AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ

ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ

ಅಕ್ಷತಾ ವರ್ಕಾಡಿ
|

Updated on: Sep 29, 2026 | 12:20 PM

Share

ಕೆನಡಾದ ವಿನ್ನಿಪೆಗ್‌ನಲ್ಲಿ ನಡೆದ ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ವಿಜಯಪುರ ಜಿಲ್ಲೆಯ ಸಚಿನ್ ಸಾಳುಂಕೆ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ. 105 ಕೆಜಿ ವಿಭಾಗದಲ್ಲಿ ಸ್ಕ್ವಾಟ್‌ನಲ್ಲಿ 310 ಕೆಜಿ, ಬೆಂಚ್‌ಪ್ರೆಸ್‌ನಲ್ಲಿ 180 ಕೆಜಿ ಮತ್ತು ಡೆಡ್‌ಲಿಫ್ಟ್‌ನಲ್ಲಿ 270 ಕೆಜಿ ಭಾರ ಎತ್ತಿ ಇಂಗ್ಲೆಂಡ್ ಎದುರಾಳಿಯನ್ನು ಮಣಿಸಿದರು. ಅವರ ಸಾಧನೆಯು ದೇಶಕ್ಕೆ ಹೆಮ್ಮೆ ತಂದಿದೆ ಮತ್ತು ಯುವಕರಿಗೆ ಮಾದರಿಯಾಗಿದೆ.

ಕೆನಡಾದ ವಿನ್ನಿಪೆಗ್‌ನಲ್ಲಿ ಇತ್ತೀಚೆಗೆ ನಡೆದ ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ವಿಜಯಪುರ ಜಿಲ್ಲೆಯ ತಿಗಣಿಬಿದರಿ ಗ್ರಾಮದ ಸಚಿನ್ ಸಾಳುಂಕೆ ಬೆಳ್ಳಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಸೆಪ್ಟೆಂಬರ್ 17 ರಿಂದ 27 ರವರೆಗೆ ನಡೆದ ಈ ಸ್ಪರ್ಧೆಯಲ್ಲಿ, ಸಚಿನ್ 105 ಕೆಜಿ ಪುರುಷರ ವಿಭಾಗದಲ್ಲಿ ಪಾಲ್ಗೊಂಡಿದ್ದರು. ಸಚಿನ್ ಸಾಳುಂಕೆ ಅವರು ಸ್ಕ್ವಾಟ್‌ನಲ್ಲಿ 310 ಕೆಜಿ, ಬೆಂಚ್‌ಪ್ರೆಸ್‌ನಲ್ಲಿ 180 ಕೆಜಿ ಹಾಗೂ ಡೆಡ್‌ಲಿಫ್ಟ್‌ನಲ್ಲಿ 270 ಕೆಜಿ ಭಾರ ಎತ್ತಿ, ಇಂಗ್ಲೆಂಡ್‌ನ ತಮ್ಮ ಎದುರಾಳಿಯನ್ನು ಮಣಿಸಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಈ ಸಾಧನೆಯು ಇಡೀ ದೇಶಕ್ಕೆ, ವಿಶೇಷವಾಗಿ ವಿಜಯಪುರ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ಸಚಿನ್ ಅವರ ಸ್ವಗ್ರಾಮ ತಿಗಣಿ ಬಿದರಿಯಲ್ಲಿ ಗ್ರಾಮಸ್ಥರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಚಿನ್ ಅವರ ಪೋಷಕರಾದ ತುಕಾರಾಮ್ ಮತ್ತು ಪ್ರೇಮಾ ಅವರು ಕೂಡ ಪುತ್ರನ ಯಶಸ್ಸಿನಿಂದ ಹರ್ಷಗೊಂಡಿದ್ದಾರೆ. ಸಚಿನ್ ಸಾಳುಂಕೆ ತಮ್ಮ ಸಾಧನೆಯ ಮೂಲಕ ಯುವಜನತೆಗೆ ಮಾದರಿಯಾಗಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

 

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More