಾಲಿವುಡ್​ನ ಫೇಮಸ್ ಹೀರೋ. ಅವರ ಆಸ್ತಿ ಸಾವಿರಾರು ಕೋಟಿ ರೂಪಾಯಿ ಇದೆ. ಇಷ್ಟೊಂದು ಹಣ ಹಾಗೂ ಜನಪ್ರಿಯತೆ ಸಂಪಾದಿಸಲು ಅವರು ಸಾಕಷ್ಟು ಶ್ರಮಿಸಿದ್ದಾರೆ. ಇದರ ಜೊತೆಗೆ ಅವರು ಮಾಡಿಕೊಂಡಿರುವ ವಿವಾದಗಳು ಒಂದೆರಡಲ್ಲ. ಇದರಿಂದ ಸಲ್ಮಾನ್ ಖಾನ್ ಸಾಕಷ್ಟು ಬಾರಿ ಜೈಲು ಕೂಡ ಸೇರಬೇಕಾಯಿತು. ಇಂದು (ಡಿಸೆಂಬರ್ 27) ಅವರ ಜನ್ಮದಿನ. ಈ ದಿನದಂದು ಅವರು ಮಾಡಿರುವ ವಿವಾದಗಳನ್ನು ಕೂಡ ನೆನಪಿಸಿಕೊಳ್ಳಲಾಗುತ್ತಿದೆ. ಹಾಗಂತ ಅವರು ಮಾಡಿಕೊಂಡಿರುವುದು ಸಣ್ಣ ವಿವಾದಗಳು ಅಲ್ಲವೇ ಅಲ್ಲ. ಆ ಬಗ್ಗೆ ಇಲ್ಲಿದೆ ವಿವರ.

ಕೃಷ್ಣಮೃಗ ಹತ್ಯೆ

ಕೃಷ್ಣಮೃಗ ಹತ್ಯೆ ಪ್ರಕರಣ ಸಲ್ಮಾನ್ ಖಾನ್ ಜೀವನದಲ್ಲಿ ಕಪ್ಪು ಚುಕ್ಕೆ ಆಗಿ ಉಳಿದಿದೆ. 1999ರಲ್ಲಿ ಸಲ್ಮಾನ್ ಖಾನ್ ಅವರ ‘ಹಮ್ ಸಾತ್​ ಸಾತ್ ಹೈ’ ಸಿನಿಮಾ ಶೂಟಿಂಗ್​ಗೆ ಜೋದ್​ಪುರ್​ಗೆ ತೆರಳಿದ್ದರು. ಶೂಟಿಂಗ್ ಬಿಡುವಿನ ವೇಳೆ ಅವರು ಕಾಡಿಗೆ ತೆರಳಿ ಕೃಷ್ಣಮೃಗ ಬೇಟೆ ಆಡಿದ್ದರು. ಇದರಿಂದ ಅವರು ಜೈಲು ವಾಸ ಅನುಭವಿಸಿದ್ದರು. ಈ ಪ್ರಕರಣದಲ್ಲಿ ಶಿಕ್ಷೆ ಕೂಡ ಆಯಿತು. ಇದನ್ನು ಅವರು ಪ್ರಶ್ನಿಸಿದರು. ಸದ್ಯ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಇದೇ ಪ್ರಕರಣದಲ್ಲಿ ಅವರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನಿಂದ ಬೆದರಿಕೆ ಇದೆ.

ಹಿಟ್ ಆ್ಯಂಡ್ ರನ್ ಕೇಸ್

ಕೃಷ್ಣ ಮೃಗ ಹತ್ಯೆಯ ಪ್ರಕರಣದ ಕಾವು ತಣ್ಣಗಾಗುತ್ತಿದ್ದಂತೆ ಹಿಟ್ ಆ್ಯಂಡ್ ರನ್ ಕೇಸ್ ಮೂಲಕ ಸಲ್ಮಾನ್ ಖಾನ್ ಸುದ್ದಿ ಆದರು. 2002ರಲ್ಲಿ ಸಲ್ಮಾನ್ ಖಾನ್ ಅವರ ಕಾರು ಬೇಕರಿ ಒಳಗೆ ನುಗ್ಗಿತ್ತು. ಬೇಕರಿ ಸಮೀಪ ಮಲಗಿದ್ದ ವ್ಯಕ್ತಿ ಮೃತಪಟ್ಟಿದ್ದ. ನಂತರ ಸಲ್ಮಾನ್ ಅವರನ್ನು ಬಂಧಿಸಲಾಯಿತು. ಈ ಪ್ರಕರಣದಲ್ಲಿ ತಮ್ಮ ತಪ್ಪು ಇಲ್ಲ ಎಂದು ಸಲ್ಮಾನ್ ಖಾನ್ ಹೇಳಿಕೊಂಡಿದ್ದರು. ತಮ್ಮ ಡ್ರೈವರ್ ಕಾರು ಚಲಾಯಿಸುತ್ತಿದ್ದದಾಗಿ ಸಲ್ಲು ಹೇಳಿಕೊಂಡಿದ್ದರು.

ಐಶ್ವರ್ಯಾ ರೈ

ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಪರಸ್ಪರ ಪ್ರೀತಿಸುತ್ತಿದ್ದರು. ಅನೇಕ ಕಡೆಗಳಲ್ಲಿ ಇವರು ಸುತ್ತಾಡಿದ್ದರು. ಐಶ್ವರ್ಯಾ ಅವರ ಮೇಲೆ ಸಲ್ಲು ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಅವರು ಐಶ್ವರ್ಯಾ ರೈ ಕೆನ್ನೆಗೆ ಬಾರಿಸಿದ್ದರು ಎಂದು ಸುದ್ದಿ ಆಗಿತ್ತು. ಸಲ್ಲು ಜೊತೆ ಬ್ರೇಕಪ್ ಆದ ಬಳಿಕ ಐಶ್ವರ್ಯಾ ರೈ ಅವರು ವಿವೇಕ್ ಒಬೆರಾಯ್ ಜೊತೆ ಡೇಟಿಂಗ್ ಆರಂಭಿಸಿದರು. ಈ ಕಾರಣಕ್ಕೆ ವಿವೇಕ್ ಮೇಲೆ ಸಲ್ಲು ಹಗೆ ಸಾಧಿಸಿದ್ದರು.

ಲವ್ ರಿಲೇಶನ್

ಸಲ್ಮಾನ್ ಖಾನ್ ಅವರು ಕತ್ರಿನಾ, ಐಶ್ವರ್ಯಾ ರೈ ಸೇರಿ ಅನೇಕ ನಟಿಯರ ಜೊತೆ ಸುತ್ತಾಟ ನಡೆಸಿದ್ದಿದೆ. ಈ ಮೂಲಕ ಅವರು ಸಾಕಷ್ಟು ಸುದ್ದಿ ಆಗಿದ್ದರು. ಸದ್ಯ ಸಲ್ಮಾನ್ ಖಾನ್ ಅವರು ಬ್ಯಾಚುಲರ್ ಆಗಿದ್ದಾರೆ.

ಶಾರುಖ್ ಖಾನ್ ಜೊತೆ ಕಿತ್ತಾಟ

ಸಲ್ಮಾನ್ ಖಾನ್ ಅವರು ಕತ್ರಿನಾ ಜೊತೆ ಡೇಟ್ ಮಾಡುತ್ತಿದ್ದ ಸಮಯವದು. ಸಲ್ಮಾನ್ ಖಾನ್ ಹಾಗೂ ಶಾರುಖ್ ಇಬ್ಬರೂ ಕತ್ರಿನಾ ಬರ್ತ್​ಡೇ ಪಾರ್ಟಿಗೆ ಆಗಮಿಸಿದ್ದರು. ಈ ವೇಳೆ ಸಲ್ಲು ಹಾಗೂ ಶಾರುಖ್ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಕಿರಿಕ್ ಆಗಿತ್ತು. ನಂತರ ಇಬ್ಬರೂ ದ್ವೇಷ ಮರೆತು ಒಂದಾದರು.

ಇದನ್ನೂ ಓದಿ: ಎರಡನೇ ಮದುವೆ ಆದ ಸಲ್ಮಾನ್ ಖಾನ್ ಸಹೋದರ ಅರ್ಬಾಜ್; ಹಾರೈಸಿದ ಮಲೈಕಾ ಪುತ್ರ

ಬಿಗ್ ಬಾಸ್

ಸಲ್ಮಾನ್ ಖಾನ್ ಅವರು ಬಿಗ್ ಬಾಸ್ ಶೋನ ನಡೆಸಿಕೊಡುತ್ತಿದ್ದಾರೆ. ಈ ಶೋಗೆ ಬರುವ ಸ್ಪರ್ಧಿಗಳ ಮೇಲೆ ಸಲ್ಲು ಬಳಕೆ ಮಾಡುವ ಶಬ್ದ ಚರ್ಚೆ ಹುಟ್ಟುಹಾಕಿದ್ದಿದೆ. ಅನೇಕ ಬಾರಿ ಇದರಿಂದ ಅವರು ವಿವಾದ ಮಾಡಿಕೊಂಡಿದ್ದರು.

ವೃತ್ತಿ ಜೀವನ ಕೊನೆಗೊಳಿಸಿದ್ರು

ಸಲ್ಮಾನ್ ಖಾನ್ ಅವರಿಗೆ ಯಾರಾದರೂ ಇಷ್ಟ ಆಗಿಲ್ಲ ಎಂದರೆ ಅವರ ವೃತ್ತಿಜೀವನವನ್ನೇ ಕೊನೆಗೊಳಿಸಿ ಬಿಡುತ್ತಾರೆ. ಈ ರೀತಿ ಆದ ಸಾಕಷ್ಟು ಉದಾಹರಣೆ ಇದೆ. ಸಲ್ಮಾನ್ ಖಾನ್ ಅವರು ಈ ರೀತಿ ಸಾಕಷ್ಟು ಬಾರಿ ಟೀಕೆಗೆ ಒಳಗಾಗಿದ್ದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಮೈಸೂರು ದಸರಾ 2026: ಅರಮನೆಗೆ ಬಂದ ಗಜಪಡೆಗೆ ಭವ್ಯ ಸ್ವಾಗತ
ಮೈಸೂರು ದಸರಾ 2026: ಅರಮನೆಗೆ ಬಂದ ಗಜಪಡೆಗೆ ಭವ್ಯ ಸ್ವಾಗತ
ಸೂರತ್‌ನಲ್ಲಿ ಗೋಮಯ ರಾಖಿಗಳ ಮೂಲಕ ಪರಿಸರ ಸ್ನೇಹಿ ರಕ್ಷಾಬಂಧನ ಆಚರಣೆ
ಸೂರತ್‌ನಲ್ಲಿ ಗೋಮಯ ರಾಖಿಗಳ ಮೂಲಕ ಪರಿಸರ ಸ್ನೇಹಿ ರಕ್ಷಾಬಂಧನ ಆಚರಣೆ
ಲೋಕಾ ದಾಳಿಗೆ ಹೆದರಿ ರಾಜೀನಾಮೆ ಕೊಟ್ಟಿದ್ದ ವಿಶೇಷ ಭೂ ಸ್ವಾಧೀನ ಅಧಿಕಾರಿ!
ಲೋಕಾ ದಾಳಿಗೆ ಹೆದರಿ ರಾಜೀನಾಮೆ ಕೊಟ್ಟಿದ್ದ ವಿಶೇಷ ಭೂ ಸ್ವಾಧೀನ ಅಧಿಕಾರಿ!
NEET-PG Exam: ನೀಟ್-ಪಿಜಿ 2026 ಪರೀಕ್ಷೆಗೆ ಸಂಪೂರ್ಣ ಸಿದ್ಧತೆ
NEET-PG Exam: ನೀಟ್-ಪಿಜಿ 2026 ಪರೀಕ್ಷೆಗೆ ಸಂಪೂರ್ಣ ಸಿದ್ಧತೆ
ಇಂದು ಅರಮನೆ ಪ್ರವೇಶಿಸಲಿರುವ ಗಜಪಡೆ, ಅರಣ್ಯ ಭವನದಲ್ಲಿ ವಿಶೇಷ ಪೂಜೆ
ಇಂದು ಅರಮನೆ ಪ್ರವೇಶಿಸಲಿರುವ ಗಜಪಡೆ, ಅರಣ್ಯ ಭವನದಲ್ಲಿ ವಿಶೇಷ ಪೂಜೆ
ಜಾತ್ರೆ ಸಮಯದಲ್ಲಿ ಮನೆಯಲ್ಲಿ ಒಲೆ ಹಚ್ಚುವಂತಿಲ್ಲ!
ಜಾತ್ರೆ ಸಮಯದಲ್ಲಿ ಮನೆಯಲ್ಲಿ ಒಲೆ ಹಚ್ಚುವಂತಿಲ್ಲ!
ಬೆಂಗಳೂರಿನಲ್ಲಿ ದಕ್ಷಿಣ ಕೊರಿಯಾ ಕಂಪನಿ ಕಾರ್ಯಾರಂಭ: 350 ಜನರಿಗೆ ಉದ್ಯೋಗ
ಬೆಂಗಳೂರಿನಲ್ಲಿ ದಕ್ಷಿಣ ಕೊರಿಯಾ ಕಂಪನಿ ಕಾರ್ಯಾರಂಭ: 350 ಜನರಿಗೆ ಉದ್ಯೋಗ
ಇಂದು ಯಜುರುಪಾಕರ್ಮ, ರಕ್ಷಾ ಬಂಧನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಯಜುರುಪಾಕರ್ಮ, ರಕ್ಷಾ ಬಂಧನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ನೀರಿನಲ್ಲಿ ಕೊಚ್ಚಿಬಂದ ಸಿಲಿಂಡರ್​​ಗಾಗಿ ಪ್ರವಾಹದ ನೀರಿಗೆ ಹಾರಿದ ನೇಪಾಳದ ಜನ
ನೀರಿನಲ್ಲಿ ಕೊಚ್ಚಿಬಂದ ಸಿಲಿಂಡರ್​​ಗಾಗಿ ಪ್ರವಾಹದ ನೀರಿಗೆ ಹಾರಿದ ನೇಪಾಳದ ಜನ
ಚಿಕ್ಕಣ್ಣ ಮದುವೆ ಸಂಭ್ರಮ ಶುರು; ಅರಿಶಿಣ ಶಾಸ್ತ್ರದ ಖುಷಿಯಲ್ಲಿ ಪಾವನಾ
ಚಿಕ್ಕಣ್ಣ ಮದುವೆ ಸಂಭ್ರಮ ಶುರು; ಅರಿಶಿಣ ಶಾಸ್ತ್ರದ ಖುಷಿಯಲ್ಲಿ ಪಾವನಾ