‘ಬಿಗ್ ಬಾಸ್’ನಲ್ಲಿ ಗಗನ್ ಹಾಗೂ ಮಂಜು ನಡುವೆ ನಡೆಯಿತು ವಾಗ್ವಾದ
ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಗಗನ್ ಮತ್ತು ಮಂಜುನಾಥ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಆಹಾರ ಆಧಾರಿತ ಟಾಸ್ಕ್ ಒಂದರ ಸಂದರ್ಭದಲ್ಲಿ ಇಬ್ಬರ ನಡುವೆ ಮಾತುಗಳು ಮಿತಿಮೀರಿವೆ. "ನಾನು ಹೇಳಿದ್ನಲ್ಲ, ಬಡಿದು ಬಾಯಿಗೆ ಹಾಕಿ ಹೋಗ್ತೀನಿ," "ಅಧಿಕಪ್ರಸಂಗ ಮಾತಾಡಬೇಡ" ಎಂಬಂತಹ ಮಾತಿನ ಚಕಮಕಿ ನಡೆದು ಮನೆಯ ವಾತಾವರಣ ಬಿಸಿಯಾಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಸ್ಪರ್ಧಿಗಳ ನಡುವಿನ ಪೈಪೋಟಿ ಮತ್ತು ವೈಯಕ್ತಿಕ ಘರ್ಷಣೆಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿವೆ. ಇತ್ತೀಚಿನ ಒಂದು ಸಂಚಿಕೆಯಲ್ಲಿ ಗಗನ್ ಮತ್ತು ಮಾಡರ್ನ್ ಮಹಾಕವಿ ಮಂಜು ನಡುವೆ ಭುಗಿಲೆದ್ದ ತೀವ್ರ ವಾಗ್ವಾದ ಎಲ್ಲರ ಗಮನ ಸೆಳೆದಿದೆ.
ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್‌ನ ಒಂದನ್ನು ನೀಡಲಾಗಿತ್ತು. ತಮಗೆ ಮೀಸಲಿರುವ ಎಲ್ಲಾ ತಿಂಡಿಗಳನ್ನು ಮೊದಲು ತಿಂದು ಖಾಲಿ ಮಾಡುವ ತಂಡ ಈ ಟಾಸ್ಕ್ ಗೆಲ್ಲುತ್ತದೆ. ಈ ವೇಳೆ ಫುಲ್ ಖಾರ ಹಾಕಿ ಅಡುಗೆ ಮಾಡಲಾಗಿದೆ. ಆದರೆ, ಮಂಜು ಇದನ್ನು ತಿಂದು ತೇಗಿದ್ದಾರೆ. ಅವರೇ ಟಾಸ್ಕ್ ಗೆದ್ದರೇ ಎನ್ನುವ ಪ್ರಶ್ನೆ ಮೂಡಿದೆ. ಮಂಜು ಮತ್ತು ಗಗನ್ ನಡುವೆ ಇದೇ ವಿಷಯಕ್ಕೆ ವಾಗ್ವಾದ ನಡೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos

