ಮೆಟ್ರೋದಲ್ಲಿ ಅರಶಿನ ಶಾಸ್ತ್ರ; ವೈರಲ್ ವಿಡಿಯೋದ ಸತ್ಯಾಸತ್ಯತೆ ಏನು?
ಇತ್ತೀಚಿಗೆ ಇನ್‌ಫ್ಲುಯೆನ್ಸರ್ ದಿವ್ಯತಾ ಉಪಾಧ್ಯಾಯ ಎಂಬವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಂತಹ ಆಗ್ರಾ ಮೆಟ್ರೋಗೆ ಸಂಬಂಧಿಸಿದ ವಿಡಿಯೋ ಭಾರೀ ವೈರಲ್ ಅಗಿತ್ತು. ಈ ವಿಡಿಯೋದಲ್ಲಿ ಅವರು ಆಗ್ರಾ ಮೆಟ್ರೋದಲ್ಲಿ ಅರಶಿಣ ಶಾಸ್ತ್ರ ಕಾರ್ಯಕ್ರಮ ಆಯೋಜನೆ ಮಾಡಿದ್ದರು ಎಂದು ಹೇಳಿದ್ದರು. ಈ ವಿಡಿಯೋ ಭಾರೀ ಚರ್ಚೆಗೆ ಗ್ರಾಸವಾಯಿತು. ಅಷ್ಟಕ್ಕೂ ಮೆಟ್ರೋದೊಳಗೆ ಅರಶಿನ ಶಾಸ್ತ್ರ ಕಾರ್ಯಕ್ರಮ ನಡೆದದ್ದು ನಿಜವೇ? ಈ ಕುರಿತ ಸತ್ಯಾಸತ್ಯತೆಯನ್ನು ತಿಳಿಯಿರಿ.

ಪ್ರಯಾಣಿಕರು ಮಾಡುವ ಹುಚ್ಚಾಟಗಳಿಗೆ ಸಂಬಂಧಿಸಿದಂತೆ ದೆಹಲಿ ಮೆಟ್ರೋ ಆಗಾಗ್ಗೆ ಸುದ್ದಿಯಾಗುತ್ತಿರುತ್ತದೆ. ಅದೇ ರೀತಿ ಇತ್ತೀಚಿಗಷ್ಟೇ ಆಗ್ರಾ ಮೆಟ್ರೋ ಕೂಡಾ ಅರಶಿಣ ಶಾಸ್ತ್ರ ಆಚರಣೆಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿತ್ತು. ಇನ್‌ಫ್ಲುಯೆನ್ಸರ್ ದಿವ್ಯತಾ ಉಪಾಧ್ಯಾಯ ಎಂಬವರು ಆಗ್ರಾ ಮೆಟ್ರೋದ ಕೋಚ್ ಒಂದರಲ್ಲಿ ಅರಶಿಣ ಶಾಸ್ತ್ರ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಅಷ್ಟೇ ಅಲ್ಲದೆ ಹುಟ್ಟುಹಬ್ಬ ಮತ್ತು ಇನ್ನಿತರೆ ಖಾಸಗಿ ಕಾರ್ಯಕ್ರಮಗಳಿಗೆ ಮೆಟ್ರೋವನ್ನು ಬಾಡಿಗೆ ನೀಡಲಾಗುತ್ತದೆ ಎಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಈ ವಿಡಿಯೋ ಭಾರೀ ಚರ್ಚೆಗೆ ಗ್ರಾಸವಾಯಿತು. ಅಷ್ಟಕ್ಕೂ ಮೆಟ್ರೋದೊಳಗೆ ಅರಶಿನ ಶಾಸ್ತ್ರ ಕಾರ್ಯಕ್ರಮ ನಡೆದದ್ದು ನಿಜವೇ? ಈ ಕುರಿತ ಸತ್ಯಾಸತ್ಯತೆಯನ್ನು ತಿಳಿಯಿರಿ.
ಇನ್‌ಫ್ಲುಯೆನ್ಸರ್ ದಿವ್ಯತಾ ಉಪಾಧ್ಯಾಯ ಆಗ್ರಾ ಮೆಟ್ರೋದ ಕೋಚ್ ಒಂದರಲ್ಲಿ ಅರಶಿಣ ಶಾಸ್ತ್ರ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಅಷ್ಟೇ ಅಲ್ಲದೆ ಹುಟ್ಟುಹಬ್ಬ ಮತ್ತು ಇನ್ನಿತರೆ ಖಾಸಗಿ ಕಾರ್ಯಕ್ರಮಗಳಿಗೆ ಮೆಟ್ರೋವನ್ನು ಬಾಡಿಗೆ ನೀಡಲಾಗುತ್ತದೆ. ಮೆಟ್ರೋದೊಳಗೆ ತಿನ್ನುವ ವಸ್ತುಗಳನ್ನು ಅನುಮತಿಸುವುದಿಲ್ಲ ಇಲ್ಲಿ ಬಾಡಿಗೆ ನೀಡ್ತಾರೆ ಎಂದು ಹೇಳಿದ್ದರು. ಈ ವಿಡಿಯೋ 3 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದಿತ್ತು.
View this post on Instagram
ಇದೀಗ ಉತ್ತರ ಪ್ರದೇಶ ಮೆಟ್ರೋ ರೈಲು ನಿಗಮ (ಯುಪಿಎಂಆರ್‌ಸಿ) ಈ ಸಂಬಂಧ ಸ್ಪಷ್ಟನೆ ನೀಡಿದ್ದು, “ಇದು ಯಾವುದೇ ಅರಶಿಣ ಶಾಸ್ತ್ರ ಸಮಾರಂಭವಲ್ಲ, ಬದಲಾಗಿ ವಸಂತ ಪಂಚಮಿಯ ಸಲುವಾಗಿ ಆಗ್ರಾದ ಬ್ಯೂಟಿಫುಲ್ ಗರ್ಲ್ಸ್ ಕ್ಲಬ್ ಆಯೋಜಿಸಿದ್ದ ಖಾಸಗಿ ಕಿಟ್ಟಿ ಪಾರ್ಟಿ ಆಗಿದೆ” ಎಂದು ಹೇಳಿದೆ. ಆ ಫೋಟೋದಲ್ಲಿ ಮಹಿಳೆಯರ ತಂಡ ಹಳದಿ ಬಣ್ಣದ ಬಲೂನ್‌ಗಳಿಂದ ಅಲಂಕಾರಗೊಂಡ ಮೆಟ್ರೋ ಕೋಚ್ ಒಳಗಡೆ ಹಳದಿ ಬಣ್ಣದ ಬಟ್ಟೆಯನ್ನು ತೊಟ್ಟು ಫೋಟೋಗೆ ಪೋಸ್ ಕೊಟ್ಟಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಹಕ್ಕಿಯಂತೆ ಹಾರುವ ಅಪರೂಪದ ಅಳಿಲನ್ನು ಕಂಡಿರಾ?
ಉತ್ತರ ಪ್ರದೇಶ ಮೆಟ್ರೋ ರೈಲು ನಿಗಮ (ಯುಪಿಎಂಆರ್‌ಸಿ) ವಿವಾಹ ಸಮಾರಂಭಗಳಿಗೆ ಅನುಮತಿಯಿಲ್ಲದಿದ್ದರೂ ಹುಟ್ಟುಹಬ್ಬ, ಕುಟುಂಬ ಕೂಟ ಸೇರಿದಂತೆ ಕೆಲವೊಂದು ಖಾಸಗಿ ಕಾರ್ಯಕ್ರಮಗಳಿಗೆ ಸ್ಥಳಾವಕಾಶವನ್ನು ನೀಡುತ್ತದೆ. ಯುಪಿಎಂಆರ್‌ಸಿ ಪ್ರಕಾರ, ಲಕ್ನೋ ಮೆಟ್ರೋದಲ್ಲಿ ಯಾವುದೇ ಕಾರ್ಯಕ್ರಮಕ್ಕೆ 10 ದಿನಗಳ ಮುಂಚಿತವಾಗಿ ಬುಕಿಂಗ್ ಮಾಡಬೇಕು.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:50 pm, Fri, 21 February 25




