Viral: ಆರತಕ್ಷತೆ ದಿನವೇ ಸಿನಿಮೀಯ ಶೈಲಿಯಲ್ಲಿ ಪ್ರಿಯಕರನ ಜೊತೆ ಓಡಿ ಹೋದ ವಧು
ತನ್ನ ಪ್ರೇಮವನ್ನು ಉಳಿಸಿಕೊಳ್ಳುವ ಸಲುವಾಗಿ ಮದುವೆ ದಿನವೇ ವಧು ಅಥವಾ ವರ ಮದುವೆ ಮನೆಯಿಂದ ಓಡಿ ಹೋದಂತಹ ಸಾಕಷ್ಟು ಪ್ರಕರಣಗಳು ಈ ಹಿಂದೆಯೂ ನಡೆದಿವೆ. ಇದೀಗ ಅಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಆರತಕ್ಷತೆಯ ದಿನವೇ ವಧು ಸಿನಿಮೀಯ ಶೈಲಿಯಲ್ಲಿ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಹೌದು ಬ್ಯೂಟಿ ಪಾರ್ಲರ್‌ನಿಂದ ಸೀದಾ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ. ಈ ಸುದ್ದಿ ಇದೀಗ ಭಾರೀ ವೈರಲ್ ಆಗಿದೆ.

ಸಿನಿಮಾಗಳಲ್ಲಿ ನಾವೆಲ್ಲಾ ಮದುವೆ ಮನೆಗಳಲ್ಲಿ ವಧು ಅಥವಾ ವರ ಪ್ರೀತಿಯನ್ನು ಉಳಿಸಿಕೊಳ್ಳುವ ಸಲುವಾಗಿ ಓಡಿ ಹೋಗುವ ಸೀನ್‌ಗಳನ್ನು ನೋಡಿರುತ್ತೇವೆ ಅಲ್ವಾ. ಹೀಗೆ ಹಸೆಮಣೆಯಿಂದ ಎದ್ದು ಹೋಗಿ, ಮದುವೆಗೆ ಇನ್ನೇನೂ ಕೆಲವೇ ಕ್ಷಣ ಬಾಕಿ ಇದೆ ಎನ್ನುವಷ್ಟರಲ್ಲಿ ವರ ಅಥವಾ ವಧು ಪರಾರಿಯಾಗಿ ಆಗಬೇಕಿದ್ದ ಮದುವೆಗಳೇ ನಿಂತು ಹೋದ ಸಾಕಷ್ಟು ಘಟನೆಗಳು ನಿಜ ಜೀವನದಲ್ಲೂ ನಡೆದಿವೆ. ನೀವು ಕೂಡಾ ಇಂತಹ ಪ್ರಕರಣಗಳ ಸುದ್ದಿಗಳನ್ನು ಕೇಳಿರುತ್ತೀರಿ ಅಲ್ವಾ. ಇಲ್ಲೊಂದು ಅಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ಆರತಕ್ಷತೆಯ ದಿನವೇ ವಧು ಸಿನಿಮೀಯ ಶೈಲಿಯಲ್ಲಿ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಹೌದು ಬ್ಯೂಟಿ ಪಾರ್ಲರ್‌ನಿಂದ ಸೀದಾ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ.
ಈ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದ್ದು, ಆರತಕ್ಷತೆಗೆ ಇನ್ನೇನು ಕೆಲವೇ ಕ್ಷಣ ಬಾಕಿ ಇದೆ ಎನ್ನುವಷ್ಟರಲ್ಲಿ ವಧು 10 ಲಕ್ಷ ರೂ. ಮೌಲ್ಯದ ಆಭರಣದೊಂದಿಗೆ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಫೆಬ್ರವರಿ 18 ರಂದು ವರ ಆಶಿಶ್ ರೋಶ್ನಿ ಎಂಬ ಯುವತಿಯ ಜೊತೆ ಮದುವೆಯಾದನು. ಮರುದಿನ ಅಂದ್ರೆ ಫೆಬ್ರವರಿ 19 ರಂದು ಇವರಿಬ್ಬರ ಆರತಕ್ಷತೆ ನಿಗದಿಯಾಗಿತ್ತು. ಆದರೆ ಆ ದಿನ ಮದುಮಗಳು ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ.
ಆರತಕ್ಷತೆಯ ದಿನದಂದು ಆಶಿಶ್ ಮತ್ತು ರೋಶ್ನಿ ತಯಾರಾಗಲು ಹತ್ತಿರದ ಬ್ಯೂಟಿ ಪಾರ್ಲರ್‌ಗೆ ಹೋಗಿದ್ದರು. ಅಲ್ಲಿಂದ ನೇರವಾಗಿ ಮಂಟಪಕ್ಕೆ ಕಾರಿನಲ್ಲಿ ತೆರಳಿದರು. ಇವರು ಮಂಟಪ ತಲುಪುವಷ್ಟರಲ್ಲಿ ಅಲ್ಲಿಗೆ ಇನ್ನೊಂದು ಕಾರು ಬಂದಿದ್ದು, ವರ ಆಶೀಕ್‌ನ ಸಹೋದರಿಯನ್ನು ತಳ್ಳಿ ಯುವಕನೊಬ್ಬ ವಧುವನ್ನು ಕಾರಿನಲ್ಲಿ ಕೂರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಮೊದಲಿಗೆ ಇದೊಂದು ಅಪಹರಣ ಪ್ರಕರಣವೆಂದು ನಂಬಿದ್ದರು.
ಇದನ್ನೂ ಓದಿ: ನ್ಯಾಯಾಲಯದ ಆವರಣದಲ್ಲಿಯೇ ಜಗಳವಾಡಿಕೊಂಡ ಅತ್ತೆ-ಸೊಸೆ; ವಿಡಿಯೋ ವೈರಲ್
ನಂತರದಲ್ಲಿ ವಧು ಇಷ್ಟಪಟ್ಟೆ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ ಎಂಬುದು ತಿಳಿದು ಬಂದಿದೆ. ವಧು ರೋಶ್ನಿ ಮತ್ತು ಅಂಕಿತ್ ಎಂಬ ಯುವಕ ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದು, ಇದಕ್ಕೆ ಮನೆಯವರ ವಿರೋಧವಿತ್ತು. ಅಷ್ಟೇ ಅಲ್ಲದೆ ಆಕೆ ಮನೆಯವರು ಮಗಳ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಿದ್ದರು. ನಂತರ ಆರತಕ್ಷತೆಯ ದಿನ ಈ ಇಬ್ಬರು ಪ್ರೇಮಿಗಳು ಓಡಿ ಹೋಗಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿದ್ದು, ತಲೆಮರೆಸಿಕೊಂಡಿರುವ ರೋಶ್ನಿ ಮತ್ತು ಅಂಕಿತ್‌ನನ್ನು ಪತ್ತೆ ಹಚ್ಚಲು ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




