AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ

PM Modi Honors India's CWG 2026 Heroes: 2026ರ ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತವು 39 ಪದಕ (13 ಚಿನ್ನ, 17 ಬೆಳ್ಳಿ, 9 ಕಂಚು) ಗೆದ್ದು 4ನೇ ಸ್ಥಾನ ಪಡೆಯಿತು. ಕ್ರೀಡಾಕೂಟದ ನಂತರ ಪ್ರಧಾನಿ ನರೇಂದ್ರ ಮೋದಿ ಪದಕ ವಿಜೇತ ಕ್ರೀಡಾಪಟುಗಳನ್ನು ಭೇಟಿಯಾಗಿ ಅಭಿನಂದಿಸಿದರು. ‘ಆಡುವವರು ಅರಳುತ್ತಾರೆ’ ಎಂದು ಸಂದೇಶ ನೀಡಿದ ಅವರು, ಕ್ರೀಡಾಪಟುಗಳಲ್ಲಿ ಹೊಸ ಉತ್ಸಾಹ ತುಂಬಿ ದೇಶದ ಕ್ರೀಡಾ ಪ್ರಗತಿಗೆ ಒತ್ತು ನೀಡಿದರು.

ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
Pm Modi
ಪೃಥ್ವಿಶಂಕರ
|

Updated on: Aug 09, 2026 | 9:00 PM

Share

ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಡೆದ 2026 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ (Commonwealth Games 2026) ಭಾರತೀಯ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ನೀಡಿ ಒಟ್ಟು 39 ಪದಕಗಳನ್ನು ಗೆದ್ದಿದ್ದರು. ಈ 39 ಪದಕಗಳಲ್ಲಿ 13 ಚಿನ್ನ, 17 ಬೆಳ್ಳಿ ಮತ್ತು 9 ಕಂಚಿನ ಪದಕಗಳು ಸೇರಿದ್ದವು. ಇದರೊಂದಿಗೆ ಭಾರತ ಪದಕಗಳ ಪಟ್ಟಿಯಲ್ಲಿ 4ನೇ ಸ್ಥಾನವನ್ನು ಪಡೆದುಕೊಂಡಿತು. ಪ್ರತಿಯೊಬ್ಬ ಸ್ಪರ್ಧಿಯೂ ಪದಕ ಗೆದ್ದಾಗ ದೇಶದ ಪ್ರಧಾನಿ ನರೇಂದ್ರ ಮೋದಿ (Narendra Modi) ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅವರನ್ನು ಅಭಿನಂದಿಸುವ ಕೆಲಸ ಮಾಡಿದ್ದರು. ಇದೀಗ ಕ್ರೀಡಾಕೂಟ ಅಂತ್ಯಗೊಂಡ ವಾರದ ಬಳಿಕ ಪ್ರಧಾನಿ ಮೋದಿ ಈ ಕ್ರೀಡಾಕೂಟದಲ್ಲಿ ಪದಕ ಗೆದ್ದವರನ್ನು ತಮ್ಮ ನಿವಾಸಿದಲ್ಲಿ ಭೇಟಿ ಮಾಡಿದ್ದಾರೆ.

ದೇಶವನ್ನು ಯಾವಾಗಲೂ ಪ್ರೋತ್ಸಾಹಿಸಿ; ಮೋದಿ

2026 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಕ್ರೀಡಾಪಟುಗಳನ್ನು ಭೇಟಿಯಾದ ನಂತರ ಪ್ರಧಾನಿ ನರೇಂದ್ರ ಮೋದಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡ ರೀಲ್‌ನಲ್ಲಿ, ‘ಆಡುವವರು ಅರಳುತ್ತಾರೆ. ದೇಶವನ್ನು ಯಾವಾಗಲೂ ಪ್ರೋತ್ಸಾಹಿಸಿ’ ಎಂಬ ಸಂದೇಶ ನೀಡಿದರು. ಇದರ ನಂತರ, ಪ್ರಧಾನಿ ಮೋದಿ ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಕೂಗಿದರು. ಅವರೊಂದಿಗೆ ಹಾಜರಿದ್ದ ಎಲ್ಲಾ ಆಟಗಾರರು ಅದನ್ನು ಪುನರಾವರ್ತಿಸಿದರು.

ಭಾರತದ ಪದಕಗಳ ಪಟ್ಟಿ

ಸಂಖ್ಯೆ

ಕ್ರೀಡಾಪಟು

ಕ್ರೀಡೆ

ವಿಭಾಗ

ಪದಕ

1

ಝಂಡು ಕುಮಾರ

ಪುರುಷರ ಹೆವಿವೇಯ್ಟ್

ಪ್ಯಾರಾ ಪವರ್‌ಲಿಫ್ಟಿಂಗ್

ಕಂಚು

2

ರಿಷಿಕಾಂತ್ ಸಿಂಗ್

ವೇಟ್ ಲಿಫ್ಟಿಂಗ್

ಪುರುಷರ 60 ಕೆಜಿ

ಬೆಳ್ಳಿ

3

ಮೀರಾಬಾಯಿ ಚಾನು

ವೇಟ್ ಲಿಫ್ಟಿಂಗ್

ಮಹಿಳೆಯರ 48 ಕೆಜಿ

ಚಿನ್ನ

4

ಮುತ್ತುಪಾಂಡಿ ರಾಜ

ವೇಟ್ ಲಿಫ್ಟಿಂಗ್

ಪುರುಷರ 65 ಕೆಜಿ

ಬೆಳ್ಳಿ

5

ಜ್ಞಾನೇಶ್ವರಿ ಯಾದವ್

ವೇಟ್ ಲಿಫ್ಟಿಂಗ್

ಮಹಿಳೆಯರ 53 ಕೆಜಿ

ಬೆಳ್ಳಿ

6

ಬಿಂದ್ಯಾರಾಣಿ ದೇವಿ

ವೇಟ್ ಲಿಫ್ಟಿಂಗ್

ಮಹಿಳೆಯರ 58 ಕೆಜಿ

ಕಂಚು

7

ಶರ್ಮಿಳಾ ಧಂಕರ್

ಪ್ಯಾರಾ ಅಥ್ಲೆಟಿಕ್ಸ್

ಮಹಿಳೆಯರ ಶಾಟ್‌ಪುಟ್ F57

ಚಿನ್ನ

8

ಸರ್ವೇಶ್ ಕುಶಾರೆ

ಅಥ್ಲೆಟಿಕ್ಸ್

ಪುರುಷರ ಹೈ ಜಂಪ್

ಬೆಳ್ಳಿ

9

ಶಿಲ್ಪಾ ಶೈಲಾ

ಪ್ಯಾರಾ ಅಥ್ಲೆಟಿಕ್ಸ್

ಮಹಿಳೆಯರ ಶಾಟ್‌ಪುಟ್ F57

ಕಂಚು

10

ವಲ್ಲೂರಿ ಅಜಯ್ ಬಾಬು

ವೇಟ್ ಲಿಫ್ಟಿಂಗ್

ಪುರುಷರ 79 ಕೆಜಿ

ಬೆಳ್ಳಿ

11

ಹರ್ಜಿಂದರ್ ಕೌರ್

ವೇಟ್ ಲಿಫ್ಟಿಂಗ್

ಮಹಿಳೆಯರ 69 ಕೆಜಿ

ಬೆಳ್ಳಿ

12

ಗುಲ್ವೀರ್ ಸಿಂಗ್

ಅಥ್ಲೆಟಿಕ್ಸ್

ಪುರುಷರ 10000 ಮೀ.

ಬೆಳ್ಳಿ

13

ಮುರಳಿ ಶ್ರೀಶಂಕರ್

ಅಥ್ಲೆಟಿಕ್ಸ್

ಪುರುಷರ ಲಾಂಗ್ ಜಂಪ್

ಬೆಳ್ಳಿ

14

ದಿಲೀಪ್ ಗವಿತ್

ಪ್ಯಾರಾ ಅಥ್ಲೆಟಿಕ್ಸ್

ಪುರುಷರ 100 ಮೀ ಟಿ 47

ಚಿನ್ನ

15

ಮೊಹಮ್ಮದ್ ಬಾಸಿಲ್

ಪ್ಯಾರಾ ಅಥ್ಲೆಟಿಕ್ಸ್

ಪುರುಷರ 100 ಮೀ ಟಿ 47

ಬೆಳ್ಳಿ

16

ಲವ್‌ಪ್ರೀತ್ ಸಿಂಗ್

ವೇಟ್ ಲಿಫ್ಟಿಂಗ್

ಪುರುಷರ 110+ ಕೆಜಿ

ಬೆಳ್ಳಿ

17

ಸೀಮಾ ಕಲಿರಮಣ

ಅಥ್ಲೆಟಿಕ್ಸ್

ಮಹಿಳೆಯರ ಡಿಸ್ಕಸ್ ಥ್ರೋ

ಕಂಚು

18

ಅಸ್ಮಿತಾ ಡೇ

ಜೂಡೋ

ಮಹಿಳೆಯರ 48 ಕೆಜಿ

ಚಿನ್ನ

19

ಹರ್ಷ್ ಸಿಂಗ್

ಜೂಡೋ

ಪುರುಷರ 60 ಕೆಜಿ

ಚಿನ್ನ

20

ಯಾಮಿನಿ ಮೌರ್ಯ

ಜೂಡೋ

ಮಹಿಳೆಯರ 57 ಕೆಜಿ

ಬೆಳ್ಳಿ

21

ತೇಜಸ್ವಿನ್ ಶಂಕರ್

ಅಥ್ಲೆಟಿಕ್ಸ್

ಪುರುಷರ ಡೆಕಾಥ್ಲಾನ್

ಕಂಚು

22

ಯಶ್ವೀರ್ ಸಿಂಗ್

ಅಥ್ಲೆಟಿಕ್ಸ್

ಪುರುಷರ ಜಾವೆಲಿನ್ ಥ್ರೋ

ಕಂಚು

23

ನೀರಜ್ ಚೋಪ್ರಾ

ಅಥ್ಲೆಟಿಕ್ಸ್

ಪುರುಷರ ಜಾವೆಲಿನ್ ಥ್ರೋ

ಬೆಳ್ಳಿ

24

ಪ್ರೀತಿ ಪವಾರ್

ಬಾಕ್ಸಿಂಗ್

ಮಹಿಳೆಯರ 54 ಕೆಜಿ

ಚಿನ್ನ

25

ಪ್ರವೀಣ್ ಚಿತ್ರಾವೆಲ್

ಅಥ್ಲೆಟಿಕ್ಸ್

ಪುರುಷರ ಟ್ರಿಪಲ್ ಜಂಪ್

ಬೆಳ್ಳಿ

26

ಸೆಲ್ವ ಪ್ರಭು

ಅಥ್ಲೆಟಿಕ್ಸ್

ಪುರುಷರ ಟ್ರಿಪಲ್ ಜಂಪ್

ಕಂಚು

27

ಜಾಸ್ಮಿನ್ ಲಂಬೋರಿಯಾ

ಬಾಕ್ಸಿಂಗ್

ಮಹಿಳೆಯರ 57 ಕೆಜಿ

ಚಿನ್ನ

28

ಜಾದುಮಣಿ ಸಿಂಗ್

ಬಾಕ್ಸಿಂಗ್

ಪುರುಷರ 55 ಕೆಜಿ

ಬೆಳ್ಳಿ

29

ಶುಭಂ ಜುಯಾಲ್

ಪ್ಯಾರಾ ಅಥ್ಲೆಟಿಕ್ಸ್

ಪುರುಷರ ಶಾಟ್‌ಪುಟ್ F57

ಚಿನ್ನ

30

ಸೋಮನ್ ರಾಣಾ

ಪ್ಯಾರಾ ಅಥ್ಲೆಟಿಕ್ಸ್

ಪುರುಷರ ಶಾಟ್‌ಪುಟ್ F57

ಬೆಳ್ಳಿ

31

ಉನ್ನತಿ ಶರ್ಮಾ

ಜೂಡೋ

ಮಹಿಳೆಯರ 63 ಕೆಜಿ

ಕಂಚು

32

ಸಾಕ್ಷಿ ಚೌಧರಿ

ಬಾಕ್ಸಿಂಗ್

ಮಹಿಳೆಯರ 51 ಕೆಜಿ

ಚಿನ್ನ

33

ಪ್ರಿಯಾ ಘಂಘಾಸ್

ಬಾಕ್ಸಿಂಗ್

ಮಹಿಳೆಯರ 60 ಕೆಜಿ

ಚಿನ್ನ

34

ಅರುಂಧತಿ ಚೌಧರಿ

ಬಾಕ್ಸಿಂಗ್

ಮಹಿಳೆಯರ 70 ಕೆಜಿ

ಚಿನ್ನ

35

ಲವ್ಲಿನಾ ಬೊರ್ಗೊಹೈನ್

ಬಾಕ್ಸಿಂಗ್

ಮಹಿಳೆಯರ 75 ಕೆಜಿ

ಬೆಳ್ಳಿ

36

ಸಚಿನ್ ಸಿವಾಚ್

ಬಾಕ್ಸಿಂಗ್

ಪುರುಷರ 60 ಕೆಜಿ

ಚಿನ್ನ

37

ಅಂಕುಶ್ ಪಂಗಲ್

ಬಾಕ್ಸಿಂಗ್

ಪುರುಷರ 80 ಕೆಜಿ

ಚಿನ್ನ

38

ನರೇಂದ್ರ ಬೆರ್ವಾಲ್

ಬಾಕ್ಸಿಂಗ್

ಪುರುಷರ 90 ಕೆಜಿ

ಬೆಳ್ಳಿ

39

ಗುಲ್ವೀರ್ ಸಿಂಗ್

ಅಥ್ಲೆಟಿಕ್ಸ್

ಪುರುಷರ 5000 ಮೀ.

ಕಂಚು

Follow Us
ದೇವರಿಗೆ ಹಾಡು ಹಾಡಿ ಪ್ರಾರ್ಥಿಸಿದ ಕಿರಣ್ ಶಾಸ್ತ್ರಿ; ಬೀಳಲಿಲ್ಲ ಹೂವು
ದೇವರಿಗೆ ಹಾಡು ಹಾಡಿ ಪ್ರಾರ್ಥಿಸಿದ ಕಿರಣ್ ಶಾಸ್ತ್ರಿ; ಬೀಳಲಿಲ್ಲ ಹೂವು
ಜಾತಿನಿಂದನೆ ಆರೋಪ; ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮತ್ತೊಂದು ಎಫ್​ಐಆರ್
ಜಾತಿನಿಂದನೆ ಆರೋಪ; ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮತ್ತೊಂದು ಎಫ್​ಐಆರ್
ಕಾವೇರಿ ನೀರು ಹಂಚಿಕೆ: ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆ
ಕಾವೇರಿ ನೀರು ಹಂಚಿಕೆ: ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆ
ಇಂದು ಶ್ರವಣ ದ್ವಾದಶಿ: ಮೇಷಾದಿ 12 ರಾಶಿಗಳ ಜನರ ದಿನ ಭವಿಷ್ಯ ಇಲ್ಲಿದೆ
ಇಂದು ಶ್ರವಣ ದ್ವಾದಶಿ: ಮೇಷಾದಿ 12 ರಾಶಿಗಳ ಜನರ ದಿನ ಭವಿಷ್ಯ ಇಲ್ಲಿದೆ
'ನಮ್ಮ ಉಗ್ರರು ನಿಯಂತ್ರಣದಲ್ಲಿದ್ದಾರೆ'; ಮಾನ ಹರಾಜು ಹಾಕಿಕೊಂಡ ಪಾಕಿಸ್ತಾನ
'ನಮ್ಮ ಉಗ್ರರು ನಿಯಂತ್ರಣದಲ್ಲಿದ್ದಾರೆ'; ಮಾನ ಹರಾಜು ಹಾಕಿಕೊಂಡ ಪಾಕಿಸ್ತಾನ
: ಟಿವಿ9 ವರದಿಯ ಸಕಾರಾತ್ಮಕ ಪರಿಣಾಮಕ್ಕೆ ಗದಗ ಪೋಷಕರ ಧನ್ಯವಾದ
: ಟಿವಿ9 ವರದಿಯ ಸಕಾರಾತ್ಮಕ ಪರಿಣಾಮಕ್ಕೆ ಗದಗ ಪೋಷಕರ ಧನ್ಯವಾದ
‘ಭಾರತ-ಪಾಕ್ ಯುದ್ಧ ತಡೆದು, 3 ಕೋಟಿ ಜನರ ಜೀವ ಉಳಿಸಿದೆ’; ಟ್ರಂಪ್ ಹಳೇ ರಾಗ
‘ಭಾರತ-ಪಾಕ್ ಯುದ್ಧ ತಡೆದು, 3 ಕೋಟಿ ಜನರ ಜೀವ ಉಳಿಸಿದೆ’; ಟ್ರಂಪ್ ಹಳೇ ರಾಗ
ಸಿದ್ದರಾಮಯ್ಯ ಪ್ಯಾಲೇಸ್ ಕಟ್ಟಿಲ್ಲ: ಹೊಸ ಮನೆ ಬಗ್ಗೆ ಜಮೀರ್ ಹೇಳಿದ್ದಿಷ್ಟು
ಸಿದ್ದರಾಮಯ್ಯ ಪ್ಯಾಲೇಸ್ ಕಟ್ಟಿಲ್ಲ: ಹೊಸ ಮನೆ ಬಗ್ಗೆ ಜಮೀರ್ ಹೇಳಿದ್ದಿಷ್ಟು
ಗುಲ್ಮಾರ್ಗ್‌ನಲ್ಲಿ ಹಿಮಪಾತ; ಶ್ವೇತವರ್ಣಕ್ಕೆ ತಿರುಗಿದ ಪರ್ವತಗಳು
ಗುಲ್ಮಾರ್ಗ್‌ನಲ್ಲಿ ಹಿಮಪಾತ; ಶ್ವೇತವರ್ಣಕ್ಕೆ ತಿರುಗಿದ ಪರ್ವತಗಳು
ಗನ್, ಪಿಸ್ತೂಲ್ ಹೊಂದಿರುವವರಿಗೆ ಖಡಕ್ ಸಂದೇಶ ನೀಡಿದ ಸಿಎಂ ಡಿಕೆ ಶಿವಕುಮಾರ್
ಗನ್, ಪಿಸ್ತೂಲ್ ಹೊಂದಿರುವವರಿಗೆ ಖಡಕ್ ಸಂದೇಶ ನೀಡಿದ ಸಿಎಂ ಡಿಕೆ ಶಿವಕುಮಾರ್