ವರದಕ್ಷಿಣೆ ಬೇಡವೆಂದ ವರ; ಅಳಿಯನ ಈ ಗುಣಕ್ಕೆ ಮನಸೋತ ಅತ್ತೆ-ಮಾವ
ನಮ್ಮ ದೇಶದಲ್ಲಿ ವರದಕ್ಷಿಣೆಯನ್ನು ನಿಷೇಧಿಸಲಾಗಿದ್ದರೂ, ಇವತ್ತಿಗೂ ಹಲವು ಕಡೆ ವರದಕ್ಷಿಣೆ ತೆಗೆದುಕೊಳ್ಳುವ, ಪಡೆದುಕೊಳ್ಳುವ ಅನಿಷ್ಟ ಪದ್ಧತಿ ಚಾಲ್ತಿಯಲ್ಲಿದೆ. ಅದೆಷ್ಟೋ ಜನ ವರದಕ್ಷಿಣೆಗಾಗಿ ಡಿಮ್ಯಾಂಡ್ ಇಡೋ ಜನರ ಮಧ್ಯೆ ಇಲ್ಲೊಬ್ಬ ವರ ವರದಕ್ಷಿಣೆಯನ್ನು ನಿರಾಕರಿಸುವ ಮೂಲಕ ಪ್ರಶಂಸೆಗೆ ಪಾತ್ರನಾಗಿದ್ದಾನೆ. ನನ್ಗೆ ವರದಕ್ಷಿಣೆ ಬೇಡ್ವೇ ಬೇಡ ಎಂದು ಮದುವೆಯಲ್ಲಿ ಕೊಟ್ಟ 5 ಲಕ್ಷ ರೂಪಾಯಿಯನ್ನು ವಾಪಾಸ್ ಕೊಟ್ಟಿದ್ದು, ಅಳಿಯನ ಈ ಗುಣಕ್ಕೆ ಅತ್ತೆ-ಮಾವ ಮನಸೋತಿದ್ದಾರೆ.

ವರದಕ್ಷಿಣೆ ಕೊಡುವುದು, ಕೇಳುವುದು ಮತ್ತು ತೆಗೆದುಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಹೀಗಿದ್ದರೂ ಎಷ್ಟೋ ಕಡೆ ಇಂದಿಗೂ ವರದಕ್ಷಿಣೆಯೆಂಬ ಪಿಡುಗು ಚಾಲ್ತಿಯಲ್ಲಿದೆ. ಅದೆಷ್ಟೋ ಜನ ಚಿನ್ನ ಕಾರು, ಹಣ ಅಂತೆಲ್ಲಾ ವಧುವಿನ ಕಡೆಯಿಂದ ವರದಕ್ಷಿಣೆಗಾಗಿ ಡಿಮ್ಯಾಂಡ್ ಮಾಡ್ತಾರೆ. ಇಂತಹ ಜನಗಳ ಮಧ್ಯೆ ಇಲ್ಲೊಬ್ಬ ವರ ವರದಕ್ಷಿಣೆಯನ್ನು ನಿರಾಕರಿಸುವ ಮೂಲಕ ಪ್ರಶಂಸೆಗೆ ಪಾತ್ರನಾಗಿದ್ದಾನೆ. ಮದುವೆ ಮನೆಯಲ್ಲಿ ಅತ್ತೆ-ಮಾವ ಅಳಿಯನಾಗುವವನಿಗೆ 5 ಲಕ್ಷ ರೂಪಾಯಿ ಹಣವನ್ನು ವರದಕ್ಷಿಣೆ ರೂಪದಲ್ಲಿ ನೀಡಿದ್ದು, ನನಗೆ ವರದಕ್ಷಿಣೆ ಬೇಡ್ವೇ ಬೇಡ ಎಂದು ವಧುವಿನ ಪೋಷಕರು ಕೊಟ್ಟ ಹಣವನ್ನು ಅವರಿಗೆಯೇ ಹಿಂತಿರುಗಿಸಿದ್ದಾನೆ. ಈ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದೆ.
ಈ ಘಟನೆ ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿ ನಡೆದಿದ್ದು, ಇಲ್ಲಿನ ರಜಪೂತ ಸಮುದಾಯದ ವರನೊಬ್ಬ ವರದಕ್ಷಿಣೆ ವ್ಯವಸ್ಥೆಯನ್ನು ಹೋಗಲಾಡಿಸಲು ವಿಶಿಷ್ಟ ಉಪಕ್ರಮವನ್ನು ತೆಗೆದುಕೊಳ್ಳುವ ಎಲ್ಲರ ಪ್ರಶಂಸೆಗೆ ಪಾತ್ರನಾಗಿದ್ದಾನೆ. ಪರಮವೀರ್ ರಾಥೋಡ್ ಎಂಬ ವ್ಯಕ್ತಿಯ ಮದುವೆ ಇಲ್ಲಿನ ಕರಲಿಯಾ ಗ್ರಾಮದ ನಿಕಿತಾ ಭಾಟಿ ಎಂಬ ಮಹಿಳೆಯ ಜೊತೆ ನಿಗದಿಯಾಗಿತ್ತು. ಮದುವೆಯ ದಿನ ವಧುವಿನ ಪೋಷಕರು ವರನಿಗೆ ವರದಕ್ಷಿಣೆಯ ರೂಪದಲ್ಲಿ 5,51,000 ರೂ. ಹಣವನ್ನು ನೀಡಿದ್ದು, ಈ ವರದಕ್ಷಿಣೆ ಹಣ ನನಗೆ ಬೇಡ್ವೇ ಬೇಡ ಎಂದು ಮದುಮಗ ವರದಕ್ಷಿಣೆ ಪಡೆಯಲು ನಿರಾಕರಿಸಿದ್ದಾನೆ.

ಮದುವೆಯ ದಿನ ತಿಲಕ ಸಮಾರಂಭದಲ್ಲಿ ಸಾಂಪ್ರದಾಯಿಕ ವರದಕ್ಷಿಣೆ ಅರ್ಪಣೆಯ ಭಾಗವಾಗಿ, ವಧುವಿನ ಪೋಷಕರು ಒಂದು ತಟ್ಟೆಯಲ್ಲಿ 5,51,000 ರೂ. ಹಣವನ್ನಿಟ್ಟು ವರನಿಗೆ ನೀಡಿದ್ದು, ಈ ವರದಕ್ಷಿಣೆಯ ಹಣವನ್ನು ಪಡೆಯಲು ವರ ನಿರಾಕರಿಸಿದ್ದಾನೆ. ಮತ್ತು ಈ ಆಚರಣೆಯ ಭಾಗವಾಗಿ ಒಂದು ತೆಂಗಿನಕಾಯಿ ಮತ್ತು ಒಂದು ರೂಪಾಯಿ ನಾಣ್ಯವನ್ನು ಸ್ವೀಕರಿಸಿದ್ದಾನೆ.
“ನಾನು ನಾಗರಿಕ ಸೇವಾ ಆಕಾಂಕ್ಷಿಯಾಗಿದ್ದು, ಈ ಬಗ್ಗೆ ನಾನು ಸಾಕಷ್ಟು ಅಧ್ಯಯನವನ್ನು ಮಾಡಿದ್ದೇನೆ. ಅವರು ಹಣ ನನಗೆ ಹಣ ನೀಡಲು ಪ್ರಯತ್ನಿಸಿದಾಗ ಸಮಾಜದಲ್ಲಿ ಈ ಪದ್ಧತಿಯನ್ನು ಜನ ಇನ್ನೂ ಮುಂದುವರೆಸಿಕೊಂಡು ಬಂದಿದ್ದಾರಲ್ಲವೇ ಎಂದು ತಿಳಿದು ಬೇಸರವಾಯಿತು. ಹೀಗಿರುವಾಗ ವಿದ್ಯಾವಂತರಾದ ನಾವು ಬದಲಾವಣೆ ತರದಿದ್ದರೆ ಮತ್ತೆ ಯಾರು ಬದಲಾವಣೆ ತರುತ್ತಾರೆ. ಈ ನನ್ನ ನಿರ್ಧಾರಕ್ಕೆ ನನ್ನ ಪೋಷಕರು ಕೂಡಾ ಬೆಂಬಲ ಸೂಚಿಸಿದ್ದಾರೆ. ಪ್ರತಿಯೊಬ್ಬರು ಕೂಡಾ ವರದಕ್ಷಿಣೆಯೆಂಬ ಪಿಡುಗನ್ನು ಕೊನೆಗಾಣಿಸಬೇಕು” ಎಂದು ವರ ಪರಮವೀರ್ ರಾಥೋಡ್ ಹೇಳಿದ್ದಾನೆ.
ಇದನ್ನೂ ಓದಿ: ರಾಜ ಗಾಂಭೀರ್ಯದಿಂದ ಹೆದ್ದಾರಿ ದಾಟಿದ ಕಾಡಿನ ರಾಜ; ವಿಡಿಯೋ ವೈರಲ್
ಮತ್ತೊಂದೆಡೆ, ವಧುವಿನ ತಂದೆ ಜೇತು ಸಿಂಗ್ ಮಾತನಾಡಿ, ವರನ ಕಡೆಯವರ ಇಂತಹ ನಿರ್ಧಾರಗಳಿಂದಾಗಿ, ಬಹುಶಃ ಯಾವುದೇ ತಂದೆ ಮಗಳನ್ನು ಹೊರೆಯೆಂದು ಭಾವಿಸುವುದಿಲ್ಲ. ಇಂತಹ ನಿರ್ಧಾರಗಳು ಸಮಾಜದ ದಿಕ್ಕನೇ ಒಳ್ಳೆಯ ರೀತಿಯಲ್ಲಿ ಬದಲಾಯಿಸುತ್ತವೆ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




