Viral: ನ್ಯಾಯಾಲಯದ ಆವರಣದಲ್ಲಿಯೇ ಜಗಳವಾಡಿಕೊಂಡ ಅತ್ತೆ-ಸೊಸೆ; ವಿಡಿಯೋ ವೈರಲ್
ಅತ್ತೆ ಸೊಸೆ ನಡುವೆ ಸಣ್ಣಪುಟ್ಟ ಜಗಳ ನಡೆಯುವುದು, ಮನಸ್ತಾಪಗಳು ಏರ್ಪಡುವುದು ಸಾಮಾನ್ಯ. ಆದ್ರೆ ಇಲ್ಲೊಂದು ಕಡೆ ಮನಸ್ತಾಪ ಅತಿರೇಕಕ್ಕೆ ತಿರುಗಿ ದೊಡ್ಡ ಜಗಳವೇ ನಡೆದಿದೆ. ಹೌದು ಅತ್ತೆ ಮತ್ತು ಸೊಸೆ ನಡುವೆ ಬಿಗ್ ಫೈಟ್ ಏರ್ಪಟ್ಟಿದ್ದು, ಕೋರ್ಟ್ ಆವರಣದಲ್ಲಿಯೇ ಪರಸ್ಪರ ಕೈ ಮಿಲಾಯಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅತ್ತೆ ಸೊಸೆ ಜಗಳ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.

ಪ್ರತಿಯೊಂದು ಮನೆಯಲ್ಲೂ ಅತ್ತೆ ಸೊಸೆ ಜಗಳ ಇದ್ದಿದ್ದೇ. ಅಡುಗೆ, ಮನೆಕೆಲಸ ಇತ್ಯಾದಿ ಸಣ್ಣಪುಟ್ಟ ಕಾರಣಗಳಿಗೆ ಅತ್ತೆ ಸೊಸೆ ಮಧ್ಯೆ ಆಗಾಗ್ಗೆ ಜಗಳಗಳು ಏರ್ಪಡುತ್ತವೆ. ಈ ಜಗಳಗಳು ತಾರಕಕ್ಕೇರಿ ನ್ಯಾಯಾಲಯ, ಪೊಲೀಸ್ ಠಾಣೆಯ ಮೆಟ್ಟಿಲೇರಿದ ಉದಾಹರಣೆಗಳು ಕೂಡಾ ಇವೆ. ಮೊನ್ನೆಯಷ್ಟೇ ಸೊಸೆಯೊಬ್ಬಳು ಅತ್ತೆಯನ್ನು ಸಾಯಿಸಲು ಡಾಕ್ಟರ್ ಮೊರೆ ಹೋಗಿದ್ದ ಸುದ್ದಿಯೊಂದು ಭಾರಿ ವೈರಲ್ ಆಗಿತ್ತು. ಇದೀಗ ಇಲ್ಲೊಂದು ವಿಡಿಯೋ ಹರಿದಾಡುತ್ತಿದ್ದು, ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಬಂದಿದ್ದಂತಹ ಅತ್ತೆ-ಸೊಸೆ ಕೋರ್ಟ್ ಆವರಣದಲ್ಲಿಯೇ ಪರಸ್ಪರ ಕೈ ಮಿಲಾಯಿಸಿ ಜಗಳವಾಡಿದ್ದಾರೆ. ಇವರ ಜಗಳವನ್ನು ಕಂಡು ಅಲ್ಲಿ ನೆರೆದಿದ್ದವರು ಬೆಚ್ಚಿ ಬಿದ್ದಿದ್ದಾರೆ.
ಈ ಘಟನೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದಿದ್ದು, ಕೋರ್ಟ್ ವಿಚಾರಣೆಗೆ ಹಾಜರಾಗಿದ್ದ ಅತ್ತೆ ಸೊಸೆ ನ್ಯಾಯಾಲಯದ ಆವರಣದಲ್ಲಿಯೇ ಜಗಳವಾಡಿದ್ದಾರೆ. ಮೊದಲು ಈ ಇಬ್ಬರ ಮಧ್ಯೆ ವಾಗ್ವಾದ ನಡೆದಿದ್ದು, ನಂತರ ಮಾತುಕತೆ ತಾರಕಕ್ಕೇರಿ ದೊಡ್ಡ ಜಗಳವೇ ನಡೆದಿದೆ. ಜೊತೆಗೆ ಇವರೊಂದಿಗೆ ಸಂಬಂಧಿಕರೂ ಸೇರಿಕೊಂಡಿದ್ದು, ಅತ್ತೆ ಸೊಸೆ ಗುಂಪು ಪರಸ್ಪರ ದೈಹಿಕ ಹಲ್ಲೆ ನಡೆಸಿದ್ದಾರೆ. ಅಲ್ಲಿ ನರೆದಿದ್ದವರು ಗಲಾಟೆ ನಿಲ್ಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಅಂತಿಮವಾಗಿ ಪೊಲೀಸರು ಮಧ್ಯ ಪ್ರವೇಶಿಸಿ ಜಗಳ ನಿಲ್ಲಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Kalesh b/w Mother-in-Law and Daughter-in-Law Outside Court, Nashik MH pic.twitter.com/QAjcpr6sYu
— Ghar Ke Kalesh (@gharkekalesh) February 21, 2025
ಈ ಕುರಿತ ವಿಡಿಯೋವನ್ನು gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಅತ್ತೆ ಹಾಗೂ ಸೊಸೆಯ ಗುಂಪಿನ ನಡುವೆ ಬಿಗ್ ಫೈಟ್ ಏರ್ಪಟ್ಟಿರುವ ದೃಶ್ಯವನ್ನು ಕಾಣಬಹುದು. ವಿಚಾರಣೆಗಾಗಿ ಕೋರ್ಟ್‌ಗೆ ಆಗಮಿಸಿದ್ದ ಅತ್ತೆ ಸೊಸೆಯ ನಡುವೆ ಮಾತಿನ ಚಕಮಕಿ ಏರ್ಪಟ್ಟಿದ್ದು, ಈ ವಾಗ್ವಾದ ಅತಿರೇಕಕ್ಕೆ ತಿರುಗಿ ಕೋರ್ಟ್ ಆವರಣದಲ್ಲಿಯೇ ಅತ್ತೆ ಸೊಸೆ ಪರಸ್ಪರ ಜಗಳವಾಡಿಕೊಂಡಿದ್ದಾರೆ.
ಇದನ್ನೂ ಓದಿ: ಡೈಪರ್ ಮಾಲೆ ಹಿಡಿದ ಮಹಿಳೆಯ ವಿಡಿಯೋ ವೈರಲ್
ಫೆಬ್ರವರಿ 21 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4.3 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಮ್ಮ ಸಮಾಜ ಎತ್ತ ಸಾಗುತ್ತಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಿಜಕ್ಕೂ ಅತ್ತೆ ಸೊಸೆ ಜಗಳ ಭಯಾನಕ ಸಮಸ್ಯೆಯಾಗಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮಹಿಳಾ ಸಬಲೀಕರಣʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




